ಕನ್ನಡ ಸುದ್ದಿ / ಜೀವನಶೈಲಿ /
ಹಸ್ತ ಸಾಮುದ್ರಿಕ: ಅಂಗೈಯಲ್ಲಿ ಎಂ ರೀತಿ ರೇಖೆ ಇರುವವರ ವ್ಯಕ್ತಿತ್ವ ಹೇಗಿರುತ್ತೆ? ನಾಯಕತ್ವ ಸೇರಿ ಈ ಗುಣಗಳು ನಿಮಗಿರುತ್ತೆ
ಅಂಗೈಯಲ್ಲಿ ಎಂ ಅಕ್ಷರದ ಅರ್ಥ: ವ್ಯಕ್ತಿಯ ಅಂಗೈಯ ರೇಖೆಗಳು ಮತ್ತು ಅದರಲ್ಲಿ ರೂಪುಗೊಂಡ ಚಿಹ್ನೆಗಳು ಅಥವಾ ಗುರುತುಗಳನ್ನು ಹಸ್ತಸಾಮುದ್ರಿಕದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿ ರೂಪುಗೊಂಡ ಗುರುತುಗಳಲ್ಲಿ ಒಂದು ಎಂನ ಗುರುತು. ಅಂಗೈಯಲ್ಲಿ ಎಂ ಗುರುತು ಮಂಗಳಕರ ಎಂದು ಹೇಳಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಇತರ ವಿಷಯಗಳನ್ನು ತಿಳಿಯಿರಿ.
ಅಂಗೈಯಲ್ಲಿ ರೇಖೆಗಳು ಎಂ ಆಕಾರದಲ್ಲಿ ಇದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳಿ.
ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ರೂಪುಗೊಂಡ ಗುರುತುಗಳು ಅಥವಾ ರೇಖೆಗಳ ಮೂಲಕ ವ್ಯಕ್ತಿಯ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ಕಂಡುಹಿಡಿಯಲಾಗುತ್ತದೆ. ಒಬ್ಬ ವ್ಯಕ್ತಿಯ ಅಂಗೈಯಲ್ಲಿ ಎಂ ಅಕ್ಷರವು ರೂಪುಗೊಳ್ಳುತ್ತಿದ್ದರೆ, ಅದನ್ನು ಹಸ್ತ ಸಾಮುದ್ರಿಕದಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಜನರು ಉತ್ತಮ ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಉತ್ತಮ ನಾಯಕರು ಎಂದು ಸಾಬೀತುಪಡಿಸುತ್ತಾರೆ. ಜೊತೆಗೆ ಇವರಿಗೆ ಜೀವನ ನಡೆಸಲು ಹಣದ ಕೊರತೆ ಇರುವುದಿಲ್ಲ, ಒಂದು ವೇಳೆ ಹಣದ ಕೊರತೆ ಇದ್ದರೆ ಅದು ಕೂಡ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತೆ. ಅಂಗೈಯಲ್ಲಿ ರೂಪುಗೊಂಡ ಎಂ ಅಕ್ಷರಕ್ಕೆ ಸಂಬಂಧಿಸಿದ ವಿಶೇಷ ಅಂಶಗಳನ್ನು ತಿಳಿದುಕೊಳ್ಳೋಣ.
- ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಎಂ ಗುರುತನ್ನು ಹೊಂದಿರುವ ವ್ಯಕ್ತಿಯು ತನ್ನ ಭವಿಷ್ಯದ ಬಗ್ಗೆ ಬಹಳ ಜಾಗೃತನಾಗಿರುತ್ತಾನೆ. ಅವನು ತನ್ನ ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇವರು ಉತ್ಸಾಹದಿಂದ ಜೀವನವನ್ನು ನಡೆಸುತ್ತಿರುತ್ತಾರೆ. ಬೇರೆಯವರಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತಾರೆ.
- ಇಂತಹ ವ್ಯಕ್ತಿಯು ಉತ್ತಮ ನಾಯಕನಾಗಿರುತ್ತಾನೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ತನ್ನ ಅಂಗೈಯಲ್ಲಿ ಎಂ ಗುರುತು ಇರುವ ವ್ಯಕ್ತಿಯು ಹೆಚ್ಚಿನ ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಈ ರೀತಿಯ ವ್ಯಕ್ತಿಗೆ ಯೋಚಿಸುವ ಹೆಚ್ಚಿನ ಸಾಮರ್ಥ್ಯವಿರುತ್ತದೆ. ಇವರನ್ನು ಬುದ್ಧಿವಂತಿಕೆಯ ತೀಕ್ಷ್ಣ ವ್ಯಕ್ತಿ ಎಂದು ಪರಿಗಣಿಸಲಾಗಿರುತ್ತೆ.
- ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಎಂ ರೇಖೆಯನ್ನು ಹೊಂದಿರುವ ಜನರು ಪ್ರಸಿದ್ಧ ವರ್ಣಚಿತ್ರಕಾರರು, ಬರಹಗಾರರು ಹಾಗೂ ಸಾಹಿತಿಗಳಾಗುತ್ತಾರೆ. ಇವರು ಎಂತಹ ಕಷ್ಟದ ಸಂದರ್ಭಗಳಲ್ಲೂ ಭಯಭೀತರಾಗುವುದಿಲ್ಲ. ಜೀವನದ ಪ್ರತಿಯೊಂದು ಕಷ್ಟವನ್ನು ಚೆನ್ನಾಗಿ ಎದುರಿಸುತ್ತಾರೆ.
- ಇವರು ಪ್ರೀತಿಯಿಂದ ಮದುವೆಯಾಗುವ ಸಾಧ್ಯತೆ ಹೆಚ್ಚಿರುತ್ತೆ. ತಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗೆ ಅವಕಾಶ ನೀಡುವುದಿಲ್ಲ. ಇವರಲ್ಲಿ ಹೊಂದಾಣಿ ಸ್ವಭಾವ ಹೆಚ್ಚಿರುತ್ತದೆ. ಎಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಜೀವನವನ್ನು ಆನಂದಿಸುತ್ತಾರೆ.
- ಅಂಗೈಯಲ್ಲಿ ಎಂ ಗುರುತು ವ್ಯಕ್ತಿಯ ಬಲ ಅಥವಾ ಎಡ ಅಂಗೈಯಲ್ಲಿರಬಹುದು. ಅಂಗೈಯಲ್ಲಿ ಮೂರು ಸಾಲುಗಳು ಸೇರುತ್ತವೆ ಮತ್ತು ಇಂಗ್ಲಿಷ್ ನ ಎಂ ಅಕ್ಷರದಂತೆ ಕಾಣುತ್ತವೆ, ಆದ್ದರಿಂದ ಇದನ್ನು ಎಂ ನ ಗುರುತು ಎಂದು ಕರೆಯಲಾಗುತ್ತದೆ. ಅಂತಹ ಜನರನ್ನು ಹಸ್ತಸಾಮುದ್ರಿಕದಲ್ಲಿ ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿತ್ವದಲ್ಲಿ ಇವರು ತುಂಬಾ ಒಳ್ಳೆಯರಾಗಿರುತ್ತಾರೆ. ಪ್ರಮುಖವಾಗಿ ಇನ್ನೊಬ್ಬರಿಗೆ ಯಾವುದೇ ಕಾರಣಕ್ಕೂ ನೋವು ಕೊಡುವುದಿಲ್ಲ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.