ಗಣಿತ ಇಷ್ಟು ಸುಲಭಾನಾ, 363 + 1 ? 7 = 560 ಪ್ರಶ್ನಾರ್ಥಕ ಚಿಹ್ನೆ ಇರುವಲ್ಲಿ ಯಾವ ಅಂಕಿ ಬರಬೇಕು? 5 ನಿಮಿಷದಲ್ಲಿ ಉತ್ತರ ಹೇಳಿ
Maths Puzzle: ಬ್ರಿಟ್ನಿ ಬಿಟ್ಸ್ ಹಬ್ ಎಂಬ ಟ್ವಿಟರ್ ಯೂಸರ್ ಹಂಚಿಕೊಂಡಿರುವ ಗಣಿತದ ಪಜಲ್ ಬಹಳ ಗಮನ ಸೆಳೆಯುತ್ತಿದೆ. ಅಂಕಗಣಿತದ ಪಜಲ್ ಬಿಡಿಸುವಂತೆ ಆತ ನೆಟಿಜನ್‌ಗಳಿಗೆ ಚಾಲೆಂಜ್ ಮಾಡಿದ್ದಾರೆ. ಈ ಗಣಿತದ ಪಜಲ್ ಒಮ್ಮೆ ನೀವೂ ನೋಡಿ, 5 ನಿಮಿಷದಲ್ಲಿ ಉತ್ತರ ಹೇಳಲು ಪ್ರಯತ್ನಿಸಿ.
Maths Puzzle: ಶಾಲೆಯಲ್ಲಿ ಓದುವಾಗ ಅಬ್ಬ ಗಣಿತ ಕಬ್ಬಿಣದ ಕಡಲೆ ಎಂದು ಬಹಳಷ್ಟು ಜನರು ಹೇಳುವ ಮಾತನ್ನು ಕೇಳಿದ್ದೇವೆ. ಗಣಿತ ಓದಲಾಗದೆ ಕೆಲವರು ಕಡಿಮೆ ಅಂತ ತೆಗೆದರೆ, ಇನ್ನೂ ಕೆಲವರು ಫೇಲ್ ಆಗಿರುವುದನ್ನೂ ನೋಡಿದ್ದೇವೆ. ಆದರೆ ಒಬ್ಬರೋ, ಇಬ್ಬರೋ ನನಗೆ ಗಣಿತ ಅಂದ್ರೆ ಇಷ್ಟ ಎಂದು ಹೇಳಿರುವುದನ್ನೂ ಕೇಳಿರುತ್ತೇವೆ. 100 ಕ್ಕೆ 100 ಅಂಕಗಳನ್ನು ಪಡೆದಿರುವುದನ್ನು ನೋಡಿರುತ್ತೇವೆ.
ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವ ಗಣಿತ
ಹಾಗಾದ್ರೆ ಗಣಿತ ಅಷ್ಟೊಂದು ಸುಲಭಾನಾ? ಆದರೆ ಕಷ್ಟವಂತೂ ಅಲ್ಲ ಬಿಡಿ, ಏಕೆಂದರೆ ನಮ್ಮ ದೈನದಿನ ಬದುಕಲ್ಲಿ ಗಣಿತ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ಅಂಕಿಗಳ ಜೊತೆ ಬದುಕುತ್ತಿದ್ದೇವೆ. ಪ್ರತಿದಿನ ಸಮಯ ನೋಡುವುದು, ಇಂತಿಷ್ಟು ಪ್ರಮಾಣದ ಊಟ ತಿನ್ನುವುದು, ದುಡ್ಡು ಖರ್ಚು ಮಾಡುವುದು ಹೀಗೆ ಕೂಡುವುದು, ಕಳೆಯುವುದು, ಭಾಗಿಸುವುದು, ಗುಣಿಸುತ್ತಲೇ ಇರುತ್ತೇವೆ. ಹಾಗಾದರೆ ಗಣಿತ ಕಷ್ಟ ಅಂತ ಅಂದುಕೊಳ್ಳುವುದೇಕೆ? ಈಗ ಬಹುತೇಕ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೂಡಾ ಗಣಿತ ಇದ್ದೇ ಇರುತ್ತದೆ. ಗಣಿತದ ಪಜಲ್ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಟ್ವಿಟ್ಟರ್ ಯೂಸರ್ ಹಂಚಿಕೊಂಡಿರುವ ಗಣಿತದ ಪಜಲ್‌ವೊಂದು ಭಾರೀ ಗಮನ ಸೆಳೆಯುತ್ತಿದೆ.
ಟ್ವಿಟರ್ ಯೂಸರ್ ಹಂಚಿಕೊಂಡಿರುವ ಗಣಿತದ ಪಜಲ್
Brainy Bits Hub ಎಂಬ ಟ್ವಿಟರ್ ಯೂಸರ್ ಒಬ್ಬರು ಈ ಗಣಿತದ ಪಜಲ್ ಹಂಚಿಕೊಂಡಿದ್ದಾರೆ. ಇದು ಅಂಕ ಗಣಿತದ ಪಜಲ್ ಆಗಿದ್ದು ಈ ನಂಬರ್‌ನಲ್ಲಿ ಯಾವ ಅಂಕಿ ಬರಬೇಕು ಎಂದು ಪ್ರಶ್ನೆ ಕೇಳಿದ್ದಾರೆ. ತಮ್ಮ ಫಾಲೋವರ್‌ಗಳಿಗೆ, ಎಕ್ಸ್ ಯೂಸರ್‌ಗಳಿಗೆ ಈ ಗಣಿತದ ಪಜಲ್ ಬಿಡಿಸುವಂತೆ ಆಹ್ವಾನಿಸಿದ್ದಾರೆ. 363 + 1 ? 7 = 560. ಇಲ್ಲಿ ? ಸ್ಥಳದಲ್ಲಿ ಯಾವ ಅಂಕಿ ಸರಿ ಹೊಂದುತ್ತದೆ ಎಂಬುದನ್ನು ನೀವು ಕಂಡು ಹಿಡಿಯಬೇಕು. ಇದು ನೋಡುತ್ತಿದ್ದಂತೆ ಬಹಳ ಸುಲಭ ಎನಿಸುತ್ತದೆ. ಹಾಗಂತ ಕಷ್ಟದ ಮಾತೂ ಅಲ್ಲ. ಸ್ವಲ್ಪ ಸಮಯ ನೀವು ಏಕಾಗ್ರತೆಯಿಂದ ಯೋಚನೆ ಮಾಡಿದರೆ ಖಂಡಿತ ಈ ಪ್ರಶ್ನೆಗೆ ಉತ್ತರ ದೊರೆಯುತ್ತದೆ. ಈ ಪೋಸ್ಟ್ ಟ್ವಿಟ್ಟರ್‌ನಲ್ಲಿ ಇದುವರೆಗೂ 16 ಸಾವಿರಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಸುಮಾರು 800 ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದ್ದಾರೆ.
ನೆಟಿಜನ್ಸ್ ಪ್ರತಿಕ್ರಿಯೆ ಏನು?
ಅದರಲ್ಲಿ ಕೆಲವೇ ಕೆಲವರು ಮಾತ್ರ ಸರಿ ಉತ್ತರ ನೀಡಿದ್ದಾರೆ. ಆದರೆ ಕೆಲವರು ಉತ್ತರ ಗೊತ್ತಾಗದೆ ಫ್ರಸ್ಟೇಷನ್‌ಗೆ ಒಳಗಾಗಿದ್ದಾರೆ. ದಯವಿಟ್ಟು ಉತ್ತರ ಹೇಳಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸರಿ ಉತ್ತರ 6, ಇದು ಬಹಳ ಸುಲಭ ಎಂದು ಹೇಳಿದ್ದಾರೆ. ಮತ್ತೊಬ್ಬರು ಯೂಸರ್ ಕಾಮೆಂಟ್ ಮಾಡಿ, ಇದು ಸುಲಭವಾಗಿ ಪರಿಹರಿಸಲಾಗುವ ಸಮಸ್ಯೆ ಅಲ್ಲ, ಇದಕ್ಕೆ 5 ನಿಮಿಷ ಅಲ್ಲ, ಬಹಳ ದಿನಗಳೇ ಬೇಕಾಗಬಹುದು ಎಂದಿದ್ದಾರೆ. ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ವರ್ಕ್ ಮಾಡಿದರೆ ಈ ಪಜಲ್ ಸುಲಭವಾಗಿ ಬಗೆಹರಿಯುತ್ತದೆ. ಇದೇ ರೀತಿ ಪಜಲ್‌ಗಳನ್ನು ಹಂಚಿಕೊಳ್ಳಿ ಎಂದು ಯೂಸರ್‌ಗಳು ಕಾಮೆಂಟ್ ಮಾಡಿದ್ದಾರೆ.
ವಿಭಾಗ