Tata Tech IPO: ಟಾಟಾ ಟೆಕ್ನಾಲಜೀಸ್‌ ಐಪಿಒ ನಿಮಗೆ ವಿತರಣೆಯಾಯ್ತ, ಇಲ್ಲಿದೆ ಹಂಚಿಕೆ- ಜಿಎಂಪಿ ಮಾಹಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tata Tech Ipo: ಟಾಟಾ ಟೆಕ್ನಾಲಜೀಸ್‌ ಐಪಿಒ ನಿಮಗೆ ವಿತರಣೆಯಾಯ್ತ, ಇಲ್ಲಿದೆ ಹಂಚಿಕೆ- ಜಿಎಂಪಿ ಮಾಹಿತಿ

Tata Tech IPO: ಟಾಟಾ ಟೆಕ್ನಾಲಜೀಸ್‌ ಐಪಿಒ ನಿಮಗೆ ವಿತರಣೆಯಾಯ್ತ, ಇಲ್ಲಿದೆ ಹಂಚಿಕೆ- ಜಿಎಂಪಿ ಮಾಹಿತಿ

ಟಾಟಾ ಟೆಕ್ನಾಲಜಿಯ ಆರಂಭಿಕ ಷೇರು ವಿತರಣೆ (IPO) ಇಂದು ಕೊನೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹಲವರು ಐಪಿಒಗೆ ಬಿಡ್ಡಿಂಗ್‌ ಮಾಡಿದ್ದು, ವಿತರಣೆಯ ಫಲಿತಾಂಶವನ್ನು ತಿಳಿಯಲು ಇನ್‌ಟೈಮ್‌ ಇಂಡಿಯಾದ ವೆಬ್‌ಸೈಟ್‌ ಹಾಗೂ ಬಿಎಸ್‌ಇಯಲ್ಲಿ ಪರಿಶೀಲನೆ ಮಾಡಬಹುದು.

ಟಾಟಾ ಟೆಕ್ನಾಲಜೀಸ್‌ ಐಪಿಒ
ಟಾಟಾ ಟೆಕ್ನಾಲಜೀಸ್‌ ಐಪಿಒ

ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ನ ಆರಂಭಿಕ ಷೇರು ವಿತರಣೆ (ಐಪಿಒ) ಭಾರತದ ಷೇರು ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಜಿಎಂಪಿ ಮಾರುಕಟ್ಟೆಯಲ್ಲಿ ಟಾಟಾ ಟೆಕ್‌ ಐಪಿಒಗಳಲ್ಲಿ ಈಗಾಗಲೇ ಭಾರಿ ಲಾಭಗಳಿಸಿದೆ. ನವೆಂಬರ್‌ 22 ರಿಂದ ಟಾಟಾ ಐಪಿಒಗೆ ಬಿಡ್ಡಿಂಗ್‌ ಅವಕಾಶ ಆರಂಭವಾಗಿದ್ದು, ಇಂದು ಐಪಿಒ ಹಂಚಿಕೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಟಾಟಾ ಗ್ರೂಪ್‌ ಕಂಪನಿಯು ಟಾಟಾ ಟೆಕ್ನಾಲಜೀಸ್‌ನ ಐಪಿಒ ದರವನ್ನು ಈಗಾಗಲೇ ನಿರ್ಧರಿಸಿತ್ತು. 3,042.51 ಕೋಟಿ ಐಪಿಒ ನವೆಂಬರ್‌ 22 ರಿಂದ 24ರ ನಡುವೆ ಪ್ರತಿ ಷೇರಿಗೆ 475 ರಿಂದ 500 ರೂ ನಿಗದಿ ಮಾಡಿದೆ.

19 ವರ್ಷಗಳಲ್ಲಿ ಟಾಟಾ ಗ್ರೂಪ್‌ನ ಮೊದಲ ಐಪಿಒ ಇದಾಗಿದೆ. ನವೆಂಬರ್‌ 22 ರಿಂದ 24ರ ಅವಧಿಯಲ್ಲಿ 69.43 ಬಾರಿ ಚಂದಾದಾರಿಕೆ ಪಡೆದಿದೆ. 4.5 ಕೋಟಿ ಷೇರುಗಳ ಆಫರ್‌ನಲ್ಲಿ, ಇದರ ಬದಲಿಗೆ 312.64 ಕೋಟಿ ಈಕ್ವಿಟಿ ಷೇರುಗಳಿಗೆ ಬಿಡ್‌ಗಳನ್ನು ಸ್ವೀಕರಿಸಿದೆ. ಕ್ವಾಲಿಫೈಡ್‌ ಇನ್‌ಸ್ಟಿಟ್ಯೂಷನಲ್‌ ಬಿಡರ್‌ಗಳು ಹೆಚ್ಚುವರಿಯಾಗಿ 203.41 ಬಾರಿ ಬುಕ್‌ ಮಾಡಿದ್ದಾರೆ.

ಏತನ್ಮಧ್ಯೆ, ಮೂರು ದಿನಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಾಂಸ್ಥಿಕವಲ್ಲದ ಹೂಡಿಕೆದಾರರ (NII) ವರ್ಗವು 62.11 ಪಟ್ಟು ಮತ್ತು ಚಿಲ್ಲರೆ ಹೂಡಿಕೆದಾರರ ಕೋಟಾ 16.5 ಬಾರಿ ಚಂದಾದಾರಿಕೆಯಾಗಿದೆ. ಅಲ್ಲದೆ, ಉದ್ಯೋಗಿಗಳ ಭಾಗವನ್ನು 3.7 ಬಾರಿ ಬಿಡ್ ಮಾಡಲಾಗಿದೆ ಮತ್ತು ಇತರ ವರ್ಗವು 29.20 ಬಾರಿ ಚಂದಾದಾರಿಕೆಯಾಗಿದೆ.

ಟಾಟಾ ಟೆಕ್ನಾಲಜಿ ಷೇರುಗಳು ನವೆಂಬರ್ 30 ರ ಗುರುವಾರದಂದು ಷೇರುಗಳಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ.

ಐಪಿಓ ಹಂಚಿಕೆ ಸ್ಥಿತಿ ತಿಳಿಯುವ ವಿಧಾನ

1. BSE ವೆಬ್‌ಸೈಟ್‌ಗೆ ಹೋಗಿ.

2. 'ಇಕ್ವಿಟಿ' ಆಯ್ಕೆ ಮಾಡಿ ಮತ್ತು ನಂತರ ಡ್ರಾಪ್‌ಡೌನ್‌ನಿಂದ, ಇಶ್ಯೂ ಯಾವುದು ಎಂಬುದನ್ನು ಆಯ್ಕೆಮಾಡಿ.

3. ನಿಮ್ಮ ಅರ್ಜಿ ಸಂಖ್ಯೆ ಮತ್ತು PAN ನಂಬರ್‌ ಅನ್ನು ನಮೂದಿಸಿ.

4. ʼಸರ್ಚ್‌ʼ ಬಟನ್ ಮೇಲೆ ಕ್ಲಿಕ್ ಮಾಡಿ.

ಇದೇ ರೀತಿ ರಿಜಿಸ್ಟ್ರಾರ್‌ ವೆಬ್‌ಸೈಟ್‌ನಲ್ಲೂ ಪರಿಶೀಲಿಸಬಹುದು.

1. ಲಿಂಕ್ ಇನ್‌ಟೈಮ್‌ (Link Intime) ವೆಬ್‌ಸೈಟ್‌ಗೆ ಹೋಗಿ.

2. 'ಕಂಪನಿ ಸೆಕ್ಷನ್‌' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ IPO ಹೆಸರನ್ನು ಆಯ್ಕೆ ಮಾಡಿ.

3. ಈಗ, ನಿಮ್ಮ PAN, ಅಪ್ಲಿಕೇಶನ್ ಸಂಖ್ಯೆ, DP / ಕ್ಲೈಂಟ್ ID, ಅಥವಾ ಖಾತೆ ಸಂಖ್ಯೆ / IFSC ಅನ್ನು ನಮೂದಿಸಿ.

4. 'ಸರ್ಚ್‌' ಬಟನ್‌ ಕ್ಲಿಕ್ ಮಾಡಿ.

ವಿವರಗಳನ್ನು ಸರಿಯಾಗಿ ನಮೂದಿಸಿದರೆ ಮಾತ್ರ ಹಂಚಿಕೆಯ ಸ್ಥಿತಿ ತಿಳಿದುಕೊಳ್ಳಬಹುದು. ನವೆಂಬರ್ 29 ರೊಳಗೆ ಈಕ್ವಿಟಿ ಷೇರುಗಳು ಯಶಸ್ವಿ ಹೂಡಿಕೆದಾರರ ಡಿಮ್ಯಾಟ್ ಖಾತೆಗಳಿಗೆ ಜಮಾ ಆಗುವ ನಿರೀಕ್ಷೆಯಿದೆ.

ಇದನ್ನೂ ಓದಿ

IPO Alert: ಟಾಟಾ ಟೆಕ್ನಾಲಜೀಸ್‌ ಐಪಿಒಗೆ ಬಿಡ್‌ ಮಾಡಲು ರೆಡಿಯಾಗಿ, ಜಿಎಂಪಿ ದರದಲ್ಲಿ ನೆಗೆತ, ಎರಡು ದಶಕದ ಬಳಿಕ ಟಾಟಾ ಗ್ರೂಪ್‌ ಐಪಿಒ ಆಗಮನ

Tata Technologies IPO GMP: ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ನ ಆರಂಭಿಕ ಷೇರು ವಿತರಣೆ (ಐಪಿಒ) ಭಾರತದ ಷೇರುಪೇಟೆಗೆ ಇದೇ ನವೆಂಬರ್‌ 22ರಂದು ಆಗಮಿಸಲಿದೆ. ನವೆಂಬರ್‌ 24ರವರೆಗೆ ಐಪಿಒಗೆ ಬಿಡ್‌ ಮಾಡಲು ಅವಕಾಶವಿರಲಿದೆ. ಜಿಎಂಪಿ ಮಾರುಕಟ್ಟೆಯಲ್ಲಿ ಈಗಾಗಲೇ ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ ಐಪಿಒ ದರಗಳಲ್ಲಿ ಭಾರೀ ನೆಗೆತ ಕಂಡುಬಂದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.