Realme: ಐಫೋನ್ 16 ಬಿಡುಗಡೆ ಬೆನ್ನಲ್ಲೇ ಅತಿ ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ ರಿಲೀಸ್ ಮಾಡಿದ ರಿಯಲ್ ಮಿ
ರಿಯಲ್ ಮಿ ನಾರ್ಜೊ 70 ಟರ್ಬೊ 5G ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 6GB RAM + 128GB ಸ್ಟೋರೇಜ್ ಆವೃತ್ತಿಗೆ ಕೇವಲ 16,999 ರೂ. ಇದೆ. ಈ ಫೋನ್‌ನಲ್ಲಿ ಆಕರ್ಷಕವಾದ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಆಯ್ಕೆ ನೀಡಲಾಗಿದೆ. (ಬರಹ: ವಿನಯ್ ಭಟ್)
ಆ್ಯಪಲ್ ಕಂಪನಿ ತನ್ನ ಬಹುನಿರೀಕ್ಷಿತ ಐಫೋನ್ 16 ಸರಣಿಯನ್ನು ಅನಾವರಣ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಸಿದ್ಧ ಕಂಪನಿ ರಿಯಲ್ ಮಿ ಅತ್ಯಂತ ಕಡಿಮೆ ಬೆಲೆಗೆ ಗೇಮಿಂಗ್-ಕೇಂದ್ರಿತ ಕೊಡುಗೆಯಾಗಿ ರಿಯಲ್ ಮಿ ನಾರ್ಜೊ 70 ಟರ್ಬೊ 5G ಫೋನನ್ನು ರಿಲೀಸ್ ಮಾಡಿದೆ. ಈ ಹೊಸ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಕರ್ಷಕವಾದ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಆಯ್ಕೆ ಕೂಡ ನೀಡಲಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ರಿಯಲ್ ಮಿ ನಾರ್ಜೊ 70 ಟರ್ಬೊ 5G ಬೆಲೆ
ರಿಯಲ್ ಮಿ ನಾರ್ಜೊ 70 ಟರ್ಬೊ 5G ಭಾರತದಲ್ಲಿ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 6GB RAM + 128GB ಸ್ಟೋರೇಜ್ ಆವೃತ್ತಿಗೆ ಕೇವಲ 16,999 ರೂ. ಇದೆ. ಹಾಗೆಯೆ 8GB + 128GB ಮತ್ತು 12GB + 256GB ಸ್ಟೋರೇಜ್ ರೂಪಾಂತರಗಳ ಬೆಲೆ ಕ್ರಮವಾಗಿ ರೂ. 17,999 ಮತ್ತು ರೂ. 20,999 ಆಗಿದೆ. ಇದು ಟರ್ಬೊ ಎಲ್ಲೊ, ಟರ್ಬೊ ಗ್ರೀನ್ ಮತ್ತು ಟರ್ಬೊ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಫೋನ್‌ನ ಮೊದಲ ಮಾರಾಟವು ಸೆಪ್ಟೆಂಬರ್ 16 ರಂದು ಅಮೆಜಾನ್ ಮತ್ತು ರಿಯಲ್ ಮಿ ವೆಬ್‌ಸೈಟ್ ಮೂಲಕ ನಡೆಯಲಿದೆ.
ರಿಯಲ್ ಮಿ ನಾರ್ಜೊ 70 ಟರ್ಬೊ 5G ಫೀಚರ್ಸ್
ಡ್ಯುಯಲ್ ಸಿಮ್ (ನ್ಯಾನೋ) ರಿಯಲ್ ಮಿ ನಾರ್ಜೊ 70 ಟರ್ಬೊ 5G ಆಂಡ್ರಾಯ್ಡ್ 14 ಆಧಾರಿತ ರಿಯಲ್ ಮಿ UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67-ಇಂಚಿನ ಸ್ಯಾಮ್ಸಂಗ್ E4 OLED ಡಿಸ್ಪ್ಲೇ ಹೊಂದಿದ್ದು, ಗೇಮಿಂಗ್ಗಾಗಿ 90fps ಅನ್ನು ನೀಡುವ GT ಮೋಡ್ ಅನ್ನು ಕೂಡ ನೀಡಲಾಗಿದೆ. 120Hz ರಿಫ್ರೆಶ್ ರೇಟ್, 1s80Hz ಟಚ್ ರೇಟ್, 2,000nits ಗರಿಷ್ಠ ಬ್ರೈಟ್ನೆಸ್ ಇದೆ. ಇಷ್ಟೇ ಅಲ್ಲದೆ ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವನ್ನು ಕೂಡ ನೀಡಲಾಗಿದೆ.
ಮೀಡಿಯಾಟೆಕ್ ಡೈಮನ್ಸಿಟಿ 7300 ಎನರ್ಜಿ 5G ಪ್ರೊಸೆಸರ್ ಅನ್ನು Mali-G615 GPU ಜೊತೆಗೆ ಜೋಡಿಸಲಾಗಿದೆ, 12GB LPDDR4X RAM ಮತ್ತು 256GB ವರೆಗೆ UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಆನ್‌ಬೋರ್ಡ್ RAM ಅನ್ನು ವಾಸ್ತವಿಕವಾಗಿ 26GB ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬಂದರೆ ಈ ಫೋನ್ 50-ಮೆಗಾಪಿಕ್ಸೆಲ್ AI-ಬೆಂಬಲಿತ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ, 16-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ನೀಡಲಾಗಿದೆ.
ರಿಯಲ್ ಮಿ ನಾರ್ಜೊ 70 ಟರ್ಬೊ 5G ಯಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್ 5.4, ಜಿಪಿಎಸ್, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು ವೈ-ಫೈ ಸೇರಿವೆ. ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ. 45W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಘಟಕವನ್ನು ಹೊಂದಿದೆ. ವೇಗದ ಚಾರ್ಜಿಂಗ್ ವೈಶಿಷ್ಟ್ಯವು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದಷ್ಟು ಬ್ಯಾಟರಿಯನ್ನು ಫುಲ್ ಮಾಡುತ್ತದೆ ಎಂದು ಕಂಪನಿ ಹೇಳಿದೆ.