Ola S1 Air Scooter: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರಿಯರಿಗೆ ಸಿಹಿಸುದ್ದಿ, ಇದೇ ಜುಲೈನಿಂದ ಓಲಾ ಎಸ್‌1 ಏರ್‌ ಡೆಲಿವರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ola S1 Air Scooter: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರಿಯರಿಗೆ ಸಿಹಿಸುದ್ದಿ, ಇದೇ ಜುಲೈನಿಂದ ಓಲಾ ಎಸ್‌1 ಏರ್‌ ಡೆಲಿವರಿ

Ola S1 Air Scooter: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರಿಯರಿಗೆ ಸಿಹಿಸುದ್ದಿ, ಇದೇ ಜುಲೈನಿಂದ ಓಲಾ ಎಸ್‌1 ಏರ್‌ ಡೆಲಿವರಿ

Ola S1 Air: ಕಳೆದ ವರ್ಷ ಓಲಾ ಎಲೆಕ್ಟ್ರಿಕ್‌ ಕಂಪನಿಯು ದೇಶದಲ್ಲಿ ಲಾಂಚ್‌ ಮಾಡಿರುವ Ola S1 Air Scooter ಅನ್ನು ಸಾಕಷ್ಟು ಜನರು ಬುಕ್ಕಿಂಗ್‌ ಮಾಡಿಕೊಂಡಿದ್ದರು. ಈ ರೀತಿ ಬುಕ್ಕಿಂಗ್‌ ಮಾಡಿ ಕಾಯ್ತಾ ಇರೋವರಲ್ಲಿ ನೀವೂ ಸೇರಿದ್ದರೆ ನಿಮಗೆ ಗುಡ್‌ ನ್ಯೂಸ್‌. ಇದೇ ಜುಲೈ ತಿಂಗಳಿನಿಂದ ಈ ಬಜೆಟ್‌ ಸ್ಕೂಟರ್‌ನ ವಿತರಣೆ ಆರಂಭವಾಗಲಿದೆ.

Ola S1 Air Scooter: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರಿಯರಿಗೆ ಸಿಹಿಸುದ್ದಿ, ಇದೇ ಜುಲೈನಿಂದ ಓಲಾ ಎಸ್‌1 ಏರ್‌ ಡೆಲಿವರಿ
Ola S1 Air Scooter: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರಿಯರಿಗೆ ಸಿಹಿಸುದ್ದಿ, ಇದೇ ಜುಲೈನಿಂದ ಓಲಾ ಎಸ್‌1 ಏರ್‌ ಡೆಲಿವರಿ (Ola Electric)

ಬೆಂಗಳೂರು: ದೇಶದಲ್ಲೀಗ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಹವಾ ಜೋರಾಗಿದೆ. ಮೊದಲು ಅಪರೂಪಕ್ಕೆ ಒಂದೊಂದು ಕಾಣಿಸುತ್ತಿದ್ದ ಇ-ಸ್ಕೂಟರ್‌ಗಳು ಈಗ ಪೆಟ್ರೋಲ್‌ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿವೆ. ಬೆಂಗಳೂರಿನಂತಹ ನಗರಗಳಲ್ಲಿ ಹಲವು ಇಸ್ಕೂಟರ್‌ ಕಂಪನಿಗಳ ಸ್ಕೂಟರ್‌ಗಳು ಕಾಣಿಸುತ್ತಿವೆ. ಇದೇ ಸಮಯದಲ್ಲಿ ಓಲಾ ಸ್ಕೂಟರ್‌ಗಳೂ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ. ಇದೀಗ ಓಲಾ ಎಸ್‌1 ಏರ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಕುರಿತು ಓಲಾ ಎಲೆಕ್ಟ್ರಿಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಶ್‌ ಅಗರ್ವಾಲ್‌ ಪ್ರಮುಖ ಅಪ್‌ಡೇಟ್‌ ನೀಡಿದ್ದಾರೆ.

"ಮೊದಲ ಎಸ್‌ 1 ಏರ್‌ ವಾಹನಗಳನ್ನು ಟೆಸ್ಟ್‌ ಡ್ರೈವ್‌ ಮಾಡಿದೆ. ಲವ್‌ ಉಂಟಾಗಿದೆ" ಎಂದು ಬರೆದಿದ್ದಾರೆ. ಇದೇ ಸಮಯದಲ್ಲಿ ಓಲಾ ಎಸ್ 1 ಏರ್‌ನ ವಿತರಣೆಗಳು ಈ ವರ್ಷದ ಜುಲೈನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಅಂದರೆ ಇನ್ನೊಂದು ತಿಂಗಳು ಕಳೆದ ಬಳಿಕ ಈ ಸ್ಕೂಟರ್‌ ಗ್ರಾಹಕರಿಗೆ ದೊರಕಲಿದೆ.

ಅಂದಹಾಗೆ, ಓಲಾ ಕಂಪನಿಯು ಈ ಎಸ್‌1 ಏರ್‌ ಸ್ಕೂಟರ್‌ ಅನ್ನು ಕಳೆದ ವರ್ಷವೇ ದೇಶದಲ್ಲಿ ಲಾಂಚ್‌ ಮಾಡಲಾಗಿದೆ. ಸಾಕಷ್ಟು ಜನರು ಇದನ್ನು ಬುಕ್ಕಿಂಗ್‌ ಮಾಡಿದ್ದಾರೆ. ಈ ರೀತಿ ಬುಕ್ಕಿಂಗ್‌ ಮಾಡಿದವರಿಗೆ ಇದೇ ಜುಲೈ ತಿಂಗಳಿನಲ್ಲಿ ಓಲಾ ಸ್ಕೂಟರ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಈಗಾಗಲೇ ಬುಕ್ಕಿಂಗ್‌ ಮಾಡಿ ಕಾಯ್ತ ಇರೋವರು ಇನ್ನೊಂದು ತಿಂಗಳು ಕಾದರೆ ಸಾಕು.

ಎಲೆಕ್ಟ್ರಿಕ್‌ ಸ್ಕೂಟರ್‌ಗಳು ದುಬಾರಿ ಎನ್ನುವವರಿಗೆ ಸೂಕ್ತವಾಗುವಂತೆ ಈ ಸ್ಕೂಟರ್‌ ಇದೆ. ಇದು ಓಲಾದ ಅಗ್ಗದ ಸ್ಕೂಟರ್‌ ಕೂಡ ಹೌದು. ಇದು ಮೂರು ಭಿನ್ನ ರೂಪಾಂತರಗಳಲ್ಲಿ ಲಭ್ಯ. ಓಲಾ ಎಸ್‌1 ಏರ್‌ ಆರಂಭಿಕ ದರ (ಬೇಸ್‌ ಆವೃತ್ತಿ) 84,999 ರೂಪಾಯಿ ಇದೆ. ಮಧ್ಯಮ ಮತ್ತು ಟಾಪ್‌ ಆವೃತ್ತಿಗಳ ದರ ಕ್ರಮವಾಗಿ 99,999 ರೂಪಾಯಿ ಮತ್ತು 1,09,000 ರೂಪಾಯಿ ಇದೆ. ಇವೆಲ್ಲ ಎಕ್ಸ್‌ ಶೋರೂಂ ದರ.

ನೂತನ Ola S1 ಏರ್ ಸ್ಕೂಟರ್‌ನಲ್ಲಿ ಓಲಾ ಕಂಪನಿಯ MoveOS 3 ಸಿಸದ್ಟಮ್‌ ಇದೆ. ಇದು ಪೂರ್ತಿ ಚಾರ್ಜ್‌ಗೆ 76 ಕಿ.ಮೀ. ದೂರ ಕ್ರಮಿಸಲು ನೆರವಾಗುತ್ತದೆ. ಕೋರಲ್ ಗ್ಲಾಮ್, ಜೆಟ್ ಬ್ಲ್ಯಾಕ್, ಲಿಕ್ವಿಡ್ ಸಿಲ್ವರ್, ನಿಯೋ ಮಿಂಟ್ ಮತ್ತು ಪಿಂಗಾಣಿ ಬಿಳಿ ಬಣ್ಣದ ಆವೃತ್ತಿಗಳಲ್ಲಿ ನೂತನ Ola S1 ಏರ್ ಸ್ಕೂಟರ್‌ ಲಭ್ಯವಿದೆ.

Ola S1 Air ಸ್ಕೂಟರ್‌ನಲ್ಲಿ 2.5KWh ಲಿಥಿಯಂ-ಐಯಾನ್ ಬ್ಯಾಟರಿ ಇದೆ. ಪೂರ್ತಿ ಚಾರ್ಜ್‌ ಆಗಲು ಸುಮಾರು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. Ola S1 Air ಸ್ಕೂಟರ್‌ 4.3 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಈ ಸ್ಕೂಟರ್‌ನಲ್ಲಿ ಗಂಟೆಗೆ ಗರೀಷ್ಠ 85 ಕಿಮೀ ವೇಗದಲ್ಲಿ ಸಾಗಬಹುದು. ಇಕೋ, ಸ್ಪೋರ್ಟ್‌ ಮತ್ತು ರಿವರ್ಸ್‌ ಎಂಬ ಮೂರು ಆಯ್ಕೆಗಳನ್ನು ಈ ಸ್ಕೂಟರ್‌ ಹೊಂದಿದೆ. ಇಕೋ ಮೋಡ್‌ನಲ್ಲಿ ಸುಮಾರು 100 ಕಿ.ಮೀ. ಪ್ರಯಾಣಿಸಬಹುದು ಎಂದು ಕಂಪನಿ ತಿಳಿಸಿದೆ.

ಓಲಾ ಎಸ್‌1 ಏರ್‌ ಸ್ಕೂಟರ್‌ 99 ಕೆ.ಜಿ. ತೂಕ ಹೊಂದಿದೆ. ಇದೇ ದರದ ಪೆಟ್ರೋಲ್‌ ಸ್ಕೂಟರ್‌ಗಳಿಗಿಂತ ಹಗುರವಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್‌ ಅಥವಾ ಡ್ರಮ್‌ ಬ್ರೇಕ್‌ಗಳ ಆಯ್ಕೆಗಳಲ್ಲಿ ಖರೀದಿಸಲು ಅವಕಾಶವಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.