Morning Yoga | ಒತ್ತಡ ನಿವಾರಣೆಗೆ ಈ ಎರಡು ಯೋಗಾಸನಗಳನ್ನು ಮುಂಜಾನೆ ಮಾಡಿ..
ಬೆಳಗ್ಗೆ ಯೋಗ ಮಾಡುವುದರಿಂದ ದಿನವಿಡೀ ನಿಮ್ಮ ಮನಸ್ಸು ತಾಜ ಹಾಗೂ ಚುರುಕಾಗಿ ಇರುತ್ತದೆ. ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೀಲು ನೋವಿನಿಂದ ನಿಮ್ಮನ್ನು ನಿವಾರಿಸುತ್ತದೆ.
ನಿಮ್ಮ ದೇಹ ಮತ್ತು ಮನಸ್ಸನ್ನು ಆರಾಮವಾಗಿಡಲು ಪ್ರತಿದಿನ ಬೆಳಿಗ್ಗೆ ಯೋಗಾಸನಗಳನ್ನು ಮಾಡಿ. ಆಗ ನೀವು ಯಾವುದೇ ಒತ್ತಡ ಅಥವಾ ಆತಂಕವಿಲ್ಲದೆ ಇಡೀ ದಿನ ಶಾಂತವಾಗಿರುತ್ತೀರಿ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕೂಡ ಸುಧಾರಿಸುತ್ತದೆ.
ಬೆಳಗ್ಗೆ ಸ್ವಲ್ಪ ಹೊತ್ತು ಯೋಗ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಯೋಗವು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉತ್ತಮ ಪರಿಹಾರವನ್ನು ತರುತ್ತದೆ. ನಿತ್ಯವೂ ಬೆಳಿಗ್ಗೆ ಸರಳ ಯೋಗಾಸನಗಳನ್ನು ಮಾಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸು ಯಾವುದೇ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಯೋಗ ಮಾಡುವವರು ಪ್ಯಾರಾಸಿಂಪಥೆಟಿಕ್ ನರಮಂಡಲಕ್ಕೆ ಲಭ್ಯವಿರುವ ಚಿಕಿತ್ಸೆಯ ಪ್ರಯೋಜನಗಳನ್ನು ಪಡೆಯುತ್ತಾರೆ. ಪರಿಣಾಮವಾಗಿ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ.
ಬೆಳಿಗ್ಗೆ ಮಾಡಬೇಕಾದ ಎರಡು ಯೋಗಾಸನಗಳು ಇಲ್ಲಿವೆ. ಉಳಿದವುಗಳ ಜೊತೆಗೆ ಈ ಎರಡು ಆಸನಗಳನ್ನು ಕೆಲವು ನಿಮಿಷಗಳ ಕಾಲ ಮಾಡಿದರೆ ಒಳಿತು.
ಗರುಡಾಸನ (ಹದ್ದು ಭಂಗಿ)
ಗರುಡ ಎಂಬುದು ಸಂಸ್ಕೃತ ಪದವಾಗಿದ್ದು, ಅಕ್ಷರಶಃ ಹದ್ದು ಎಂದರ್ಥ. ಗರುಡಾಸನ ಅಥವಾ ಹದ್ದಿನ ಭಂಗಿ (ಈಗಲ್ ಪೋಸ್) ಎಂದರೆ ಹದ್ದಿನಂತೆ ನಿಂತುಕೊಂಡು ಭಂಗಿ ಮಾಡುವುದು. ಈ ಆಸನ ಮಾಡಲು ನೀವು ನಿಮ್ಮ ಮೊಣಕಾಲುಗಳನ್ನು ಬಗ್ಗಿಸಬೇಕು, ನಿಮ್ಮ ಎಡತೊಡೆಯನ್ನು ನಿಮ್ಮ ಬಲಕ್ಕೆ ದಾಟಿಸಿ. ನಿಮ್ಮ ಎಡ ಪಾದದ ಮೇಲ್ಭಾಗವನ್ನು ನಿಮ್ಮ ಬಲ ಕಾಲಿನ ಹಿಂದೆ ಕೊಕ್ಕೆಯಂತೆ ಸಿಕ್ಕಿಸಿ. ನಿಮ್ಮ ಬಲ ಮೊಣಕೈಯನ್ನು ನಿಮ್ಮ ಎಡಭಾಗಕ್ಕೆ ತಾಗಿಸಿ, ನಿಮ್ಮ ಅಂಗೈಗಳನ್ನು ಸ್ಪರ್ಶಕ್ಕೆ ತರಬೇಕು, ನಿಮ್ಮ ಮೊಣಕೈಗಳನ್ನು ಮೇಲಕ್ಕೆತ್ತಿ, ಮತ್ತು ನಿಮ್ಮ ಬೆರಳುಗಳನ್ನು ಮೇಲೆ ಚಾವಣಿಯ ಕಡೆಗೆ ಚಾಚಿ.
ಈ ಭಂಗಿಯಲ್ಲಿರುವಾಗ ನೀವು ಸಂಕೋಚನ ಅಥವಾ ಬಿಗಿತದ ಭಾವನೆಯನ್ನು ಅನುಭವಿಸಬಹುದು. ಆದರೆ ಈ ಆಸನವು ಸ್ನಾಯುಗಳಿಗೆ ವಿಶ್ರಾಂತಿ, ಮನಸ್ಸಿಗೆ ಶಾಂತತೆಯ ಜೊತೆಗೆ ದೇಹಕ್ಕೆ ಸಮತೋಲನವನ್ನು ತರುತ್ತದೆ.
ತ್ರಿಕೋನಾಸನ
ತ್ರಿಕೋನಾಸನ ಆಸನ ಇದು ತ್ರಿಕೋನಾಕಾರದಲ್ಲಿ ನಿಂತಿರುವ ಆಸನ. ನೇರವಾಗಿ ನಿಂತಿರುವ ಭಂಗಿಯಲ್ಲಿ ಪಾದಗಳ ನಡುವೆ 3-4 ಅಡಿ ಅಂತರವನ್ನು ಇರಿಸಿ ಮತ್ತು ಬಲಗೈ ಬಲ ಪಾದಕ್ಕೆ ತಾಗುವಂತೆ ದೇಹವನ್ನು ಬಾಗಿಸಿ. ಎಡಗೈ ಎಡ ಪಾದಕ್ಕೆ ತಾಗುವಂತೆ ದೇಹವನ್ನು ಇದೇ ರೀತಿಯಲ್ಲಿ ಬಾಗಿಸಿ. ಇದನ್ನು ನಿಯಮಿತವಾಗಿ ಬಲಭಾಗದಲ್ಲಿ ಮತ್ತು ಒಮ್ಮೆ ಎಡಭಾಗದಲ್ಲಿ ಮಾಡಿ. ಈ ಆಸನಗಳು ದೇಹಕ್ಕೆ ಸಮತೋಲನ ಮತ್ತು ಸ್ಥಿರತೆಯನ್ನು ನೀಡುತ್ತವೆ.
ಬೆಳಗ್ಗೆ ಯೋಗ ಮಾಡುವುದರಿಂದ ದಿನವಿಡೀ ನಿಮ್ಮ ಮನಸ್ಸು ತಾಜ ಹಾಗೂ ಚುರುಕಾಗಿ ಇರುತ್ತದೆ. ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೀಲು ನೋವಿನಿಂದ ನಿಮ್ಮನ್ನು ನಿವಾರಿಸುತ್ತದೆ. ಮುಂಜಾನೆ ಸೂರ್ಯ ನಮಸ್ಕಾರ ಮಾಡಿದರೆ ದಣಿವಾಗುವುದಿಲ್ಲ. ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಶ್ವಾಸಕೋಶದ ಕಾರ್ಯವು ಸುಧಾರಿಸುತ್ತದೆ.