ಕನ್ನಡ ಸುದ್ದಿ  /  Nation And-world  /  Business News Gold Silver Rate Today March 16th 2024 India Gold Rate Bengaluru Mangaluru Mysure Davanagere Rst

Gold Rate Today: ವಾರಾಂತ್ಯದಲ್ಲಿ ತಟಸ್ಥವಾದ ಹಳದಿ ಲೋಹದ ಬೆಲೆ; ಮತ್ತೆ ಏರಿಕೆಯಾಯ್ತು ಬೆಳ್ಳಿ ದರ

ಚಿನ್ನಾಭರಣ ಪ್ರಿಯರು ಇಂದು (ಮಾರ್ಚ್‌ 16) ಕೊಂಚ ನಿಟ್ಟುಸಿರು ಬಿಡಬಹುದು. ಏರುಗತಿಯತ್ತ ಸಾಗುತ್ತಿದ್ದ ಚಿನ್ನ ಬೆಲೆ ಏರಿಕೆಗೆ ಕೊಂಚ ಬ್ರೇಕ್‌ ಹಾಕಿದಂತೆ ಹಳದಿ ಲೋಹದ ಬೆಲೆ ಸ್ಥಿರವಾಗಿದೆ. ಆದರೆ ಶನಿವಾರ ಬೆಳ್ಳಿ ಬೆಲೆ ಏರಿಕೆಯಾಗಿದೆ. ದೇಶಾದ್ಯಂತ ಇಂದಿನ ಬೆಲೆ ಗಮನಿಸಿ.

ವಾರಾಂತ್ಯದಲ್ಲಿ ತಟಸ್ಥವಾದ ಹಳದಿ ಲೋಹದ ಬೆಲೆ; ಮತ್ತೆ ಏರಿಕೆಯಾಯ್ತು ಬೆಳ್ಳಿ ದರ
ವಾರಾಂತ್ಯದಲ್ಲಿ ತಟಸ್ಥವಾದ ಹಳದಿ ಲೋಹದ ಬೆಲೆ; ಮತ್ತೆ ಏರಿಕೆಯಾಯ್ತು ಬೆಳ್ಳಿ ದರ

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದ್ದು, ಚಿನ್ನ ಖರೀದಿ ಮಾಡುವ ಯೋಚನೆ ಇದ್ದರೆ ಆಭರಣ ಪ್ರಿಯರು ಇಂದು ಚಿನ್ನದ ಮಳಿಗೆಗೆ ಭೇಟಿ ನೀಡಬಹುದು. ಯಾಕೆಂದರೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಸಾಕಷ್ಟು ಏರಿಕೆಯಾಗಿದೆ. ನಾಳೆ ಏರಿಕೆಯಾಗುವುದೋ, ಇಳಿಕೆಯಾಗುವುದೋ ಎಂಬುದನ್ನು ಊಹಿಸುವುದೂ ಕಷ್ಟವಾಗಿದೆ. ನೀವು ಆಭರಣ ಖರೀದಿ ಹೋಗುವ ಮುನ್ನ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,060 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 48,480 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 60,600 ರೂ ಆಗಿದೆ. ನಿನ್ನೆ 60,350 ರೂ. ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,06,000 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,611 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,888 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 66,110 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 6,61,100 ರೂ. ಇದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 60,600 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,110 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,350 ರೂ. 24 ಕ್ಯಾರೆಟ್‌ಗೆ 67,930 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,600 ರೂ. 24 ಕ್ಯಾರೆಟ್‌ಗೆ 66,110 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,750 ರೂ. 24 ಕ್ಯಾರೆಟ್‌ಗೆ 66,260 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,600 ರೂ. 24 ಕ್ಯಾರೆಟ್‌ಗೆ 66,110 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,600 ರೂ. ಇದ್ದರೆ, 24 ಕ್ಯಾರೆಟ್‌ಗೆ 66,110 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,600 ರೂ. 24 ಕ್ಯಾರೆಟ್‌ಗೆ 66,110 ರೂ. ಆಗಿದೆ.

ಬೆಳ್ಳಿ ದರ

ಬೆಳ್ಳಿ ದರ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 76 ರೂ. ಇದೆ. 8 ಗ್ರಾಂಗೆ 608 ರೂ ಇದ್ದರೆ, 10 ಗ್ರಾಂಗೆ 760 ರೂ. ಇದೆ. 100 ಗ್ರಾಂಗೆ 7,600 ರೂ. ಹಾಗೂ 1 ಕಿಲೋಗೆ 76,000 ರೂ. ಬೆಲೆ ನಿಗದಿ ಆಗಿದೆ.