Personality Test: ಪಾದದ ರಚನೆಯಿಂದ ವ್ಯಕ್ತಿಯ ಸ್ವಭಾವ ತಿಳಿಯಬಹುದು; ಚಪ್ಪಟೆ ಪಾದವಿದ್ದವರ ವ್ಯಕ್ತಿತ್ವ ಹೀಗಿರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಪಾದದ ರಚನೆಯಿಂದ ವ್ಯಕ್ತಿಯ ಸ್ವಭಾವ ತಿಳಿಯಬಹುದು; ಚಪ್ಪಟೆ ಪಾದವಿದ್ದವರ ವ್ಯಕ್ತಿತ್ವ ಹೀಗಿರುತ್ತೆ

Personality Test: ಪಾದದ ರಚನೆಯಿಂದ ವ್ಯಕ್ತಿಯ ಸ್ವಭಾವ ತಿಳಿಯಬಹುದು; ಚಪ್ಪಟೆ ಪಾದವಿದ್ದವರ ವ್ಯಕ್ತಿತ್ವ ಹೀಗಿರುತ್ತೆ

Personality Test: ಪಾದದ ಕಮಾನಿನ ರಚನೆಯು ವ್ಯಕ್ತಿಯ ಸ್ವಭಾವ ಮತ್ತು ಭಾವನಾತ್ಮಕ ಒಳನೋಟಗಳನ್ನು ತಿಳಿಸುತ್ತದೆ ಎಂದು ಹೇಳಲಾಗುತ್ತದೆ. ಪಾದವನ್ನು ನೋಡಿ ವ್ಯಕ್ತಿತ್ವ ಪರೀಕ್ಷೆ ಮಾಡಬಹುದು. ನಿಮ್ಮ ಪಾದ ಚಪ್ಪಟೆಯಾಗಿದೆಯೇ ಅಥವಾ ಬಾಗಿದ ಕಮಾನಿನಂತಿದೆಯೇ ಎಂಬುದರ ಮೇಲೆ ವ್ಯಕ್ತಿತ್ವ ಪರೀಕ್ಷೆ ಸಾಧ್ಯ.

ಪಾದದ ರಚನೆಯಿಂದ ವ್ಯಕ್ತಿಯ ಸ್ವಭಾವ ತಿಳಿಯಬಹುದು
ಪಾದದ ರಚನೆಯಿಂದ ವ್ಯಕ್ತಿಯ ಸ್ವಭಾವ ತಿಳಿಯಬಹುದು

ದೇಹದ ಕೆಲವೊಂದು ಭಾಗಗಳಿಂದ ಆ ವ್ಯಕ್ತಿಗಳ ವ್ಯಕ್ತಿತ್ವ ಪರೀಕ್ಷೆ ಮಾಡಬಹುದು. ಮನುಷ್ಯನ ಪಾದದ ರಚನೆಯಿಂದ ಅವರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದು. ಫೂಟ್ ಆರ್ಚ್ ಪರ್ಸನಾಲಿಟಿ ಟೆಸ್ಟ್ ಎಂದು ಕರೆಯಲಾಗುವ ಈ ವಿಧಾನವು ಪಾದಗಳ ಆಕಾರಕ್ಕೂ, ಅವರ ವಿವಿಧ ಮಾನಸಿಕ ಮತ್ತು ನಡವಳಿಕೆಗೂ ಸಂಬಂಧವಿದೆ. ಪಾದದ ಕಮಾನಿನಂಥಾ ರಚನೆಯ ವಿಧವನ್ನು ಪತ್ತೆ ಹಚ್ಚಿ, ಈ ವ್ಯಕ್ತಿತ್ವ ಪರೀಕ್ಷೆ ಮಾಡಲಾಗುತ್ತದೆ. ವ್ಯಕ್ತಿಯು ಚಪ್ಪಟೆ ಪಾದ ಹೊಂದಿದ್ದಾರೆಯೇ ಅಥವಾ ತುಸು ಎತ್ತರದ ಕಮಾನಿನಂಥಾ ಪಾದಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಆಧರಿಸಿ ವರ್ಗೀಕರಿಸಲಾಗುತ್ತದೆ.

ಪಾದದ ಕಮಾನಿನಂಥಾ ರಚನೆಯು ಆ ವ್ಯಕ್ತಿಯ ಸ್ವಭಾವ, ಮನೋಧರ್ಮ, ವೃತ್ತಿ ದೃಷ್ಟಿಕೋನ ಮತ್ತು ಭಾವನಾತ್ಮಕ ಒಳನೋಟಗಳನ್ನು ತಿಳಿಸುತ್ತದೆ ಎಂದು ಹೇಳಲಾಗುತ್ತದೆ.

ಚಪ್ಪಟೆ ಪಾದ (Flat arch) ಲಕ್ಷಣಗಳು

ಚಪ್ಪಟೆ ಪಾದಗಳನ್ನು ಹೊಂದಿರುವ ವ್ಯಕ್ತಿಗಳನ್ನು ನೇರ ಮತ್ತು ಸತ್ಯವಂತರು ಎಂದು ವಿವರಿಸಲಾಗಿದೆ. ವ್ಯಕ್ತಿತ್ವ ಪರೀಕ್ಷೆಯು ಅವರು ಸಾಮಾನ್ಯವಾಗಿ ಬಹಿರ್ಮುಖಿ ಮತ್ತು ಇತರರ ಸ್ನೇಹ ಮತ್ತು ಸಹವಾಸವನ್ನು ಆನಂದಿಸುತ್ತಾರೆ ಎಂದು ಸೂಚಿಸುತ್ತದೆ. ಅವರು ಆಗಾಗ ಇತರರೊಂದಿಗೆ ಭಾವನಾತ್ಮಕ ಸಂಪರ್ಕ ಸಾಧಿಸಲು ಬಯಸುತ್ತಾರೆ. ತಮಗೆ ಹೃದಯದಿಂದ ಹತ್ತಿರವಾಗುವವರ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ. ಚಪ್ಪಟೆ ಪಾದದ ವ್ಯಕ್ತಿಗಳು ತಮ್ಮ ಶಾಂತ, ಹೊಂದಿಕೊಳ್ಳುವ ಮತ್ತು ಸಹಾನುಭೂತಿ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಈ ವ್ಯಕ್ತಿತ್ವದ ಪ್ರಕಾರ ಇರುವವರು ವೃತ್ತಿಯಲ್ಲಿ ಸಾಮಾನ್ಯವಾಗಿ ಸಾಮಾಜಿಕ ಕೆಲಸ, ಬೋಧನೆ, ಎಚ್‌ಆರ್‌ ಮತ್ತು ಆತಿಥ್ಯ ನಿರ್ವಹಣೆ ಕ್ಷೇತ್ರಗಳಲ್ಲಿ ಹೆಚ್ಚಿರುತ್ತಾರೆ.

ಕಮಾನು ಪಾದದ (High arch foot) ವ್ಯಕ್ತಿಗಳ ಲಕ್ಷಣಗಳು

ಎತ್ತರದ ಕಮಾನಿನಂಥಾ ಪಾದಗಳನ್ನು ಹೊಂದಿರುವ ಜನರು ದೂರದೃಷ್ಟಿಯುಳ್ಳವರು. ಇವರು ತಾವು ಸ್ವತಂತ್ರ ಚಿಂತಕರು ಎಂದು ನಿರೂಪಿಸುತ್ತಾರೆ. ಈ ಲಕ್ಷಣ ಇರುವವರು ಆಗಾಗ ತಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಏಕಾಂತತೆ ಆನಂದಿಸುತ್ತಾರೆ. ತಮಗೆ ಎದುರಾಗುವ ಸವಾಲುಗಳನ್ನು ಸ್ವತಂತ್ರವಾಗಿ ನಿಭಾಯಿಸುವ ಪ್ರವೃತ್ತಿಯೊಂದಿಗೆ ಕಲಿಯಲು ಮತ್ತು ಬೆಳೆಯುವ ಬಯಕೆ ಹೊಂದಿರುತ್ತಾರೆ. ಈ ವ್ಯಕ್ತಿತ್ವ ಪ್ರಕಾರ ಇರುವ ಜನರು ಸಾಮಾನ್ಯವಾಗಿ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳ ವೃತ್ತಿಜೀವನದೊಂದಿಗೆ ಸಂಬಂಧ ಹೊಂದಿರುತ್ತಾರೆ.

ಗಮನಿಸಿ : ಈ ವ್ಯಕ್ತಿತ್ವ ಪರೀಕ್ಷೆಯು ಸಾಮಾನ್ಯ ಒಳನೋಟಗಳನ್ನು ಹೊಂದಿದೆ. ನಿಮ್ಮ ವ್ಯಕ್ತಿತ್ವವು ನಿಮ್ಮ ಪಾದದ ಆಕಾರ ಮತ್ತು ಕಮಾನಿನ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ನಿಮ್ಮ ಪಾದಗಳ ಕುರಿತ ಸಲಹೆಗಾಗಿ ವೃತ್ತಿ ಸಲಹೆಗಾರರೊಂದಿಗೆ ಸಮಾಲೋಚಿಸಲು ಸಲಹೆ ನೀಡಲಾಗುತ್ತದೆ.

Whats_app_banner