Deepavali 2023: ದೀಪಾವಳಿ ಸಂಭ್ರಮ ಹೆಚ್ಚಬೇಕು ಅಂದ್ರೆ ಹೀಗೆ ಪ್ಲಾನ್‌ ಮಾಡಿ; ಈ ಐಡಿಯಾ ನಿಮ್ಮ ಮನೆಯವರೆಲ್ಲರಿಗೂ ಇಷ್ಟ ಆಗೋದು ಪಕ್ಕಾ
ಕನ್ನಡ ಸುದ್ದಿ  /  ಜೀವನಶೈಲಿ  /  Deepavali 2023: ದೀಪಾವಳಿ ಸಂಭ್ರಮ ಹೆಚ್ಚಬೇಕು ಅಂದ್ರೆ ಹೀಗೆ ಪ್ಲಾನ್‌ ಮಾಡಿ; ಈ ಐಡಿಯಾ ನಿಮ್ಮ ಮನೆಯವರೆಲ್ಲರಿಗೂ ಇಷ್ಟ ಆಗೋದು ಪಕ್ಕಾ

Deepavali 2023: ದೀಪಾವಳಿ ಸಂಭ್ರಮ ಹೆಚ್ಚಬೇಕು ಅಂದ್ರೆ ಹೀಗೆ ಪ್ಲಾನ್‌ ಮಾಡಿ; ಈ ಐಡಿಯಾ ನಿಮ್ಮ ಮನೆಯವರೆಲ್ಲರಿಗೂ ಇಷ್ಟ ಆಗೋದು ಪಕ್ಕಾ

ದೀಪಾವಳಿ ಹಬ್ಬದಂದು ಮನೆ ಮಂದಿಯೆಲ್ಲಾ ಒಟ್ಟಾಗಿ ಸೇರುವುದು ಸಹಜ. ಈ ದಿನ ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚಬೇಕು ಅಂದ್ರೆ ಒಂದಿಷ್ಟು ಗೇಮ್‌ಗಳನ್ನು ಪ್ಲಾನ್‌ ಮಾಡಿ. ಇದರಿಂದ ನಿಮ್ಮ ನೀವು ಎಂದೆಂದೂ ಆಚರಿಸದ ದೀಪಾವಳಿಯನ್ನು ಸಂಭ್ರಮಿಸುವುದು ಖಂಡಿತ. ಅದಕ್ಕಾಗಿ ನಾವು ನಿಮಗೆ ಗೇಮ್‌ ಐಡಿಯಾಗಳನ್ನು ಹೇಳುತ್ತೇವೆ.

ದೀಪಾವಳಿ ಸಂಭ್ರಮ ಹೆಚ್ಚಬೇಕು ಅಂದ್ರೆ ಹೀಗೆ ಪ್ಲಾನ್‌ ಮಾಡಿ
ದೀಪಾವಳಿ ಸಂಭ್ರಮ ಹೆಚ್ಚಬೇಕು ಅಂದ್ರೆ ಹೀಗೆ ಪ್ಲಾನ್‌ ಮಾಡಿ

ದೀಪಾವಳಿ ಹಬ್ಬ ಬಂತೆಂದರೆ ಭಾರತೀಯರಿಗೆ ವಿವರಿಸಲಾಗದ ಸಂತಸ. ಈ ದಿನ ಬಹುತೇಕ ಕುಟುಂಬದವರೆಲ್ಲರೂ ಒಂದಾಗಿ ಮನೆಯಲ್ಲಿ ಸೇರುತ್ತಾರೆ. ಹಬ್ಬದ ಆಚರಣೆ, ಪೂಜೆ, ಪಟಾಕಿ ಹಚ್ಚುವುದು, ಹಬ್ಬದ ವಿಶೇಷ ತಿನಿಸುಗಳನ್ನು ಹಂಚಿ ತಿನ್ನುವುದು ಇವೆಲ್ಲವೂ ಹಬ್ಬದ ಒಂದು ಭಾಗ.‌ ಆದರೆ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬೇಕು ಅಂದ್ರೆ ಒಂದಿಷ್ಟು ಗೇಮ್‌ಗಳನ್ನು ಆಯೋಜಿಸಬೇಕು. ಉತ್ತರ ಭಾರತದಲ್ಲಿ ದೀಪಾವಳಿ ದಿನ ಕಾರ್ಡ್‌ ಆಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಕಾರ್ಡ್ಸ್‌ ಆಡುವುದು ಒಂದಿಷ್ಟು ಹೊತ್ತು ಮಜ ನೀಡಿದರೆ, ನಂತರ ಬೋರ್‌ ಆಗಲು ಆರಂಭಿಸುತ್ತದೆ. ಅಲ್ಲದೆ ಈ ಆಟದಲ್ಲಿ ಎಲ್ಲರೂ ತೊಡಗಿಕೊಳ್ಳಲು ಸಾಧ್ಯವಿಲ್ಲ.

ಮಕ್ಕಳಿಂದು ಹಿಡಿದು ದೊಡ್ಡವರವರೆಗೂ ಆಟಗಳಲ್ಲಿ ಪಾಲ್ಗೊಂಡು ಮರೆಯಲಾರದ ದೀಪಾವಳಿ ಆಚರಿಸಬೇಕು ಅಂತಿದ್ರೆ ಈ ಆಟಗಳನ್ನು ಆಯೋಜಿಸಿ. ಸುಂದರ ನೆನಪುಗಳ ದೀಪಾವಳಿ ನಿಮ್ಮದಾಗುವಂತೆ ಮಾಡಿ.

ಲೊಡೊ

ಲೊಡೊ ಆಡಲು ಈಗ ಲೊಡೊ ಬೋರ್ಡ್‌ ಪಾನ್‌ ಬೇಕು ಎಂದಿಲ್ಲ. ಮೊಬೈಲ್‌ನಲ್ಲಿ ಲೊಡೊ ಗೇಮ್‌ಗೆ ಸಂಬಂಧಿಸಿದ ಹಲವು ಆಪ್‌ಗಳಿವೆ. ಇದನ್ನು ಒಮ್ಮೆಗೆ ನಾಲ್ಕು ಮಂದಿ ಮಾತ್ರ ಆಡಲು ಸಾಧ್ಯ ಎಂಬುದು ನಿಜ. ಆದರೆ ಎರಡು ತಂಡ ಮಾಡಿ ಆಟವಾಡಿ. ಇದು ನಿಮಗೆ ಖಂಡಿತ ಮಜಾ ಕೊಡುತ್ತದೆ.

ರಂಗೋಲಿ ಸ್ಪರ್ಧೆ

ದೀಪಾವಳಿಯಲ್ಲಿ ರಂಗೋಲಿ ಹಾಕುವುದು ವಿಶೇಷ. ಇದನ್ನೇ ನೀವು ಆಟವಾಗಿ ಪರಿವರ್ತನೆ ಮಾಡಬಹುದು. ರಂಗೋಲಿ ಇರಿಸುವ ಸ್ಪರ್ಧೆ ಆಯೋಜಿಸಿ. ಯಾರು ಚೆನ್ನಾಗಿ ರಂಗೋಲಿ ಬಿಡಿಸುತ್ತಾರೆ ಅವರಿಗೆ ಚಿಕ್ಕ ಪ್ರೈಜ್‌ ನೀಡಿ. ಇದು ದೀಪಾವಳಿಯ ಖುಷಿ ಹೆಚ್ಚಿಸುವಂತೆ ಮಾಡುತ್ತದೆ.

ರಸಪ್ರಶ್ನೆ

ದೀಪಾವಳಿ ಹಬ್ಬದ ಎಲ್ಲರೂ ಒಟ್ಟಾಗಿ ಕುಳಿತಿದ್ದಾಗ ರಸಪ್ರಶ್ನೆ ಸ್ಪರ್ಧೆ ಆಯೋಜಿಸಬಹುದು. ಈ ಆಟದಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು. ಮಾತ್ರವಲ್ಲ ನಿಮ್ಮ ಮನೆಯಲ್ಲಿ ಯಾರು ಜಾಣರು ಎಂಬುದನ್ನು ಈ ಆಟದ ಮೂಲಕ ತಿಳಿಯಬಹುದು. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನ ಕೂಡ ನೀಡಿದ ಸಂತಸ ಹೆಚ್ಚುವಂತೆ ಮಾಡಬಹುದು.

ಸ್ಪರ್ಶಿಸಿ ಹೇಳುವುದು

ದೀಪಾವಳಿ ಎಂದರೆ ಮನೆ ತುಂಬಾ ಬಗೆ ಬಗೆಯ ವಸ್ತುಗಳು, ತಿನಿಸುಗಳು ಇರುವುದು ಸಹಜ. ಈ ಹಬ್ಬದಂದು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಒಂದೆಡೆ ಜೋಡಿಸಿ, ಕಣ್ಣಿಗೆ ಬಟ್ಟೆ ಕಟ್ಟಿ ಅದನ್ನು ಮುಟ್ಟಿ ನೋಡಿ ಆ ವಸ್ತು ಎಂದು ಹೇಳುವ ಟಚ್‌ ಅಂಡ್‌ ಟೆಲ್‌ ಆಟ ಆಯೋಜಿಸಿ. ಇದನ್ನಂತೂ ಎಲ್ಲರೂ ಇಷ್ಟಪಡುವುದರಲ್ಲಿ ಎರಡು ಮಾತಿಲ್ಲ.

ಡಾನ್ಸ್‌

ಹಬ್ಬ ಎಂದರೆ ಸಂಗೀತ ನೃತ್ಯ ಇಲ್ಲ ಎಂದರೆ ಹೇಗೆ. ಈ ದೀಪಾವಳಿ ಮರೆಯಲಾಗದ ದೀಪಾವಳಿ ಆಗಬೇಕು ಎಂದರೆ ಮನೆಯಲ್ಲಿ ಡಾನ್ಸ್‌ ಪಾರ್ಟಿ ಆಯೋಜಿಸಿ. ಇದು ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸದೇ ಇರುವುದಿಲ್ಲ.

ಅಂತ್ಯಾಕ್ಷರಿ

ಇದು ಸಾಮಾನ್ಯವಾಗಿ ಎಲ್ಲರೂ ಆಡುವ ಆಟವಾದರೂ ಬೆಸ್ಟ್‌ ಆಟ ಎನ್ನಬಹುದು. ದೀಪಾವಳಿಯಂದು ಮನೆ ಮಂದಿ ಎಲ್ಲರೂ ಒಟ್ಟಾಗಿ ಸೇರಿದ್ದಾಗ ಅಂತ್ಯಾಕ್ಷರಿ ಪ್ಲಾನ್‌ ಮಾಡಬಹುದು. ಇದು ಗಂಟೆಗಟ್ಟಲೇ ಕಳೆದರೂ ಬೇಸರ ಮೂಡದ ಗೇಮ್‌ ಕೂಡ ಹೌದು.

Whats_app_banner