Maths Puzzle: ಶಾಲೆಯಲ್ಲಿದ್ದಾಗ ಗಣಿತದಲ್ಲಿ ನಿಮಗೆ ಎಷ್ಟು ಅಂಕ? ಈ ಲೆಕ್ಕ ಬಿಡಿಸಿ ನೋಡೋಣ, ನಿಮಗಿರುವುದು 10 ಸೆಕೆಂಡ್ ಸಮಯ ಮಾತ್ರ
Maths Puzzle: ಶಾಲೆಯಲ್ಲಿ ಮಾತ್ರವಲ್ಲ ನಾವು ಬೆಳೆದು ಕೆಲಸಕ್ಕೆ ಹೋದರೂ, ಕೆಲಸದಿಂದ ನಿವೃತ್ತರಾಗಿ ಮನೆಯಲ್ಲಿದ್ದರೂ ನಮ್ಮ ದೈನಂದಿನ ಜೀವನಕ್ಕೆ ಲೆಕ್ಕ ಬಹಳ ಅವಶ್ಯಕವಾಗಿದೆ. ಅಂತದ್ದರಲ್ಲಿ ಲೆಕ್ಕದಲ್ಲಿ ನಾನು ಹಿಂದೆ ಅಂತ ಹೇಳಲೇಬೇಡಿ. ಇಲ್ಲಿರುವ ಮಾಹಿತಿ ಆಧಾರದ ಮೇಲೆ ಈ ಪ್ರಶ್ನೆಗೆ ಉತ್ತರ ಹೇಳಿ ನೋಡೋಣ.
Maths Puzzle: ಮನೆ ಕೆಲಸ, ಕಚೇರಿ ಕೆಲಸ ಮಾಡಿ ಬೇಸರವಾಗಿದ್ದರೆ ಕೆಲವರು ಸ್ವಲ್ಪ ಸಮಯವಾದರೂ ಏನಾದರೂ ಗೇಮ್ ಆಡೋಣ ಎನಿಸದೆ ಇರದು. ಒಂದು ವೇಳೆ ಅದು ಪಜಲ್, ಲೆಕ್ಕ ಬಿಡಿಸುವ ಚಾಲೆಂಜ್ ಆಗಿದ್ದರೆ ಇನ್ನಷ್ಟು ಫನ್ನಿ ಎನಿಸದೆ ಇರದು. ಬ್ರೈನ್ ಟೀಸರ್ ನಿಮಗೆ ಸಂತೋಷವಾಗಿ ಸಮಯ ಕಳೆಯಲು ಅವಕಾಶ ಮಾಡಿಕೊಡುವುದಲ್ಲದೆ, ನಿಮ್ಮ ಮೆದುಳನ್ನು ಚುರುಕಾಗಿರಿಸುತ್ತದೆ.
ಇಲ್ಲೊಂದು ಗಣಿತ ಲೆಕ್ಕವಿದೆ. ನಿಮಗೆ ಅದನ್ನು ಬಿಡಿಸಲು ಸಾಧ್ಯಾನಾ? ರೊಮ್‌ಬೆಸ್ಕ್ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಮ್ಯಾಥ್‌ಮೆಟಿಕ್ಸ್ ಪಜಲ್ ಇದು. ಈ ಬ್ರೈನ್ ಟೀಸರ್‌ನಲ್ಲಿ ಕೆಲವೊಂದು ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಬಾತುಕೋಳಿ, ನಾಯಿ, ಮೊಲ ಮೂರರ ಒಟ್ಟು ತೂಕವನ್ನು ಕಂಡು ಹಿಡಿಯಬೇಕು. ನೀವು ಈ ಚಾಲೆಂಜ್ ಸ್ವೀಕರಿಸಲು ರೆಡಿ ಇದ್ದೀರಾ? ಆದರೆ ಇದನ್ನು 10 ಸೆಕೆಂಡ್ ಅಥವಾ ಅದರ ಒಳಗೆ ಬಿಡಿಸಬೇಕು.
ಕ್ಲೂ ನೋಡಿ ಉತ್ತರ ಹೇಳಿ
ಈ ಬ್ರೈನ್ ಟೀಸರ್ ಪ್ರಕಾರ ಮೊಲ ಹಾಗೂ ಬಾತುಕೋಳಿಯ ಒಟ್ಟು ತೂಕ 10 ಕಿಲೋ, ನಾಯಿ ಹಾಗೂ ಮೊಲದ ಒಟ್ಟು ತೂಕ 20 ಕಿಲೋ, ನಾಯಿ ಹಾಗೂ ಬಾತುಕೋಳಿಯ ಒಟ್ಟು ತೂಕ 24 ಕಿಲೋ ಹಾಗಾದರೆ ಈ ಕ್ಲೂ ಆಧರಿಸಿ ನಾಯಿ, ಮೊಲ, ಬಾತುಕೋಳಿಯ ಒಟ್ಟು ತೂಕ ಕಂಡುಹಿಡಿಯಿರಿ. ಒಂದು ದಿನದ ಹಿಂದೆ ಈ ಬ್ರೈನ್ ಟೀಸರ್ ಹಂಚಿಕೊಳ್ಳಲಾಗಿದೆ. ಅನೇಕರು ಈ ಟೀಸರ್‌ಗೆ ಲೈಕ್ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಯೂಸರ್ ಸರಿ ಉತ್ತರ 50 ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಯೂಸರ್ 27 ಎಂಬ ಉತ್ತರ ಕೊಟ್ಟು ಅದಕ್ಕೆ ಸುದೀರ್ಘ ವಿವರಣೆ ನೀಡಿದ್ದಾರೆ.
ಮೊಲ + ಬಾತುಕೋಳಿ = 10
ಮೊಲ + ನಾಯಿ = 20
ಇದರ ಪ್ರಕಾರ
ನಾಯಿ = ಬಾತುಕೋಳಿ + 10
ಬಾತುಕೋಳಿ +ನಾಯಿ = 2 ಬಾತುಕೋಳಿಗಳು + 10
ಬಾತುಕೋಳಿ+ ನಾಯಿ = 24
ಬಾತುಕೋಳಿ + (ಬಾತುಕೋಳಿ + 10) = 24
ಅಥವಾ
2 ಬಾತುಕೋಳಿ + 10 = 24
ಇದರಿಂದ ಬಾತುಕೋಳಿಯ ತೂಕ = 7 ಎಂದು ಗೊತ್ತಾಗುತ್ತದೆ.
ಹಾಗಾದರೆ ನಾಯಿ ತೂಕ = 17
ಬಾತುಕೋಳಿ + ಮೊಲ = 10
ಮೊಲ = 3
ಕೊನೆಯದಾಗಿ ಉತ್ತರ 3 + 7 + 17
ಒಟ್ಟು 27 ಎಂದು ವಿವರಣೆ ನೀಡಿದ್ದಾರೆ.
ನಿಮ್ಮ ಪ್ರಕಾರ ಈ ಪ್ರಶ್ನೆಗೆ ಸರಿ ಉತ್ತರ ಏನು?