2024ರ ಚಳಿಗಾಲದ ಫ್ಯಾಷನ್ ಟ್ರೆಂಡ್ ಹೀಗಿದೆ; ಟ್ಯೂನಿಕ್ ಟಾಪ್ ಸೇರಿ ಈ ಉಡುಪುಗಳೆಲ್ಲಾ ಈಗ ಔಟ್ ಆಫ್ ಫ್ಯಾಷನ್
ಋತುಮಾನಕ್ಕೆ ತಕ್ಕಂತೆ ಫ್ಯಾಷನ್ ಟ್ರೆಂಡ್‌ಗಳು ಬದಲಾಗುವುದು ಸಹಜ. ಈಗ ಚಳಿಗಾಲ ಆರಂಭವಾಗಿದೆ. 2024ರ ಚಳಿಗಾಲದಲ್ಲಿ ಕೆಂಪು ಬಣ್ಣ, ಓವರ್ ಸೈಜ್ಡ್ ಬ್ಲೇಜರ್ ಸೇರಿ ಕೆಲವು ಹೊಸ ವಿನ್ಯಾಸಗಳು ಮಾರುಕಟ್ಟೆಗೆ ಕಾಲಿಟ್ಟರೆ ಇನ್ನೂ ಕೆಲವು ಟ್ರೆಂಡ್‌ಗಳು ಹಳೆದಾಗಿವೆ. ಹಾಗಾದರೆ ವರ್ಷ ಯಾವುದು ಹೊಸ ಟ್ರೆಂಡ್, ಹಳೆಯದಾದದ ಉಡುಪುಗಳು ಯಾವುದು ಎಂಬುದನ್ನು ನೋಡೋಣ.
ಫ್ಯಾಷನ್ ಕ್ಷೇತ್ರ ಎನ್ನುವುದು ಸದಾ ಹರಿಯುತ್ತಿರುವ ನದಿಯಂತೆ. ಇಲ್ಲಿ ಒಮ್ಮೆ ಇದಿದ್ದು ಇಮ್ಮೊಮ್ಮೆ ಇರುವುದಿಲ್ಲ. ಕೆಲವೊಮ್ಮೆ ಹಳೆಯ ಫ್ಯಾಷನ್ ಹೊಸ ಟ್ರೆಂಡ್ ಆಗಿ ಮಾರುಕಟ್ಟೆಗೆ ಬರುತ್ತದೆ. ಇದೀಗ ಚಳಿಗಾಲವಾಗಿದ್ದು ಈ ವರ್ಷದ ಚಳಿಗಾಲದ ಫ್ಯಾಷನ್ ಟ್ರೆಂಡ್ ಹೇಗಿದೆ ಯಾವುದು ಹಳೆಯದಾಗಿದೆ ಎಂಬುದನ್ನು ನೀವಿಲ್ಲಿ ನೋಡಬಹುದು.
ಹೊಸ ಫ್ಯಾಷನ್ ಟ್ರೆಂಡ್‌ಗಳು ವಿಚಿತ್ರವಾಗಿದ್ರೂ ಜನರಿಗೆ ಅದೇ ಇಷ್ಟವಾಗುತ್ತದೆ. ಈ ಬಾರಿ ಚಳಿಗಾಲದ ಫ್ಯಾಷನ್ ಟ್ರೆಂಡ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಕೆಂಪು ಬಣ್ಣದ ಉಡುಪುಗಳು, ಓವರ್ ಸೈಜ್ಡ್ ಪುರುಷರ ಉಡುಪಿನ ರೀತಿಯ ಬ್ಲೇಜರ್‌ಗಳು ಹಾಗೂ ತುಪ್ಪುಳವಿರುವ ಟ್ರಿಮ್‌ಗಳು. ಈ ನಡುವೆ ಲಾಂಗ್ ಜಾಕೆಟ್, ಜೆಗ್ಗಿಂಗ್, ಮೋಟೊ ಜಾಕೆಟ್‌ಗಳು, ಟೂನಿಕ್ ಟಾಪ್‌ಗಳು ಔಟ್ ಆಫ್ ಫ್ಯಾಷನ್ ಆಗಿವೆ. ಟ್ಯೂನಿಕ್ ಟಾಪ್ ಜಾಗವನ್ನ ಕ್ರಾಪ್ ಟಾಪ್‌ಗಳು ಆವರಿಸಿಕೊಂಡಿವೆ. ಈ ವರ್ಷ ಟ್ರೆಂಡ್‌ನಲ್ಲಿರುವ ಚಳಿಗಾಲದ ಉಡುಪುಗಳು ಯಾವುವು ನೋಡಿ.
ಕ್ರಾಪ್ ಜಾಕೆಟ್
ಕ್ರಾಪ್ ಟಾಪ್‌ಗಳು ಫ್ಯಾಷನ್ ಮಾರುಕಟ್ಟೆಯನ್ನು ಆಳುತ್ತಿರುವ ಈ ಸಮಯದಲ್ಲಿ ಕ್ರಾಪ್ ಜಾಕೆಟ್‌ಗಳು ಕೂಡ ಫ್ಯಾಷನ್ ಪ್ರಿಯರಿಗೆ ಹೆಚ್ಚು ಇಷ್ಟವಾಗಿವೆ. ಈ ಚಳಿಗಾಲದಲ್ಲಿ ಕ್ರಾಪ್ ಜಾಕೆಟ್‌ಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಗಮನ ಸೆಳೆದಿರುವುದು ಸುಳ್ಳಲ್ಲ. ಕಾಟನ್, ಉಲ್ಲನ್ ಕ್ರಾಪ್ ಜಾಕೆಟ್‌ಗಳು ಚಳಿಯಿಂದ ರಕ್ಷಿಸುವುದು ಮಾತ್ರವಲ್ಲ ಟ್ರೆಂಡಿ ಆಗಿಯೂ ಕಾಣಿಸುತ್ತವೆ. ಇ–ಕಾಮರ್ಸ್ ತಾಣದಲ್ಲೂ ಬಗೆ ಬಗೆಯ ಕ್ರಾಪ್ ಜಾಕೆಟ್‌ಗಳನ್ನು ನೀವು ಕಾಣಬಹುದು.
ಕೆಂಪು ಬಣ್ಣವೇ ಈ ವರ್ಷದ ರಂಗು
ಈ ವರ್ಷ ಅಂದರೆ 2024ರ ಚಳಿಗಾಲದಲ್ಲಿ ಕೆಂಪು ಬಣ್ಣದ ಬಟ್ಟೆಗಳು ಹೆಚ್ಚು ಟ್ರೆಂಡ್ ಆಗುತ್ತಿವೆ. ಕೆಂಪು ಬಣ್ಣ ಎಂದರೆ ಬರ್ಗಂಡಿ, ಮರೂನ್ ಬಣ್ಣದ ಜಾಕೆಟ್, ಕೋಟ್, ಟೋಪಿಗಳು ಫ್ಯಾಷನ್ ಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತಿದೆ. ಡೀಪ್ ಮರೂನ್ ಬಣ್ಣದ ಉಡುಪುಗಳಿಗೆ ಡಿಮ್ಯಾಂಡ್ ಹೆಚ್ಚಾಗಿರುವುದು ಸುಳ್ಳಲ್ಲ.
ಪುರುಷರ ಬ್ಲೇಜರ್‌ಗಳು
ಸಾಮಾನ್ಯವಾಗಿ ಫ್ಯಾಷನ್ ಎಂದಾಕ್ಷಣ ಹೆಣ್ಣು ಮಕ್ಕಳಿಗೆ ಹೆಚ್ಚು ಆಯ್ಕೆ. ಗಂಡುಮಕ್ಕಳಿಗೆ ಫ್ಯಾಷನ್ ಕ್ಷೇತ್ರದಲ್ಲಿ ಆಯ್ಕೆ ಕಡಿಮೆ. ಹೀಗಿದ್ದಾಗ ಈ ವರ್ಷ ಚಳಿಗಾಲದಲ್ಲಿ ಗಂಡುಮಕ್ಕಳ ಸಡಿಲವಾಗಿರುವ ಅಥವಾ ಓವರ್ ಸೈಜ್ಡ್ ಬ್ಲೇಜರ್‌ಗಳು ಹೆಣ್ಣುಮಕ್ಕಳ ಪಾಲಾಗಿವೆ. ಅನನ್ಯಾ ಪಾಂಡೆಯಿಂದ ಹೇಲಿ ಬೈಬರ್‌ವರೆಗೆ, ಸೆಲೆಬ್ರಿಟಿಗಳು ಸಹ ಈ ಹೊಸ ಆವೃತ್ತಿಯ ಬ್ಲೇಜರ್, ಟೈ ಟ್ರೆಂಡ್‌ಗೆ ಮಾರು ಹೋಗಿದ್ದಾರೆ.
ತುಪ್ಪಳವಿರುವ ಉಡುಪುಗಳು
ಕಾಲ ಎಷ್ಟೇ ಸರಿಯಬಹುದು, ಫ್ಯಾಷನ್ ಟ್ರೆಂಡ್‌ಗಳು ಎಷ್ಟೇ ಬದಲಾಗಬಹುದು. ಆದರೆ ಚಳಿಗಾಲದಲ್ಲಿ ತುಪ್ಪಳವಿರುವ ಡ್ರೆಸ್ ಟ್ರೆಂಡ್ ಎಂದಿಗೂ ಬದಲಾಗುವುದಿಲ್ಲ. ಇದು ದೇಹವನ್ನು ಬೆಚ್ಚಗಿಡುವ ಜೊತೆಗೆ ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಆ ಕಾರಣಕ್ಕೆ ಬೇರೆ ಬೇರೆ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರುತ್ತಿರುತ್ತದೆ.
ಚಳಿಗಾಲದಲ್ಲಿ ಕಾಲು ಬೆಚ್ಚಗಿರುವ ಕಾರಣಕ್ಕೆ ಜೆಗ್ಗಿಂಗಗಳು ಕೆಲಸ ವರ್ಷಗಳಿಂದ ಹೆಚ್ಚು ಟ್ರೆಂಡ್‌ನಲ್ಲಿದ್ದವು. ಆದರೆ ಈ ವರ್ಷ ಜೆಗ್ಗಿಂಗ್ ಮೂಲೆ ಗುಂಪಾಗಿದೆ. ಅದರ ಜಾಗಕ್ಕೆ ಆಂಕಲ್ ಸ್ಕಿನ್ ಜೀನ್ಸ್ ಸೇರಿಕೊಂಡಿದೆ. ಜೊತೆಗೆ ದೋಗಲೇ ಜೀನ್ಸ್‌ಗಳು ಈಗಿನ ಟ್ರೆಂಡ್ ಆಗಿದೆ. ಆ್ಯಂಕಲ್ ಜೀನ್ಸ್ ಜೊತೆ ಶೂ ಧರಿಸುವುದು ಈಗಿನ ಟ್ರೆಂಡ್.