ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

Gold Rate: ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗೆ ಆಭರಣ ಮಾಡಿಸಬೇಕು ಎಂದುಕೊಂಡವರು ಚಿನ್ನದ ಬೆಲೆ ನೋಡಿ ಗಾಬರಿ ಆಗಿದ್ದಾರೆ. ಇನ್ನು ಬಡವರಿಗಂತೂ ಚಿನ್ನ ಗಗನ ಕುಸುಮ ಎನಿಸುತ್ತಿದೆ. ಕೆಲವೇ ದಿನಗಳಲ್ಲಿ ಚಿನ್ನ 7 ಸಾವಿರ ಗಡಿ ಮುಟ್ಟಬಹುದು ಎಂಬ ಭಯ ಕಾಡುತ್ತಿದೆ.

ಭಾನುವಾರ ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ
ಭಾನುವಾರ ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಬೆಂಗಳೂರು: ಮೇ 10 ರಂದು ಅಕ್ಷಯ ತೃತೀಯ ಇದೆ. ಈ ದಿನ ಮನೆಗೆ ಚಿನ್ನ ತಂದರೆ ಶುಭ ನಂಬಿಕೆ ಇದೆ. ಒಂದು ಪುಟ್ಟ ಮೂಗುತ್ತಿಯಾದರೂ ಸರಿ ಆ ದಿನ ಮನೆಗೆ ಚಿನ್ನ ಕೊಂಡು ತರಬೇಕು ಅನ್ನೋದು ಎಲ್ಲರ ಕನಸು. ಆದರೆ ಚಿನ್ನದ ಬೆಲೆ ದಿನೇ ದಿನೆ ಏರುತ್ತಿದೆಯೇ ಹೊರತು ಕಡಿಮೆ ಆಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಶುಕ್ರವಾರ ಕಡಿಮೆ ಆಗಿದ್ದ ಚಿನ್ನದ ಬೆಲೆ ಶನಿವಾರ ಏರಿಕೆ ಆಗಿದೆ. ಇನ್ನಷ್ಟು ಹೆಚ್ಚಾಗಿದೆ. ಕರ್ನಾಟಕದ ಪ್ರಮುಖ ನಗರಗಳು, ಹೊರ ರಾಜ್ಯಗಳಲ್ಲಿ ಇಂದು 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟಿದೆ ನೋಡೋಣ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು ಭಾನುವಾರ 22 ಕ್ಯಾರೆಟ್‌ ಚಿನ್ನ 20 ರೂ ಏರಿಕೆ ಆಗಿದೆ. ಅದರಂತೆ ಇಂದು ಗ್ರಾಂಗೆ 6,685 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ 53,480 ರೂ. 10 ಗ್ರಾಂ ಚಿನ್ನದ ಬೆಲೆ 66,850 ರೂ. ಹಾಗೂ 100 ಗ್ರಾಂ ಚಿನ್ನದ ಬೆಲೆ 6,68,500 ರೂ. ನಿಗದಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನದ ಬೆಲೆ ಒಂದು ಗ್ರಾಂ 7,293 ರೂ. 8 ಗ್ರಾಂಗೆ 58,344 ರೂ. 10 ಗ್ರಾಂ 72,930 ರೂ. 100 ಗ್ರಾಂ ಚಿನ್ನದ ಬೆಲೆ 7,29,300 ರೂ ಆಗಿದೆ.

ಕರ್ನಾಟಕದಲ್ಲಿ ಚಿನ್ನದ ದರ (10 ಗ್ರಾಂ)

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,850 ರೂ. ಹಾಗೂ 24 ಕ್ಯಾರೆಟ್‌ ಚಿನ್ನಕ್ಕೆ 72,930‌ ರೂ. ದರ ಏರಿಕೆ ಆಗಿದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ, ಮಂಡ್ಯ, ಶಿವಮೊಗ್ಗ, ಹಾವೇರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅದೇ ಬೆಲೆ ಇರಲಿದೆ. ಒಂದೊಂದು ಅಂಗಡಿಗಳಲ್ಲಿ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿದೆ.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಇಂದು ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,700 ರೂ. 24 ಕ್ಯಾರೆಟ್‌ ಚಿನ್ನದ ಬೆಲೆ 72,760 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,850 ರೂ. 24 ಕ್ಯಾರೆಟ್‌ ಚಿನ್ನದ ಬೆಲೆ 72,930 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,000 ರೂ. 24 ಕ್ಯಾರೆಟ್‌ ಚಿನ್ನದ ಬೆಲೆ 73,080 ರೂ. ಇದೆ. ಇಂದು ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,850 ರೂ. 24 ಕ್ಯಾರೆಟ್‌ ಚಿನ್ನದ ಬೆಲೆ 72,930 ರೂ. ಇದೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,850 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 72,930 ರೂ. ಇದೆ.

ಇಂದಿನ ಬೆಳ್ಳಿಯ ದರ

ವಾರಾಂತ್ಯದಲ್ಲಿ ಚಿನ್ನ ಮಾತ್ರವಲ್ಲ ಬೆಳ್ಳಿಯೂ ಏರಿಕೆ ಆಗಿದೆ. 1 ಗ್ರಾಂಗೆ 40 ಪೈಸೆ ಹೆಚ್ಚಾಗಿದೆ. ನಿನ್ನೆ 83.60 ರೂ ಇದ್ದ ಬೆಳ್ಳಿ ಇಂದು 84 ರೂ. ಆಗಿದೆ. 8 ಗ್ರಾಂಗೆ 672 ರೂ. 10 ಗ್ರಾಂಗೆ 840 ರೂ, 100 ಗ್ರಾಂಗೆ 8,400 ರೂ. ಹಾಗೂ 1 ಕಿಲೋಗೆ 84,000 ಬೆಲೆ ಹೆಚ್ಚಾಗಿದೆ.

IPL_Entry_Point