ಬೆಳಗ್ಗೆ ಮಾಡಿದ ಇಡ್ಲಿ ಹೆಚ್ಚಿಗೆ ಉಳಿದಿದ್ಯಾ, ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಈ ರೀತಿ ಸ್ನಾಕ್ಸ್‌ ತಯಾರಿಸಿಕೊಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗೆ ಮಾಡಿದ ಇಡ್ಲಿ ಹೆಚ್ಚಿಗೆ ಉಳಿದಿದ್ಯಾ, ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಈ ರೀತಿ ಸ್ನಾಕ್ಸ್‌ ತಯಾರಿಸಿಕೊಡಿ

ಬೆಳಗ್ಗೆ ಮಾಡಿದ ಇಡ್ಲಿ ಹೆಚ್ಚಿಗೆ ಉಳಿದಿದ್ಯಾ, ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಈ ರೀತಿ ಸ್ನಾಕ್ಸ್‌ ತಯಾರಿಸಿಕೊಡಿ

ನಮ್ಮೆಲ್ಲರ ಮನೆಗಳಲ್ಲಿ ಇಡ್ಲಿಯನ್ನು ಆಗ್ಗಾಗ್ಗೆ ತಯಾರಿಸುತ್ತಲೇ ಇರುತ್ತೇವೆ. ಆದರೆ ಮಾಡಿದ ಇಡ್ಲಿ ಹೆಚ್ಚಿಗೆ ಉಳಿದರೆ ಮಧ್ಯಾಹ್ನ, ಸಂಜೆಗೆ ಕೂಡಾ ಹಲವರು ಅದನ್ನೆ ತಿನ್ನುತ್ತಾರೆ. ಆದರೆ ಅದರ ಬದಲಿಗೆ ಅದರಿಂದಲೇ ರುಚಿಯಾದ ಸ್ನಾಕ್ಸ್‌ ತಯಾರಿಸಿ, ಇದನ್ನು ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಇಷ್ಟಪಟ್ಟು ತಿನ್ನುತ್ತಾರೆ.

ಉಳಿದ ಇಡ್ಲಿಯಿಂದ ತಯಾರಿಸಲಾದ ಸ್ನಾಕ್ಸ್‌
ಉಳಿದ ಇಡ್ಲಿಯಿಂದ ತಯಾರಿಸಲಾದ ಸ್ನಾಕ್ಸ್‌

ಅಡುಗೆ ಮಾಡಿದರೆ ಬಹಳಷ್ಟು ಸಂದರ್ಭಗಳಲ್ಲಿ ಹೆಚ್ಚಿಗೆ ಉಳಿದುಬಿಡುತ್ತದೆ. ಅದನ್ನು ಎಸೆಯಲು ಮನಸ್ಸಾಗದೆ ಕೆಲವರು ಮಧ್ಯಾಹ್ನ, ಸಂಜೆ ಕೂಡಾ ಅದನ್ನೇ ಸೇವಿಸುತ್ತಾರೆ. ಆದರೆ ಮೂರೂ ಹೊತ್ತು ಅದನ್ನೇ ತಿನ್ನಲು ಬೇಸರ ಎನಿಸಬಹುದು. ಅದರ ಬದಲಿಗೆ ಉಳಿದ ಆ ತಿಂಡಿಗಳಿಂದಲೇ ಹೊಸ ರುಚಿ ಮಾಡಿದರೆ ಹೇಗೆ? ಉಳಿದ ಇಡ್ಲಿಯಿಂದಲೂ ಕೂಡಾ ನೀವು ಹೊಸ ರುಚಿ ಮಾಡಿ ಸವಿಯಬಹುದು. ಇಡ್ಲಿ ಉಲಿದರೆ ಅದರಲ್ಲಿ ನೀವು ರುಚಿಯಾದ ಸ್ನಾಕ್ಸ್‌ ತಯಾರಿಸಬಹುದು.

ಈ ಹೊಸ ರುಚಿಯನ್ನು ಖಂಡಿತ ನಿಮ್ಮ ಮನೆವರು ಇಷ್ಟ ಪಟ್ಟು ತಿನ್ನುತ್ತಾರೆ. ಅದನ್ನು ಉಳಿದ ಪದಾರ್ಥಗಳಿಂದ ತಯಾರಿಸಿದ್ದು ಎಂದು ಹೇಳಲು ಸಾಧ್ಯವೇ ಇಲ್ಲ. ಮಕ್ಕಳು ಸಂಜೆ ಸ್ಕೂಲ್‌ನಿಂದ ಬಂದ ನಂತರ ಅವರಿಗೆ ಈ ಸ್ನಾಕ್ಸ್‌ ತಯಾರಿಸಿ ಕೊಡಬಹುದು. ಈ ಇಡ್ಲಿ ಸ್ನಾಕ್ಸ್‌ಗೆ ಇಡ್ಲಿ ಹಿಟ್ಟಿನ ಜೊತೆಗೆ ಬೇಕಾಗಿರುವ ಸಾಮಗ್ರಿಗಳೇನು? ಅದನ್ನು ತಯಾರಿಸುವ ವಿಧಾನ ಹೇಗೆ? ಇಲ್ಲಿದೆ ರೆಸಿಪಿ.

ಇಡ್ಲಿ ಸ್ನಾಕ್ಸ್‌ಗೆ ಬೇಕಾಗುವ ಸಾಮಗ್ರಿಗಳು

  • ಇಡ್ಲಿಗಳು - 4
  • ಎಣ್ಣೆ - ಡೀಪ್‌ ಫ್ರೈಗೆ
  • ಅಚ್ಚ ಖಾರದ ಪುಡಿ - 1/4 ಟೀಸ್ಪೂನ್
  • ಮೆಣಸು - ಒಂದು ಚಿಟಿಕೆ
  • ಉಪ್ಪು - ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಟೇಸ್ಟಿ ಕಡಲೆಬೇಳೆ ಪಕೋಡ: ತಯಾರಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ರೆಸಿಪಿ

ಇಡ್ನಿ ಸ್ನಾಕ್ಸ್‌ ತಯಾರಿಸುವ ವಿಧಾನ

  1. ಮೊದಲು ಇಡ್ಲಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ
  2. ಒಂದು ಪ್ಯಾನ್‌ ತೆಗೆದುಕೊಂಡು ಅದರಲ್ಲಿ ಡೀಪ್‌ ಫ್ರೈಗೆ ಬೇಕಾಗುವಷ್ಟು ಎಣ್ಣೆ ಸೇರಿಸಿಕೊಳ್ಳಿ
  3. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಇಡ್ಲಿ ತುಂಡುಗಳನ್ನು ಸೇರಿಸಿ ಕಂದು ಬಣ್ಣ ಬರುವರೆಗೂ ಕರಿಯಿರಿ
  4. ಕರಿದ ಇಡ್ಲಿ ತುಂಡುಗಳನ್ನು ಒಂದು ಪ್ಲೇಟ್‌ಗೆ ತೆಗೆದಿಡಿ
  5. ಮತ್ತೊಂದು ಪ್ಯಾನ್‌ಗೆ 1 ಚಮಚ ಎಣ್ಣೆ ಸೇರಿಸಿಕೊಂಡು ಕರಿದ ಇಡ್ಲಿತುಂಡುಗಳನ್ನು ಸೇರಿಸಿ

ಇದನ್ನೂ ಓದಿ: ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಗರಿಗರಿ ರಾಗಿ ಚಕ್ಕುಲಿ: ತಿನ್ನಲೂ ರುಚಿ, ಆರೋಗ್ಯಕ್ಕೂ ಪ್ರಯೋಜನಕಾರಿ- ಇಲ್ಲಿದೆ ರೆಸಿಪಿ

  1. ಈ ತುಂಡುಗಳ ಮೇಲೆ ಉಪ್ಪು, ಖಾರದ ಪುಡಿ, ಮೆಣಸಿನ ಪುಡಿ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ
  2. ಒಂದೆರಡು ನಿಮಿಷದ ನಂತರ ಸ್ಟೌವ್‌ ಆಫ್‌ ಮಾಡಿ
  3. ನಿಮಗೆ ಬೇಕಿದ್ದರೆ ಖಾರದ ಜೊತೆಗೆ ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿಯನ್ನು ಕೂಡಾ ಸೇರಿಸಬಹುದು

ಈ ಸ್ನಾಕ್ಸನ್ನು ಖಂಡಿತ ನಿಮ್ಮ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.

Whats_app_banner