OnePlus 13: ಶೀಘ್ರದಲ್ಲಿ ಮಾರುಕಟ್ಟೆಗೆ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌, ರಾಮ್‌, ಸ್ಟೋರೇಜ್‌ ವಿವರ ಸೋರಿಕೆ
ಕನ್ನಡ ಸುದ್ದಿ  /  ಜೀವನಶೈಲಿ  /  Oneplus 13: ಶೀಘ್ರದಲ್ಲಿ ಮಾರುಕಟ್ಟೆಗೆ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌, ರಾಮ್‌, ಸ್ಟೋರೇಜ್‌ ವಿವರ ಸೋರಿಕೆ

OnePlus 13: ಶೀಘ್ರದಲ್ಲಿ ಮಾರುಕಟ್ಟೆಗೆ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌, ರಾಮ್‌, ಸ್ಟೋರೇಜ್‌ ವಿವರ ಸೋರಿಕೆ

OnePlus 13: ಒನ್‌ಪ್ಲಸ್‌ ಕಂಪನಿಯ ಮುಂಬರುವ ಸ್ಮಾರ್ಟ್‌ಫೋನ್‌ ಒನ್‌ಪ್‌ಲಸ್‌ 13ನಲ್ಲಿ 12 ಜಿಬಿ ರಾಮ್‌ ಮತ್ತು 1 ಟಿಬಿವರೆಗೆ ಇಂಟರ್ನಲ್‌ ಸ್ಟೋರೇಜ್‌ ಇರಲಿದೆ. ಮೊದಲು ಚೀನಾದಲ್ಲಿ ಬಳಿಕ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಆಗಮಿಸುವ ಈ ಸ್ಮಾರ್ಟ್‌ಫೋನ್‌ ಕುರಿತು ಹೆಚ್ಚಿನ ವಿವರ

OnePlus 13: ಶೀಘ್ರದಲ್ಲಿ ಮಾರುಕಟ್ಟೆಗೆ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌
OnePlus 13: ಶೀಘ್ರದಲ್ಲಿ ಮಾರುಕಟ್ಟೆಗೆ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ (OnePlus)

ಬೆಂಗಳೂರು: ಚೀನಾದಲ್ಲಿ ಒನ್‌ಪ್ಲಸ್‌ ಬಿಡುಗಡೆ ಕಾರ್ಯಕ್ರಮ ನಡೆಯಲು ಸುಮಾರು ಒಂದು ತಿಂಗಳಷ್ಟೇ ಇದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲೂ ಈ ಸ್ಮಾರ್ಟ್‌ಫೋನ್‌ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಒನ್‌ ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಒನ್‌ಪ್ಲಸ್‌ 13 ಕುರಿತು ವಿಶೇಷ ಕುತೂಹಲ ಎಲ್ಲರೂ ಹೊಂದಿದ್ದಾರೆ. ಭಾರತದಲ್ಲಿ ಜನವರಿ 2025ಕ್ಕೆ ಒನ್‌ಪ್ಲಸ್‌ 13 ಬಿಡುಗಡೆಯಾಗುವ ಸೂಚನೆಯಿದೆ. ನೂತನ ಸ್ಮಾರ್ಟ್‌ಫೊನ್‌ನ ಸ್ಪೆಸಿಫಿಕೇಷನ್‌, ಡಿಸೈನ್‌, ಫೀಚರ್ಸ್‌ ಇತ್ಯಾದಿಗಳ ವಿವರ ಇಲ್ಲಿದೆ. ಇದು ಚೀನಾದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್‌ 13ನ ಕುರಿತಾದ ಮಾಹಿತಿ. ಭಾರತದಲ್ಲಿ ಬಿಡುಗಡೆಯಾಗುವ ಒನ್‌ಪ್ಲಸ್‌ 13 ವಿನ್ಯಾಸ ಇದೇ ರೀತಿ ಇರಲಿದೆ.

ಒನ್‌ಪ್ಲಸ್‌ 13 ಸ್ಟೋರೇಜ್‌ ಮತ್ತು ರಾಮ್‌

ಮುಂಬರುವ ಚೀನಾದ ಒನ್‌ಪ್ಲಸ್‌ 13 ಆವೃತ್ತಿಯು 24 ಜಿಬಿ LPDDR5X ರಾಮ್‌ ಹೊಂದಿರಲಿದೆ ಎಂದು ಟ್ರಿಪ್‌ಸ್ಟೆರ್‌ ಡಿಜಿಟಲ್‌ ಚಾಟ್‌ ಸ್ಟೇಷನ್‌ ವೈಬೊ (ವಿಯಾ ಜೆಎಸ್‌ಎಂ ಅರೆನಾ)ದಲ್ಲಿ ಪೋಸ್ಟ್‌ ಮಾಡಿದೆ. ಇದರೊಂದಿಗೆ ಇಂಟರ್‌ನಲ್‌ ಸ್ಟೋರೇಜ್‌ ಕಳೆದ ವರ್ಷ ಬಿಡುಗಡೆಯಾದ ಒನ್‌ಪ್ಲಸ್‌ 12ನಂತೆ ಇರುವ ಸೂಚನೆಯಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ನಲ್ಲಿ ಗರಿಷ್ಠ ಸ್ಟೋರೇಜ್‌ 1 ಟಿಬಿವರೆಗೆ ಇರುವ ವದಂತಿಗಳಿವೆ. ಇದರೊಂದಿಗೆ ಈ ವರ್ಷ ಹೆಚ್ಚು ಸ್ಟೋರೇಜ್‌ ಇರುವ ವರ್ಷನ್‌ಗೆ ಒನ್‌ಪ್ಲಸ್‌ ದರ ಹೆಚ್ಚಿಸುವ ಸೂಚನೆಯಿದೆ.

ವರದಿಗಳ ಪ್ರಕಾರ ಒನ್‌ಪ್ಲಸ್‌ 13ನಲ್ಲಿ ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್‌ 8 ಜೆನ್‌ 4 ಚಿಪ್‌ಸೆಟ್‌ ಅಥವಾ ಮೀಡಿಯಾಟೆಕ್‌ ಡೈಮೆನ್ಸಿಟಿ 9400 ಚಿಪ್‌ಸೆಟ್‌ ಇರಲಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ದೊರಕಲಿದೆ.

ಒನ್‌ಪ್ಲಸ್‌ 13 ಫೀಚರ್‌ಗಳು (ನಿರೀಕ್ಷಿತ)

ನೂತನ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ 6.82-ಇಂಚಿನ ಎಲ್‌ಟಿಪಿಒ ಬಿಒಇ ಎಕ್ಸ್‌ 2 ಮೈಕ್ರೋ-ಕರ್ವ್ಡ್ ಒಲೆಡ್‌ ಡಿಸ್ಪ್ಲೇ ಜೊತೆಗೆ 2K ರೆಸಲ್ಯೂಶನ್ ಹೊಂದಿರುವ ನಿರೀಕ್ಷೆ ಇದೆ. ಕಳೆದ ವರ್ಷ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ನಂತೆ ಒನ್‌ಪ್ಲಸ್‌ 13ನಲ್ಲಿ ಸೋನಿ ಎಲ್‌ವೈಟಿ 808 ಸಂವೇದಕದೊಂದಿಗೆ 50 ಮೆಗಾಫಿಕ್ಸೆಲ್‌ ಮುಖ್ಯ ಕ್ಯಾಮೆರಾ, ಸೋನಿ ಎಲ್‌ವೈಟಿT600 ಸಂವೇದಕದೊಂದಿಗೆ 50 ಮೆಗಾಫಿಕ್ಸೆಲ್‌ ಪೆರಿಸ್ಕೋಪ್ ಲೆನ್ಸ್ ಮತ್ತು 50 ಮೆಗಾಫಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ 6,000 mAh ಬ್ಯಾಟರಿ ಹೊಂದಿರುವ ಸೂಚನೆಯಿದೆ.

ಗಮನಿಸಿ, ಮೇಲೆ ನೀಡಿರುವ ಮಾಹಿತಿಯು ಸದ್ಯ ಲಭ್ಯವಿರುವ ಸೋರಿಕೆಯಾಗಿರುವ ಮಾಹಿತಿಗಳನ್ನು ಆಧರಿಸಿದ್ದು. ನಿಜವಾದ ಟೆಕ್‌ ಮಾಹಿತಿಯು ಸ್ಮಾರ್ಟ್‌ಫೋನ್‌ ಬಿಡುಗಡೆಯಾದ ಸಂದರ್ಭದಲ್ಲಿ ತಿಳಿದುಬರಲಿದೆ. ಇದು ಚೀನಾದ ಟೆಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿರುವ ಸಂಗತಿಯಾಗಿದೆ. ಹೀಗಾಗಿ, ಒಂದಿಷ್ಟು ಮಾಹಿತಿಗಳು ನಿಜವಾಗಿರುವ ಸೂಚನೆಯಿದೆ.

Whats_app_banner