ಭಾರತದ ಟಾಪ್ 10 ಶ್ರೀಮಂತ ಯೂಟ್ಯೂಬರ್‌ಗಳು ಇವರೇ ನೋಡಿ; ಐಷಾರಾಮಿ ಕಾರ್‌ಗಳ ಜತೆಗೆ, ನೂರಾರು ಕೋಟಿ ಸಂಪತ್ತು
Top 10 richest YouTubers in India: ಜಗತ್ತಿನಲ್ಲಿ ಯೂಟ್ಯೂಬ್ ಚಾನೆಲ್ ಬಳಸಿಕೊಂಡು ನಿತ್ಯ ಲಕ್ಷಾಂತರ ಡಾಲರ್ ಗಳಿಸುವ ಅನೇಕ ಜನರಿದ್ದಾರೆ. ಅದೇ ರೀತಿ ಭಾರತದಲ್ಲಿಯೂ ಅಂಥ ಕೆಲವು ಯೂಟ್ಯೂಬರ್‌ಗಳೂ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿ ಯೂಟ್ಯೂಬ್‌ನಿಂದಲೇ ಹಣ ಗಳಿಸುತ್ತಿದ್ದಾರೆ. ಇಲ್ಲಿದೆ ಭಾರತದ ಟಾಪ್ 10 ಶ್ರೀಮಂತ ಯೂಟ್ಯೂಬರ್‌ಗಳ ವಿವರ.
(1 / 11)
ಯೂಟ್ಯೂಬ್ ಬಳಸಿಕೊಂಡು ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ ಭಾರತದ ಈ ಯೂಟ್ಯೂಬರ್‌ಗಳು. ಟಾಪ್ 10ರಲ್ಲಿ ಯಾರೆಲ್ಲ ಇದ್ದಾರೆ. ಇಲ್ಲಿದೆ ಮಾಹಿತಿ.
(instagram)(2 / 11)
ಟೆಕ್ನಿಕಲ್ ಗುರೂಜಿ ಯೂಟ್ಯೂಬ್ ಚಾನೆಲ್‌ನ ಗೌರವ್ ಚೌಧರಿ ಯೂಟ್ಯೂಬ್‌ನಲ್ಲಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಅವರ ಸಂಪತ್ತು ಈಗ 356 ಕೋಟಿ ರೂಪಾಯಿ.
(instagram)(3 / 11)
ಬೀಬಿ ಕಿ ವೈನ್ಸ್ (bibi ki vines) ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಭುವನ್ ಬೌಮ್ ಇದುವರೆಗೆ 122 ಕೋಟಿ ರೂ.ಗಳನ್ನು ಗಳಿಸಿದ್ದಾರೆ. ಜತೆಗೆ ಹಲವು ವೆಬ್ ಸರಣಿಗಳಲ್ಲಿಯೂ ನಟಿಸಿದ್ದಾರೆ.
(instagram)(4 / 11)
ತಮ್ಮ ಹೆಸರಿನಲ್ಲಿಯೇ ಚಾನೆಲ್ ಸ್ಥಾಪಿಸಿರುವ ಅಮಿತ್ ಭದಾನಾ ಈಗ 80 ಕೋಟಿ ರೂ.ಗಳ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ.
(instagram)(5 / 11)
ಕ್ಯಾರಿಮಿನಾಟಿ (carryminati) ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಅಜಯ್ ನಗರ್ ಆಸ್ತಿ ಮೌಲ್ಯ 50 ಕೋಟಿ ರೂಪಾಯಿ.
(instagram)(6 / 11)
ನಿಶಾ ಮಧುಲಿಕಾ ತಮ್ಮ ಹೆಸರಿನಲ್ಲಿ ಚಾನೆಲ್ ತೆರೆದಿದ್ದಾರೆ. ಇವರ ಬಳಿ 43 ಕೋಟಿ ರೂಪಾಯಿ ಆಸ್ತಿ ಮೌಲ್ಯ ಹೊಂದಿದ್ದಾರೆ.
(instagram)(7 / 11)
ಸಂದೀಪ್ ಮಹೇಶ್ವರಿ ಹೆಸರಿನಲ್ಲಿಯೇ ಚಾನೆಲ್ ತೆರೆದು, ಇದೀಗ ಅದೇ ಚಾನೆಲ್ ಮೂಲಕ ಕೋಟಿ ಕೋಟಿ ಸಂಪಾದಿಸಿದ್ದಾರೆ ಸಂದೀಪ್. ಇವರ ಆಸ್ತಿ ಮೌಲ್ಯ 41 ಕೋಟಿ ರೂ.
(instagram)(8 / 11)
ಖಾನ್ ಸರ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಫೈಸಲ್ ಖಾನ್ ಕೂಡ 41 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
(instagram)(9 / 11)
ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಸ್ಥಾಪಿಸಿದ ಆಶಿಶ್ ಚಂಚಲಾನಿ, 40 ಕೋಟಿ ರೂ.ಗಳ ನಿವ್ವಳ ಆಸ್ತಿ ಹೊಂದಿದ್ದಾರೆ.
(instagram)(10 / 11)
ಹರ್ಷ್ ಬೆನಿವಾಲ್ ತಮ್ಮ ಹೆಸರಿನಲ್ಲಿ ಚಾನೆಲ್ ಸ್ಥಾಪಿಸುವ ಮೂಲಕ 30 ಕೋಟಿ ರೂ ಆಸ್ತಿ ಸಂಪಾದಿಸಿದ್ದಾರೆ.
(instagram)ಇತರ ಗ್ಯಾಲರಿಗಳು