ಕನ್ನಡ ಸುದ್ದಿ  /  ಜೀವನಶೈಲಿ  /  Pet Health In Summer: ಮನೆಯಲ್ಲಿ ಸಾಕುಪ್ರಾಣಿಗಳಿವೆಯಾ? ಬೇಸಿಗೆ ಅಲ್ವ.. ಚೆನ್ನಾಗಿ ನೋಡ್ಕೊಳ್ಳಿ; ಈ ತಪ್ಪುಗಳನ್ನು ಮಾಡ್ಬೇಡಿ...

Pet Health in Summer: ಮನೆಯಲ್ಲಿ ಸಾಕುಪ್ರಾಣಿಗಳಿವೆಯಾ? ಬೇಸಿಗೆ ಅಲ್ವ.. ಚೆನ್ನಾಗಿ ನೋಡ್ಕೊಳ್ಳಿ; ಈ ತಪ್ಪುಗಳನ್ನು ಮಾಡ್ಬೇಡಿ...

Pet care in Summer: ಸಾಕುಪ್ರಾಣಿಗಳನ್ನು ಸಾಕುವುದು ಸುಲಭದ ಮಾತಲ್ಲ. ಬದಲಾದ ಋತುಮಾನಕ್ಕೆ ತಕ್ಕಂತೆ ಅವುಗಳ ಜೀವನಶೈಲಿಯಲ್ಲೂ ಬದಲಾಗುವ ಕಾರಣ ಪಾಲಕರು ಈ ಬಗ್ಗೆ ತಿಳಿದಿರಬೇಕು. ಬೇಸಿಗೆಯಲ್ಲಿ ಸಾಕುಪ್ರಾಣಿ ಪೋಷಕರು ಮಾಡುವ ಈ ಕೆಲವು ತಪ್ಪುಗಳ ಅವುಗಳ ಜೀವಕ್ಕೆ ಹಾನಿ ಉಂಟು ಮಾಡಬಹುದು. ಅಂತಹ ಕೆಲವು ತಪ್ಪುಗಳ ಬಗ್ಗೆ ಗಮನ ವಹಿಸುವುದು ಅವಶ್ಯ.

ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಮೇಲಿರಲಿ ಕಾಳಜಿ
ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಮೇಲಿರಲಿ ಕಾಳಜಿ

ಬೇಸಿಗೆಯ ಉಷ್ಣತೆಯು ನಿಮ್ಮ ಮುದ್ದಿನ ಸಾಕುಪ್ರಾಣಿಯಲ್ಲಿ ನಿರ್ಜಲೀಕರಣದಿಂದ ಸನ್‌ಬರ್ನ್‌ವರೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಬೇಸಿಗೆಯಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಪ್ರಾಣಿಗಳ ದೇಹವನ್ನು ತಂಪಾಗಿರಿಸಬಹುದು, ಮಾತ್ರವಲ್ಲ ಶಾಖಾಘಾತದಿಂದಲೂ ತಪ್ಪಿಸಬಹುದು.

ಟ್ರೆಂಡಿಂಗ್​ ಸುದ್ದಿ

ಸಾಕುಪ್ರಾಣಿಗಳ ವಿಷಯದಲ್ಲಿ ನಾವು ಮಾಡುವ ಪ್ರಮುಖ ತಪ್ಪೆಂದರೆ ನಾಯಿಗಳಿಗೆ ಅತಿಯಾಗಿ ಸ್ನಾನ ಮಾಡಿಸುವುದು ಹಾಗೂ ಬೆಕ್ಕುಗಳಿಗೆ ಬ್ರಷಿಂಗ್‌ ಮಾಡಿಸದೇ ಇರುವುದು. ನೀವು ಮನೆಯಿಂದ ಹೊರಗೆ ಹೊರಡುವಾಗ ಕಿಟಕಿಗಳನ್ನು ತೆರೆದಿರುವುದು ಸಾಕುಪ್ರಾಣಿಗಳಿಗೆ ಅಪಾಯವಾಗಿದೆ. ಇದರಿಂದ ಸೂರ್ಯನ ಬಿಸಿಲು ನೇರವಾಗಿ ತಾಕುವ ಸಾಧ್ಯತೆ ಹೆಚ್ಚು. ನಿಮ್ಮ ಮುದ್ದಿನ ಪ್ರಾಣಿಗೆ ಉಸಿರಾಡಲು ಕಷ್ಟವಾಗಿದ್ದರೆ, ಆಲಸ್ಯ ಹಾಗೂ ಆಯಾಸದಿಂದ ಬಳಲುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

ʼಬೇಸಿಗೆಯಲ್ಲಿನ ಅತಿಯಾದ ಶಾಖವು ಪ್ರಾಣಿಗಳಲ್ಲಿ ಗಂಭೀರ ಅಪಾಯವನ್ನು ಉಂಟು ಮಾಡಬಹುದು. ಹಾಗಾಗಿ ಈ ಸಮಯದಲ್ಲಿ ಅವುಗಳ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಸಾಕಷ್ಟು ಎಚ್ಚರ ವಹಿಸುವುದು ಪಾಲಕರ ಕರ್ತವ್ಯವಾಗಿದೆ. ಸಾಕುಪ್ರಾಣಿಗಳನ್ನು ಮನೆಯಲ್ಲಿ ಇರಿಸಿಕೊಳ್ಳುವ ಮೊದಲು ಋತುವಿನ ಬದಲಾವಣೆಗೆ ಅಗತ್ಯವಿರುವ ಆಹಾರ, ಗ್ರೂಮಿಂಗ್‌ ಹಾಗೂ ಅವುಗಳ ಜೀವನಶೈಲಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕುʼ ಎನ್ನುತ್ತಾರೆ ಮಾರ್ಸ್‌ ಪೆಟ್‌ಕೇರ್‌ನ ಹಿರಿಯ ಪಶುವೈದ್ಯ ಜಿಯಾಲ್‌ ಹೂಕ್‌.

ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಪೋಷಕರು ಅಜಾಗರೂಕತೆಯಿಂದ ಮಾಡುವ 5 ತಪ್ಪುಗಳು ಇಲ್ಲಿವೆ:

ಗ್ರೋಮಿಂಗ್‌ ಹಾಗೂ ನೈಮರ್ಲ್ಯದ ಕೊರತೆ

ಬೇಸಿಗೆಯಲ್ಲಿ ಸೆಖೆಯಿಂದ ತಪ್ಪಿಸಲು ಗ್ರೂಮಿಂಗ್‌ ಮಾಡಿಸುವುದು ಅವಶ್ಯ. ಹಾಗಂತ ಸಂಪೂರ್ಣವಾಗಿ ಕೂದಲನ್ನು ಕತ್ತರಿಸುವುದು ಸರಿಯಲ್ಲ. ಇದರಿಂದ ಸೂರ್ಯನ ಶಾಖ ಅವುಗಳ ಚರ್ಮಕ್ಕೆ ನೇರವಾಗಿ ತಾಕಿ ಸನ್‌ಬರ್ನ್‌ನಂತಹ ಸಮಸ್ಯೆಗಳು ಉಂಟಾಗಬಹುದು. ನಾಯಿಗಳು ಸೂಕ್ಷ್ಮವಾದ ಚರ್ಮವನ್ನು ಹೊಂದಿರುವ ಕಾರಣ ಅವುಗಳಿಗೆ ಪದೇ ಪದೇ ಸ್ನಾನ ಮಾಡಿಸುವುದು ಒಳ್ಳೆಯದಲ್ಲ. ಬೆಕ್ಕುಗಳಿಗೆ ಆಗಾಗ ಬ್ರಷಿಂಗ್‌ ಮಾಡಿಸುವುದರಿಂದ ಬಿಸಿಲಿನಿಂದ ಉಂಟಾಗುವ ತೊಂದರೆಗಳಿಂದ ದೂರ ಇಡಬಹುದು. ಬೆಕ್ಕುಗಳಿಗೆ ಬಳಸುವ ಸನ್‌ಸ್ಕ್ರೀನ್‌ ಅಥವಾ ವೈಪರ್‌ಗಳು ಅವುಗಳ ಚರ್ಮಕ್ಕೆ ಸುರಕ್ಷಿತವೇ ಎಂಬುದನ್ನು ತಿಳಿಯಿರಿ.

ಆಹಾರಗಳ ಮೇಲೆ ಗಮನ ಹರಿಸದೇ ಇರುವುದು

ಅತಿಯಾದ ಶಾಖವು ಸಾಕುಪ್ರಾಣಿಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರೋಬಯಾಟಿಕ್‌ ಸಮೃದ್ಧವಾಗಿರುವ ತಂಪಾಗಿರುವ ಆಹಾರಕ್ರಮವನ್ನು ಅವುಗಳಿಗೆ ರೂಢಿಸಬೇಕು. ಬೇಸಿಗೆಯಲ್ಲಿ ಕಲ್ಲಂಗಡಿ ಹಾಗೂ ಮೊಸರು ಉತ್ತಮ ಆಹಾರಗಳಾಗಿವೆ. ಪಶುವೈದ್ಯರು ಶಿಫಾರಸು ಮಾಡಿದ ಸಂಸ್ಕರಿತ ಹಾಗೂ ಆರ್ದ್ರ ಆಹಾರವು ಪೌಷ್ಟಿಕಾಂಶದ ಸಮತೋಲಿತವಾಗಿದೆ. ಇವು ಶಾಖವನ್ನು ತಡೆಯುತ್ತವೆ.

ದೈನಂದಿನ ನಡಿಗೆಯಲ್ಲಿ ಮುನ್ನೆಚ್ಚರಿಕೆಯನ್ನು ಮರೆತು ಬಿಡುವುದು

ನಿಮ್ಮ ಸಾಕುಪ್ರಾಣಿಗಳನ್ನು ಬೇಸಿಗೆಯಲ್ಲಿ ಸಂಜೆ ಹೊತ್ತಿಗೆ ಮಾತ್ರ ವಾಕಿಂಗ್‌ಗೆ ಕರೆದುಕೊಂಡು ಹೋಗಿ. ಬೇರೆ ಸಮಯದಲ್ಲಿ ವಾಕಿಂಗ್‌ ಮಾಡಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಲು ಕಾರಣವಾಗಬಹುದು. ಸಾಧ್ಯವಾದಷ್ಟು ಅವುಗಳು ನೆರಳಿನಲ್ಲೇ ಇರುವಂತೆ ನೋಡಿಕೊಳ್ಳಿ. ಪೋರ್ಟಬಲ್‌ ವಾಟರ್‌ ಬೌಲ್‌ ನಿಮ್ಮೊಂದಿಗೆ ಇರಿಸಿಕೊಳ್ಳುವುದು ಉತ್ತಮ.

ಸುರಕ್ಷತೆಯನ್ನು ಕಡೆಗಣಿಸುವುದು

ನಿಮ್ಮ ಸಾಕುಪ್ರಾಣಿಗಳೊಂದಿಗೆ ನೀವು ಪೂಲ್ ಪಾರ್ಟಿಯನ್ನು ಯೋಜಿಸುತ್ತಿದ್ದರೆ, ಅವರು ಈಜುವುದರಲ್ಲಿ ಎಷ್ಟೇ ಉತ್ತಮವಾಗಿದ್ದರೂ ಗಮನವಿರಲಿ. ನೀವು ರೋಡ್ ಟ್ರಿಪ್‌ಗೆ ಹೋಗುತ್ತಿದ್ದರೆ ನಿಮ್ಮ ಸಾಕುಪ್ರಾಣಿಗಳನ್ನು ಗಮನಿಸದೆ ಕಾರಿನಲ್ಲಿ ಬಿಡಬೇಡಿ, 'ಕೇವಲ 5 ನಿಮಿಷಗಳಲ್ಲಿ' ಅವು ಶಾಖಾಘಾತಕ್ಕೆ ಒಳಗಾಗಬಹುದು.

ಅತಿಯಾದ ಉಸಿರುಗಟ್ಟುವಿಕೆ, ಉಸಿರಾಟದ ತೊಂದರೆ, ಜೊಲ್ಲು ಸುರಿಸುವಿಕೆ, ಆಲಸ್ಯ ಮತ್ತು ಸಮತೋಲನದ ತೊಂದರೆಗಳನ್ನು ಗಮನಿಸಿ. ಅಂತಹ ಸಮಯದಲ್ಲಿ ತಕ್ಷಣಕ್ಕೆ ನೆರಳಿನ ಪ್ರದೇಶಕ್ಕೆ ಕರೆದ್ಯೊಯಿರಿ. ಮೈಮೇಲೆ ನೀರು ಸುರಿಯಿರಿ ಅಥವಾ ಒದ್ದೆ ಬಟ್ಟೆಯಿಂದ ದೇಹವನ್ನು ಒರೆಸಿ. ಕಾಲುಗಳ ನಡುವೆ ಐಸ್‌ಪ್ಯಾಕ್‌ ಇರಿಸಿ. ಅತಿಸಾರ ಅಥವಾ ವಾಂತಿ ಮಾಡಲು ಪ್ರಾರಂಭಿಸಿದರೆ, ತಕ್ಷಣ ಅವುಗಳನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಿರಿ.

ವಿಭಾಗ