iPhone SE 4 : ಹಬ್ಬದ ಸೇಲ್‌ ಎಂದು ಐಫೋನ್‌ 15 ಖರೀದಿಸಬೇಡಿ, ಇದಕ್ಕಿಂತ ಐಫೋನ್‌ ಎಸ್‌ಇ 4ಗೆ ಕಾಯೋದು ಬೆಸ್ಟ್‌, ಇಲ್ಲಿವೆ 5 ಕಾರಣಗಳು-technology news iphone se 4 launch in 2025 why you should not buy iphone 15 even at a discount pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Iphone Se 4 : ಹಬ್ಬದ ಸೇಲ್‌ ಎಂದು ಐಫೋನ್‌ 15 ಖರೀದಿಸಬೇಡಿ, ಇದಕ್ಕಿಂತ ಐಫೋನ್‌ ಎಸ್‌ಇ 4ಗೆ ಕಾಯೋದು ಬೆಸ್ಟ್‌, ಇಲ್ಲಿವೆ 5 ಕಾರಣಗಳು

iPhone SE 4 : ಹಬ್ಬದ ಸೇಲ್‌ ಎಂದು ಐಫೋನ್‌ 15 ಖರೀದಿಸಬೇಡಿ, ಇದಕ್ಕಿಂತ ಐಫೋನ್‌ ಎಸ್‌ಇ 4ಗೆ ಕಾಯೋದು ಬೆಸ್ಟ್‌, ಇಲ್ಲಿವೆ 5 ಕಾರಣಗಳು

iPhone SE 4 launch: ಬಹುನಿರೀಕ್ಷಿತ ಐಫೋನ್‌ ಎಸ್‌ಇ 4 ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ಲಾಂಚ್‌ ಆಗಲಿದೆ. ಈ ಕಾರಣಕ್ಕಾಗಿ ಮುಂಬರುವ ಹಬ್ಬದ ಸೇಲ್‌ನಲ್ಲಿ ಐಫೋನ್‌ 15 ಖರೀದಿಸದೆ ಇರುವುದು ಒಳ್ಳೆಯದು. ಮುಂದಿನ ಮಾರ್ಚ್‌ ತನಕ ಕಾಯುವುದರಿಂದ ಸಾಕಷ್ಟು ಪ್ರಯೋಜನವಿದೆ.

ಆಪಲ್‌ ಐಫೋನ್‌ ಖರೀದಿ ಸಲಹೆ
ಆಪಲ್‌ ಐಫೋನ್‌ ಖರೀದಿ ಸಲಹೆ (Apple Hub)

ಬೆಂಗಳೂರು: ಐಫೋನ್‌ 16 ಸರಣಿಯ ಐಫೋನ್‌ಗಳು ಸೆಪ್ಟೆಂಬರ್‌ 9, 2024ರಂದು ಲಾಂಚ್‌ ಆಗಲಿವೆ. ಹೊಸ ಐಫೋನ್‌ಗಳು ಆಗಮಿಸುವ ಕಾರಣ ಹಳೆಯ ಜನರೇಷನ್‌ನ ಐಫೋನ್‌ಗಳ ದರ ಆನ್‌ಲೈನ್‌ ತಾಣಗಳಲ್ಲಿ ನಾಟಕೀಯವಾಗಿ ಇಳಿಕೆ ಕಾಣಲಿವೆ. ಮುಂದಿನ ಫೆಸ್ಟಿವಲ್‌ ಸೇಲ್‌ ಎಂದು ಕೊಂಚ ಕಡಿಮೆ ದರದಲ್ಲಿ ಹಳೆಯ ವರ್ಷನ್‌ನ ಐಫೋನ್‌ಗಳು ದೊರಕಲಿವೆ. ಕಳೆದ ವರ್ಷದ ಐಫೋನ್‌ 15 ಈ ಹಬ್ಬದ ಋತುವಿನಲ್ಲಿ ಭಾರಿ ಡಿಸ್ಕೌಂಟ್‌ನಲ್ಲಿ ದೊರಕಲಿದೆ. ಆದರೆ, ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ಆಪಲ್‌ನ ಕಡಿಮೆ ದರದ iPhone SE 4 ಬಿಡುಗಡೆಯಾಗಲಿದೆ. ಅದಕ್ಕೆ ಕಾಯುವುದು ಉತ್ತಮ ಅನ್ನೋದು ನಮ್ಮ ಅಭಿಪ್ರಾಯ.

ಯಾಕೆ ಐಫೋನ್‌ ಎಸ್‌ಇ 4ಗೆ ಕಾಯಬೇಕು?

ಯಾಕೆ ಡಿಸ್ಕೌಂಟ್‌ನಲ್ಲಿ ಐಫೋನ್‌ 15 ಖರೀದಿಸಬಾರದು?

ಹಬ್ಬದ ಋತು ಹತ್ತಿರದಲ್ಲಿದೆ. ಇ-ಕಾಮರ್ಸ್‌ ತಾಣಗಳು ದೊಡ್ಡಮಟ್ಟದ ಸೇಲ್‌ ಆರಂಭಿಸಲಿವೆ. ಇದೇ ಸಮಯದಲ್ಲಿ ಐಫೋನ್‌ 15ಗೆ ದೊಡ್ಡ ದರ ಕಡಿತ ಇರಲಿದೆ. ಆದರೆ, ಐಫೋನ್‌ ಎಸ್‌ಇ4 ಶೀಘ್ರದಲ್ಲಿ ಲಾಂಚ್‌ ಆಗುವ ಕಾರಣ ಇಮಗೆ ಡಿಸ್ಕೌಂಟ್‌ ರೇಟ್‌ನಲ್ಲಿ ಖರೀದಿಸಲು ಐಫೋನ್‌ 15 ಸೂಕ್ತ ಆಯ್ಕೆಯಲ್ಲ. ಹೊಸ ಐಫೋನ್‌ ಎಸ್‌ಇ 4ನಲ್ಲಿ ಸಾಕಷ್ಟು ಮುಂದುವರೆದ ಫೀಚರ್‌ಗಳು ಇರಲಿವೆ.

  1. ಐಫೋನ್‌ ಎಸ್‌ಇ 4 ಐಫೋನ್‌ 14 ರಂತಹ ವಿನ್ಯಾಸದೊಂದಿಗೆ ಬರುವ ನಿರೀಕ್ಷೆಯಿದೆ. ಇದು ನೋಡಲು ತುಸು ಕಳೆದ ವರ್ಷದ ಐಫೋನ್‌ 15 ರೀತಿ ಇರಲಿದೆ. ವದಂತಿಗಳ ಪ್ರಕಾರ ಈಗಾಗಲೇ ಆಪಲ್‌ ಕಂಪನಿಯು ಎಸ್‌ಇ ಸರಣಿ ವಿನ್ಯಾಸದ ಕೆಲಸದಲ್ಲಿದೆ. ಇದು ಮೂಲ ಐಫೋನ್‌ 15ಗಿಂತಲೂ ತಾಜಾ ನೋಟ ಹೊಂದಿರಲಿದೆ. ಅಂದ್ರೆ, ಇದಕ್ಕಿಂತಲೂ ಸುಂದರವಾಗಿರಲಿದೆ.
  2. ಐಫೋನ್‌ ಎಸ್‌ಇ 4ನಲ್ಲಿ ಡೈನಾಮಿಕ್‌ ಇಸ್‌ಲ್ಯಾಂಡ್‌ನಂತಹ ಫೀಚರ್‌ ಇರಲಿದೆ. ಅಂದರೆ, ಐಫೋನ್‌ 15ನಂತಹ ಫೀಚರ್‌ ಇರಲಿದೆ. ಐಫೋನ್‌ 15 ಪ್ರೊ ಮಾಡೆಲ್‌ಗಳಲ್ಲಿ ಇರುವಂತಹ ಆಕ್ಷನ್‌ ಬಟನ್‌ಗಳೂ ಇರಲಿವೆ. ಆಪಲ್‌ ಕಂಪನಿಯು ಕಡಿಮೆ ದರಕ್ಕೆ ಪ್ರೊದಂತಹ ಫೀಚರ್‌ ನೀಡುವ ನಿರೀಕ್ಷೆಯಿದೆ.
  3. ಐಫೋನ್‌ 15ನಲ್ಲಿ ಎ16 ಬಯೋನಿಕ್‌ ಚಿಪ್‌ ಸೆಟ್‌ ಇದೆ. ಆದರೆ, ಐಫೋನ್‌ ಎಸ್‌ಇ4ನಲ್ಲಿ ಹೊಸ ತಲೆಮಾರಿನ ಚಿಪ್‌ಸೆಟ್‌ ಇರಲಿದೆ. ಇದು ಎ16 ಪ್ರೊ ಅಥವಾ ಎ18ನಂತಹ ಕೆಪಾಸಿಟಿ ಹೊಂದಿರುವ ನಿರೀಕ್ಷೆ ಇದೆ. ಒಟ್ಟಾರೆ ಐಫೋನ್‌ 16ಗಿಂತಲೂ ಸುಧಾರಿತ ಚಿಪ್‌ಸೆಟ್‌ ಇರುವ ಇರುವ ಸೂಚನೆ ಇದೆ.
  4. ಹೊಸ ಚಿಪ್‌ಸೆಟ್‌ ಹೊಂದಿರುವ ಐಫೋನ್‌ ಎಸ್‌ಇ 4ನ ಪರ್ಫಾಮೆನ್ಸ್‌ ಐಫೋನ್‌ 15ಗಿಂತ ಉತ್ತಮವಾಗಿರುವ ನಿರೀಕ್ಷೆಯಿದೆ. ಐಫೋನ್‌ 15ನಲ್ಲಿ ಆಪಲ್‌ ಇಂಟಲಿಜೆನ್ಸ್‌ ಇಲ್ಲ. ಅಂದರೆ, ಆಪಲ್‌ನ ಎಐ ಫೀಚರ್ಸ್‌ ಇಲ್ಲ. ಆದರೆ, ಮುಂದಿನ ವರ್ಷ ಆಗಮಿಸುವ ಫೋನ್‌ನಲ್ಲಿ ಎಐ ಫೀಚರ್‌ ಇರಲಿದೆ. ವದಂತಿಗಳ ಪ್ರಕಾರ ಮುಂದಿನ ವರ್ಷದ ಎಸ್‌ಇನಲ್ಲಿ ಅತ್ಯುತ್ತಮ ರಾಮ್‌ ಸ್ಟೋರೇಜ್‌ ಕೂಡ ಇರಲಿದೆ.
  5.  ಕ್ಯಾಮೆರಾ ಯಾವುದು ಉತ್ತಮ? ಐಫೋನ್‌ ಎಸ್‌ಇ 4ನಲ್ಲಿ ಸಿಂಗಲ್‌ ರಿಯರ್‌ ಕ್ಯಾಮೆರಾ ಇರಲಿದೆ. ಐಫೋನ್‌ 15ನಲ್ಲಿ ಡ್ಯೂಯೆಲ್‌ ಕ್ಯಾಮೆರಾ ಇದೆ. ಆದರೆ, ಎಸ್‌ಇ ಮಾಡೆಲ್‌ನ ಕ್ಯಾಮೆರಾದ ಪರ್ಫಾಮೆನ್ಸ್‌  48 ಮೆಗಾಫಿಕ್ಸೆಲ್‌ ಮೇನ್‌ ಕ್ಯಾಮೆರಾದಷ್ಟೇ ಇರುವ ಸೂಚನೆಯಿದೆ.