Ola Electric: ಎರಡು ಕೋಟಿ ಲೀಟರ್‌ ಪೆಟ್ರೋಲ್‌ ಉಳಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌, ಸಿಇಒ ನೀಡಿದ್ರು ಲೆಕ್ಕಾಚಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ola Electric: ಎರಡು ಕೋಟಿ ಲೀಟರ್‌ ಪೆಟ್ರೋಲ್‌ ಉಳಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌, ಸಿಇಒ ನೀಡಿದ್ರು ಲೆಕ್ಕಾಚಾರ

Ola Electric: ಎರಡು ಕೋಟಿ ಲೀಟರ್‌ ಪೆಟ್ರೋಲ್‌ ಉಳಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌, ಸಿಇಒ ನೀಡಿದ್ರು ಲೆಕ್ಕಾಚಾರ

Ola S1 electric scooters: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಒಟ್ಟಾರೆ ಪ್ರಯಾಣ 100 ಕೋಟಿ ಕಿ.ಮೀ.ಗೆ ತಲುಪಿದೆ. ಕೇವಲ 18 ತಿಂಗಳಲ್ಲಿ ಇಂತಹ ಸಾಧನೆ ಮಾಡಲಾಗಿದೆ.

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌
ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಎಲೆಕ್ಟ್ರಿಕ್‌ ವಾಹನಗಳಿಂದ ಪರಿಸರಕ್ಕೆ ಸಾಕಷ್ಟು ಉಪಯೋಗವಿದೆ. ಪಳೆಯುಳಿಕೆ ಇಂಧನ ಉರಿಯದೆ ಇರುವುದರಿಂದ ವಾತಾವರಣಕ್ಕೆ ಹೊರಸೂಸುವ ಇಂಗಾಲದ ಡೈಆಕ್ಸೈಡ್‌ ಕಡಿಮೆಯಾಗುತ್ತದೆ. ಎಲೆಕ್ಟ್ರಿಕ್‌ ವಾಹನಗಳಿಂದ ಸಾಕಷ್ಟು ಲಾಭವಾಗುತ್ತಿದ್ದು, ಪೆಟ್ರೋಲ್‌ ಬಳಕೆ ಕಡಿಮೆಯಾಗುತ್ತಿದೆ. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಬಂದ ನಂತರ ಪೆಟ್ರೋಲ್‌ ಎಷ್ಟು ಉಳಿತಾಯವಾಗಿದೆ ಎಂಬ ಲೆಕ್ಕವನ್ನು ಇದೀಗ ಓಲಾ ಸಿಇಒ ಭವಿಶ್‌ ಅಗರ್‌ವಾಲ್‌ ನೀಡಿದ್ದಾರೆ.

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಒಟ್ಟಾರೆ ಪ್ರಯಾಣ 100 ಕೋಟಿ ಕಿ.ಮೀ.ಗೆ ತಲುಪಿದೆ. ಕೇವಲ 18 ತಿಂಗಳಲ್ಲಿ ಇಂತಹ ಸಾಧನೆ ಮಾಡಲಾಗಿದೆ. ಅಂದರೆ, ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಮೊದಲ ಸ್ಕೂಟರ್‌ ಲಾಂಚ್‌ ಮಾಡಿದ ಬಳಿಕ ಇಷ್ಟೆಲ್ಲ ಸಾಧನೆಯಾಗಿದೆ. ಇದರಿಂದ ಎರಡು ಕೋಟಿ ಲೀಟರ್‌ನಷ್ಟು ಪೆಟ್ರೋಲ್‌ ಉಳಿತಾಯವಾಗಿದೆ ಎಂದು ಭವಿಶ್‌ ಹೇಳಿದ್ದಾರೆ.

ಈಗಾಗಲೇ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳು 2.5 ಲಕ್ಷಕ್ಕಿಂತಲೂ ಹೆಚ್ಚು ಮಾರಾಟವಾಗಿದೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಭವಿಶ್‌ ಅಗರ್‌ವಾಲ್‌ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಪ್ರಯಾಣವು ಅತ್ಯಧಿಕ ವೇಗದಲ್ಲಿ ಸಾಗಿದೆ. ಆಗಸ್ಟ್‌ 2021ಕ್ಕೆ ಮೊದಲ ಸ್ಕೂಟರ್‌ ಲಾಂಚ್‌ ಮಾಡಲಾಗಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ಆ ಸ್ಕೂಟರ್‌ ಡೆಲಿವರಿ ಮಾಡಲಾಗಿತ್ತು. ಇದೀಗ ನೂರು ಕೋಟಿ ಕಿ.ಮೀ. ಪ್ರಯಾಣದ ಸಾಧನೆ ಮಾಡಿದೆ" ಎಂದು ಅವರು ಹೇಳಿದ್ದಾರೆ.

ಕಂಪನಿಯು ಆರಂಭದಲ್ಲಿ ಎಸ್‌1 ಮತ್ತು ಎಸ್‌1 ಪ್ರೊ ಎಂಬ ಎರಡು ಆವೃತ್ತಿಗಳನ್ನು ಪರಿಚಯಿಸಿತ್ತು. ಈಗ ಎಸ್‌1 ಏರ್‌ ಎಂಬ ಮೂರನೇ ಆವೃತ್ತಿಯೂ ಆಗಮಿಸಿದೆ. ಎಸ್‌1 ಏರ್‌ ಆವೃತ್ತಿಯು ಓಲಾ ಸ್ಕೂಟರ್‌ಗಳಲ್ಲಿಯೇ ಕಡಿಮೆ ದರದ ಸ್ಕೂಟರ್‌ ಆಗಿದೆ. ಈಗಾಗಲೇ ಕಂಪನಿಯು ಏರ್‌ನ ಬುಕ್ಕಿಂಗ್‌ ಆರಂಭಿಸಿದೆ. ಜುಲೈ ತಿಂಗಳಿನಿಂದ ಸ್ಕೂಟರ್‌ನ ಡೆಲಿವರಿ ಆರಂಭವಾಗಲಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ಗಳು ದುಬಾರಿ ಎನ್ನುವವರಿಗೆ ಸೂಕ್ತವಾಗುವಂತೆ ಈ ಸ್ಕೂಟರ್‌ ಇದೆ. ಇದು ಓಲಾದ ಅಗ್ಗದ ಸ್ಕೂಟರ್‌ ಕೂಡ ಹೌದು. ಇದು ಮೂರು ಭಿನ್ನ ರೂಪಾಂತರಗಳಲ್ಲಿ ಲಭ್ಯ. ಓಲಾ ಎಸ್‌1 ಏರ್‌ ಆರಂಭಿಕ ದರ (ಬೇಸ್‌ ಆವೃತ್ತಿ) 84,999 ರೂಪಾಯಿ ಇದೆ. ಮಧ್ಯಮ ಮತ್ತು ಟಾಪ್‌ ಆವೃತ್ತಿಗಳ ದರ ಕ್ರಮವಾಗಿ 99,999 ರೂಪಾಯಿ ಮತ್ತು 1,09,000 ರೂಪಾಯಿ ಇದೆ. ಇವೆಲ್ಲ ಎಕ್ಸ್‌ ಶೋರೂಂ ದರ.

ನೂತನ Ola S1 ಏರ್ ಸ್ಕೂಟರ್‌ನಲ್ಲಿ ಓಲಾ ಕಂಪನಿಯ MoveOS 3 ಸಿಸ್ಟಮ್ ಇದೆ. ಇದು ಪೂರ್ತಿ ಚಾರ್ಜ್‌ಗೆ 76 ಕಿ.ಮೀ. ದೂರ ಕ್ರಮಿಸಲು ನೆರವಾಗುತ್ತದೆ. ಕೋರಲ್ ಗ್ಲಾಮ್, ಜೆಟ್ ಬ್ಲ್ಯಾಕ್, ಲಿಕ್ವಿಡ್ ಸಿಲ್ವರ್, ನಿಯೋ ಮಿಂಟ್ ಮತ್ತು ಪಿಂಗಾಣಿ ಬಿಳಿ ಬಣ್ಣದ ಆವೃತ್ತಿಗಳಲ್ಲಿ ನೂತನ Ola S1 ಏರ್ ಸ್ಕೂಟರ್‌ ಲಭ್ಯವಿದೆ.‌ ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.