Viral Video: ಭಾರೀ ಟೀಕೆಗಳ ನಂತರ ಪ್ರಾಡಕ್ಟ್‌ನಲ್ಲಿ ಸಕ್ಕರೆ ಪ್ರಮಾಣವನ್ನು ತಗ್ಗಿಸಿದ ಕ್ಯಾಡ್‌ಬರಿ ಬೋರ್ನ್‌ವಿಟಾ
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ಭಾರೀ ಟೀಕೆಗಳ ನಂತರ ಪ್ರಾಡಕ್ಟ್‌ನಲ್ಲಿ ಸಕ್ಕರೆ ಪ್ರಮಾಣವನ್ನು ತಗ್ಗಿಸಿದ ಕ್ಯಾಡ್‌ಬರಿ ಬೋರ್ನ್‌ವಿಟಾ

Viral Video: ಭಾರೀ ಟೀಕೆಗಳ ನಂತರ ಪ್ರಾಡಕ್ಟ್‌ನಲ್ಲಿ ಸಕ್ಕರೆ ಪ್ರಮಾಣವನ್ನು ತಗ್ಗಿಸಿದ ಕ್ಯಾಡ್‌ಬರಿ ಬೋರ್ನ್‌ವಿಟಾ

Viral Video: ಮಕ್ಕಳು ಹಾಗೂ ಹಿರಿಯರು ಬಳಸುವ ಕ್ಯಾಡ್‌ಬರಿ ಬೋರ್ನ್‌ವಿಟಾದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ ಕಂಪನಿಯು ಇದೀಗ 14.4% ರಷ್ಟು ಸಕ್ಕರೆ ಪ್ರಮಾಣ ಕಡಿತಗೊಳಿಸಿದೆ.

 ಸಕ್ಕರೆ ಅಂಶವನ್ನು 14.4% ರಷ್ಟು ಕಡಿತಗೊಳಿಸಿದ ಕ್ಯಾಡ್‌ಬರಿ ಬೋರ್ನ್‌ವಿಟಾ
ಸಕ್ಕರೆ ಅಂಶವನ್ನು 14.4% ರಷ್ಟು ಕಡಿತಗೊಳಿಸಿದ ಕ್ಯಾಡ್‌ಬರಿ ಬೋರ್ನ್‌ವಿಟಾ (PC: @shibu_prof)

Viral Video: ಪ್ರತಿದಿನ ಜಾಹೀರಾತುಗಳಲ್ಲಿ ನಾವು ಎಷ್ಟೋ ಪ್ರಾಡಕ್ಟ್‌ಗಳನ್ನು ನೋಡುತ್ತಿರುತ್ತೇವೆ. ಅವುಗಳಲ್ಲಿ ಬಹುಪಾಲು ವ್ಯಾಪಾರದ ದೃಷ್ಟಿಯಿಂದ ತಯಾರಿಸಲಾದ ಉತ್ಪನ್ನಗಳು. ಅದರಲ್ಲಿ ಕೆಲವೇ ಕೆಲವರು ಜನ ಮನ್ನಣೆ ಗಳಿಸಿ, ಜನರಿಗೆ ಉಪಯೋಗವಾಗುವಂತಿದ್ದರೆ ಇನ್ನೂ ಕೆಲವು ಯಾವುದೇ ಪ್ರಯೋಜನಕ್ಕೆ ಬಾರದ ಉತ್ಪನ್ನಗಳು.

ಬೋರ್ನ್‌ವಿಟಾ ಬಗ್ಗೆ ತಕರಾರು

ಹೀಗೆ ಜಾಹೀರಾತು ಹಾಗೂ ಜನಬಳಕೆ ಮೂಲಕವೇ ಹೆಸರು ಪಡೆದ ಉತ್ಪನ್ನಗಳಲ್ಲಿ ಕ್ಯಾಡ್‌ಬರಿ ಬೋರ್ನ್‌ವಿಟಾ ಕೂಡಾ ಒಂದು. ಬೋರ್ನ್‌ವಿಟಾ ಇಂದು ನಿನ್ನೆಯದಲ್ಲ ಹಲವಾರು ವರ್ಷಗಳು ಜನರು ಬಳಸುತ್ತಿರುವ ಹೆಸರಾಂತ ಉತ್ಪನ್ನವಾಗಿದೆ. ದೊಡ್ಡವರು, ಚಿಕ್ಕವರು ಎನ್ನದೆ ಈ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಉತ್ಪನ್ನದ ಬಗ್ಗೆ ತಕರಾರು ಕೇಳಿ ಬಂದಿದೆ. ಚಾಕೊಲೇಟ್‌ ಫ್ಲೇವರ್‌ ಇರುವ ಈ ಪುಡಿಯನ್ನು ಹಾಲಿನೊಂದಿಗೆ ಬೆರೆಸಿದರೆ ಹೆಚ್ಚಿನ ಸಕ್ಕರೆ ಬಳಸುವ ಅಗತ್ಯವಿಲ್ಲ. ಆದರೆ ಕೆಲವು ದಿನಗಳಿಂದ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಪ್ರಸ್ತಾಪವಾಗಿತ್ತು.

ಅಧಿಕ ಸಕ್ಕರೆ ಪ್ರಮಾಣ

ಬೋರ್ನ್‌ವಿಟಾದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದಲ್ಲದೆ, ಕ್ಯಾನ್ಸರ್‌ಗೆ ಕಾರಣವಾಗುವ ಆರ್ಟಿಫಿಷಿಯಲ್‌ ಕಲರ್‌ ಹೊಂದಿದೆ. ಇದನ್ನು ಸೇವಿಸಿದರೆ ಮೆದುಳು ಹೆಚ್ಚು ಚುರುಕಾಗಿರುತ್ತದೆ, ಮಸಲ್‌ ಸ್ಟ್ರಾಂಗ್‌ ಆಗುತ್ತದೆ, ಮೂಳೆ ಗಟ್ಟಿಯಾಗುತ್ತದೆ, ಇಮ್ಯೂನ್‌ ಸಿಸ್ಟಮ್‌ ಹೆಚ್ಚಾಗುತ್ತದೆ ಎಂದು ಪ್ಯಾಕ್‌ ಮೇಲೆ ಬರೆಯಲಾಗಿದೆ. ಆದರೆ ನಾನು ಇದನ್ನು ಕಳೆದು 10 ವರ್ಷಗಳಿಂದ ಬಳಸುತ್ತಿದ್ದೇನೆ. ನನಗೆ ಇದ್ಯಾವುದೂ ಅನುಭವ ಆಗಿಲ್ಲ. ಇದನ್ನು ಹೆಲ್ತ್‌ ಡ್ರಿಂಕ್‌ ಎಂದು ಕರೆಯಲಾಗುತ್ತಿದೆ. ಆದರೆ ಈ ಪ್ಯಾಕ್‌ನಲ್ಲಿ 100 ಗ್ರಾಂ ನ್ಯೂಟ್ರಿಷಿಯನ್‌ ಕಂಟೆಂಟ್‌ನಲ್ಲಿ 50 ಗ್ರಾಂನಷ್ಟು ಸಕ್ಕರೆಯೇ ಇದೆ. ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೇವಂತ್ ಹಿಮತ್ಸಿಂಕಾ ಎಂಬ ಎಕ್ಸ್‌ ಯೂಸರ್‌ವೊಬ್ಬರು ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ವೈರಲ್‌ ವಿಡಿಯೋ

ಈ ವೀಡಿಯೊವನ್ನು ನಟ-ರಾಜಕಾರಣಿ ಪರೇಶ್ ರಾವಲ್, ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಕೀರ್ತಿ ಆಜಾದ್ ಹಾಗೂ ಇನ್ನಿತರರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್‌ ಆಗಿ ಸುಮಾರು 8 ತಿಂಗಳ ಬಳಿಕ, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ವ್ಯಕ್ತವಾದ ನಂತರ ಸರ್ಕಾರದ ಸೂಚನೆಯ ಮೇರೆಗೆ ಕ್ಯಾಡ್‌ಬರಿ ಬೋರ್ನ್‌ವಿಟಾ ಸಕ್ಕರೆ ಅಂಶವನ್ನು 14.4% ರಷ್ಟು ಕಡಿತಗೊಳಿಸಿದೆ.

ಹಿಮಾತ್‌ಸಿಂಕಾ ಅವರು ಯುಎಸ್‌ನಲ್ಲಿ ಕೆಲಸ ಬಿಟು ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ತಮ್ಮ ಚಾನಲ್ ಅನ್ನು ಪ್ರಾರಂಭಿಸಲು ಭಾರತಕ್ಕೆ ಮರಳಿದರು. ಸೋಷಿಯಲ್‌ ಮೀಡಿಯಾದಲ್ಲಿ ಅವರು 1.3 ಮಿಲಿಯನ್ ಇನ್‌ಸ್ಟಾಗ್ರಾಮ್‌ ಅನುಯಾಯಿಗಳನ್ನು ಹೊಂದಿದ್ದಾರೆ.

Whats_app_banner