New Year Resolution: ನಿಮ್ಮ ಹೊಸ ವರ್ಷದ ಸಂಕಲ್ಪ ಸಫಲವಾಗಿಸುವುದು ಹೇಗೆ? ನಿಮಗಾಗಿ ಈ ಸರಳ ಟಿಪ್ಸ್
ಹೊಸ ವರ್ಷ ಬರುತ್ತಿದ್ದಂತೆ ಪ್ರತಿಯೊಬ್ಬರೂ ತಮ್ಮದ ಆದ ಹೊಸ ಸಂಕಲ್ಪಗಳನ್ನು ಮಾಡುತ್ತಾರೆ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂತು, ಎಷ್ಟರ ಮಟ್ಟಿಗೆ ಸಫಲವಾಯಿತು ಎಂಬುದನ್ನು ಮುಖ್ಯವಾಗುತ್ತದೆ. 2025ರ ಹೊಸ ವರ್ಷದಲ್ಲಿ ನೀವು ಕೈಗೊಳ್ಳುವ ಸಂಕಲ್ಪ ಸಫಲವಾಗಲು ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಟಿಪ್ಸ್ ಇಲ್ಲಿದೆ.
ಜನವರಿ ಬಂತೆಂದರೆ ಸಾಕು. ಜನರು ಹೊಸ ವರ್ಷದ ಹುರುಪಿನಲ್ಲಿ ಹೊಸ ಹೊಸ ಸಂಕಲ್ಪಗಳನ್ನು ತೆಗೆದುಕೊಳ್ಳುತ್ತಾರೆ. ಜೀವನದಲ್ಲಿ ಏನಾದರೂ ಹೊಸತನ್ನು ಸಾಧಿಸಬೇಕು ಮತ್ತು ಗುರಿ ತಲುಪಬೇಕು ಎಂಬ ನಿಲುವನ್ನು ಯುವಕರು ವರ್ಷದ ಆರಂಭದಲ್ಲಿ ಹೊಂದಿರುತ್ತಾರೆ. ಆದರೆ ದಿನ ಕಳೆಯುತ್ತಾ ಹೋದಂತೆ ಅವರಿಗೆ ನ್ಯೂ ಇಯರ್ ರೆಸೊಲ್ಯೂಷನ್‌ನಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಅಂದುಕೊಂಡ ಗುರಿಯನ್ನು ತಲುಪಲು ಅವರಿಗೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದು ಹೇಗೆ ಮತ್ತು ಗುರಿ ಸಾಧಿಸಲು ಏನು ಮಾಡಬೇಕು, ಸಂಕಲ್ಪಗಳನ್ನು ಸಫಲ ಮಾಡಿಕೊಳ್ಳಲು ಇಲ್ಲಿ ನೀಡಿರುವ ಟಿಪ್ಸ್ ನಿಮಗೆ ಸಹಕಾರಿಯಾಗಬಹುದು. ನಿಮ್ಮ ಯೋಜಿತ ನಿಲ್ದಾಣವನ್ನು ತಲುಪಲು ಮತ್ತು ಬಯಸಿದ ಬದಲಾವಣೆ ತರಲು ಇದು ಸಹಕಾರಿಯಾಗಬಹುದು. ನಿಮ್ಮ ರೆಸೊಲ್ಯೂಶನ್ ಏನು? ಅದನ್ನು ಉಳಿಸಿಕೊಂಡು ಗೆಲುವು ಸಾಧಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
ನಿಮಗೆ ಉತ್ತಮವೆನಿಸುವ ಒಂದು ಗುರಿ ಇರಲಿ
ಜೀವನ ಎಂದಮೇಲೆ ಅದರಲ್ಲಿ ಒಂದು ಗುರಿ ಇರಬೇಕು ಮತ್ತು ಸಾಧಿಸುವ ಛಲ ಇರಬೇಕು. ಆದರೆ ಆ ಗುರಿಯ ಬಗ್ಗೆ ನಿಮಗೆ ಸ್ಪಷ್ಟತೆಯಿರಬೇಕು ಮತ್ತು ಅದು ಬಲವಂತದ್ದಾಗಿರಬಾರದು. ನಿಮ್ಮ ಗುರಿ ಸಾಧನೆ ಒಂದು ಟಾಸ್ಕ್‌ನಂತೆ ಆಗಬಾರದು, ಹೊಸ ವರ್ಷಕ್ಕೆ ಮಾಡಬೇಕಾದ ಕೆಲಸದ ಪಟ್ಟಿ ಇರಲೇಬೇಕೆಂದು ಎಲ್ಲಿಯೂ ನಿಯಮವಿಲ್ಲ.
ನಿರ್ಣಯದ ಬದಲು ಉದ್ದೇಶವಿರಲಿ
ಹೊಸ ವರ್ಷಕ್ಕೆ ನಿರ್ಣಯ ಕೈಗೊಳ್ಳುವ ಬದಲು ನೀವೇಕೆ ಒಂದು ಉದ್ದೇಶ ಇಟ್ಟುಕೊಳ್ಳಬಾರದು? ಯಾಕೆಂದರೆ ಹೊಸ ವರ್ಷದ ನಿರ್ಣಯವನ್ನು ಸಾಧಿಸಲು ಹಲವರು ವಿಫಲರಾಗುತ್ತಾರೆ. ಆದರೆ ಉದ್ದೇಶ ಸ್ಪಷ್ಟವಾಗಿದ್ದರೆ ಜನರು ಅದನ್ನು ತಲುಪಲು ವಿವಿಧ ಮಾರ್ಗಗಳನ್ನು ಆಯ್ದುಕೊಳ್ಳುತ್ತಾರೆ ಮತ್ತು ಅದರಲ್ಲಿ ಸಫಲರಾಗುತ್ತಾರೆ. ಹೀಗಾಗಿ ನಿರ್ಣಯದ ಬದಲು, ನಿಮ್ಮ ಗುರಿ ತಲುಪಲು ಒಂದು ಉದ್ದೇಶವಿದ್ದರೆ ಹೆಚ್ಚು ಸೂಕ್ತ.
ನಿಮ್ಮ ಸಂಕಲ್ಪಗಳನ್ನು ಉದ್ದೇಶದೊಂದಿಗೆ ಹೊಂದಿಸಿ
ಹೊಸ ವರ್ಷದ ಸಂಕಲ್ಪಗಳನ್ನು ಸಾಧಿಸಲು ನೀವು ಅದನ್ನು ಉದ್ದೇಶದೊಂದಿಗೆ ಹೊಂದಿಸಿಕೊಂಡರೆ ಆಗ ಗುರಿ ಸಾಧಿಸುವುದು ಸುಲಭ. ಕೆಲವೊಂದು ನಿರ್ಧಾರಗಳನ್ನು ಜನರು ಮನಸ್ಸಿನ ಬದಲು, ಹೃದಯದಿಂದ ಕೈಗೊಂಡಿರುತ್ತಾರೆ. ಅದು ಅವರಿಗೆ ಗುರಿ ತಲುಪಲು ಹೆಚ್ಚಿನ ಸ್ಪೂರ್ತಿಯನ್ನು ನೀಡುತ್ತದೆ. ಉದ್ದೇಶ ಕಠಿಣವಾಗಿದ್ದರೂ ಪ್ರೇರಣೆ ಒದಗಿಸುತ್ತದೆ.
ಬೈಫೋಕಲ್-ವಿಷನ್ ವಿಧಾನ ಬಳಸಿ
ನಿಮ್ಮ ದೀರ್ಘಕಾಲೀನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಪೂರಕವಾಗಿ ನಿಮ್ಮ ದೈನಂದಿನ ಚಟುವಟಿಕೆ ಮತ್ತು ನಿಯಮಿತ ಕೆಲಸದ ಜತೆ ವಿಭಜನೆ ಮಾಡಿಕೊಂಡರೆ ಗುರಿ ತಲುಪುವುದು ಸುಲಭ. ಬೈಫೋಕಲ್ ವಿಧಾನ ಬಳಕೆಯಿಂದ ನಿಮ್ಮ ದೀರ್ಘಕಾಲೀನ ಗುರಿಯೆಡೆಗೆ ತಲಪಲು ಕೆಲವು ಅಲ್ಪಾವಧಿಯ ಗುರಿಗಳು ಸಹಕರಿಸುತ್ತವೆ.
ಹೊಸ ವರ್ಷವನ್ನು ಪ್ರತ್ಯೇಕವಾಗಿಸಿ
ಹೊಸ ವರ್ಷಕ್ಕೆ ನಿರ್ಣಯ ಕೈಗೊಳ್ಳುವ ಬದಲು, ಪ್ರತ್ಯೇಕತೆಯನ್ನು ಮಾಡಿಕೊಳ್ಳಿ. ನಿಮ್ಮ ಜೀವನದಲ್ಲಿ ನೀವು ಬೇರ್ಪಡಿಸಲು ಬಯಸುವ ಒಂದು ವಿಷಯವನ್ನು ಆರಿಸಿ, ಪ್ರತ್ಯೇಕತೆಯ ರಚನೆಗೆ ನಿಮ್ಮ ನಡವಳಿಕೆಗೆ ಹೊಂದಿಕೆಯಾಗುವ ನಿರ್ಧಾರ ಕೈಗೊಳ್ಳಿ. ಇದರಿಂದ ನೀವು ನಾಳೆ ಆಗಲು ಬಯಸುವ ವ್ಯಕ್ತಿಯಾಗಿ ರೂಪುಗೊಳ್ಳಲು ಇಂದು ಇರುವ ವ್ಯಕ್ತಿಯಿಂದ ಪ್ರತ್ಯೇಕವಾಗುವುದು ಅಗತ್ಯ. ಈ ವಿಚಾರವನ್ನು ನಿಮ್ಮ ಮೂವರು ಆಪ್ತ ಸ್ನೇಹಿತರ ಜತೆ ಹಂಚಿಕೊಳ್ಳಿ. ಅವರು ನಿಮ್ಮನ್ನು ಹುರಿದುಂಬಿಸಿ, ನಿಮ್ಮ ಹೊಸ ಗುರಿಯೆಡೆಗೆ ಸಾಗಲು ನೆರವಾಗುತ್ತಾರೆ.
ಗುರಿಯನ್ನು ವಿಭಜಿಸಿಕೊಳ್ಳಿ
ಒಂದು ವರ್ಷವನ್ನು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸಿಕೊಳ್ಳಿ. ಅಂದರೆ, 30 ದಿನಗಳ ಗುರಿ, 90 ದಿನಗಳ ಗುರಿ ಹಾಗೂ ಆರು ತಿಂಗಳ ಗುರಿ ಎಂದಿರಲಿ. ಗುರಿಯನ್ನು ತಲುಪಲು ನೀವು ಸೃಜನಶೀಲರಾಗಿರಿ. 2025ರಲ್ಲಿ ನೀವು ಬಿಡಬೇಕು ಎಂದುಕೊಂಡಿರುವ ಏನನ್ನಾದರೂ ಗುರುತಿಸಿ. ಯಶಸ್ಸಿನ ಮೇಲೆ ನಿಮ್ಮ ನಿಗಾ ಇರಲಿ. ಹಾಗೆಯೇ ಒಂದು ಗುರಿ ನಿಮಗೆ ಪೂರಕವಾಗಿಲ್ಲ ಮತ್ತು ಅದರಿಂದ ಪ್ರಯೋಜನವಿಲ್ಲ ಎಂದಾದರೆ ಅದನ್ನು ಬಿಟ್ಟುಬಿಡಿ. ವರ್ಷವಿಡೀ ಅದನ್ನು ಉಳಿಸಿಕೊಳ್ಳುವುದು ಬೇಡ. ಹೊಸ ಗುರಿ ರೂಪಿಸಿ ಮತ್ತು ಅದರೊಂದಿಗೆ ಮುಂದುವರಿಯಿರಿ.
ನಿಮಗೆ ನೀವೇ ಜವಾಬ್ದಾರಿ ವಹಿಸಿಕೊಳ್ಳಿ
ನಿರ್ದಿಷ್ಟ ಗುರಿಯನ್ನು ನೀವು ನಿಗದಿಪಡಿಸಿದ ಬಳಿಕ, ಅದಕ್ಕೆ ನೀವೇ ಜವಾಬ್ದಾರಿ ವಹಿಸಿಕೊಳ್ಳಿ. ಅದಾದ ಬಳಿಕ ನಿಮ್ಮ ಗುರಿ ಮತ್ತು ಅದರ ಪ್ರಗತಿಯನ್ನು ಆಪ್ತ ಗೆಳೆಯರೊಂದಿಗೆ ಚರ್ಚಿಸಿ. ಅದರಿಂದ ನಿಮಗೆ ನಿಮ್ಮ ಗುರಿ ಸಾಧನೆಗೆ ಸಹಾಯಕವಾಗುವುದಲ್ಲದೆ, ಸ್ಫೂರ್ತಿಯೂ ದೊರೆಯುತ್ತದೆ. ಸಕಾರಾತ್ಮಕ ಯೋಚನೆಯುಳ್ಳ ಜನರೊಂದಿಗೆ ಬೆರೆಯುವುದರಿಂದ ನಿಮ್ಮ ಸಾಧನೆಗೆ ಸೂಕ್ತ ನೆರವು ದೊರೆಯುತ್ತದೆ.
ಹೊಂದಾಣಿಕೆ ಇರಲಿ
ಜೀವನದಲ್ಲಿ ಕೆಲವರಿಗೆ ಹೊಂದಾಣಿಕೆ ತುಂಬಾ ಕಷ್ಟ. ಅದರ ಪರಿಣಾಮ ಗುರಿ ತಲುಪುವಲ್ಲಿ ಮತ್ತು ಅಂದುಕೊಂಡಿರುವುದನ್ನು ಸಾಧಿಸುವಲ್ಲಿ ವಿಫಲರಾಗುತ್ತಾರೆ. ಜೀವನದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ನಾವು ಸೂಕ್ತವಾಗಿ ಎದುರಿಸಬೇಕು. ದೈನಂದಿನ ಅಭ್ಯಾಸದಲ್ಲಿ ಒಂದು ದಿನ ವ್ಯತ್ಯಾಸವಾದರೆ, ಅದರಿಂದ ಸಮಸ್ಯೆಯಿಲ್ಲ, ಪರಿಪೂರ್ಣತೆ ಸಾಧಿಸುವ ಬದಲು, ಗುರಿ ತಲುಪುವತ್ತ ನಮ್ಮ ಗಮನ ಇರುವುದು ಅಗತ್ಯ.
ವಾರ್ಷಿಕ ಗುರಿಗೆ 12 ತಿಂಗಳ ಇನ್ಕ್ರಿಮೆಂಟ್
ಹೊಸ ವರ್ಷದ ಗುರಿ ಕೆಲವೊಮ್ಮೆ ಬೇಗನೆ ವಿಫಲವಾಗುತ್ತದೆ. ಅದಕ್ಕೆ ಮುಖ್ಯ ಕಾರಣವೆಂದರೆ ಹೊಸ ವರ್ಷದ ಹುರುಪು ಹೆಚ್ಚು ಕಾಲ ಉಳಿಯದೇ ಇರುವುದು. ಅದಕ್ಕಾಗಿ ವಾರ್ಷಿಕ ಗುರಿ ನಿಗದಿಪಡಿಸಿ, ಅದನ್ನು 12 ತಿಂಗಳ ಸಣ್ಣ ಗುರಿಯಾಗಿ ವಿಂಗಡಿಸುವುದು ಉತ್ತಮ. ಹೀಗೆ ಮಾಡಿದರೆ ಗುರಿಯ ಪ್ರಗತಿ ಪರಿಶೀಲನೆಯೂ ಸುಲಭ ಮತ್ತು ಅದಕ್ಕಾಗಿ ಕೆಲಸ ಮಾಡುವುದು ಕೂಡ ಹೆಚ್ಚಿನ ಉತ್ಸಾಹದಿಂದ ಕೂಡಿರುತ್ತದೆ.
ಸಂಕಲ್ಪ ಒಂದು ಮಿಲಿಟರಿ ಕಾರ್ಯಚರಣೆಯಂತಿರಲಿ
ಹೊಸ ವರ್ಷದ ಸಂಕಲ್ಪವನ್ನು ಮಿಲಿಟರಿ ಕಾರ್ಯಾಚರಣೆ ಎಂದು ನೀವು ಪರಿಗಣಿಸಬೇಕು. ಹಾಗೆ ಮಾಡುವುದರಿಂದ, ನೀವು ನೀಡುವ ಸೂಚನೆಯಂತೆಯೇ ಗುರಿಯನ್ನು ನಿಗದಿಪಡಿಸಬಹುದು ಮತ್ತು ನಿರ್ವಹಿಸಬಹುದು. ಗುರಿಯ ಮೇಲೆ ಗಮನ ಹರಿಸಿ, ಸೂಕ್ತ ಕಾರ್ಯತಂತ್ರ ಬದಲಾವಣೆ ಮಾಡಿಕೊಳ್ಳಿ. ನಿಮ್ಮ ನಿರ್ಣಯ ಸಾಧನೆಗೆ ಅಗತ್ಯ ಸಹಾಯ ಪಡೆದುಕೊಳ್ಳಿ. ಹೀಗೆ ಮಾಡಿದರೆ ಜಯ ಸಾಧಿಸುವುದು ಸುಲಭ.
ಪ್ರತಿ ವಾರ ಗಮನಿಸಿ
ಹೊಸ ವರ್ಷದ ನಿರ್ಣಯಗಳನ್ನು ಕೇವಲವಾಗಿ ಪರಿಗಣಿಸಬೇಡಿ. ನಮ್ಮ ಗುರಿಯನ್ನು ನಿಗದಿಪಡಿಸಿದ ಬಳಿಕ ಅದನ್ನು ತಲುಪಲು ಕೆಲವೊಮ್ಮೆ ವಿಫಲವಾಗುತ್ತೇವೆ. ಅದಕ್ಕಾಗಿ ಪರಿತಪಿಸುತ್ತೇವೆ. ಅಂತಹ ಸಂದರ್ಭದಲ್ಲಿ ಪ್ರತಿವಾರವನ್ನೂ ಹೊಸದಾಗಿ ತೆಗೆದುಕೊಂಡ ನಮ್ಮ ಯೋಜನೆ ಮತ್ತು ನಡವಳಿಕೆಯಲ್ಲಿ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳಬೇಕು. ವಾರದ ಕೊನೆಗೆ ಪ್ರಗತಿಯ ಮೌಲ್ಯಮಾಪನ ಮಾಡಿ. ಮುಂದಿನ ವಾರದ ಯೋಜನೆ ರೂಪಿಸಬೇಕು. ಇದರಿಂದ ಬದಲಾವಣೆ ತಾನಾಗಿಯೇ ಸಾಧ್ಯವಾಗುತ್ತದೆ.
ಪ್ರತಿದಿನ ನಿಮ್ಮೊಂದಿಗೆ ಚೆಕ್ ಇನ್ ಮಾಡಿಕೊಳ್ಳಿ
ಪ್ರತಿದಿನ ಕೆಲವು ನಿಮಿಷಗಳಾದರೂ ಒಬ್ಬರೇ ಕುಳಿತುಕೊಂಡು ನೀವು ಯಾವುದನ್ನು ಬಯಸುತ್ತಿದ್ದೀರಿ ಎಂದು ನಿಮ್ಮನ್ನು ಕೇಳಿಕೊಳ್ಳಿ. ಹೃದಯದ ಆಳದಲ್ಲಿ ನೀವು ಹಂಬಲಿಸುತ್ತಿರುವುದು ಯಾವುದಕ್ಕೆ ಮತ್ತು ಏನನ್ನು ಎಂದು ಕೇಳಿಕೊಳ್ಳಿ. ನಂತರ ನಿಮ್ಮ ಹಂಬಲ ಏನು, ಅದನ್ನು ಪೂರೈಸಿದ ಬಳಿಕ ಜೀವನದಲ್ಲಿ ಏನು ಬದಲಾಗುತ್ತದೆ, ಯಾವುದು ಬೇಕು ಮತ್ತು ಯಾವುದನ್ನು ಬಿಡಬೇಕು ಎನ್ನುವುದನ್ನು ಕಂಡುಕೊಳ್ಳಿ. ಜತೆಗೆ ನಿಮ್ಮ ಗುರಿ ತಲುಪಲು ಸಹಾಯಕವಾಗುವ ಗೆಳೆಯನ ಹುಡುಕಿ, ಅವರು ನಿಮ್ಮ ಗುರುವಾಗಿರಬಹುದು, ಪಾಲುದಾರ ಅಥವಾ ಸ್ನೇಹಿತನೇ ಆಗಿರಬಹುದು.
ಸೂಕ್ತ ಪಾಲುದಾರರನ್ನು ಹುಡುಕಿ
ಹೊಸ ವರ್ಷದ ನಿರ್ಣಯಗಳಲ್ಲಿ ಹೆಚ್ಚು ಪ್ರಮುಖವಾದದ್ದು ಎಂದರೆ ಸೂಕ್ತ ಮತ್ತು ಉತ್ತರದಾಯಿತ್ವ ಪಾಲುದಾರರನ್ನು ಹೊಂದುವುದು. ಅಂತಹ ಪಾಲುದಾರರು ನಿಮ್ಮ ಜೊತೆಗಿದ್ದರೆ ನಿಮ್ಮ ಗುರಿ ಸಾಧನೆ ಸುಲಭ. ಅವರು ಪ್ರತಿಬಾರಿಯೂ ನಿಮ್ಮ ಪ್ರಗತಿಯ ಕುರಿತು ಎಚ್ಚರಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಹೀಗೆ ಮಾಡುವುದರಿಂದ ನಿಮಗೆ ಸೂಕ್ತ ಪ್ರೇರಣೆ ದೊರೆಯುತ್ತದೆ. ಸವಾಲುಗಳನ್ನು ಜಯಿಸಲು ಸಾಧ್ಯವಾಗುತ್ತದೆ. ನಿಮ್ಮ ನಿರ್ಣಯಗಳನ್ನು ಸಾಧಿಸಲು ಹೆಚ್ಚಿನ ಅವಕಾಶ ದೊರೆಯುತ್ತದೆ.
ಪ್ರತಿ ನಿರ್ಣಯವನ್ನು ಕ್ರಿಯಾತ್ಮಕ ಹಂತದಲ್ಲಿ ವಿಭಜಿಸಿ
ನೀವು ಹೊಸ ವರ್ಷಕ್ಕೆ ನಿರ್ಣಯಗಳ ಪಟ್ಟಿ ಮಾಡಿದಾಗ ಅದನ್ನು ಕ್ರಿಯಾತ್ಮಕ ಹಂತಗಳಾಗಿ ವಿಭಜಿಸಿ. ಅಂದರೆ ಮಾನವ ಸಂಪನ್ಮೂಲ ಲೆಕ್ಕಪರಿಶೋಧನೆಯನ್ನು ನಿರ್ವಹಿಸುವ ಬದಲು, ಈ ನಿರ್ಣಯವನ್ನು ಮಾನವ ಸಂಪನ್ಮೂಲ ಲೆಕ್ಕಪರಿಶೋಧನೆಯನ್ನು ಒಳಗೊಂಡಿರುವ ಹಂತಗಳಾಗಿ ವಿಭಜಿಸುವುದು ಸೂಕ್ತ. ಹೀಗೆ ಮಾಡುವುದರಿಂದ ವೈಯಕ್ತಿಕ ಮತ್ತು ವೃತ್ತಿಪರ ನಿರ್ಣಯ ಕೈಗೊಳ್ಳಲು ಅನುಕೂಲ. ಹಾಗೆಯೇ, ಆರೋಗ್ಯಕರ ಆಹಾರ ಸೇವನೆ ನಿಮ್ಮ ನಿರ್ಣಯವಾಗಿದ್ದರೆ, ಅದಕ್ಕಾಗಿ ನೀವು ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ.
ತ್ರೈಮಾಸಿಕ ಗುರಿ ಇರಲಿ
ಒಂದು ವರ್ಷಕ್ಕೆ ದೊಡ್ಡ ನಿರ್ಣಯ ಕೈಗೊಳ್ಳುವ ಬದಲು, ತ್ರೈಮಾಸಿಕ ಗುರಿಯನ್ನು ಹೊಂದುವುದು ಉತ್ತಮ. ಅದನ್ನು ತಲುಪಲು ನೀವು ಯಾವ ಪ್ರಯತ್ನ ಮಾಡುತ್ತೀರಿ ಎನ್ನುವುದು ಮುಖ್ಯ. ತ್ರೈಮಾಸಿಕ ಗುರಿ ತಲುಪಲು 60 ದಿನಗಳಲ್ಲಿ ಮಾಡಬೇಕಾಗಿರುವುದೇನು ಎನ್ನುವುದನ್ನು ವಿಭಜಿಸಿ. ನಂತರ ಅದರಲ್ಲಿ 30 ದಿನಗಳಲ್ಲಿ ನಿಮ್ಮ ಯೋಜನೆಯ ಪ್ರಕಾರ ಕೆಲಸ ಮಾಡಿ. 30 ದಿನಗಳಲ್ಲಿ ನೀವು ಎಷ್ಡು ಪ್ರಗತಿ ಸಾಧಿಸಿದ್ದೀರಿ ಎನ್ನುವುದನ್ನು ಗಮನಿಸಿ. ಗುರಿ ತಲುಪಿದ ಬಳಿಕ, ಮುಂದಿನ ತ್ರೈಮಾಸಿಕ ಅಥವಾ 30 ಅಥವಾ 60 ದಿನಗಳವರೆಗೆ ಹೊಸ ಗುರಿಯನ್ನು ಹೊಂದಿರಿ.
ನಿಮ್ಮ ಬದ್ಧತೆಯನ್ನು ಬಲಪಡಿಸಿ
ಹೊಸ ವರ್ಷದ ನಿರ್ಣಯದ ವಿಚಾರಕ್ಕೆ ಬಂದರೆ ಮುಖ್ಯವಾಗಿ ನಾವು ನಮ್ಮ ಬದ್ಧತೆಯ ಬಗ್ಗೆ ಗಮನ ಹರಿಸುವುದು ಸೂಕ್ತ. ನಮ್ಮ ಗುರಿಗೆ ಬದ್ಧವಾಗಿರಬೇಕು. ಜನರು ಪ್ರತಿಬಾರಿಯೂ ಹೊಸ ಕನಸು ಮತ್ತು ಗುರಿಗಳ ಬಗ್ಗೆ ಆರಂಭದಲ್ಲಿ ಉತ್ಸುಕರಾಗಿರುತ್ತಾರೆ. ಆದರೆ ಮೂರು ತಿಂಗಳ ಬಳಿಕ ಅದರ ಬಗ್ಗೆ ಗಮನವಿರುವುದಿಲ್ಲ. ಸಾಧಿಸಬಯಸುವ ವಿಷಯಗಳ ಬಗ್ಗೆ ಉತ್ಸುಕವಾಗಿರುವುದು ಒಂದು ವಿಚಾರವಾದರೆ ಅದನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.
ನಿಮ್ಮ ಮೇಲೆ ಒತ್ತಡ ಬೇಡ
ವರ್ಷಪೂರ್ತಿ ನೀವು ಏನು ಮಾಡಲು ಬಯಸುತ್ತೀರಿ ಮತ್ತು ಯಾರಾಗಲು ಬಯಸುತ್ತೀರಿ ಎನ್ನುವುದನ್ನು ಒತ್ತಿ ಹೇಳುವುದು, ಏನೂ ಇಲ್ಲ ಅಥವಾ ಎಲ್ಲವೂ ಎನ್ನುವುದಕ್ಕಿಂತ ಹೆಚ್ಚು ಉತ್ತಮ ಮತ್ತು ಸುಸ್ಥಿರ. ಜನವರಿ 1ರಂದು ಹಲವು ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ ಅಗಾಧವಾಗಿರುವಂತೆಯೇ ಹೊಸ ನಿರ್ಣಯದ ವೈಫಲ್ಯವೂ ಸಜ್ಜಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಹೆಚ್ಚು ಸುಸ್ಥಿರ ಮತ್ತು ಪ್ರತಿಧ್ವನಿಸುವ ವಿಧಾನಕ್ಕಾಗಿ ಇಡೀ ವರ್ಷದ ಸಾಧನೆ ಮತ್ತು ವೈಫಲ್ಯಕ್ಕೆ ಸ್ಥಳಾವಕಾಶವನ್ನು ಒದಗಿಸಬೇಕು.
ಇನ್ನೂ ಹೆಚ್ಚು ಎಂಬ ಸಂಕಲ್ಪವಿರಲಿ
ನಾವು ಹೊಸ ಸಂಕಲ್ಪ ಕೈಗೊಳ್ಳುವಾಗ ಅದಕ್ಕೆ ಇನ್ನೂ ಹೆಚ್ಚು ಎನ್ನುವ ಅಂಶ ಸೇರಿಸಿಕೊಂಡರೆ, ಯಶಸ್ಸಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತೇವೆ. ಅಂದರೆ ಉದಾಹರಣೆಗೆ, ವಾರಕ್ಕೆ ಒಂದು ಇಮೇಲ್ ಅಥವಾ ಪ್ರಾಸ್ಪೆಕ್ಟಿಂಗ್ ಕರೆ ಮಾಡುತ್ತೇನೆ, ಅಥವಾ ಅದಕ್ಕಿಂತ ಹೆಚ್ಚು, ಮತ್ತು ನಾನು ವಾರಕ್ಕೆ ಮೂರು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಜಿಮ್‌ಗೆ ಹೋಗುವೆ ಎಂಬ ಹೊಸ ಅಭ್ಯಾಸಕ್ಕೆ ಹೊಂದಿಕೊಳ್ಳುವಂತೆ ಮಾಡಿದಾಗ, ಅದನ್ನೇ ನಮ್ಮ ಮನಸ್ಸಿನಲ್ಲಿ ಇರಿಸಿಕೊಳ್ಳುತ್ತೇವೆ. ಹೀಗಾದಾಗ ಒಂದು ನಿರೀಕ್ಷೆಯನ್ನು ನಾವು ತಲುಪುತ್ತೇವೆ. ಎರಡು ನಿರೀಕ್ಷೆಯನ್ನು ತಲುಪಿದರೆ ಇನ್ನೂ ಉತ್ತಮ. ಹೆಚ್ಚಿನ ಸಮಯವನ್ನು ನಾವು ಹೊಸ ಅಭ್ಯಾಸಕ್ಕೆ ನೀಡಿದಷ್ಡೂ, ಹೆಚ್ಚಿನ ಪ್ರಮಾಣದಲ್ಲಿ ಅದಕ್ಕೆ ನಾವು ಅಂಟಿಕೊಳ್ಳುತ್ತೇವೆ.