Gold Rate Today: ಮಂಗಳವಾರ ಸ್ಥಿರವಾಗಿದೆ ಚಿನ್ನ, ಬೆಳ್ಳಿ ಬೆಲೆ; ದೇಶದ ವಿವಿಧೆಡೆ ಆಭರಣ ದರ ಎಷ್ಟಿದೆ ಗಮನಿಸಿ
ಕಳೆದೆರಡು ದಿನಗಳಿಂದ ಸ್ಥಿರವಾಗಿದೆ ಚಿನ್ನದ ದರ, ಇಂದು ಬೆಳ್ಳಿ ಬೆಲೆಯೂ ತಟಸ್ಥವಾಗಿದೆ. ಮಾರ್ಚ್ ತಿಂಗಳ ಆರಂಭದಿಂದ ಚಿನ್ನಾಭರಣ ದರ ಬಹುತೇಕ ಸ್ಥಿರವಾಗಿಯೇ ಇದೆ. ನಿಮಗೆ ಆಭರಣ ಖರೀದಿಸುವ ಯೋಚನೆ ಇದ್ದರೆ, ಇಂದು (ಮಾರ್ಚ್ 5) ದೇಶದ ವಿವಿಧ ಭಾಗಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.
ಬೆಂಗಳೂರು: ಚಿನ್ನದ ಬೆಲೆ ಕಡಿಮೆಯಾದರೆ ಅಥವಾ ಸ್ಥಿರವಾಗಿದ್ದರೆ ಆಭರಣ ಪ್ರಿಯರಿಗೆ ಸಂತಸವಾಗುವುದು ಸಹಜ. ಇತ್ತೀಚಿನ ದಿನಗಳಲ್ಲಿ ಬಹುತೇಕ ದಿನಗಳು ಚಿನ್ನದ ಬೆಲೆ ಕಡಿಮೆಯಾದರೆ ಇನ್ನೂ ಕೆಲವು ದಿನ ಸ್ಥಿರವಾಗಿ ಇರುತ್ತದೆ. ಮಾರ್ಚ್ ತಿಂಗಳು ಆರಂಭವಾಗಿ 5 ದಿನಗಳಲ್ಲಿ ಬಹುತೇಕ ದಿನ ಸ್ಥಿರವಾಗಿಯೇ ಇದೆ. ನಿಮ್ಮ ಮನೆಯಲ್ಲಿ ಮದುವೆಯಂತಹ ಶುಭಕಾರ್ಯಗಳಿದ್ದು, ಚಿನ್ನ-ಬೆಳ್ಳಿ ಖರೀದಿ ಮಾಡುವ ಯೋಚನೆ ಇದ್ದರೆ ಇಂದಿನ (ಮಾ.5) ದರ ಗಮನಿಸಿ. ಕಳೆದ ಎರಡು ದಿನಗಳಿಂದ ಚಿನ್ನದ ದರ ತಟಸ್ಥವಾಗಿದೆ. ಬೆಳ್ಳಿ ಬೆಲೆಯಲ್ಲೂ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ. ನಿಮ್ಮ ನಗರದಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ವಿವರ ಇಲ್ಲಿದೆ ನೋಡಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,875 ರೂ ಇದೆ. ಮೊನ್ನೆ ಇದರ ಬೆಲೆ 5,790 ಇತ್ತು. ಇಂದು 8 ಗ್ರಾಂ ಚಿನ್ನದ ಬೆಲೆ 47,000 ರೂ ಇದೆ. ಮೊನ್ನೆ ಇದರ ಬೆಲೆ 46,320 ರೂ ಇತ್ತು. ಹಾಗೇ ಇಂದು 10 ಗ್ರಾಂಗೆ 58,750 ರೂಪಾಯಿ ಹಾಗೂ 100 ಗ್ರಾಂ ಬಂಗಾರಕ್ಕೆ 5,87,500 ರೂ. ನಿಗದಿಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,409 ರೂ. ಇದೆ. ಮೊನ್ನೆ ಇದರ ಬೆಲೆ 6,316 ರೂಪಾಯಿ ಇತ್ತು. ಇಂದು 8 ಗ್ರಾಂ ಚಿನ್ನದ ಬೆಲೆ 51,272 ರೂ, 10 ಗ್ರಾಂ ಚಿನ್ನಕ್ಕೆ 64,090 ರೂ, 100 ಗ್ರಾಂಗೆ 6,40,900 ರೂ ಇದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (10 ಗ್ರಾಂ ಗೆ)
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 5,875 ರೂ, 10 ಗ್ರಾಂಗೆ ಚಿನ್ನಕ್ಕೆ 58,750 ರೂ ನಿಗದಿ ಆಗಿದೆ. ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 6,409 ರೂ. ಹಾಗೂ 10 ಗ್ರಾಂಗೆ 64,090 ರೂ. ಇದೆ. ಬೆಂಗಳೂರು ಹೊರತುಪಡಿಸಿ ಮೈಸೂರು, ದಾವಣಗೆರೆ, ಬಳ್ಳಾರಿ, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಬೆಳ್ಳಿ ದರವೆಷ್ಟು?
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದು ಒಂದು ಗ್ರಾಂ ಬೆಳ್ಳಿ ದರ 72.75 ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರ 72,750 ರೂ. ಇದೆ. ಒಂದು ಗ್ರಾಂ ಬೆಳ್ಳಿ ಮೇಲೆ ಇಂದು 65 ಪೈಸೆ ಹೆಚ್ಚಾಗಿದೆ.
ಚಿನ್ನ ಹಾಗೂ ಬೆಳ್ಳಿ ದರದಲ್ಲಿ ವ್ಯತ್ಯಾಸವಾಗಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರಣಗಳಿವೆ. ತೈಲ ಬೆಲೆ ಏರಿಕೆ, ಯುದ್ಧಗಳು, ಷೇರುಪೇಟೆ ಈ ಎಲ್ಲವೂ ಹಳದಿ ಲೋಹದ ಬೆಲೆ ವ್ಯತ್ಯಾಸವಾಗಲು ಕಾರಣವಾಗುತ್ತವೆ. ಅದೇನೇ ಇದ್ದರೂ ನೀವು ಚಿನ್ನ ಖರೀದಿ ಮಾಡುವ ಮುನ್ನ ಬೆಲೆ ಗಮನಿಸಿಕೊಳ್ಳುವುದು ಉತ್ತಮ.
(This copy first appeared in Hindustan Times Kannada website. To read more like this please logon to kannada.hindustantimes.com)