Self love: ಅನ್ಯರನ್ನು ಪ್ರೀತಿಸಿ, ಆರಾಧಿಸುವ ಮೊದಲು ಅಂತರಾತ್ಮವನ್ನು ಪ್ರೀತಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Self Love: ಅನ್ಯರನ್ನು ಪ್ರೀತಿಸಿ, ಆರಾಧಿಸುವ ಮೊದಲು ಅಂತರಾತ್ಮವನ್ನು ಪ್ರೀತಿಸಿ

Self love: ಅನ್ಯರನ್ನು ಪ್ರೀತಿಸಿ, ಆರಾಧಿಸುವ ಮೊದಲು ಅಂತರಾತ್ಮವನ್ನು ಪ್ರೀತಿಸಿ

ಇತರರನ್ನು ಪ್ರೀತಿಸುವುದು, ಇತರರಿಗೆ ನಮ್ಮ ಅಮೂಲ್ಯ ಸಮಯವನ್ನು ನೀಡುವ ಮೊದಲು ನಮ್ಮನ್ನು ನಾವು ಪ್ರೀತಿಸಬೇಕು. ನಮ್ಮ ಅಂತರಾತ್ಮದ ಜೊತೆಗೆ ಮಾತನಾಡುವ ಮೂಲಕ ನಮಗೇನು ಬೇಕು ಎಂಬುದನ್ನು ಅರಿಯಬೇಕು. ನಮ್ಮ ಮನಸ್ಸಿನ ಭಾವನೆಗಳನ್ನು ಅರಿತು ಅದಕ್ಕೆ ಸಂತಸವಾಗುವ ರೀತಿ ನಡೆದುಕೊಳ್ಳಬೇಕು.

ಸ್ವಯಂ ಪ್ರೀತಿ
ಸ್ವಯಂ ಪ್ರೀತಿ

ಸದಾ ಬೇರೆಯವರ ಬಗ್ಗೆ ಯೋಚಿಸುವುದಕ್ಕಿಂತ ಮೊದಲು ನಮ್ಮ ಬಗ್ಗೆ ನಾವು ಯೋಚಿಸಬೇಕು. ಕುಟುಂಬ, ಕೆಲಸವನ್ನು ಪ್ರೀತಿ ಮಾಡುವ ಮೊದಲು ನಮ್ಮನ್ನು ಪ್ರೀತಿಸಲು ಕಲಿಯಬೇಕು. ಆದರೆ ಈ ವಿಷಯವನ್ನು ಅರಿತುಕೊಳ್ಳುವುದಕ್ಕೂ ಅದನ್ನು ಕಾರ್ಯಗತಗೊಳಿಸುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಮೊದಲು ನಮ್ಮನ್ನು ನಾವು ಪ್ರೀತಿಸುವ ದಾರಿಯನ್ನು ಕಂಡುಕೊಳ್ಳಬೇಕು.

ಒಂದು ದಿನದಲ್ಲಿ ಕಚೇರಿ, ಟ್ರಾಫಿಕ್‌, ಕೆಲಸ ಹೀಗೆ ಎಲ್ಲದ್ದಕ್ಕೂ ಸಮಯ ನೀಡುವ ಮಧ್ಯೆ ನಮಗೆ ಎಂದು ಸಾಕಷ್ಟು ಸಮಯ ಇರುವುದಿಲ್ಲ. ಈ ಮಧ್ಯೆ ಕುಟುಂಬಕ್ಕೆ ಸಮಯ ಮಾಡುವುದೂ ಮುಖ್ಯವಾಗುತ್ತದೆ.

ನಾವೆಲ್ಲರೂ ಇಂದು ಅತಿ ಒತ್ತಡದ ಬದುಕು ಸಾಗಿಸುತ್ತಿದ್ದೇವೆ ನಿಜ. ಆದರೆ ಮಕ್ಕಳು, ಸಂಗಾತಿಯನ್ನು ಪ್ರೀತಿಸಲು ಸಮಯ ಹೊಂದಿಸುವ ಜೊತೆಗೆ ನಮಗಾಗಿ ಒಂದಿಷ್ಟು ಸ್ವಲ್ಪ ಹೊತ್ತು ಹೊಂದಿಸುವುದು ನಿಜಕ್ಕೂ ಕಷ್ಟವಲ್ಲ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಮೀ ಟೈಮ್‌ ಅಥವಾ ನಿಮ್ಮ ಸಮಯವನ್ನು ಹೊಂದಿಸಿಕೊಳ್ಳಿ. ಅದಕ್ಕಾಗಿ ಹಣ ಖರ್ಚು ಮಾಡಬೇಕೆಂದಿಲ್ಲ, ಪಿಕ್ನಿಕ್‌ ಹೋಗಬೇಕು ಎಂದೇನಿಲ್ಲ. ಇರುವ ಸಮಯದಲ್ಲೇ ಹೊಂದಿಸಿಕೊಂಡು ಖುಷಿಯನ್ನು ಕಂಡುಕೊಳ್ಳಿ.

ಹಾಗಾದರೆ ನಿಮಗಾಗಿ ನೀವು ಏನು ಮಾಡಬಹುದು, ಇಲ್ಲಿವೆ ಕೆಲವು ಸಲಹೆ:

* ಪ್ರಕೃತಿಯ ಮಡಿಲಿನಲ್ಲಿ ವಾಕ್‌ ಹೋಗಿ. ಸಾಧ್ಯವಾದರೆ ಕಾಡು, ಬೆಟ್ಟ-ಗುಡ್ಡಗಳಲ್ಲಿ ಸುತ್ತಾಡಿ.

* ಬಹಳ ಸಮಯದಿಂದ ಮಾತನಾಡದೇ ಇರುವ ನಿಮ್ಮ ಆತ್ಮೀಯ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ.

* ಹರೆಯದಲ್ಲಿದ್ದಾಗ ಕೇಳುತ್ತಿದ್ದಾಗ ಹಾಡುಗಳ ಪ್ಲೇಲಿಸ್ಟ್‌ ತಯಾರಿಸಿ, ಅದಕ್ಕೆ ಕಿವಿಯಾನಿಸಿ ಅಥವಾ ನೀವು ಇತ್ತೀಚೆಗೆ ಕೇಳದ ಹಾಡುಗಳನ್ನು ಕೇಳಿ.

* ನಿಮ್ಮ ಮನಸ್ಸಿನಲ್ಲಿನ ವಿಶೇಷ ವ್ಯಕ್ತಿಗಳ ಬಗ್ಗೆ ಇತರರೊಂದಿಗೆ ಮಾತನಾಡಿ. ಇದನ್ನು ನಿಮ್ಮ ಸಂಗಾತಿ ಹಾಗೂ ಮಕ್ಕಳೊಂದಿಗೂ ಹಂಚಿಕೊಂಡಿಕೊಳ್ಳಬಹುದು, ಆದರೆ ಅವರು ಅದನ್ನು ಹೇಗೆ ಸ್ವೀಕರಿಸಬಹುದು ನೋಡಿಕೊಳ್ಳಿ.

* ಒಂದು ಕ್ಷಣವನ್ನು ತೆಗೆದುಕೊಂಡು ಅಂತರಾತ್ಮದ ಜೊತೆ ಮಾತನಾಡಿ. ಅಂತರಾತ್ಮ ತಿಳಿಸಿದ ವಿಷಯಗಳ ಜೊತೆ ಕೆಲಸ ಮಾಡಿ. ಸ್ವಯಂ ಸಹಾನುಭೂತಿಯು ಬದುಕಿನ ನಿರ್ಧಾರಗಳನ್ನು ತಿಳಿಸುತ್ತದೆ.

* ಬೆಳಿಗ್ಗೆ ಕನಿಷ್ಠ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ದೀರ್ಘವಾಗಿ ನಿಧಾನಕ್ಕೆ ಉಸಿರಾಡಿ.

* ವ್ಯಾಯಾಮ ಮಾಡುವಾಗ ವಿರಾಮ ತೆಗೆದುಕೊಳ್ಳುವುದೂ ಅಗತ್ಯ. ಇದು ನಮ್ಮ ನಾವು ಕಂಡುಕೊಳ್ಳುವ ವಿಧಾನದ ಭಾಗವಾಗಿದೆ.

* ನಮಗಾಗಿ ಅಳುವುದು ಮುಖ್ಯ, ದುಃಖ ಎನ್ನಿಸಿದಾಗ ಅತ್ತು ಬಿಡಿ, ಅಳು ನಮ್ಮನ್ನು ನಾವೇ ಸಮಾಧಾನ ಮಾಡಿಕೊಳ್ಳಲು ಇರುವ ಉತ್ತಮ ಹಾದಿ.

* ಮನಸ್ಸಿಗೂ, ದೇಹಕ್ಕೂ, ಬಾಯಿಗೂ ಇಷ್ಟವಾಗುವ ತಿನಿಸನ್ನು ತಿನ್ನಿ. ಸ್ನ್ಯಾಕ್ಸ್‌, ಸ್ಯಾಂಡ್‌ವಿಚ್‌, ಕಾಫಿ ಹೀಗೆ ಯಾವುದಾದರೂ ಸರಿ. ತಿನ್ನುವಾಗ ಪ್ರತಿ ಗುಟುಕನ್ನು ಎಂಜಾಯ್‌ ಮಾಡಿ.

* ಮನಸ್ಸಿಗೆ ಒತ್ತಡ ಎನ್ನಿಸುವ ಗಲಾಟೆ, ಗದ್ದಲಗಳಿಂದ ದೂರವಿರಿ.

* ಅತಿಯಾಗಿ ಯಾರೊಂದಿಗೂ ವಾದ ಮಾಡಲು ಹೋಗಬೇಡಿ. ಕೆಲವೊಮ್ಮೆ ವಾದ ಮಾಡುವುದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಒಂದಕ್ಕೆ ವಿರಾಮ ಹಾಕಿ ಒಂದಿಷ್ಟು ಹೊತ್ತು ಧ್ಯಾನ ಮಾಡಿ, ಇದರಿಂದ ಕೋಪ ಕಡಿಮೆಯಾಗಿ ಮನಸ್ಸಿಗೆ ಖುಷಿ ಸಿಗುತ್ತದೆ.

* ಕಲಾ ಗ್ಯಾಲರಿಗಳಿಗೆ ಭೇಟಿ ಕೊಡಿ. ಅಲ್ಲಿರುವ ಚಿತ್ರ ಹಾಗೂ ಫೋಟೊಗಳು ಮನಸ್ಸಿಗೆ ಖುಷಿ ನೀಡಬಹುದು.

* ಮನಸ್ಸಿಗೆ ಶಕ್ತಿ ಕೊಡುವ ಒಂದು ಸಣ್ಣ ನಿದ್ದೆ ಮಾಡಿ.

* ಗಾರ್ಡನಿಂಗ್‌ ಅಥವಾ ಹೂದೋಟ ರಚಿಸಿ. ಇದರಿಂದ ಮನಸ್ಸಿಗೆ ಸಾಕಷ್ಟು ಖುಷಿ ಸಿಗುತ್ತದೆ. ಗಿಡಗಳ ಆರೈಕೆಯಲ್ಲಿ ಸಮಯ ಸರಿದಿದ್ದೇ ತಿಳಿಯುವುದಿಲ್ಲ. ಹಸಿರನಲ್ಲಿ ಕಳೆದು ಹೋಗುವ ಸುಖ ಬೇರೆಲ್ಲೂ ಇಲ್ಲ.

* ಲಾಂಗ್‌ ರೈಡ್‌ ಹೋಗುವುದು ಕೂಡ ನಿಮ್ಮನ್ನು ನೀವು ಪ್ರೀತಿಸಲು ದಾರಿ ಕೊಡುತ್ತದೆ. ಒಬ್ಬರೇ ಕಾರ್‌ ಅಥವಾ ಬೈಕ್‌ನಲ್ಲಿ ತಿಳಿಯದ ದಾರಿಯಲ್ಲಿ ಸುಮ್ಮನೆ ಹೊರಟು ಬಿಡಿ.

* ಮನಸ್ಸಿಗೆ ಒತ್ತಡ ಹೇರುವ ವ್ಯಕ್ತಿ ಅಥವಾ ಸಂಬಂಧ ಬಗ್ಗೆ ನಿಮಗೆ ಕೋಪವನ್ನೆಲ್ಲಾ ಒಂದು ಪತ್ರದಲ್ಲಿ ಬರೆಯಿರಿ. ನಂತರ ಅದನ್ನು ಹರಿದು ಎಸೆಯಿರಿ.

* ಸೂರ್ಯನ ಬೆಳಕಿನಲ್ಲಿ ಕನಿಷ್ಠ 20 ನಿಮಿಷಗಳ ಕಾಲ ಕಳೆಯಿರಿ. ಮನೆಯ ಒಳಗೆ ಕುಳಿತು ಸಮಯ ಕೊಲ್ಲುವುದು ಸರಿಯಲ್ಲ.

* ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯಿರಿ. ಮಕ್ಕಳೊಂದಿಗೆ ಆಟವಾಡುತ್ತಾ, ಮಾತನಾಡುತ್ತಾ ಇದ್ದರೆ ಸಮಯ ಸರಿದಿದ್ದೇ ತಿಳಿಯುವುದಿಲ್ಲ.

Whats_app_banner