Fixed Deposits: ಎಫ್‌ಡಿ ಮಾಡಿಸಲು ಪ್ಲಾನ್‌ ಮಾಡ್ತಿದ್ದೀರಾ? ಎಸ್‌ಬಿಐನ ಇತ್ತೀಚಿನ ಬಡ್ಡಿದರದ ಪಟ್ಟಿ ಈ ರೀತಿ ಇದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Fixed Deposits: ಎಫ್‌ಡಿ ಮಾಡಿಸಲು ಪ್ಲಾನ್‌ ಮಾಡ್ತಿದ್ದೀರಾ? ಎಸ್‌ಬಿಐನ ಇತ್ತೀಚಿನ ಬಡ್ಡಿದರದ ಪಟ್ಟಿ ಈ ರೀತಿ ಇದೆ ನೋಡಿ

Fixed Deposits: ಎಫ್‌ಡಿ ಮಾಡಿಸಲು ಪ್ಲಾನ್‌ ಮಾಡ್ತಿದ್ದೀರಾ? ಎಸ್‌ಬಿಐನ ಇತ್ತೀಚಿನ ಬಡ್ಡಿದರದ ಪಟ್ಟಿ ಈ ರೀತಿ ಇದೆ ನೋಡಿ

Fixed Deposits: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಾಮಾನ್ಯ ಜನರಿಗೆ ವಾರ್ಷಿಕವಾಗಿ ಶೇಕಡಾ 3 ರಿಂದ 7.1 ವರೆಗೆ ಹಾಗೂ ಹಿರಿಯ ನಾಗರಿಕರಿಗೆ ವಾರ್ಷಿಕಾಗಿ ಶೇಕಡಾ 3.5 ರಿಂದ 7.6 ರವರೆಗೆ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. 7 ದಿನಗಳಿಂದ 10 ವರ್ಷಗಳ ಅವಧಿಯವರೆಗಿನ ಅವಧಿಯನ್ನು ಅನ್ವಯಿಸುತ್ತವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಇತ್ತೀಚೆಗಿನ ಎಫ್‌ಡಿ ಬಡ್ಡಿ ದರ
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಇತ್ತೀಚೆಗಿನ ಎಫ್‌ಡಿ ಬಡ್ಡಿ ದರ (PC: Freepik, SBI BANK EMPLOYEES ASSOCIATION FB)

Fixed Deposits: ಭಾರತದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ ಸುಮಾರು 42 ಕೋಟಿ ಗ್ರಾಹರನ್ನು ಹೊಂದಿದ್ದು ಸಾರ್ವಜನಿಕ ವಲಯದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ ಎಂದು ಹೆಸರು ಗಳಿಸಿದೆ. ಹಣಕಾಸಿನ ಭದ್ರತೆಯನ್ನು ಉಳಿಸಿಕೊಂಡು ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವವರಿಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್‌ಗೆ ಸ್ಪರ್ಧಾತ್ಮಕ ಬಡ್ಡಿದರವನ್ನು ನೀಡುತ್ತಿದೆ.

ಬ್ಯಾಂಕ್‌ನಲ್ಲಿ Cumulative ಎಫ್‌ಡಿ Non-cumulative ಎಫ್‌ಡಿ ಎಂಬ 2 ವಿಧಗಳಿದ್ದು ನಿಮಗೆ ಯಾವುದು ಸೂಕ್ತ ಹೊಂದುವುದೋ ಅದನ್ನು ಆಯ್ಕೆ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಹಣಕಾಸಿನ ಗುರಿಗಳಿಗೆ ಸರಿ ಹೊಂದುವ ಅವಧಿಯನ್ನು ಆಯ್ಕೆಮಾಡಿ Cumulative ವಿಧದಲ್ಲಿ ನೀವು ಇಂತಿಷ್ಟು ಅವಧಿಗೆ ಠೇವಣಿ ಇರಿಸಿ , ಅವಧಿ ಮುಗಿದ ನಂತರ ಬಡ್ಡಿಯೊಂದಿಗೆ ಅಸಲನ್ನು ಹಿಂಪಡೆಯಬಹುದಾಗಿದೆ. ಹಾಗೇ Non-cumulativeನಲ್ಲಿ 3 , 6 ತಿಂಗಳು ಅಥವಾ 1 ವರ್ಷದ ಅವಧಿಗೆ ಬಡ್ಡಿಯನ್ನು ಪಡೆಯುವ ಆಯ್ಕೆಗಳಿವೆ. ಅದೇ ರೀತಿ ಸಾಮಾನ್ಯ ಠೇವಣಿದಾರರಿಗೂ ಹಿರಿಯ ನಾಗರಿಕಗರಿಗೂ ಬಡ್ಡಿ ದರದಲ್ಲಿ ವ್ಯತ್ಯಾಸವಿದೆ.

ಸಾಮಾನ್ಯ ಜನರಿಗೆ ವಾರ್ಷಿಕವಾಗಿ ಶೇಕಡಾ 3 ರಿಂದ 7.1 ವರೆಗೆ ಹಾಗೂ ಹಿರಿಯ ನಾಗರಿಕರಿಗೆ ವಾರ್ಷಿಕಾಗಿ ಶೇಕಡಾ 3.5 ರಿಂದ 7.6 ರವರೆಗೆ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. 7 ದಿನಗಳಿಂದ 10 ವರ್ಷಗಳ ಅವಧಿಯವರೆಗಿನ ಅವಧಿಯನ್ನು ಅನ್ವಯಿಸುತ್ತವೆ. ಸಾಮಾನ್ಯ ಜನರಿಗೆ 7 ರಿಂದ 45 ದಿನಗಳ ಅವಧಿಗೆ ಶೇ 3, ಹಿರಿಯ ನಾಗರಿಕರಿಗೆ ಶೇ 3.50, 45 ರಿಂದ 179 ದಿನಗಳ ಅವಧಿಗೆ ಸಾಮಾನ್ಯರಿಗೆ ಶೇ 4.50 , ಹಿರಿಯ ನಾಗರಿಕರಿಗೆ ಶೇ 5.00, 180 ರಿಂದ 210 ದಿನಗಳ ಅವಧಿಯಲ್ಲಿ ಸಾಮಾನ್ಯ ಜನರಿಗೆ ಶೇ 5.25 ಹಾಗೂ ಹಿರಿಯ ನಾಗರಿಕರಿಗೆ ಶೇ 5.75 ರಷ್ಟು ಬಡ್ಡಿ ದರವನ್ನು ಒದಗಿಸುತ್ತಿದೆ.

3 ವರ್ಷದ ಅವಧಿಯಲ್ಲಿ ಸಾಮಾನ್ಯರಿಗೆ ಶೇ 6.50, ಹಿರಿಯ ನಾಗರಿಕರಿಗೆ ಶೇ 7.00 ಬಡ್ಡಿ ದರ, 5 ರಿಂದ 10 ವರ್ಷದ ಅವಧಿಗೆ ಸಾಮಾನ್ಯರಿಗೆ ಶೇ 6.50 ಹಾಗೂ ಹಿರಿಯ ನಾಗರಿಕರಿಗೆ ಶೇ 7.50 ಬಡ್ಡಿದರವನ್ನು ನಿಗದಿಪಡಿಸಲಾಗಿದೆ.

ಎಫ್‌ಡಿ ಬಡ್ಡಿದರದ ಸಂಪೂರ್ಣ ವಿವರ
ಎಫ್‌ಡಿ ಬಡ್ಡಿದರದ ಸಂಪೂರ್ಣ ವಿವರ (PC: SBI)
Whats_app_banner