ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಐಫೋನ್ 13 ದರ ಕೇ 40 ಸಾವಿರ ರೂಪಾಯಿ, ಈ ಡೀಲ್ ನಿಮ್ಮದಾಗಿಸಿಕೊಳ್ಳುವುದು ಹೇಗೆ? ಈ ಐಫೋನ್ ಖರೀದಿಸಬಹುದೇ
Amazon Great Indian Festival 2024: ಅಮೆಜಾನ್ ಶಾಪಿಂಗ್ ಹಬ್ಬದಲ್ಲಿ ಆಪಲ್ ಐಫೋನ್‌ಗಳನ್ನು ಕಡಿಮೆ ದರದಲ್ಲಿ ಪಡೆಯಬಹುದು. ವಿವಿಧ ಆಫರ್‌ಗಳ ನೆರವಿನಿಂದ ಆಪಲ್ ಐಫೋನ್ 13 ಅನ್ನು ಕೇವಲ 40 ಸಾವಿರ ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು. ಐಫೋನ್ 16 ಕಾಲದಲ್ಲಿ ಆಪಲ್ ಐಫೋನ್ 13 ಖರೀದಿಸಬಹುದೇ?
Amazon Great Indian Festival 2024: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024 ಆರಂಭವಾಗಿದೆ. ಸಾಕಷ್ಟು ಜನರು ಯಾವ ಪ್ರಾಡಕ್ಟ್ ದರ ಎಷ್ಟು ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಐಫೋನ್ ಪ್ರಿಯರು ವಿವಿಧ ಆಫರ್‌ಗಳು, ಡೀಲ್‌ಗಳ ಬಳಿಕ ಎಷ್ಟು ದರಕ್ಕೆ ದೊರಕುತ್ತದೆ ಎಂದು ಲೆಕ್ಕ ಹಾಕಿಕೊಳ್ಳುತ್ತಿದ್ದಾರೆ. ವಿವಿಧ ಡೀಲ್‌ಗಳ ಬಳಿಕ ಈ ಅಮೆಜಾನ್ ಸೇಲ್‌ನಲ್ಲಿ ಐಫೋನ್ 13 ಸುಮಾರು 40 ಸಾವಿರ ರೂಪಾಯಿ ಆಸುಪಾಸಿನಲ್ಲಿ ದೊರಕುತ್ತದೆ. ಇಂದು ಅಂದರೆ ಸೆಪ್ಟೆಂಬರ್ 26ರಂದು ಈ ಆಫರ್ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ದೊರಕುತ್ತದೆ. ನಾಳೆಯಿಂದ ಎಲ್ಲರಿಗೂ ದೊರಕುತ್ತದೆ. ಈ ದರದಲ್ಲಿ ಐಫೋನ್ 13 ಖರೀದಿಸಲು ಬಯಸಿದರೆ ಹೇಗೆ ಎಂದು ತಿಳಿಯೋಣ. ಅಮೆಜಾನ್ ಸೇಲ್ ಆರಂಭವಾದ ಬಳಿಕ ಇದರ ದರವನ್ನು ಅಮೆಜಾನ್ ಕೊಂಚ ಹೆಚ್ಚು ಮಾಡಿದೆ.
40,749 ರೂಪಾಯಿಗೆ ಐಫೋನ್ 13 ಖರೀದಿಸುವುದು ಹೇಗೆ?
ಸದ್ಯ ಅಮೆಜಾನ್ ಪ್ರೈಮ್ ಇಂಡಿಯಾದಲ್ಲಿ ಐಫೋನ್ 13 ದರ 41,999 ರೂಪಾಯಿ ಇದೆ. ಇದರ ಸಾಮಾನ್ಯವಾದ ದರ 50 ಸಾವಿರಕ್ಕೆ ಹೋಲಿಸಿದರೆ ಹಬ್ಬದ ಆಫರ್ ಆಗಿ ಕಡಿಮೆ ದರಕ್ಕೆ ದೊರಕುತ್ತಿದೆ. ನೀವು ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಇದನ್ನು 40,749 ರೂಪಾಯಿಗೆ ಖರೀದಿಸಬಹುದು. ಎಲ್ಲಾದರೂ ಎಕ್ಸ್‌ಚೇಂಜ್ ಮಾಡಲು ಬೇರೆ ಫೋನ್‌ಗಳಿದ್ದರೆ ಇದರ ದರ ಇನ್ನಷ್ಟು ಕಡಿತವಾಗಲಿದೆ. ಐಸಿಐಸಿಐ ಪೇ ಕ್ರೆಡಿಟ್ ಕಾರಡ್ ಬಳಸಿದರೆ 2,100 ರೂಪಾಯಿ ಕ್ಯಾಶ್‌ಬ್ಯಾಕ್ ದೊರಕತುತದೆ. ಇದು ಕ್ಯಾಶ್‌ಬ್ಯಾಕ್ ಎನ್ನುವುದು ಡಿಸ್ಕೌಂಟ್ ಅಲ್ಲ. ಬಳಿಕ ಬಳಸಲು ಇರುವಂತಹ ಹಣವಾಗಿದೆ.
ಐಫೋನ್ 13 ಖರೀದಿಸಬಹುದೇ?
ನೀವು ಎಲ್ಲಾದರೂ 120ಎಚ್‌ಝಡ್ ಡಿಸ್‌ಪ್ಲೇ ಅಥವಾ ಅತ್ಯುತ್ತಮ ಸ್ಟಿಲ್ ಕ್ಯಾಮೆರಾಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಐಫೋನ್ 13 ಖರೀದಿಸಬೇಕು ಎಂದು ನಿಮಗೆ ನಾವು ಶಿಫಾರಸು ಮಾಡುವುದಿಲ್ಲ. ಐಫೋನ್ 13 ಅತ್ಯುತ್ತಮ ಫೋನ್ ಎನ್ನುವುದು ನಿಜ. ಆದರೆ, ಇದು ಕೆಲವು ವರ್ಷ ಹಳೆಯ ಐಫೋನ್ ಅನ್ನೋದನ್ನು ಗಮನಿಸಬೇಕು. ಮೊನ್ನೆಯಷ್ಟೇ ಐಫೋನ್ 16 ಬಿಡುಗಡೆಯಾಗಿದೆ. ಹೀಗಾಗಿ, ಇದು ಮೂರು ವರ್ಷ ಹಳೆ ಫೋನ್. ಕೊಂಚ ಔಟ್‌ಡೇಟೆಡ್ ಎನ್ನಬಹುದು. 2024ರ ಸ್ಟಾಂಡರ್ಡ್‌ಗೆ ತಕ್ಕಂತೆ ಕ್ಯಾಮೆಆ ಇಲ್ಲ. ವಿಡಿಯೋ ಗುಣಮಟ್ಟವೂ ಅತ್ಯುತ್ತಮವಲ್ಲ. ಇದೇ ದರಕ್ಕೆ ಅತ್ಯುತ್ತಮವಾದ ಆಂಡ್ರಾಯ್ಡ್ ಫೋನ್ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಫರ್‌ನಲ್ಲಿ ಇದೇ ದರಕ್ಕೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್23 ಖರೀದಿಸಬಹುದು. ಅಥವಾ ಅಮೆಜಾನ್‌ನಲ್ಲಿ ಒನ್‌ಪ್ಲಸ್ 12 ಆರ್ ಖರೀದಿಸಬಹುದು. ಬೇಸಿಕ್ ಟಾಸ್ಕ್‌ಗೆ ಆಪಲ್ ಫೋನ್ ಬೇಕು ಎನ್ನುವವರಿಗೆ ಮಾತ್ರ ಐಫೋನ್ 13 ಸೂಕ್ತ. ಇದರಲ್ಲಿ ಪವರ್‌ಫುಲ್ ಎ15 ಚಿಪ್ ಇದೆ. ಏನೇ ಆಗಲಿ ನನ್ನ ಕೈಯಲ್ಲೊಂದು ಆಪಲ್ ಫೋನ್ ಇರಬೇಕು, ನನ್ನಲ್ಲಿ ಹೆಚ್ಚು ಹಣವಿಲ್ಲ ಎಂಬ ಸ್ಥಿತಿ ನಿಮ್ಮದಾಗಿದ್ದರೆ ಇದನ್ನು ಖರೀದಿಸಬಹುದು.