ಪಿಂಕ್ ಚೂಡಿದಾರ್‌ನಲ್ಲಿ ಮೊಮ್ಮಗನ ಶಾಲೆಯಲ್ಲಿ ಪ್ರತ್ಯಕ್ಷರಾದ ನೀತಾ ಅಂಬಾನಿ, ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್‌ಗೆ ನಾವು ಫಿದಾ ಅಂದ್ರು ನೆಟ್ಟಿಗರು
ಕನ್ನಡ ಸುದ್ದಿ  /  ಜೀವನಶೈಲಿ  /  ಪಿಂಕ್ ಚೂಡಿದಾರ್‌ನಲ್ಲಿ ಮೊಮ್ಮಗನ ಶಾಲೆಯಲ್ಲಿ ಪ್ರತ್ಯಕ್ಷರಾದ ನೀತಾ ಅಂಬಾನಿ, ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್‌ಗೆ ನಾವು ಫಿದಾ ಅಂದ್ರು ನೆಟ್ಟಿಗರು

ಪಿಂಕ್ ಚೂಡಿದಾರ್‌ನಲ್ಲಿ ಮೊಮ್ಮಗನ ಶಾಲೆಯಲ್ಲಿ ಪ್ರತ್ಯಕ್ಷರಾದ ನೀತಾ ಅಂಬಾನಿ, ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್‌ಗೆ ನಾವು ಫಿದಾ ಅಂದ್ರು ನೆಟ್ಟಿಗರು

ಅಂಬಾನಿ ಕುಟುಂಬದವರು ಏನೇ ಮಾಡಿದ್ರೂ ಸುದ್ದಿಯಾಗುತ್ತೆ. ಇದೀಗ ನೀತಾ ಅಂಬಾನಿ ಮೊಮ್ಮಗ ಪೃಥ್ವಿಯನ್ನು ಭೇಟಿ ಮಾಡಲು ಶಾಲೆಗೆ ಹೋದ ಫೋಟೊವೊಂದು ವೈರಲ್ ಆಗುತ್ತಿದೆ. ಇದರಲ್ಲಿ ನೀತಾ ಧರಿಸಿದ್ದ ಕುರ್ತಾ ಸೆಟ್ ಎಲ್ಲರಿಗೂ ಇಷ್ಟವಾಗುತ್ತಿದೆ. ಕಸೂತಿ ವಿನ್ಯಾಸವಿರುವ ಗುಲಾಬಿ ಬಣ್ಣದ ಎಥ್ನಿಕ್ ಕುರ್ತಾ ಸೆಟ್‌ನಲ್ಲಿ ನೀತಾ ಅದ್ಭುತವಾಗಿ ಕಾಣುತ್ತಿದ್ದಾರೆ.

ಮೊಮ್ಮಗನ ಶಾಲೆಯಲ್ಲಿ ನೀತಾ ಅಂಬಾನಿ
ಮೊಮ್ಮಗನ ಶಾಲೆಯಲ್ಲಿ ನೀತಾ ಅಂಬಾನಿ

ಭಾರತದ ಶ್ರೀಮಂತ ಉದ್ಯಮಿಗಳ ಪೈಕಿ ಅಂಬಾನಿ ಕುಟುಂಬವೂ ಒಂದು. ಅಂಬಾನಿ ಕುಟುಂಬದ ಸುದ್ದಿಗಳು ಆಗಾಗ ಹರಿದಾಡುತ್ತಿರುತ್ತವೆ, ಇದೀಗ ನೀತಾ ಅಂಬಾನಿಯ ಫೋಟೊವೊಂದು ವೈರಲ್ ಆಗುತ್ತಿದೆ. ಇದು ಆಕೆ ಮೊಮ್ಮಗನನ್ನು ನೋಡಲು ಶಾಲೆಗೆ ಹೋಗಿದ್ದ ಫೋಟೊ, ಇದರಲ್ಲಿ ಆಕೆ ಧರಿಸಿದ್ದ ಡ್ರೆಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ನೀತಾ ಅಂಬಾನಿ ತನ್ನ ಕುಟುಂಬದ ಬಗ್ಗೆ ತುಂಬಾ ಜಾಗರೂಕತೆ, ಪ್ರೀತಿ ಮತ್ತು ಜವಾಬ್ದಾರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ನೀತಾ ಮೊಮ್ಮಗ ಪೃಥ್ವಿ ಅಂಬಾನಿ ಓದುತ್ತಿದ್ದ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿ ತನ್ನ ಮೊಮ್ಮಗನೊಂದಿಗೆ ಅವನ ಸಹಪಾಠಿಗಳನ್ನೂ ಭೇಟಿ ಮಾಡಿದ್ದಾರೆ. ಶಾಲೆಗೆ ಹೋದ ನೀತಾ ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೊಗಳಲ್ಲಿ, ನೀತಾ ಮಕ್ಕಳೊಂದಿಗೆ ಗುಂಪಿನಲ್ಲಿ ಕುಳಿತು ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಕರೀನಾ ಕಪೂರ್ ಅವರ ಮಗ ಜಹಾಂಗೀರ್ 'ಜೆಹ್' ಅಲಿ ಖಾನ್ ಕೂಡ ಪೃಥ್ವಿಯ ತರಗತಿಯಲ್ಲಿ ಓದುತ್ತಿದ್ದಾನೆ.

ನೀತಾ ಅಂಬಾನಿ ಕ್ಲಾಸಿ ಮತ್ತು ಸೊಗಸಾದ ಡ್ರೆಸ್ಸಿಂಗ್ ಸೆನ್ಸ್ ಅನ್ನು ಹೊಂದಿದ್ದಾರೆ. ಮೊಮ್ಮಗನ ಶಾಲೆಗೆ ಹೋಗಿದ್ದ ನೀತಾ ಅಂಬಾನಿ ರಾಣಿ ಗುಲಾಬಿ ಬಣ್ಣ ಕುರ್ತಾ ಧರಿಸಿದ್ದರು. ಈ ಡ್ರೆಸ್‌ನಲ್ಲಿ ಆಕೆ ಸ್ಟನಿಂಗ್ ಆಗಿ ಕಾಣುತ್ತಿದ್ದರು. ಮೊಮ್ಮಕ್ಕಳಿದ್ದರು ಹರೆಯದ ಯುವತಿಯಂತೆ ಕಾಣುವ ನೀತಾ ಅವರ ಸ್ಟೈಲಿಂಗ್ ಸೆನ್ಸ್ ಬಹುತೇಕರಿಗೆ ಇಷ್ಟವಾಗುತ್ತದೆ. 60 ಹರೆಯದಲ್ಲೂ ಅತ್ಯಾಕರ್ಷಕ ಫ್ಯಾಷನ್ ಸೆನ್ಸ್ ಹೊಂದಿರುವ ನೀತಾ ಅವರ ಈ ಡ್ರೆಸ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.

ಪಿಂಕ್ ಕಲರ್ ಡ್ರೆಸ್‌ನಲ್ಲಿ ನೀತಾ ಅಂಬಾನಿ

ನೀತಾ ಅಂಬಾನಿ ಗುಲಾಬಿ ಬಣ್ಣದ ಛಾಯೆಯಲ್ಲಿ ಸೊಗಸಾದ ಕುರ್ತಾ ಸೆಟ್ ಅನ್ನು ಧರಿಸಿದ್ದರು. ಕುರ್ತಾವು ಸಂಕೀರ್ಣವಾದ ಗೋಲ್ಡನ್ ಕಸೂತಿಯಿಂದ ಅಲಂಕರಿಸಲ್ಪಟ್ಟ ಚಿಕ್ ಸ್ಪ್ಲಿಟ್ ಕ್ರೂ ನೆಕ್‌ಲೈನ್ ಅನ್ನು ಹೊಂದಿದೆ, ಇದು ರಾಜಮನೆತನದವರಂತೆ ಕಾಣುತ್ತದೆ. ತುಂಬು ತೋಳು, ಗೋಲ್ಡನ್ ಬಾರ್ಡರ್‌ಗಳು ಮತ್ತು ಸೂಕ್ಷ್ಮವಾದ ಕಸೂತಿ ಕೆಲಸದಿಂದ ಕೂಡಿದ ಈ ಉಡುಗೆ ಬಹಳ ಸುಂದರವಾಗಿದೆ. ಇದಕ್ಕೆ ಗ್ಲಾಮರ್ ಟಚ್ ಕೂಡ ಸೇರಿಸಲಾಗಿದೆ. ಕುರ್ತಾ ತುಂಬಾ ಬಿಗಿಯಾಗಿಲ್ಲದಿದ್ದರೂ ಸಡಿಲವಾದ ಫಿಟ್ ಹೊಂದಿದೆ. ಈ ಉಡುಗೆ ಅವರ ಆಕೃತಿಗೆ ಹೇಳಿ ಮಾಡಿಸಿದಂತಿತ್ತು. ಈ ಟಾಪ್‌ನ ಜೊತೆಗೆ ಅದೇ ಬಣ್ಣದ ಗೋಲ್ಡನ್ ಬಾರ್ಡರ್ ಇರುವ ಪ್ಯಾಂಟ್ ಹಾಗೂ ಆರ್ಗನ್ಜಾ ದುಪಟ್ಟಾದೊಂದಿಗೆ ಧರಿಸಿದ್ದರು. ಒಟ್ಟಾರೆ ಈ ಉಡುಪು ಸಖತ್ ಟ್ರೆಂಡಿ ಆಗಿ ಕಾಣಿಸುತ್ತಿರುವುದು ಸುಳ್ಳಲ್ಲ.

ಅವರು ಈ ಉಡು‍ಪಿನ ಜೊತೆ ಐಷಾರಾಮಿ ಡೈಮಂಡ್ ಸ್ಟಡ್ ಕಿವಿಯೋಲೆಗಳು, ಟ್ರೆಂಡಿ ಬ್ರೌನ್ ಸೇಂಟ್ ಲೂಯಿಸ್ ಟೋಟ್ ಬ್ಯಾಗ್ ಮತ್ತು ಕೆಂಪು ಹೈ ಹೀಲ್ಸ್ ಧರಿಸಿದ್ದಾರೆ. ಗುಲಾಬಿ ಬಣ್ಣದ ಐಶ್ಯಾಡೋ, ಐಲೈನರ್, ಸುಂದರವಾದ ಹುಬ್ಬುಗಳು, ಕೆನ್ನೆಗಳ ಮೇಲೆ ಬ್ಲಶ್, ಬ್ರೈಟ್ ಹೈಲೈಟರ್, ನ್ಯೂಡ್ ಲಿಪ್‌ಸ್ಟಿಕ್ ಶೇಡ್‌ನೊಂದಿಗೆ ಆಕೆಯ ಮೇಕ್ಅಪ್ ಸರಳವಾಗಿದೆ. ಕೂದಲು ಇಳಿ ಬಿಟ್ಟಿರುವ ಅವರ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ ಸಾಟಿಯಿಲ್ಲ ಎಂದು ಹೋಗಳುತ್ತಿದ್ದಾರೆ.

ನೀತಾ ಅಂಬಾನಿ ಬಗ್ಗೆ

ಉದ್ಯಮಿ ನೀತಾ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಪತ್ನಿ. ಅವರು ರವೀಂದ್ರಭಾಯಿ ಮತ್ತು ಪೂರ್ಣಿಮಾ ದಲಾಲ್ ಅವರ ಪುತ್ರಿ. ನೀತಾ ಅಂಬಾನಿ ಮತ್ತು ಮುಖೇಶ್ ಅವರಿಗೆ ಮೂವರು ಮಕ್ಕಳಿದ್ದಾರೆ: ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ.

Whats_app_banner