Viral Video: ಸೂರತ್ ರಸ್ತೆ ಬದಿ ವ್ಯಾಪಾರಿಯಿಂದ ಚಿಕ್ಕಿ ಚಾಟ್ ಪ್ರಯೋಗ; RIP ಚಿಕ್ಕಿ ಎಂದ ನೆಟಿಜನ್ಸ್
Viral Video: ಗುಜರಾತ್‌ನ ಸೂರತ್ ವ್ಯಾಪಾರಿಯೊಬ್ಬರು ಚಿಕ್ಕಿಯಿಂದ ಚಾಟ್ ತಯಾರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದವರು ರಿಪ್ ಚಿಕ್ಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Viral Video: ಭೋಜನಪ್ರಿಯರು ಸಮಯ ಸಿಕ್ಕಾಗಲೆಲ್ಲಾ ಹೊಸ ರುಚಿ ಟ್ರೈ ಮಾಡಲು ಕಾಯುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅದು ಸಕ್ಸಸ್ ಆದರೆ, ಕೆಲವೊಮ್ಮೆ ಯಾರೂ ತಿನ್ನಲು ಆಗದಷ್ಟು ಕೆಡುತ್ತದೆ. ರಸ್ತೆ ಬದಿ ವ್ಯಾಪಾರಿಗಳು ಕೂಡಾ ಗ್ರಾಹಕರನ್ನು ಸೆಳೆಯಲು ಆಗ್ಗಾಗ್ಗೆ ಹೊಸ ರುಚಿ ಟ್ರೈ ಮಾಡುತ್ತಾರೆ. ಕೆಲವೊಂದಕ್ಕೆ ಜನ ಮನ್ನಣೆ ದೊರೆತರೆ ಕೆಲವೊಂದು ಕಣ್ಣಿಂದ ನೋಡಲು ಸಾಧ್ಯವಾಗುವುದಿಲ್ಲ.
ರಸ್ತೆಬದಿ ವ್ಯಾಪಾರಿಗಳ ಹೊಸ ಅನ್ವೇಷಣೆ
ಕೆಲವೊಂದು ಹೊಸ ರೆಸಿಪಿ ಪ್ರಯೋಗಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಇದೀಗ ಗುಜರಾತ್‌ನ ಸೂರತ್‌ನಲ್ಲಿ ರಸ್ತೆ ಬದಿ ವ್ಯಾಪಾರಿಯೊಬ್ಬರು ಮಾಡುತ್ತಿರುವ ಹೊಸ ರೆಸಿಪಿ ಪ್ರಯೋಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಅದನ್ನು ನೋಡಿದ ಜನರು ನಮ್ಮಿಷ್ಟದ ತಿಂಡಿಯ ರುಚಿಯನ್ನೇ ಹಾಳು ಮಾಡಿಬಿಟ್ರಲ್ಲಾ ಎಂದು ಗೊಣಗುತ್ತಿದ್ದಾರೆ. ಚಾಟ್ಸ್ ಪ್ರಿಯರ ಇಷ್ಟದ ತಿಂಡಿಗಳಲ್ಲಿ ಸಮೋಸಾ ಚಾಟ್, ಆಲೂ ಚಾಟ್‌ಗಳು ಕೂಡಾ ಒಂದು. ಆದರೆ ಎಂದಾದರೂ ನೀವು ಚಿಕ್ಕಿ ಚಾಟ್ ತಿಂದಿದ್ದೀರ? ಅರೆ, ಚಿಕ್ಕಿ ಚಾಟ್ ಕೂಡಾ ಇದ್ಯಾ ಅಂತ ಕಣ್ಣರಳಿಸಬೇಡಿ, ಹೌದು ಇದು ರಸ್ತೆ ಬದಿ ವ್ಯಾಪಾರಿಗಳ ಹೊಸ ಅನ್ವೇಷಣೆ.
ಚಿಕ್ಕಿ ಚಾಟ್ ತಯಾರಿಸಿದ ರಸ್ತೆಬದಿ ವ್ಯಾಪಾರಿ
ಚಿಕ್ಕಿಯನ್ನು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೆಲ್ಲಾ ತಿನ್ನಲು ಇಷ್ಟಪಡುತ್ತಾರೆ. ಅದರ ರುಚಿಗೆ ಮಾರು ಹೋದವರೇ ಇಲ್ಲ. ಒಮ್ಮೆ ತಿಂದರೆ, ತಿನ್ನುತ್ತಲೇ ಇರಬೇಕು ಎನಿಸುತ್ತದೆ. ಇದನ್ನು ತಿನ್ನಲು ಯಾವ ಕಾರಣವೂ ಬೇಕಿಲ್ಲ, ಇಂಥದ್ದೇ ಸಮಯ ಅಂತೇನಿಲ್ಲ. ಆದರೆ ಈ ರಸ್ತೆ ಬದಿ ವ್ಯಾಪಾರಗಳು, ಚಿಕ್ಕಿಯಿಂದ ಚಾಟ್ ತಯಾರಿಸುವ ಮೂಲಕ ಅದಕ್ಕೆ ಹೊಸ ರೂಪ ನೀಡಿದ್ದಾರೆ. ಗುಜರಾತ್‌ನ ಸೂರತ್‌ನ ರಸ್ತೆ ಬದಿ ವ್ಯಾಪಾರಿಯೊಬ್ಬರು ಚಿಕ್ಕಿ ಚಾಟ್ ತಯಾರಿಸುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದವರು ಚಿಕ್ಕಿಗೆ ನ್ಯಾಯ ಕೊಡಿಸಿ ಎಂದು ಕಾಮೆಂಟ್ ಮಾಡಿ ಮನವಿ ಮಾಡುತ್ತಿದ್ದಾರೆ.
ಚಿಕ್ಕಿಗೆ ನ್ಯಾಯ ಕೊಡಿಸಿ ಎಂದ ನೆಟಿಜನ್ಸ್
ಈ ವಿಡಿಯೋದಲ್ಲಿ ವ್ಯಾಪಾರಿಯು ಚಿಕ್ಕಿಯನ್ನು ತುಂಡು ತುಂಡು ಮಾಡಿ ಪೇಪರ್ ಪ್ಲೇಟ್‌ಗೆ ಹಾಕುತ್ತಾನೆ. ನಂತರ ಅದರ ಮೇಲೆ ಗ್ರೀನ್ ಚಟ್ನಿ, ಸಿಹಿ ಚಟ್ನಿ, ಲೆಮನ್ ಜ್ಯೂಸ್, ಕೊನೆಗೆ ಖಾರಾಸೇವ್ ಹರಡಿ ಜನರಿಗೆ ಕೊಡುತ್ತಿದ್ದಾರೆ. ಈ ವಿಡಿಯೋ ಡಿಸೆಂಬರ್ 21 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೂ ಈ ವಿಡಿಯೋವನ್ನು 17.9 ಜನರು ನೋಡಿದ್ದಾರೆ. ತರೇಹವಾರಿ ಕಾಮೆಂಟ್ ಕೂಡಾ ಮಾಡಿದ್ದಾರೆ. ಚಿಕ್ಕಿಗೆ ಪುದೀನಾ ಚಟ್ನಿ ಸೇರಿಸಿದ ನಂತರ ನನಗೆ ಅದನ್ನು ನೋಡಲಾಗಲಿಲ್ಲ. ಈ ಭೂಮಿ ಮೇಲಿನ ಜನರಿಗೆ ಇಂಥ ಐಡಿಯಾಗಳು ಎಲ್ಲಿಂದ ಬರುವುದೋ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆರೋಗ್ಯಕರ ಆಹಾರವನ್ನು ಅನಾರೋಗ್ಯಕರವನ್ನಾಗಿ ಮಾಡುವುದು ಎನ್ನುವುದಕ್ಕೆ ಇದೇ ಉದಾಹರಣೆ, ದಯವಿಟ್ಟು ಯಾರಾದರೂ ಚಿಕ್ಕಿಗೆ ನ್ಯಾಯ ಒದಗಿಸಿ, RIP ಚಿಕ್ಕಿ ಎಂದೆಲ್ಲಾ ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳು
ಇದನ್ನೂ ಓದಿ: ಭಾರೀ ಟೀಕೆಗಳ ನಂತರ ಪ್ರಾಡಕ್ಟ್ನಲ್ಲಿ ಸಕ್ಕರೆ ಪ್ರಮಾಣವನ್ನು ತಗ್ಗಿಸಿದ ಕ್ಯಾಡ್ಬರಿ ಬೋರ್ನ್ವಿಟಾ