New Year Resolution: ಹೊಸ ವರ್ಷದ ನಿರ್ಣಯಗಳನ್ನು ಫಾಲೋ ಮಾಡೋದ್ರಲ್ಲಿ ಫೇಲ್‌ ಆಗೋಕೆ ಇವೇ ಪ್ರಮುಖ ಕಾರಣಗಳು; ಇನ್ನಾದ್ರೂ ತಿದ್ಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year Resolution: ಹೊಸ ವರ್ಷದ ನಿರ್ಣಯಗಳನ್ನು ಫಾಲೋ ಮಾಡೋದ್ರಲ್ಲಿ ಫೇಲ್‌ ಆಗೋಕೆ ಇವೇ ಪ್ರಮುಖ ಕಾರಣಗಳು; ಇನ್ನಾದ್ರೂ ತಿದ್ಕೊಳ್ಳಿ

New Year Resolution: ಹೊಸ ವರ್ಷದ ನಿರ್ಣಯಗಳನ್ನು ಫಾಲೋ ಮಾಡೋದ್ರಲ್ಲಿ ಫೇಲ್‌ ಆಗೋಕೆ ಇವೇ ಪ್ರಮುಖ ಕಾರಣಗಳು; ಇನ್ನಾದ್ರೂ ತಿದ್ಕೊಳ್ಳಿ

ಪ್ರತಿ ವರ್ಷ ಹೊಸ ವರ್ಷ ಆರಂಭಕ್ಕೂ ಮುನ್ನ ಮುಂದಿನ ವರ್ಷ ಹಾಗಿರಬೇಕು, ಹೀಗಿರಬೇಕು ಎಂದು ನಿರ್ಣಯ ತೆಗೆದುಕೊಳ್ಳುವುದೇನೋ ನಿಜ. ಆದರೆ ಬಹುತೇಕ ಈ ನಿರ್ಣಯಗಳನ್ನು ಪಾಲಿಸುವಲ್ಲಿ ಸೋಲುತ್ತಾರೆ. ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ.

ಹೊಸ ವರ್ಷದ ನಿರ್ಣಯ
ಹೊಸ ವರ್ಷದ ನಿರ್ಣಯ

2023ಕ್ಕೆ ಬಾಯ್‌ ಹೇಳಿ 2024ಕ್ಕೆ ಹಾಯ್‌ ಹೇಳುವ ಕಾಲ ಸಮೀಪದಲ್ಲಿದೆ. ಹೊಸ ವರ್ಷ ಎಂದರೆ ಏನೋ ಒಂಥರಾ ಹೊಸ ಭಾವನೆ ಮನದಲ್ಲಿ ಮೂಡುವುದು ಸಹಜ. ಕಳೆದ ವರ್ಷದಲ್ಲಿ ಆದ ನೋವು, ದುಃಖ, ಅನುಮಾನ, ಸೋಲು ಇದೆಲ್ಲವನ್ನೂ ಮರತೆ ಹೊಸ ವರ್ಷವನ್ನು ಹೊಸದಾಗಿ ಆರಂಭಿಸಬೇಕು ಎಂದು ನಾವು ಕನಸು ಕಾಣುವುದು ಸಹಜ. ಅಲ್ಲದೇ ಹೊಸ ವರ್ಷ ಬಂತೆಂದರೆ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಮುಂದಿನ ವರ್ಷ ಹೀಗೆಲ್ಲಾ ಇರಬೇಕು ಎಂದು ಮೊದಲೇ ಪ್ಲಾನ್‌ ಮಾಡಿ ಇಂದು ನ್ಯೂ ಇಯರ್‌ ರೆಸ್ಯೂಲನ್‌ ಹೀಗಿದೆ ಎಂದು ಆತ್ಮೀಯರಲ್ಲಿ ಹಂಚಿಕೊಳ್ಳುತ್ತೇವೆ. ಆದರೆ ಶೇ 70ರಷ್ಟು ಮಂದಿ ಹೊಸ ವರ್ಷಕ್ಕೆ ತೆಗೆದುಕೊಂಡ ನಿರ್ಣಯಗಳನ್ನು ಪಾಲಿಸುವಲ್ಲಿ ಸೋಲುತ್ತಾರೆ. ಕೆಲವರು ಹೊಸ ವರ್ಷದ ನಿರ್ಣಯವನ್ನು ಒಂದು ವಾರ ಅಥವಾ ಒಂದು ತಿಂಗಳು ಪಾಲಿಸುತ್ತಾರೆ. ನಂತರ ಬಿಟ್ಟು ಬಿಡುತ್ತಾರೆ. ಮತ್ತೆ ಮುಂದಿನ ವರ್ಷ ಒಂದಿಷ್ಟು ನಿರ್ಣಯ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಫೇಲ್‌. ಹಾಗಾದರೆ ಹೊಸ ವರ್ಷದ ನಿರ್ಣಯಗಳ ವಿಚಾರದಲ್ಲಿ ಜನರು ಪದೇ ಪದೇ ಸೋಲುವುದೇಕೆ ಅದಕ್ಕೆ ಇಲ್ಲಿದೆ ಕೆಲವು ಪ್ರಮುಖ ಕಾರಣ

ವಾಸ್ತವಕ್ಕೆ ನಿಲುಕದ ನಿರ್ಣಯಗಳು

ಹಲವರು ಹೊಸ ವರ್ಷದ ನಿರ್ಣಯಗಳ ವಿಚಾರದಲ್ಲಿ ಸೋಲಲು ಪ್ರಮುಖ ಕಾರಣ ವಾಸ್ತವಕ್ಕೆ ಹತ್ತಿರವಿಲ್ಲದ, ಅಸಾಧ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು. ಹಲವರು ಅತಿ ಕಷ್ಟ ಎನ್ನಿಸುವ ಗುರಿಗಳ ಮೇಲೆ ಗಮನ ಹರಿಸುತ್ತಾರೆ. ಅಂತಹ ಗುರಿಗಳನ್ನು ಸುಲಭವಾಗಿ ಮುಟ್ಟಲು ಸಾಧ್ಯವಾಗುವುದಿಲ್ಲ. ಒಂದೆರಡು ಬಾರಿ ಸೋಲು ಕಂಡಾಕ್ಷಣ ನಮಗೆ ಗುರಿಯ ಬಗ್ಗೆ ಬೇಸರ ಮೂಡುತ್ತದೆ. ಆ ಕಾರಣಕ್ಕೆ ಸಂಕಲ್ಪ ಮಾಡುವ ಮುನ್ನ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ. ಕೆಲವೊಮ್ಮೆ ಸಂಕಲ್ಪಕ್ಕಾಗಿ ನೀವು ಬದಲಾಗಬೇಕಾಗಬಹುದು.

ಹೊಣೆಗಾರಿಕೆಯ ಕೊರತೆ

ಹೊಣೆಗಾರಿಕೆ ಇಲ್ಲದೇ ಇದ್ದರೆ ಯಾವುದೇ ಸಂಕಲ್ಪವು ನೆರವೇರುವುದಿಲ್ಲ. ಯಾವುದೇ ಕೆಲಸವನ್ನಾದರೂ ನನ್ನದು ಎಂಬ ಹೊಣೆಗಾರಿಕೆ ಹೊತ್ತು ಮಾಡಿದರೆ ಮಾತ್ರ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಿಮ್ಮ ಹೊಣೆಗಾರಿಕೆಗೆ ಯಾರನ್ನಾದರೂ ಜೊತೆ ಸೇರಿಸಿಕೊಳ್ಳುತ್ತೀರಿ ಎಂದರೆ ಅವರು ನಿಮ್ಮ ಶಕ್ತಿ, ಸಾಮರ್ಥ್ಯವನ್ನು ಕುಗ್ಗಿಸುವಂತೆ ಇರಬಾರದು. ಅದರ ಬದಲು ನಿಮ್ಮಲ್ಲಿ ಉತ್ಸಾಹ ಹೆಚ್ಚಿಸುವ, ನಿಮಗೆ ಪ್ರೋತ್ಸಾಹ ನೀಡುವ ಜನರೊಂದಿಗೆ ಸೇರಿ ಕೆಲಸ ಮುಂದುವರಿಸಿ.

ಟ್ರ್ಯಾಕ್‌ ಮಾಡದೇ ಇರುವುದು

ನೀವು ಮಾಡಿರುವ ಸಂಕಲ್ಪವನ್ನು ನೀವು ಎಷ್ಟರ ಮಟ್ಟಿಗೆ ಅನುಸರಿಸುತ್ತಿದ್ದೀರಿ ಎಂಬುದನ್ನು 15 ದಿನ ಅಥವಾ ತಿಂಗಳಿಗೊಮ್ಮೆ ಟ್ರ್ಯಾಕ್‌ ಮಾಡುವುದು ಮುಖ್ಯವಾಗುತ್ತದೆ. ಟ್ರ್ಯಾಕ್‌ ಮಾಡುವ ವಿಚಾರದಲ್ಲಿ ಸೋತರೆ, ನೀವು ಸಂಕಲ್ಪದ ವಿಷಯದಲ್ಲಿ ವಿಚಾರದಲ್ಲಿ ಸೋತಂತೆ.

ಪ್ಲಾನಿಂಗ್‌ ಕೊರತೆ

ಯಾವುದೇ ಕೆಲಸವಾಗಲಿ ಉತ್ತಮ ಅನುಷ್ಠಾನಕ್ಕೆ ಪ್ಲಾನಿಂಗ್‌ ಬಹಳ ಮುಖ್ಯ. ನೀವು ಒಂದು ನಿರ್ಣಯ ತೆಗೆದುಕೊಂಡಿದ್ದರೆ ಅದನ್ನು ಸಣ್ಣ ತುಂಡುಗಳಾಗಿ ವಿಭಜಿಸಿ. ನಿಧಾನಕ್ಕೆ ಒಂದೊಂದೇ ವಿಭಾಗವನ್ನು ಕಾರ್ಯರೂಪಕ್ಕೆ ತನ್ನಿ. ಇನ್ನು ಟೈಮ್‌ ಇದೆ ಮಾಡಿದ್ರಾಯ್ತು ಎನ್ನುವ ಭಾವನೆ ಬೇಡ. ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ನಿರ್ವಹಿಸಿ. ಪ್ಲಾನ್‌ಗೆ ತಕ್ಕಂತೆ ನಿಮ್ಮ ಕಾರ್ಯವಿರಲಿ. ಆಗ ನೀವು ಸೋಲಲು ಸಾಧ್ಯವಿಲ್ಲ.

ನಿಮ್ಮ ಮೇಲೆ ನಿಮಗೆ ಅನುಮಾನ

ನಿಮ್ಮ ಹಿಂದಿನ ವೈಫಲ್ಯಗಳು ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡಲು ಬಿಡಬೇಡಿ. ವೈಫಲ್ಯಗಳಿಂದ ಪಾಠ ಕಲಿಯಿರಿ. ಸಣ್ಣ ಸಣ್ಣ ಗೆಲುವನ್ನು ಸಂಭ್ರಮಿಸಿ. ಇದು ಹೆಚ್ಚು ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ನಮ್ಮ ಮೇಲೆ ನಾವು ಅನುಮಾನ ಇರಿಸಿಕೊಳ್ಳುವುದು ಸರಿಯಲ್ಲ. ಇದರಿಂದ ಸೋಲು ಖಚಿತ. ʼನನ್ನಿಂದ ಏಕೆ ಸಾಧ್ಯವಿಲ್ಲ, ನಾನು ಮಾಡಿಯೇ ತೀರುತ್ತೇನೆʼ ಎಂಬ ಭಾವ ಹೊಂದಿರುವುದು ಮುಖ್ಯವಾಗುತ್ತದೆ.

ಸ್ಪಷ್ಟತೆ ಇಲ್ಲದೇ ಇರುವುದು

ಏಕೆ ಎನ್ನುವುದು ಬಹುಪಾಲು ಜನರು ಸೋಲಲು ಮುಖ್ಯ ಕಾರಣ. ಏಕೆ ಎನ್ನುವುದು ನಮ್ಮಲ್ಲಿ ಅಸ್ಪಷ್ಟ ಭಾವ ಮೂಡಲು ಕಾರಣವಾಗುತ್ತದೆ. ನಿಮಗೆ ಏನು ಬೇಕು ಎಂಬುದು ನಿಮಗೆ ತಿಳಿದಿರಬೇಕು. ನಿಮಗೆ ಏಕೆ ಬೇಕು ಎಂಬುದನ್ನು ಕಂಡುಹಿಡಿಯದ ಹೊರತು ನಿಮ್ಮಿಂದ ಸಾಧಿಸಲು ಸಾಧ್ಯವಿಲ್ಲ,

Whats_app_banner