ಶುರುವಾಯ್ತು ಪೈನಾಪಲ್ ಡೇಟಿಂಗ್ ಟ್ರೆಂಡ್; ಸಿಂಗಲ್ಸ್ ಒಂದಾಗಲು ಅನಾನಸ್ ಹಣ್ಣೇ ಸಿಗ್ನಲ್, ರೋಮ್ಯಾನ್ಸ್ಗೆ ಇದೆಂಥಾ ವೇದಿಕೆ ಗುರು
Upside-Down Pineapple: ಪ್ರಸ್ತುತ ಜಗತ್ತಿನಲ್ಲಿ ಹೊಸ ಡೇಟಿಂಗ್ ಟ್ರೆಂಡ್ ಶುರುವಾಗಿದೆ. ಇದರ ಹೆಸರು ಪೈನಾಪಲ್ ಡೇಟಿಂಗ್. ಇದು ಆನ್ಲೈನ್ ಮೂಲಕ ಪರಿಚಯ ಆಗಿ ಚಾಟಿಂಗ್ ಮಾಡೋ ಪದ್ದತಿಯಲ್ಲ. ಹಾಗಿದ್ದರೆ ಏನದು? ಇಲ್ಲಿದೆ ವಿವರ.
ಪ್ರಸ್ತುತ ಯುವ ಪೀಳಿಗೆಗೆ ಡೇಟಿಂಗ್ ಎಂಬುದು ಹೊಸ ಟ್ರೆಂಡೇನಲ್ಲ. ಒಂದಲ್ಲ, ಎರಡಲ್ಲ, ನೂರಾರು ಆ್ಯಪ್ಗಳು ಇದಕ್ಕೆ ಸಂಬಂಧಿಸಿವೆ. ಈ ಆ್ಯಪ್ಗಳ ಮೂಲಕ ಕೆಲವೇ ದಿನಗಳಲ್ಲಿ ಪರಿಚಯ, ಚಾಟಿಂಗ್, ಡೇಟಿಂಗ್.. ಇದೆಲ್ಲಾ ತೀರಾ ಕಾಮನ್ ಆಗಿಬಿಟ್ಟಿವೆ. ಅಲ್ಲದೆ, ಇದು ಬೋರಿಂಗ್ ಕೂಡ ಆಗಿದೆ. ಆದರೀಗ ಹೊಸ ಡೇಟಿಂಗ್ ಟ್ರೆಂಡ್ ಶುರುವಾಗಿದೆ. ಇದರ ಹೆಸರು ಪೈನಾಪಲ್ ಡೇಟಿಂಗ್. ಇದು ಆನ್ಲೈನ್ ಮೂಲಕ ಪರಿಚಯ ಆಗಿ ಚಾಟಿಂಗ್ ಮಾಡೋ ಪದ್ದತಿಯಲ್ಲ.
ನಿಮಗೂ ಗೊಂದಲ ಅನಿಸಬಹುದು, ಇದೇನಿದು ಪೈನಾಪಲ್ (ಅನಾನಸ್) ಡೇಟಿಂಗ್ ಎಂದು. ಇದು ಸ್ಪೇನ್ನಲ್ಲಿ ಶುರುವಾಗಿದೆ. ಅತ್ಯಂತ ಅನಿರೀಕ್ಷಿತ ಸ್ಥಳದಲ್ಲಿ ಸಂಪರ್ಕಿಸುವ ಇತ್ತೀಚಿನ ಪ್ರವೃತ್ತಿ ಇದಾಗಿದೆ. ಇದು ಹೇಗೆ ಎಂದು ಕೇಳಿದರೆ ನಿಮಗೂ ವಿಚಿತ್ರ ಅನಿಸಬಹುದು. ಹಾಗಂತ ಆನ್ಲೈನ್ ಮೂಲಕ ಶುರುವಾಗುವ ಡೇಟಿಂಗ್ ಇದಲ್ಲ, ಆಫ್ಲೈನ್ ಡೇಟಿಂಗ್. ಇಲ್ಲಿ ಡೇಟಿಂಗ್ ಆರಂಭಿಸಲು ವೇದಿಕೆಯಾಗಿರೋದು ಪೈನಾಪಲ್ ಹಣ್ಣು.
ಆನ್ಲೈನಲ್ ಮೂಲಕ ಹೇಗೆ ಪರಿಚಯ ಮಾಡಿಕೊಂಡು ಡೇಟಿಂಗ್ ಆರಂಭಿಸುತ್ತಾರೋ ಅದೇ ರೀತಿ, ಇದಕ್ಕೊಂದು ಪೈನಾಪಲ್ ಹಣ್ಣು ಕೂಡ ವೇದಿಕೆ ಆಗಿದೆ. ಇದೀಗ ಸಖತ್ ಪ್ರಸಿದ್ದಿಯಾಗಿದೆ. ಸಿಂಗಲ್ಸ್ಗಳು ಇದೇ ಮಾದರಿ ಅನುಕರಣೆ ಮಾಡುತ್ತಿದ್ದಾರೆ. ವಿಶ್ವಮಟ್ಟದಲ್ಲಿ ಈ ಬಗ್ಗೆ ತಿಳಿದುಕೊಳ್ಳಲು ಭಾರೀ ಕುತೂಹಲ ವಹಿಸುತ್ತಿದ್ದಾರೆ. ಸ್ಪೇನ್ನಲ್ಲಿ ಶುರುವಾಗಿರೋ ಈ ಆಫ್ಲೈನ್ ಡೇಟಿಂಗ್, ಭಾರೀ ಯಶಸ್ವಿಯಾಗಿದೆ. ಇಷ್ಟಕ್ಕೂ ಹೇಗೆ ಡೇಟಿಂಗ್ ನಡೆಸೋದು ಇಲ್ಲಿದೆ ವಿವರ.
ಇಲ್ಲಿದೆ ನೋಡಿ ಸಂಪೂರ್ಣ ವಿವರ
ಸ್ಪೇನ್ನಲ್ಲಿರುವ ಮರ್ಸಡೋಸಾ ಸೂಪರ್ ಮಾರ್ಕೆಟ್ನಲ್ಲಿ ಈ ಡೇಟಿಂಗ್ ಶುರುವಾಗಿದೆ. ಸಿಂಗಲ್ಗಳು ಡೇಟಿಂಗ್ ನಡೆಸುವ ಇಚ್ಛೆ ಇದ್ದರೆ ಸೂಪರ್ ಮಾರ್ಕೆಟ್ಗಳಲ್ಲಿ ಶಾಪಿಂಗ್ ಟ್ರಾಲಿಂಗ್ಗಳಲ್ಲಿ (ಶಾಪಿಂಗ್ ಬುಟ್ಟಿ) ಅನಾನಸ್ ಹಣ್ಣನ್ನು ತೆಗೆದುಕೊಳ್ಳಬೇಕಿದೆ. ಅದರಂತೆ ಸ್ಪ್ಯಾನಿಷ್ ಯುವಕರು ಸೂಪರ್ ಮಾರ್ಕೆಟ್ನಲ್ಲಿ ಶಾಪಿಂಗ್ ಟ್ರಾಲಿಗಳನ್ನು ಪಡೆದು ಹಣ್ಣುಗಳ ಇರುವ ಸಾಲಿನಲ್ಲಿ ಹೋಗಿ ಅನಾನಸ್ ಹಣ್ಣು ತೆಗೆದುಕೊಳ್ಳಲಿದ್ದಾರೆ. ಆದರೆ ಇಲ್ಲೊಂದು ತಿರುವು ಇದೆ.
ಶಾಪಿಂಗ್ ಬುಟ್ಟಿಯೊಳಗೆ ಅನಾನಸ್ ಹಣ್ಣನ್ನು ಇಟ್ಟುಕೊಳ್ಳಬೇಕು. ಆದರೆ, ಅದನ್ನು ಉಲ್ಟಾ ಇಡಬೇಕು. ಅಂದರೆ ತಲೆಕೆಳಗಾಗಿ ಅನಾನಸ್ ಹಣ್ಣನ್ನು ಬುಟ್ಟಿಯಲ್ಲಿ ಇಡಬೇಕು. ಇದು ಮತ್ತೊಬ್ಬ ಸಿಂಗಲ್ಗೆ ತಾನು ಡೇಟಿಂಗ್ಗೆ ಸಿದ್ಧ ಎನ್ನುವ ಸುಳಿವಾಗಿದೆ. ಅನಾನಸ್ ಉಲ್ಟಾ ಇಟ್ಟ ಬಳಿಕ ನಂತರ ಶಾಪಿಂಗ್ಗೆ ಬಂದ ಮತ್ತೊಬ್ಬರು (ಸಿಂಗಲ್ಸ್- ಡೇಟಿಂಗ್ ಉದ್ದೇಶಕ್ಕಾಗಿ) ಅದನ್ನು ನೋಡಿ, ಆ ವ್ಯಕ್ತಿಯನ್ನು ಇಷ್ಟಪಟ್ಟರೆ ಅವರಿಗೆ ಅದೇ ಸ್ಥಳದಲ್ಲಿ ಮೆಲ್ಲನೆ ಡಿಕ್ಕಿ ಹೊಡೆಯಬೇಕು. ಇಬ್ಬರಿಗೂ ಇಷ್ಟವಾದರೆ ಇಬ್ಬರಿಗೂ ಡೇಟಿಂಗ್ ಶುರು ಎಂದರ್ಥ.
ಇಷ್ಟು ದಿನ ಆನ್ಲೈನ್ ಮೂಲಕ ಶಾಪಿಂಗ್ ಮಾಡುತ್ತಿದ್ದ ಡೇಟಿಂಗ್ ಇದೀಗ ಶಾಪಿಂಗ್ ಮೂಲಕ ಆರಂಭವಾಗಲಿದೆ. ಶಾಪಿಂಗ್ ಬುಟ್ಟಿಯಲ್ಲಿ ಪೈನಾಪಲ್ ತಲೆಕೆಳಗಾಗಿಸಿದ ನಂತರ ಅಪೋಸಿಟ್ ವ್ಯಕ್ತಿಗೂ ಇಷ್ಟವಾಗಿ, ಓಕೆಯಾದರೆ ಡೇಟಿಂಗ್ ಆರಂಭವಾಗಲಿದೆ. ಮತ್ತೊಂದು ಟ್ವಿಸ್ಟ್ ಏನೆಂದರೆ ಇದು ತುಂಬಾ ಹಳೆಯದಾದ ಕಾನ್ಸೆಪ್ಟ್ ಆಗಿದೆ. ಆದರೆ ಇದು ವಿಧಾನ ಹೊಸದಷ್ಟೆ. ಇತ್ತೀಚೆಗೆ ಆನ್ಲೈನ್ ಡೇಟಿಂಗ್ನಲ್ಲೇ ಸದಾ ಮುಳುಗಿ ಹೋಗುತ್ತಿರುವ ಈ ಕಾಲದಲ್ಲಿ ಪೈನಾಪಲ್ ಡೇಟಿಂಗ್ ಎಲ್ಲರನ್ನೂ ಆಕರ್ಷಿಸುತ್ತಿದೆ.