Petrol Pump Cheat: ಪೆಟ್ರೋಲ್ ಬಂಕ್‌ನಲ್ಲಿ ಮೋಸ ಮಾಡ್ತಾರ? ಅನುಮಾನವಿದ್ದರೆ ಈ ಟ್ರಿಕ್ಸ್ ಅನುಸರಿಸಿ ವಂಚನೆಯಿಂದ ಪಾರಾಗಿ
Avoid petrol pump Cheating: ಪೆಂಟ್ರೋಲ್ ಬಂಕ್‌ಗಳಲ್ಲಿ ಕಾರು ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಮೋಸ ಹೋಗದಂತೆ ಎಚ್ಚರವಹಿಸಿ. ಝೀರೋ ಪರಿಶೀಲಿಸಿ, ಬೆಸ ಸಂಖ್ಯೆ ಹಣದಲ್ಲಿ ಪೆಟ್ರೋಲ್ ಖರೀದಿಸಿ. ಇದರೊಂದಿಗೆ ಇನ್ನಿತರ ಅಂಶಗಳನ್ನೂ ಗಮನದಲ್ಲಿಡಿ.
Petrol pump Cheating: ಕಾರು ಬೈಕ್ ಸೇರಿದಂತೆ ವಿವಿಧ ವಾಹನಗಳನ್ನು ಹೊಂದಿರುವವರು ಪೆಟ್ರೋಲ್ ಬಂಕ್‌ಗಳನ್ನು ಅನುಮಾನದಿಂದಲೇ ನೋಡುತ್ತಾರೆ. ಇವರು ನಾವು ನೀಡಿರುವ ಹಣಕ್ಕೆ ತಕ್ಕಂತೆ ಪೆಟ್ರೋಲ್/ ಡೀಸಲ್ ನೀಡುತ್ತಾರೆಯೇ. ಈ ಪೆಟ್ರೋಲ್ ಬಂಕ್‌ಗಳ ಮೀಟರ್‌ಗಳಲ್ಲಿ ಏನಾದರೂ ಮೋಸವಿದೆಯೇ? ಏನಾದರೂ ಸಾಫ್ಟ್‌ವೇರ್ ಅಳವಡಿಸಿ ಕಡಿಮೆ ಪೆಟ್ರೊಲ್ ನೀಡುತ್ತಾರೆಯೇ ಇತ್ಯಾದಿ ಗುಮಾನಿ ಎಲ್ಲರಿಗೂ ಇದ್ದೇ ಇದೆ. ಹೀಗಿದ್ದರೂ ಝೀರೋ ಇದೆ ನೋಡಿ ಎಂದು ಪೆಟ್ರೋಲ್ ಬಂಕ್‌ನ ಹುಡುಗ ಅಥವಾ ಹುಡುಗಿ ಹೇಳಿದಾಗ ಒಂದಿಷ್ಟು ಭರವಸೆ ಹುಟ್ಟುತ್ತದೆ. ಕೆಲವೊಂದು ದಿನ ಫುಲ್ ಟ್ಯಾಂಕ್ ಪೆಟ್ರೋಲ್ ಕೆಲವೇ ಸೆಕೆಂಡ್‌ನಲ್ಲಿ ಫುಲ್ ಆಗುತ್ತದೆ. ಇನ್ನು ಕೆಲವೊಮ್ಮೆ ಫುಲ್ ಟ್ಯಾಂಕ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಕೆಲವೊಂದು ನಗರಗಳಲ್ಲಿನ ಕೆಲವೊಂದು ಪೆಟ್ರೋಲ್ ಬಂಕ್‌ಗಳಿಗೆ ಹೋಗೋದು ಬೇಡ ಅನಿಸುತ್ತದೆ. ಇನ್ನು ಕೆಲವು ಪೆಟ್ರೋಲ್ ಬಂಕ್‌ಗಳು ವಿಶ್ವಾಸಾರ್ಹ ಎನಿಸುತ್ತವೆ.ಕೆಲವೊಂದು ಪೆಟ್ರೋಲ್ ಬಂಕ್‌ಗಳು ಕಲಬೆರಕೆ ಇಂಧನಗಳನ್ನೂ ಮಾರಾಟ ಮಾಡಬಹುದು. ಆದಷ್ಟು ವಿಶ್ವಾಸಾರ್ಹ ಬಂಕ್‌ಗಳ ಜತೆ ವ್ಯವಹಾರ ನಡೆಸಿ
ಭಾರತದಲ್ಲಿ ಹಲವು ಪೆಟ್ರೋಲ್ ಬಂಕ್‌ಗಳು ಗ್ರಾಹಕರಿಗೆ ಮೋಸ ಮಾಡಿವೆ. ಹೀಗಾಗಿ, ಪೆಟ್ರೋಲ್ ಬಂಕ್‌ಗಳ ಕುರಿತು ಜನರು ಅನುಮಾನದಿಂದಲೇ ನೋಡುತ್ತಾರೆ. ಇಂತಹ ಸಮಯದಲ್ಲಿ ವಾಹನ ಮಾಲೀಕರು ಮೋಸ ಹೋಗುವುದನ್ನು ತಪ್ಪಿಸಲು ಸಾಕಷ್ಟು ಎಚ್ಚರವಹಿಸುತ್ತಾರೆ. ಪೆಟ್ರೋಲ್ ಬಂಕ್‌ನಲ್ಲಿ ಮೋಸ ಹೋಗುವುದನ್ನು ತಪ್ಪಿಸಲು ನೀವು ಕೂಡ ಹಲವು ವಿಧಾನಗಳನ್ನು ಅನುಸರಿಸುತ್ತ ಇರಬಹುದು. ಸಾಮಾನ್ಯವಾಗಿ ಈ ಮುಂದಿನ ವಿಧಾನಗಳನ್ನು ಅನುಸರಿಸುವ ಮೂಲಕ ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ ಹೋಗುವುದನ್ನು ತಪ್ಪಿಸಬಹುದು.
ಝೀರೋ ನೋಡಿ
ಸಾಕಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ಮೀಟರ್‌ನಲ್ಲಿ ಸೊನ್ನೆ ಇರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಬಂಕ್ ಹುಡುಗರು ಹೇಳುತ್ತಾರೆ. ತಪ್ಪದೇ ಝೀರೋ ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಝೀರೋ ರಿಸೆಟ್ ಮಾಡದೆ ಇದ್ದರೆ ಪೆಟ್ರೋಲ್ ಹಾಕುವವರ ಬಳಿ ಶೂನ್ಯ ಸೆಟ್ ಮಾಡುವಂತೆ ತಿಳಿಸಿ. ನೂರು ಇನ್ನೂರು ಮುನ್ನೂರು ರೂಪಾಯಿ ಎಂದೆಲ್ಲ ಕಡಿಮೆ ಮೊತ್ತದ ಇಂಧನ ಹಾಕುವಾಗ ಕೆಲವೊಮ್ಮೆ ಝೀರೋ ಮಾಡದೆ ಇರಬಹುದು. ಝೀರೋ ಮಾಡಿಸಿಕೊಂಡೇ ಪೆಟ್ರೋಲ್ ಹಾಕಿಸಿಕೊಳ್ಳಿ.
ಬೆಸ ಸಂಖ್ಯೆ ಹಣದಲ್ಲಿ ಖರೀದಿ
ಈ ಟ್ರಿಕ್ಸ್ ಅನ್ನು ಸಾಕಷ್ಟು ಜನರು ಅನುಸರಿಸುತ್ತಾರೆ. 500, 1000 ಇತ್ಯಾದಿ ಸಮ ಸಂಖ್ಯೆಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಸಾಫ್ಟ್‌ವೇರ್‌ಗಳಲ್ಲಿ ಏನಾದರೂ ಮಾರ್ಪಾಡು ಮಾಡಿರುತ್ತಾರೆ ಎಂಬ ಗುಮಾನಿ ಸಾಕಷ್ಟು ಜನರಲ್ಲಿ ಇರುತ್ತದೆ. ಇದರ ಬದಲು 515 ರೂಪಾಯಿ, 575 ರೂಪಾಯಿ, 1355 ರೂಪಾಯಿ ಎಂದೆಲ್ಲ ಬೆಸ ಸಂಖ್ಯೆಗಳ ಮೊತ್ತದಲ್ಲಿ ಇಂಧನ ಖರೀದಿಸಿ. ಕೆಲವೊಂದು ರೌಂಡ್ ಫಿಗರ್ ಮೊತ್ತಕ್ಕೆ ಫ್ಯೂಯೆಲ್ ವಾಲ್ಯುಂ ಸೆಟ್ ಮಾಡಿಟ್ಟು ಮೋಸ ಮಾಡುವುದನ್ನು ಇದರಿಂದ ತಪ್ಪಿಸಬಹುದು.
ಇಂಧನದ ಗುಣಮಟ್ಟ ಪರಿಶೀಲನೆ
ಸಾಮಾನ್ಯವಾಗಿ ಪಂಪ್‌ನ ಅಟೆಡೆಂಟ್‌ಗಳು ವಾಹನ ಮಾಲೀಕರಲ್ಲಿ ಕೇಳದೆ ಅತ್ಯಧಿಕ ಅಕ್ಟೇನ್ ಪೆಟ್ರೋಲ್ ತುಂಬಿಸುತ್ತಾರೆ. ಸಾಮಾನ್ಯ ಕಾರುಗಳಿಗೆ ಉತ್ತಮ ಗುಣಮಟ್ಟದ ಹೆಸರಿನಲ್ಲಿ ಇಂತಹ ಇಂಧನದ ಅಗತ್ಯ ಇರುವುದಿಲ್ಲ. ಇದರಿಂದ ಏನೂ ಪ್ರಯೋಜನವೂ ಇಲ್ಲ. ಈ ರೀತಿ ಹೈ ಅಕ್ಟೆನ್ ಪೆಟ್ರೋಲ್‌ಗೆ ಸುಮ್ಮನೆ ಹೆಚ್ಚುವರಿ ಹಣ ನೀಡುವಿರಿ.
ಕ್ವಾಂಟಿಟಿ ಪರಿಶೀಲನೆ
ನಿಮಗೆ ಯಾವುದಾದರೂ ಪೆಟ್ರೋಲ್ ಬಂಕ್‌ನಲ್ಲಿ ಕಡಿಮೆ ಇಂಧನ ನೀಡುತ್ತಾರೆ ಎಂಬ ಅನುಮಾನ ಬಂದರೆ ಕ್ವಾಂಟಿಟಿ ಪರಿಶೀಲನೆ ಮಾಡಬಹುದು. ಇಂತಹ ಸಂದರ್ಭದಲ್ಲಿ ನಿರ್ದಿಷ್ಟ ಕಂಟೈನರ್‌ಗೆ ಇಂಧನವನ್ನು ತುಂಬಿಸಿ ತೋರಿಸಬೇಕಾಗುತ್ತದೆ. ಒಂದು ಲೀಟರ್ ಪೆಟ್ರೋಲ್ ಕೇಳಿ ಒಂದು ಲೀಟರ್ ಕ್ಯಾನ್‌ಗೆ ತುಂಬಿಸಿ ಪರಿಶೀಲಿಸಬಹುದು.
ಈ ಅಂಶಗಳನ್ನು ಗಮನಿಸಿ
- ನಿಮ್ಮ ಊರಿನಲ್ಲಿ, ನಗರದಲ್ಲಿ ನಂಬಿಕಸ್ಥ ಎನಿಸುವಂತಹ ಪೆಟ್ರೋಲ್ ಬಂಕ್ ಬಳಸಿ.
- ಇಂಧನ ತುಂಬಿಸುವಾಗ ಡಿಸ್‌ಪ್ಲೇ ಮೇಲೆ ಗಮನವಿರಲಿ. ನಿಮ್ಮ ಗಮನ ಬೇರೆಡೆ ಸೆಳೆಯಲು ಪಂಪ್‌ನವರು ಅನುಸರಿಸುವ ತಂತ್ರಗಳಿಗೆ ಬಲಿಯಾಗಬೇಡಿ.
- ಸಂಶಯವಿದ್ದರೆ ಕಂಟೈನರ್‌ಗೆ ತುಂಬಿಸಿ ಚೆಕ್ ಮಾಡಿಸಿ.
- ಪೆಟ್ರೋಲ್ ತುಂಬಿಸಿದ ಬಳಿಕ ಮುಗಿಯುವ ತನಕ ಮೈಲೇಜ್ ಚೆಕ್ ಮಾಡಿ. ಈ ಅಭ್ಯಾಸ ನಿಯಮಿತವಾಗಿರಲಿ. ಇದರಿಂದ ಪೆಟ್ರೋಲ್ ಬಂಕ್‌ಗಳು ಮೋಸ ಮಾಡುತ್ತವೆಯೇ ಎಂದು ನಿಗಾ ಇಡಲು ಸಾಧ್ಯವಾಗುತ್ತದೆ.
- ಪೆಟ್ರೋಲ್ ಬಂಕ್‌ಗಳ ಕುರಿತು ಆನ್‌ಲೈನ್‌ನಲ್ಲಿ ಇರುವ ಗ್ರಾಹಕರ ವಿಮರ್ಶೆಗಳನ್ನು ಪರಿಶೀಲಿಸಿ.