ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕಿ ಅಪ್ಪ ಅಮ್ಮನ ಕಾಲು ತೊಳೆದು ಮನೆಗೆ ಬರಮಾಡಿಕೊಂಡ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 20ರ ಎಪಿಸೋಡ್‌ನಲ್ಲಿ ಭಾಗ್ಯಾ ಕಂಡಿಷನ್ ಮಾಡಿದಂತೆ ತಾಂಡವ್ ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕುತ್ತಾನೆ. ಅಪ್ಪ, ಅಮ್ಮನ ಕಾಲು ತೊಳೆದು ಮಕ್ಕಳ ಸಹಿತ ಎಲ್ಲರಿಗೂ ಆರತಿ ಮಾಡಿ ಮನೆ ಒಳಗೆ ಬರಮಾಡಿಕೊಳ್ಳುತ್ತಾನೆ. ಇದೆಲ್ಲವನ್ನೂ ನೋಡುವ ಶ್ರೇಷ್ಠಾ ಕೋಪದಿಂದ ಅಲ್ಲಿಂದ ವಾಪಸ್ ಹೊರಡುತ್ತಾಳೆ.
Bhagyalakshmi Serial: ಭಾಗ್ಯಾ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಭಾಗ್ಯಾ ಈ ಮೊದಲಿನಂತೆ ಇಲ್ಲ, ತನ್ನ ಅತ್ತೆ ಮಾವ, ಮಕ್ಕಳ ಯೋಗಕ್ಷೇಮದ ಮುಂದೆ ಅವಳಿಗೆ ಬೇರೆ ಏನೂ ಬೇಕಿಲ್ಲ. ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿ ಗಂಡ ಬೇಡ ಎಂದು ತವರು ಮನೆಗೆ ಹೋದ ಭಾಗ್ಯಾ, ಮಕ್ಕಳಿಗಾಗಿ ಮತ್ತೆ ಗಂಡನ ಮನೆಗೆ ವಾಪಸ್ ಬಂದಿದ್ದಾಳೆ. ಅವನು ಎರಡನೇ ಮದುವೆ ಆಗುವುದನ್ನು ನಿಲ್ಲಿಸಿದ್ದಾಳೆ.
ಇಷ್ಟವಿಲ್ಲದಿದ್ದರೂ ಭಾಗ್ಯಾ ಕಂಡಿಷನ್‌ಗಳಿಗೆ ಒಪ್ಪಿದ ತಾಂಡವ್
ಪೊಲೀಸ್ ಸ್ಟೇಷನ್‌ಗೆ ಹೋಗಬಾರದು ಎಂದಾದರೆ ನಾನು ಹೇಳುವ ಕಂಡಿಷನ್‌ಗಳಿಗೆಲ್ಲಾ ಒಪ್ಪಿಕೊಳ್ಳಬೇಕು ಎಂದು ಭಾಗ್ಯಾ ತಾಂಡವ್ ಬಳಿ ಹೇಳುತ್ತಾಳೆ. ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ತಾಂಡವ್, ಭಾಗ್ಯಾ ಹೇಳುವ ಎಲ್ಲಾ ಮಾತುಗಳನ್ನು ಕೇಳಲು ಸಿದ್ಧನಿದ್ದಾನೆ. ಸರಿ ಭಾಗ್ಯಾ ನೀನು ಏನು ಹೇಳಿದರೂ ಕೇಳುತ್ತೇನೆ ಎನ್ನುತ್ತಾನೆ. ಭಾಗ್ಯಾ ಮುಂದೆ ತಾಂಡವ್ ತಲೆ ಬಾಗುವುದು ಶ್ರೇಷ್ಠಾಗೆ ಇಷ್ಟವಾಗುವುದಿಲ್ಲ. ಇಲ್ಲ ತಾಂಡವ್ ನೀನು ಅವಳ ಮಾತುಗಳನ್ನು ಕೇಳಬೇಡ ಎನ್ನುತ್ತಾಳೆ. ನನಗೆ ಜೈಲಿಗೆ ಹೋಗಲು ಇಷ್ಟವಿಲ್ಲ. ನಿನಗೆ ಇಷ್ಟವಿದ್ದರೆ ಬೇಕಾದರೆ ಹೋಗು ಎನ್ನುತ್ತಾನೆ. ಭಾಗ್ಯಾ ಸೋಫಾ ಮೇಲೆ ಕುಳಿತು ಕಾಲು ಮೇಲೆ ಕಾಲು ಹಾಕಿ ಗತ್ತಿನಿಂದ ಕುಳಿತುಕೊಂಡು ತಾಂಡವ್‌ಗೆ ಕಂಡಿಷನ್ ಮಾಡುತ್ತಾಳೆ.
ಮೊದಲನೆಯದ್ದು, ನಾವೆಲ್ಲರೂ ಇನ್ಮುಂದೆ ಇದೇ ಮನೆಯಲ್ಲಿ ಒಟ್ಟಿಗೆ ಇರಬೇಕು ಎನ್ನುತ್ತಾಳೆ. ಪೊಲೀಸರು ಮನೆ ಬಾಗಿಲಿಗೆ ಬಂದಿದ್ದರೂ ಬುದ್ಧಿ ಕಲಿಯದ ತಾಂಡವ್, ಅಪ್ಪ ಅಮ್ಮ ಮಕ್ಕಳು ಇಲ್ಲಿ ಇರಲಿ ನೀನು ಸುಂದ್ರಿ, ಪೂಜಾ ಇಲ್ಲಿ ಇರುವುದು ಬೇಡ ಎನ್ನುತ್ತಾನೆ. ಹೌದಾ ನಾನು ಇರುವುದು ಬೇಡ ಎಂದಾದಲ್ಲಿ ಹೋಗುತ್ತೇನೆ, ಆದರೆ ಅದಕ್ಕೂ ಮುನ್ನ ನಿಮ್ಮನ್ನು ಜೈಲಿಗೆ ಕಳಿಸಿ ಹೋಗುತ್ತೇನೆ ಎನ್ನುತ್ತಾಳೆ. ಅದರಿಂದ ಭಯಗೊಂಡ ತಾಂಡವ್, ಇಲ್ಲ ಭಾಗ್ಯಾ ಪೊಲೀಸರಿಗೆ ಹೇಳುವುದು ಬೇಡ, ನೀನು ಇಲ್ಲೇ ಇರು, ಎಲ್ಲರೂ ಒಟ್ಟಿಗೆ ಜೊತೆಯಾಗಿ ಇರೋಣ ಎನ್ನುತ್ತಾನೆ. ಈ ಮಾತು ಕೇಳಿ ಮಕ್ಕಳು ಖುಷಿಯಾಗುತ್ತಾರೆ. ಭಾಗ್ಯಾ ಹೊಸ ಅವತಾರ ಕಂಡು ಕುಸುಮಾ, ಧರ್ಮರಾಜ್, ಪೂಜಾ, ಸುಂದ್ರಿ, ಸುನಂದಾ, ವಿಠಲ್ ಮೂರ್ತಿ ಸೇರಿದಂತೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ, ಜೊತೆಗೆ ಖುಷಿಯಾಗುತ್ತಾರೆ.
ಅಮ್ಮ ಅಮ್ಮನ ಕಾಲು ತೊಳೆದ ತಾಂಡವ್
ಇಷ್ಟೇ ಅಲ್ಲ ಇನ್ನೂ ಕಂಡಿಷನ್ ಇದೆ. ನೀವು ಈ ಶ್ರೇಷ್ಠಾ ಕೈ ಹಿಡಿದು ಮನೆಯಿಂದ ಹೊರ ಕಳಿಸಿ ಬರಬೇಕು ಎನ್ನುತ್ತಾಳೆ. ಅದನ್ನು ಕೇಳಿ ತಾಂಡವ್ ಶಾಕ್ ಆಗುತ್ತಾನೆ. ಸುಮ್ಮನೆ ಹೋಗು ಎಂದರೆ ಆಯ್ತಲ್ಲ ಭಾಗ್ಯಾ, ಏಕೆ ಇವಳನ್ನು ಕಳಿಸಬೇಕು ಎನ್ನುತ್ತಾನೆ. ನೀನು ಹೇಳಿದಂತೆ ತಾಂಡವ್ ಮಾಡುವುದಿಲ್ಲ ಎಂದು ಶ್ರೇಷ್ಠಾ ಸವಾಲು ಹಾಕುತ್ತಾಳೆ. ಆದರೆ ಪೊಲೀಸರ ಭಯಕ್ಕೆ ಹೆದರಿ ತಾಂಡವ್ , ಶ್ರೇಷ್ಠಾ ಕೈ ಹಿಡಿದು ಅವಳನ್ನು ಹೊರಗೆ ತಳ್ಳುತ್ತಾನೆ. ಭಾಗ್ಯಾ, ಮನೆಯವರೆಲ್ಲರೂ ಹೊರಗೆ ಬರುತ್ತಾರೆ. ಮುಂದೆ ಏನು ಮಾಡುವುದು ಇಷ್ಟು ಸಮಯ ಕಾದಿದ್ದು ಆಯ್ತು ಎಂದು ಪೊಲೀಸರು ಕೇಳುತ್ತಾರೆ.
ಕ್ಷಮಿಸಿ, ನಿಮ್ಮನ್ನು ಇಷ್ಟು ಸಮಯ ಕಾಯಿಸಿದ್ದಕ್ಕೆ ಕ್ಷಮೆ ಇರಲಿ. ಇವರಿಗೆ ತನ್ನ ತಪ್ಪು ಅರ್ಥವಾಗಿದೆ. ಇನ್ಮುಂದೆ ನಾವೆಲ್ಲರೂ ಒಟ್ಟಿಗೆ ಇರೋಣ ಎಂದಿದ್ದಾರೆ, ಅಷ್ಟೇ ಅಲ್ಲ ಈ ಶ್ರೇಷ್ಠಾ ಸಹವಾಸಕ್ಕೆ ಹೋಗುವುದಿಲ್ಲ ಎಂದಿದ್ದಾರೆ ಎಂದು ಭಾಗ್ಯಾ ಹೇಳುತ್ತಾಳೆ. ಹಾಗಾದರೆ ಸರಿ ನೀವೇ ಎಲ್ಲವನ್ನೂ ಇತ್ಯರ್ಥ ಮಾಡಿಕೊಂಡರೆ ನಮಗೂ ಸಂತೋಷ, ಒಂದು ವೇಳೆ ನಾನು ಇಲ್ಲಿಂದ ಹೋದಾಗ ಇವನು ಬಾಲ ಬಿಚ್ಚಿದರೆ ನನಗೆ ಒಂದು ಫೋನ್ ಮಾಡಮ್ಮ ಭಾಗ್ಯಾ ಎಂದು ಇನ್ಸ್‌ಪೆಕ್ಟರ್ ಭಾಗ್ಯಾಗೆ ತಿಳಿಸಿ ಅಲ್ಲಿಂದ ಹೊರಡುತ್ತಾರೆ.ಭಾಗ್ಯಾ ಕಂಡಿಷನ್ ಮಾಡಿದಂತೆ ತಾಂಡವ್ , ಅಪ್ಪ ಅಮ್ಮನ ಕಾಲು ತೊಳೆದು ಮಕ್ಳಳು ಸೇರಿದಂತೆ ಎಲ್ಲರನ್ನೂ ಆರತಿ ಮಾಡಿ ಮನೆ ಒಳಗೆ ಕರೆದುಕೊಳ್ಳುತ್ತಾನೆ. ಇವೆಲ್ಲವನ್ನೂ ನೋಡುವ ಶ್ರೇಷ್ಠಾ, ಯಾರನ್ನೂ ಬಿಡುವುದಿಲ್ಲ, ಇದಕ್ಕೆ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎನ್ನುತ್ತಾ ಅಲ್ಲಿಂದ ಹೊರಡುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ