ಹೀರೋ ಮೋಟೊಕಾರ್ಪ್‌ನಿಂದ ಹೊಸ ತಲೆಮಾರಿನ ಡೆಸ್ಟಿನಿ ಸ್ಕೂಟರ್‌, ಟೀಸರ್‌ನಲ್ಲಿ ಕಾಣಿಸ್ತು ಹಲವು ಫೀಚರ್ಸ್‌, ಆಕ್ಟಿವಾಕ್ಕೆ ಸೆಡ್ಡು-automobile news 2024 hero destini 125 teased ahead of official launch next generation destini scooter pcp ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹೀರೋ ಮೋಟೊಕಾರ್ಪ್‌ನಿಂದ ಹೊಸ ತಲೆಮಾರಿನ ಡೆಸ್ಟಿನಿ ಸ್ಕೂಟರ್‌, ಟೀಸರ್‌ನಲ್ಲಿ ಕಾಣಿಸ್ತು ಹಲವು ಫೀಚರ್ಸ್‌, ಆಕ್ಟಿವಾಕ್ಕೆ ಸೆಡ್ಡು

ಹೀರೋ ಮೋಟೊಕಾರ್ಪ್‌ನಿಂದ ಹೊಸ ತಲೆಮಾರಿನ ಡೆಸ್ಟಿನಿ ಸ್ಕೂಟರ್‌, ಟೀಸರ್‌ನಲ್ಲಿ ಕಾಣಿಸ್ತು ಹಲವು ಫೀಚರ್ಸ್‌, ಆಕ್ಟಿವಾಕ್ಕೆ ಸೆಡ್ಡು

2024 Hero Destini 125: ಹೀರೋ ಮೋಟೋಕಾರ್ಪ್‌ನ ಸ್ಕೂಟರ್‌ ಬಯಸುವವರಿಗೆ ವಿಶೇಷವಾಗಿ ಡೆಸ್ಟಿನಿ ಸ್ಕೂಟರ್‌ ಬಯಸುವವರಿಗೆ ಶುಭಸುದ್ದಿಯಿಂದೆ. ಕಂಪನಿಯು ಸದ್ಯದಲ್ಲಿಯೇ 2024ರ ಡೆಸ್ಟಿನಿ ಸ್ಕೂಟರ್‌ ಪರಿಚಯಿಸಲಿದೆ. ಇದೀಗ ಈ ಸ್ಕೂಟರ್‌ನ ಟೀಸರ್‌ ರಿಲೀಸ್‌ ಆಗಿದೆ.

ಹೀರೋ ಮೋಟೋಕಾರ್ಪ್‌ ಡೆಸ್ಟಿನಿ ಸ್ಕೂಟರ್‌
ಹೀರೋ ಮೋಟೋಕಾರ್ಪ್‌ ಡೆಸ್ಟಿನಿ ಸ್ಕೂಟರ್‌

ಬೆಂಗಳೂರು: ಹೀರೋ ಮೋಟೋಕಾರ್ಪ್‌ ಈಗಾಗಲೇ ಡೆಸ್ಟಿನಿ ಹೆಸರಿನ 125 ಸಿಸಿಯ ಸ್ಕೂಟರ್‌ ಹೊಂದಿದೆ. ಇದೇ ಸ್ಕೂಟರ್‌ನ 2024ನೇ ಆವೃತ್ತಿಯು ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಕಂಪನಿಯು 2024 Hero Destini 125 ಸ್ಕೂಟರ್‌ನ ಟೀಸರ್‌ ಬಿಡುಗಡೆ ಮಾಡಿದೆ. ಈ ಸ್ಕೂಟರ್‌ನ ವಿನ್ಯಾಸದಲ್ಲಿ ಸಾಕಷ್ಟು ಹೊಸತನ ಇರಲಿದೆ. ಆದರೆ, ಟೆಕ್ನಿಕಲ್‌ ವಿಷಯಗಳಲ್ಲಿ ಏನೂ ಬದಲಾವಣೆಯಾಗುವ ಸೂಚನೆಯಿಲ್ಲ.

ಭಾರತೀಯ ಮಾರುಕಟ್ಟೆಗೆ ಮುಂದಿನ ತಲೆಮಾರಿನ ಡೆಸ್ಟಿನಿ 125 ಸ್ಕೂಟರ್ ಪರಿಚಯಿಸಲು ಹೀರೋ ಮೋಟೋಕಾರ್ಪ್‌ ಸಿದ್ಧವಾಗಿದೆ. ಈ ಸ್ಕೂಟರ್‌ನ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಟೀಸರ್‌ನಲ್ಲಿ ಸಾಕಷ್ಟು ಹೊಸ ಫೀಚರ್‌ಗಳು ಕಾಣಿಸುತ್ತವೆ. ಮುಂಭಾಗದ ಚಕ್ರಕ್ಕೆ ಡಿಸ್ಕ್‌ ಬ್ರೇಕ್‌ ಇರುವುದು ಕಾಣಿಸುತ್ತದೆ. ಹಿಂಭಾಗದಲ್ಲಿ ಡ್ರಮ್‌ ಬ್ರೇಕ್‌ ಇರುವುದು ನಮಗೆಲ್ಲ ಗೊತ್ತು. ಆದರೆ, ಫ್ರಂಟ್‌ ಡಿಸ್ಕ್‌ ಬ್ರೇಕ್‌ ಬಂದಿರುವುದು ಒಳ್ಳೆಯ ಬೆಳವಣಿಗೆ.

ಈ ಸ್ಕೂಟರ್‌ ಡಿಸ್ಕ್‌ ಮಾತ್ರವಲ್ಲದೆ ಕಾಂಬಿ ಬ್ರೇಕಿಂಗ್‌ ಆಯ್ಕೆಯಲ್ಲೂ ಇರಲಿದೆ. ಹೊಸ ಬಗೆಯ ಅಲಾಯ್‌ ವೀಲ್‌ಗಳು ಗಮನ ಸೆಳೆಯುತ್ತವೆ. ಜತೆಗೆ, ಹೊಸ ಸ್ಕೂಟರ್‌ನಲ್ಲಿ ಟ್ಯೂಬ್‌ಲೆಸ್‌ ಟೈರ್‌ ನಿರೀಕ್ಷಿಸಬಹುದು. ಹಿಂಭಾಗದಲ್ಲಿ ಹೊಸ ಎಲ್ಇಡಿ ಟೈಲ್ ಲ್ಯಾಂಪ್ ಇರಲಿದೆ. ಈ ಸ್ಕೂಟರ್‌ ವಿನ್ಯಾಸ ಆಕ್ಟಿವಾದಿಂದ ಪ್ರೇರಿತವಾದಂತೆ ಇದೆ.

ಮುಂಭಾಗದಲ್ಲಿ ಹ್ಯಾಲೋಜೆನ್‌ ಲೈಟ್‌ ಕಾಣಿಸುತ್ತದೆ. ಪ್ರೊಜೆಕ್ಟರ್ ಸೆಟಪ್‌ನೊಂದಿಗೆ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ ಮತ್ತು ಎಚ್‌ ಆಕಾರದ ಎಲ್‌ಇಡಿ ಡೇಟಂ ರನ್ನಿಂಗ್‌ ಲ್ಯಾಂಪ್‌ ಇದೆ.

ಇಷ್ಟು ಮಾತ್ರವಲ್ಲದೆ ಹಿಂಬದಿ ಸವಾರರಿಗೆ ಅನುಕೂಲವಾಗುವಂತೆ ಒರಗಲು ಬ್ಯಾಕ್‌ರೆಸ್ಟ್‌ ಕೂಡ ಇದೆ.

ಹೀರೋ ಮೋಟೋಕಾರ್ಪ್‌ನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 125 ಸಿಸಿಯ ಸಿಂಗಲ್‌ ಸಿಲಿಂಡರ್‌ನ ಏರ್‌ ಕೂಲ್ಡ್‌ ಎಂಜಿನ್‌ ಇರಲಿದೆ. ಇದು 7000 ಆವರ್ತನಕ್ಕೆ 9 ಬಿಎಚ್‌ಪಿ ಮತ್ತು 5,500 ಆವರ್ತನಕ್ಕೆ 10.4 ಎನ್‌ಎಂ ಟಾರ್ಕ್‌ ಒದಗಿಸಲಿದೆ. ಇದು ಸಿವಿಟಿ ಗಿಯರ್‌ ವ್ಯವಸ್ಥೆ ಹೊಂದಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.