Maths Puzzle: ಒಂದೇ ಒಂದು ಬೆಂಕಿಕಡ್ಡಿಯನ್ನು ತೆಗೆದು ಈ ಲೆಕ್ಕ, ಪಕ್ಕಾ ಆಗುವಂತೆ ಮಾಡಿ; ನಿಮ್ಮ ಸಮಯ ಈಗ ಶುರು
Maths Puzzle: ಬೆಂಕಿಕಡ್ಡಿ ಬಳಸಿ ಸೃಷ್ಟಿಸಲಾದ ಈ ಬ್ರೈನ್ ಟೀಸರ್‌ನಲ್ಲಿ ಒಂದೇ ಒಂದು ಕಡ್ಡಿಯನ್ನು ತೆಗೆಯುವ ಮೂಲಕ ಉತ್ತರ ಹುಡುಕಬಹುದಾಗಿದೆ. ನೀವು ಬ್ರೈನ್ ಟೀಸರ್ ಬಿಡಿಸುವಲ್ಲಿ ಆಸಕ್ತಿ ಹೊಂದಿದ್ದರೆ, 2-3 ಬಾರಿ ನೋಡಿ ಪ್ರಶ್ನೆಯನ್ನು ಅರ್ಥ ಮಾಡಿಕೊಂಡರೆ, ಇದನ್ನು ಬಿಡಿಸಲು ಕೆಲವೇ ಸೆಕೆಂಡ್‌ಗಳು ಸಾಕು.
Maths Puzzle: ಎಲ್ಲರೂ ಮ್ಯಾಜಿಕ್ ನೋಡಿರುತ್ತೀರಿ, ಅಲ್ಲಿ ನಮ್ಮ ಕಣ್ಣ ಮುಂದೆ ಕಾಣುವುದೇ ಒಂದು ಆದರೆ ಜಾದೂಗಾರರು ಬಳಸುವ ಟ್ರಿಕ್‌ಗಳೇ ಬೇರೆ. ನಾವು ಎಲ್ಲವನ್ನೂ ನೋಡಿದರೂ ಅಲ್ಲಿನ ಅಸಲಿ ವಿಚಾರವನ್ನು ಗ್ರಹಿಸಲು ಸಾಧ್ಯವಾಗುವಿಲ್ಲ. ಈ ಬ್ರೈನ್ ಟೀಸರ್ ಕೂಡಾ ಅದೇ ರೀತಿ. ನೋಡುತ್ತಿದ್ದರೆ ಇದು ಬಹಳ ಕಷ್ಟ ಎನಿಸುತ್ತದೆ. ಆದರೆ ಸ್ವಲ್ಪ ಯೋಚನೆ ಮಾಡಿದರೆ, ಏಕಾಗ್ರತೆಯಿಂದ ಗಮನಿಸಿದರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದು ಕಷ್ಟದ ಮಾತೇನಲ್ಲ.
ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದರಲ್ಲಿರುವುದು ಗಣಿತದ ಬ್ರೈನ್ ಟೀಸರ್. ಇಲ್ಲಿರುವ ಒಂದೇ ಒಂದು ಬೆಂಕಿ ಕಡ್ಡಿಯನ್ನು ತೆಗೆದರೆ ಈ ಪ್ರಶ್ನೆಗೆ ಉತ್ತರ ದೊರೆಯಲಿದೆ. ಈ ಲೆಕ್ಕ ನೋಡಿ ಕೆಲವರು ತಲೆಗೆ ಕೆಲಸ ಕೊಟ್ಟರೆ ಇನ್ನೂ ಕೆಲವರು ತಮ್ಮ ಆಪ್ತರಿಗೆ ಈ ಟೀಸರ್ ಪಾರ್ವರ್ಡ್ ಮಾಡಿ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಗಣಿತ ಪ್ರೇಮಿಗಳು ಮಾತ್ರ ಈ ಲೆಕ್ಕವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಥಟ್ ಅಂತ ಉತ್ತರ ಹೇಳುತ್ತಿದ್ದಾರೆ. ನೀವು ಯಾವ ವರ್ಗಕ್ಕೆ ಸೇರಿದವರು? ಕಡಿಮೆ ಸಮಯದಲ್ಲಿ ನಿಮ್ಮ ಬುದ್ಧಿ ಉಪಯೋಗಿಸಿ ಈ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯಾನಾ? ಪ್ರಯತ್ನ ಮಾಡಿ.
ಒಂದೇ ಒಂದು ಬೆಂಕಿಕಡ್ಡಿಯನ್ನು ಸರಿಸಿದರೆ ಸಾಕು
ಈ ಬ್ರೈನ್ ಟೀಸರ್‌ನಲ್ಲಿ ಬೆಂಕಿ ಕಡ್ಡಿಗಳನ್ನು ಬಳಸಿ 0-7=1 ಸಂಖ್ಯೆಗಳನ್ನು ಬರೆಯಲಾಗಿದೆ. ಈ ಪ್ರಶ್ನೆಯನ್ನು ತಪ್ಪಾಗಿ ಕೇಳಲಾಗಿದೆ. ಅದನ್ನು ಸರಿ ಪಡಿಸುವುದೇ ನಿಮ್ಮ ಮುಂದಿರುವ ಸವಾಲ್. ಆದರೆ ಇದನ್ನು ಸರಿಪಡಿಸಲು ನೀವು ಮಾಡಬೇಕಿರುವುದು ಒಂದು ಚಿಕ್ಕ ಕೆಲಸ. ಇಲ್ಲಿ ಜೋಡಿಸಲಾಗಿರುವ ಒಂದೇ ಒಂದು ಬೆಂಕಿಕಡ್ಡಿಯನ್ನು ತೆಗೆಯುವುದು ಅಥವಾ ಬೇರೆಡೆ ಜೋಡಿಸುವುದು. ಕಡ್ಡಿಯನ್ನು ತೆಗೆಯಬೇಕಾ ಅಥವಾ ಬೇರೆಡೆ ಜೋಡಿಸಬೇಕಾ ಅನ್ನೋದು ನಿಮಗೆ ಬಿಟ್ಟದ್ದು, ಆದರೆ ಉತ್ತರ ಸರಿ ಇರಬೇಕು ಅಷ್ಟೇ. ನಿಮ್ಮ ಸಮಯ ಈಗ ಶುರು.
ಈ ಬ್ರೈನ್ ಟೀಸರನ್ನು ಮಾರ್ಚ್ 21 ರಂದು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೂ ಈ ಪಜಲ್‌ಗೆ 1,400ಕ್ಕೂ ಹೆಚ್ಚು ವ್ಯೂವ್ಸ್ ಸಿಕ್ಕಿದೆ. ಇನ್ನೂ ಹೆಚ್ಚಿನ ಮಂದಿ ನೋಡುತ್ತಿದ್ದಾರೆ. ಸಾಕಷ್ಟು ಜನರು ಕಾಮೆಂಟ್ ಮಾಡುವುದರ ಜೊತೆಗೆ ಈ ಟೀಸರ್ ಹಂಚಿಕೊಳ್ಳುತ್ತಿದ್ದಾರೆ. 0-7=1 ರಲ್ಲಿ ಒಂದು ಬೆಂಕಿಕಡ್ಡಿಯನ್ನು ತೆಗೆದರೆ 6-7=1 ಆಗುತ್ತದೆ, ಇದು ಸರಿಯಾದ ಉತ್ತರ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು 0+1=1 ಎಂದು ಉತ್ತರ ಕೊಟ್ಟಿದ್ದಾರೆ. ಮೂರನೇ ವ್ಯಕ್ತಿ 1+0=1 ಎಂದಿದ್ದಾರೆ. ಮೈನಸನ್ನು ಪ್ಲಸ್ ಮಾಡಿ ಎಂದು ನಾಲ್ಕನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. 7 ರಿಂದ ಮೇಲ್ಭಾಗದ ಕಡ್ಡಿಯನ್ನು ತೆಗೆದು ಮೈನಸ್ ಚಿಹ್ನೆ ಮೇಲೆ ಉದ್ದವಾಗಿ ಸೇರಿಸಿ ಆಗ ಈ ಲೆಕ್ಕ 0+1=1 ಆಗಿ ಪಕ್ಕಾ ಇರಲಿದೆ ಎಂದಿದ್ದಾರೆ.
ಹೀಗೆ ಒಬ್ಬೊಬ್ಬರು ಯೂಸರ್ ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗಳಲ್ಲಿ ಯಾವುದು ಸರಿ? ಅಥವಾ ನಿಮ್ಮ ಉತ್ತರ ಬೇರೆ ಏನಾದರೂ ಇದೆಯೇ? ಬೇಗ ಬೇಗ ಕಾಮೆಂಟ್ ಮಾಡಿ.