ಬ್ಲೂಟೂಥ್‌ ಸ್ಪೀಕರ್‌ ಖರೀದಿಗೆ ಮಾರ್ಗದರ್ಶಿ: ಸ್ಪೀಕರ್‌ ಅಂದ್ರೆ ಬರೀ ಸೌಂಡ್‌ ಅಲ್ಲ ಗುರು, ಸ್ಪೀಕರ್‌ ಖರೀದಿಸೋ ಮುನ್ನ ಈ ಅಂಶಗಳನ್ನು ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬ್ಲೂಟೂಥ್‌ ಸ್ಪೀಕರ್‌ ಖರೀದಿಗೆ ಮಾರ್ಗದರ್ಶಿ: ಸ್ಪೀಕರ್‌ ಅಂದ್ರೆ ಬರೀ ಸೌಂಡ್‌ ಅಲ್ಲ ಗುರು, ಸ್ಪೀಕರ್‌ ಖರೀದಿಸೋ ಮುನ್ನ ಈ ಅಂಶಗಳನ್ನು ಗಮನಿಸಿ

ಬ್ಲೂಟೂಥ್‌ ಸ್ಪೀಕರ್‌ ಖರೀದಿಗೆ ಮಾರ್ಗದರ್ಶಿ: ಸ್ಪೀಕರ್‌ ಅಂದ್ರೆ ಬರೀ ಸೌಂಡ್‌ ಅಲ್ಲ ಗುರು, ಸ್ಪೀಕರ್‌ ಖರೀದಿಸೋ ಮುನ್ನ ಈ ಅಂಶಗಳನ್ನು ಗಮನಿಸಿ

Bluetooth speaker buying guide: ಸೂಕ್ತವಾದ ಬ್ಲೂಟೂಥ್‌ ಸ್ಪೀಕರ್‌ ಖರೀದಿಸಲು ಬಯಸುವವರು ಸೌಂಡ್‌ ಗುಣಮಟ್ಟ, ಕನೆಕ್ಟಿವಿಟಿ, ಪೋರ್ಟೆಬಿಲಿಟಿಯಂತಹ ಅಂಶಗಳಿಗೆ ಗಮನ ನೀಡಬೇಕು. ಬ್ಲೂಟೂಥ್‌ ಸ್ಪೀಕರ್‌ ಖರೀದಿಸುವವರು ಈ ಮುಂದಿನ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಸ್ಪೀಕರ್‌ ಖರೀದಿಸೋ ಮುನ್ನ  ಸೌಂಡ್‌ ಗುಣಮಟ್ಟ, ಕನೆಕ್ಟಿವಿಟಿ, ಪೋರ್ಟೆಬಿಲಿಟಿಯಂತಹ ಅಂಶಗಳಿಗೆ ಗಮನ ನೀಡಬೇಕು.
ಸ್ಪೀಕರ್‌ ಖರೀದಿಸೋ ಮುನ್ನ ಸೌಂಡ್‌ ಗುಣಮಟ್ಟ, ಕನೆಕ್ಟಿವಿಟಿ, ಪೋರ್ಟೆಬಿಲಿಟಿಯಂತಹ ಅಂಶಗಳಿಗೆ ಗಮನ ನೀಡಬೇಕು. (Pexels)

Bluetooth speaker buying guide: ಸರಿಯಾದ ಬ್ಲೂಟೂಥ್‌ ಸ್ಪೀಕರ್‌ ಆಯ್ಕೆ ಮಾಡಿಕೊಳ್ಳುವ ಮೊದಲು ಸಾಕಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಬ್ಲೂಟೂಥ್‌ ಸ್ಪೀಕರ್‌ ಅನ್ನು ಯಾಕಾಗಿ ಖರೀದಿಸುವಿರಿ? ಸಂಗೀತ ಕೇಳುವ ಉದ್ದೇಶವೇ? ಸಿನಿಮಾ ನೋಡುವ ಅಥವಾ ವೃತ್ತಿಪರ ಉದ್ದೇಶಕ್ಕಾಗಿಯೇ ಎಂದು ಖಚಿತಪಡಿಸಿಕೊಳ್ಳಿ. ಸೂಕ್ತವಾದ ಬ್ಲೂಟೂಥ್‌ ಸ್ಪೀಕರ್‌ ಖರೀದಿಸಲು ಬಯಸುವವರು ಸೌಂಡ್‌ ಗುಣಮಟ್ಟ, ಕನೆಕ್ಟಿವಿಟಿ, ಪೋರ್ಟೆಬಿಲಿಟಿಯಂತಹ ಅಂಶಗಳಿಗೆ ಗಮನ ನೀಡಬೇಕು. ಬ್ಲೂಟೂಥ್‌ ಸ್ಪೀಕರ್‌ ಖರೀದಿಸುವವರು ಈ ಮುಂದಿನ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಬ್ಲೂಟೂಥ್‌ ಸ್ಪೀಕರ್‌ಗಳ ವಿಧಗಳು

ವಿವಿಧ ಅಗತ್ಯಗಳಿಗೆ ತಕ್ಕಂತೆ ಹಲವು ಬಗೆಯ ಬ್ಲೂಟೂಥ್‌ ಸ್ಪೀಕರ್‌ಗಳು ಲಭ್ಯ ಇರುತ್ತವೆ.

  • ಪೋರ್ಟೆಬಲ್‌ ಬ್ಲೂಟೂಥ್‌ ಸ್ಪೀಕರ್‌ಗಳು: ಸಣ್ಣ ಗಾತ್ರದ ಈ ಸ್ಪೀಕರ್‌ಗಳನ್ನು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು.
  • ಬುಕ್‌ ಸೆಲ್ಪ್‌ ಸ್ಪೀಕರ್‌ಗಳು: ಸಣ್ಣದಾಗಿರುತ್ತವೆ. ಸಣ್ಣ ಸ್ಥಳಾವಕಾಶದಲ್ಲಿ ಇಡಬಹುದು.
  • ಫ್ಲೋರ್‌ ಸ್ಟ್ಯಾಂಡಿಂಗ್‌ ಸ್ಪೀಕರ್‌ಗಳು: ದೊಡ್ಡದಾಗಿರುತ್ತವೆ. ಹೆಚ್ಚು ಸೌಂಡ್‌ಗಾಗಿ ರಚಿಸಲಾಗಿರುತ್ತದೆ. ಹೋಂ ಥಿಯೇಟರ್‌ಗಳಿಗೆ ಸೂಕ್ತವಾಗಿವೆ.
  • ಸೌಂಡ್‌ ಬಾರ್ಸ್‌: ಟಿವಿ ಆಡಿಯೋ ಹೆಚ್ಚಿಸಲು ಬಳಸಲಾಗುತ್ತದೆ.
  • ಸ್ಮಾರ್ಟ್‌ ಸ್ಪೀಕರ್‌ಗಳು: ಅಲೆಕ್ಷಾ ಅಥವಾ ಗೂಗಲ್‌ ಅಸಿಸ್ಟೆಂಟ್‌ನಂತಹ ಧ್ವನಿ ಆಧರಿತ ಅಸಿಸ್ಟೆಂಟ್‌ ತಂತ್ರಜ್ಞಾನಗಳು ಇರುತ್ತವೆ.

ಸೌಂಡ್‌ ಗುಣಮಟ್ಟ ಗಮನಿಸಿ

ನಿಮಗೆ ಯಾವ ರೀತಿಯ ಸೌಂಡ್‌ ಗುಣಮಟ್ಟ ಬೇಕು ಎಂದು ಪರಿಶೀಲಿಸಿ. ಇಂತಹ ಸಮಯದಲ್ಲಿ ಈ ಮುಂದಿನ ಅಂಶಗಳನ್ನು ಗಮನಿಸಿ.

  • ಫ್ರೀಕ್ಸೆನ್ಸಿ ರೆಸ್ಪಾನ್ಸ್‌: ಇದು ಸ್ಪೀಕರ್ ಉತ್ಪಾದಿಸಬಹುದಾದ ಶಬ್ದಗಳ ವ್ಯಾಪ್ತಿಯನ್ನು ಸೂಚಿಸುತ್ತದೆ. ವಿಶಾಲ ವ್ಯಾಪ್ತಿಯು (ಉದಾಹರಣೆಗೆ, 20Hz-20kHz) ಸಾಮಾನ್ಯವಾಗಿ ಉತ್ತಮ ಧ್ವನಿ ಪುನರುತ್ಪಾದನೆಯನ್ನು ನೀಡುತ್ತದೆ. ಹೀಗಾಗಿ ಫ್ರೀಕ್ವೆನ್ಸಿ ರೆಸ್ಪಾನ್ಸ್‌ ಕುರಿತು ಗಮನಿಸಿ.
  • ಸೌಂಡ್‌ಸ್ಟೇಜ್ ಮತ್ತು ಇಮೇಜಿಂಗ್: ಈ ವೈಶಿಷ್ಟ್ಯಗಳು ಸ್ಪೀಕರ್ ಕೋಣೆಯಲ್ಲಿ ಧ್ವನಿ ನಿರ್ದೇಶನವನ್ನು ಹೇಗೆ ಪುನರಾವರ್ತಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ.
  • ಬಾಸ್, ಮಿಡ್ರೇಂಜ್ ಮತ್ತು ಟ್ರೆಬಲ್: ಸ್ಪಷ್ಟ ಮತ್ತು ಸುಸಜ್ಜಿತ ಧ್ವನಿಗಾಗಿ ಸ್ಪೀಕರ್ ಕಡಿಮೆ, ಮಧ್ಯ ಮತ್ತು ಹೆಚ್ಚಿನ ಫ್ರೀಕ್ವೆನ್ಸಿಯನ್ನು ಬ್ಯಾಲೆನ್ಸ್‌ ಮಾಡುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿರಿ.

ಪವರ್‌ ಔಟ್‌ಪುಟ್‌ ಮತ್ತು ಸೆನ್ಸಿಟಿವಿಟಿ

  • ವ್ಯಾಟೇಜ್: ಹೆಚ್ಚಿನ ವ್ಯಾಟೇಜ್ ಜೋರಾಗಿ ಧ್ವನಿಯನ್ನು ನೀಡುತ್ತದೆ. ದೊಡ್ಡ ಸ್ಥಳದಲ್ಲಿ ಸ್ಪೀಕರ್‌ ಇಡೋದಾದ್ರೆ 50 ವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸ್ಪೀಕರ್‌ಗಳನ್ನು ಆಯ್ಕೆಮಾಡಿ.
  • ಸೆನ್ಸಿಟಿವಿಟಿ ರೇಟಿಂಗ್: ಇದು ಸ್ಪೀಕರ್ ಎಷ್ಟು ಪರಿಣಾಮಕಾರಿಯಾಗಿ ಪವರ್ ಅನ್ನು ಧ್ವನಿಯಾಗಿ ಪರಿವರ್ತಿಸುತ್ತದೆ ಎಂಬುದನ್ನು ಅಳೆಯುತ್ತದೆ. 90 ಡಿಬಿ ಅಥವಾ ಹೆಚ್ಚಿನ ರೇಟಿಂಗ್‌ಗಳು ಹೆಚ್ಚಿನ ದಕ್ಷತೆಯನ್ನು ಸೂಚಿಸುತ್ತವೆ.

ಕನೆಕ್ಟಿವಿಟಿ ಆಯ್ಕೆಗಳು

ಸ್ಪೀಕರ್‌ಗಳು ವಿವಿಧ ಕನೆಕ್ಟಿವಿಟಿ ವಿಧಾನಗಳನ್ನು ನೀಡುತ್ತವೆ:

ವೈರ್ಡ್ ಸಂಪರ್ಕಗಳು: RCA ಅಥವಾ AUX ಇನ್‌ಪುಟ್‌ಗಳು ಉತ್ತಮ.

ವೈರ್‌ಲೆಸ್ ಕನೆಕ್ಟಿವಿಟಿ: ಬ್ಲೂಟೂತ್, ವೈ-ಫೈ ಅಥವಾ ಏರ್‌ಪ್ಲೇ ಬೆಂಬಲವು ಕೇಬಲ್-ಮುಕ್ತ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ.

ಮಲ್ಟಿ-ರೂಮ್ ಆಡಿಯೋ: ಕೆಲವು ಸ್ಪೀಕರ್‌ಗಳು ವಿವಿಧ ಪ್ರದೇಶಗಳಲ್ಲಿ ಸಿಂಕ್ರೊನೈಸ್ ಮಾಡಿದ ಆಡಿಯೊಗೆ ಬೆಂಬಲ ನೀಡುತ್ತದೆ. ಇದೇ ಮಲ್ಟಿ ರೂಮ್‌ ಆಡಿಯೋ.

ಕೋಣೆಯ ಗಾತ್ರ ಮತ್ತು ಅಕೌಸ್ಟಿಕ್ಸ್ ಬಗ್ಗೆ ಗಮನಹರಿಸಿ

ನಿಮ್ಮ ಕೊಠಡಿಯ ಗಾತ್ರ ಮತ್ತು ಅಕೌಸ್ಟಿಕ್ಸ್‌ ಅಂಶಗಳು ಸ್ಪೀಕರ್‌ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ:

  • ಸಣ್ಣ ಕೊಠಡಿಗಳು: ಕಾಂಪ್ಯಾಕ್ಟ್ ಅಥವಾ ಪುಸ್ತಕದ ಶೆಲ್ಫ್ ಸ್ಪೀಕರ್‌ಗಳು ಸಾಕು.
  • ದೊಡ್ಡ ಕೊಠಡಿಗಳು: ದೊಡ್ಡ ಸ್ಪೀಕರ್ ಅಥವಾ ಸಬ್ ವೂಫರ್ ಹೊಂದಿರುವ ಸೆಟಪ್ ಅನ್ನು ಆಯ್ಕೆ ಮಾಡಿಕೊಳ್ಳಿ.
  • ರೂಮ್ ಅಕೌಸ್ಟಿಕ್ಸ್: ಧ್ವನಿ ಗುಣಮಟ್ಟವನ್ನು ಹೆಚ್ಚಿಸಲು ಕೋಣೆಯ ಮೇಲ್ಮೈಗಳ ಆಧಾರದ ಮೇಲೆ ಸ್ಪೀಕರ್ ಪ್ಲೇಸ್‌ಮೆಂಟ್ ಮಾಡಿ.

ಇದನ್ನೂ ಓದಿ: iPhone 16 Prices In India: ಭಾರತದಲ್ಲಿ ಐಫೋನ್‌ 16 ಸೀರಿಸ್‌ ದರ ಎಷ್ಟಿದೆ? ಯಾವಾಗ ಖರೀದಿಗೆ ಲಭ್ಯವಿರಲಿದೆ?

ಪೋರ್ಟೆಬಲ್‌ ಬಳಕೆಗಾಗಿ

ಬ್ಯಾಟರಿ ಬಾಳಿಕೆ: ಸ್ಪೀಕರ್ ಪೂರ್ಣ ಚಾರ್ಜ್‌ನಲ್ಲಿ ಕಾರ್ಯನಿರ್ವಹಿಸುವ ಅವಧಿಯನ್ನು ಪರಿಶೀಲಿಸಿ.

ತೂಕ ಮತ್ತು ಬಾಳಿಕೆ: ಹೊರಾಂಗಣ ಬಳಕೆಗಾಗಿ ಹಗುರವಾದ ಮತ್ತು ಹೆಚ್ಚು ಬಾಳಿಕೆ ಬರುವ ವಿನ್ಯಾಸಗಳನ್ನು ಆಯ್ಕೆಮಾಡಿ.

ಕಾಸಿಗೆ ತಕ್ಕ ಕಜ್ಜಾಯ

ಸ್ಪೀಕರ್‌ಗಳ ದರ ಗಮನಿಸಿ

ಎಂಟ್ರಿ ಲೆವೆಲ್‌: ಬೇಸಿಕ್‌ ಫೀಚರ್‌ಗಳನ್ನು ಹೊಂದಿರುತ್ತವೆ.

ಮಧ್ಯಮ ಶ್ರೇಣಿ: ಗುಣಮಟ್ಟ ಮತ್ತು ಫೀಚರ್‌ಗಳಲ್ಲಿ ಸಮತೋಲನ

ಹೈ ಎಂಡ್‌: ಪ್ರೀಮಿಯಂ ಸ್ಪೀಕರ್‌ಗಳು ಅತ್ಯುತ್ತಮ ಸೌಂಡ್‌ ಕ್ವಾಲಿಟಿ ಮತ್ತು ಬಾಳ್ವಿಕೆ ಹೊಂದಿರುತ್ತವೆ.

ಬ್ರಾಂಡ್‌ ಮತ್ತು ವಿಮರ್ಶೆಗಳು

ಸ್ಪೀಕರ್‌ ಖರೀದಿಸುವಾಗ ಯಾವ ಬ್ರ್ಯಾಂಡ್‌ನದ್ದು ಎನ್ನುವುದನ್ನು ಗಮನಿಸಿ. ಇದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ನಿರ್ದಿಷ್ಟ ಸ್ಪೀಕರ್‌ಗಳ ಕುರಿತು ರಿವ್ಯೂಗಳು ಇರುತ್ತವೆ. ಅವನ್ನು ಓದಿ.

ಇದೇ ಸಮಯದಲ್ಲಿ ಸ್ಪೀಕರ್‌ನಲ್ಲಿರುವ ಹೆಚ್ಚುವರಿ ಫೀಚರ್‌ಗಳನ್ನು ಗಮನಿಸಿ. ವಾಟರ್‌ಪ್ರೂಫ್‌, ಡಸ್ಟ್‌ ಪ್ರೂಪ್‌ ಇದ್ದರೆ ಉತ್ತಮ. ಕೆಲವೊಂದು ಸ್ಪೀಕರ್‌ಗಳಲ್ಲಿ ಅಂತರ್ಗತ ಆಂಪ್ಲಿಫ್ಲೈಯರ್‌ ಇರುತ್ತವೆ. ಅಂತಹ ಸ್ಪೀಕರ್‌ಗಳೂ ಉತ್ತಮ. ಒಟ್ಟಾರೆ, ಸ್ಪೀಕರ್‌ ಖರೀದಿಸುವಾಗ ಸಾಕಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

Whats_app_banner