ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Epfo New Rule: ನೀವು ಕೆಲಸ ಬದಲಾಯಿಸಿದ್ರೆ ಆಟೋಮೆಟಿಕ್‌ ಆಗಿ ವರ್ಗಾವಣೆ ಆಗುತ್ತೆ ಪಿಎಫ್‌ ಹಣ; ಇಪಿಎಫ್‌ಒ ಹೊಸ ನಿಯಮ ಹೀಗಿದೆ

EPFO New Rule: ನೀವು ಕೆಲಸ ಬದಲಾಯಿಸಿದ್ರೆ ಆಟೋಮೆಟಿಕ್‌ ಆಗಿ ವರ್ಗಾವಣೆ ಆಗುತ್ತೆ ಪಿಎಫ್‌ ಹಣ; ಇಪಿಎಫ್‌ಒ ಹೊಸ ನಿಯಮ ಹೀಗಿದೆ

ಪ್ರತಿ ಉದ್ಯೋಗಿಗಳಿಗೂ ಪಿಎಫ್‌ ಖಾತೆ ಅತ್ಯಂತ ಅವಶ್ಯಕವಾಗಿದೆ. ಹಾಗಾಗಿ ಉದ್ಯೋಗಿಯು ಯಾವುದೇ ಹೊಸ ಕೆಲಸಕ್ಕೆ ಸೇರಿದರೂ ಪಿಎಫ್‌ ಖಾತೆಯನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಇದಕ್ಕಿಂತ ಮೊದಲು ಕೆಲಸ ಬದಲಾಯಿಸಿದಾಗ ಪಿಎಫ್‌ ಖಾತೆ ಬದಲಾಯಿಸುವುದು ಸುಲಭವಾಗಿರಲಿಲ್ಲ. ಆದರೆ ಈಗ ಇಪಿಎಫ್‌ಒ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.

ನೀವು ಕೆಲಸ ಬದಲಾಯಿಸಿದ್ರೆ ಆಟೋಮೆಟಿಕ್‌ ಆಗಿ ವರ್ಗಾವಣೆ ಆಗುತ್ತೆ ಪಿಎಫ್‌ ಹಣ; ಇಪಿಎಫ್‌ಒ ಹೊಸ ನಿಯಮ ಹೀಗಿದೆ
ನೀವು ಕೆಲಸ ಬದಲಾಯಿಸಿದ್ರೆ ಆಟೋಮೆಟಿಕ್‌ ಆಗಿ ವರ್ಗಾವಣೆ ಆಗುತ್ತೆ ಪಿಎಫ್‌ ಹಣ; ಇಪಿಎಫ್‌ಒ ಹೊಸ ನಿಯಮ ಹೀಗಿದೆ

ಉದ್ಯೋಗಿಗಳು ಕೆಲವೊಮ್ಮೆ ಅವರವರ ಅನುಕೂಲಕ್ಕೆ ತಕ್ಕಂತೆ ನೌಕರಿಯನ್ನು ಬದಲಾಯಿಸುತ್ತಾರೆ. ಆಗ ಆ ಉದ್ಯೋಗಿಯ ಪಿಎಫ್‌ ಖಾತೆ ಕೂಡಾ ಬದಲಾಗುತ್ತದೆ. ಹಾಗೆ ಬದಲಾಯಿಸಿಕೊಳ್ಳಲು ಉದ್ಯೋಗಿಯು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಉದ್ಯೋಗಿಯು ತನ್ನ ನೌಕರಿಯನ್ನು ಬದಲಾಯಿಸಿದಾಗ ಆತನ ಪಿಎಫ್‌ ಖಾತೆಯ ಬದಲಾವಣೆಗಾಗಿ ಮನವಿ ಅರ್ಜಿಯನ್ನು ನೀಡಬೇಕಾಗಿತ್ತು. ಆದರೆ ಈಗ ಹಾಗಲ್ಲ. ಇಪಿಎಫ್‌ಒ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಪಿಎಫ್‌ ಬ್ಯಾಲೆನ್ಸ್‌ ಸ್ವಯಂಚಾಲಿತವಾಗಿಯೇ ಹೊಸ ಉದ್ಯೋಗದಾತರ ಖಾತೆಗೆ ವರ್ಗಾವಣೆಯಾಗುವಂತಹ ವ್ಯವಸ್ಥೆಯನ್ನು ಹೊರತಂದಿದೆ.

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಎಪಿಎಫ್‌ಒ) ತನ್ನ ಚಂದಾದಾರರಿಗೆ ಅನುಕೂಲವಾಗುವಂತೆ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಹೊಸ ಉದ್ಯೋಗದಾತರ ಪಿಎಫ್‌ ಖಾತೆಗೆ ಉದ್ಯೋಗಿಯ ಪಿಎಫ್‌ ಸ್ವಯಂಚಾಲಿತವಾಗಿಯೇ ವರ್ಗಾವಣೆಗೊಳ್ಳುತ್ತದೆ. ಇಪಿಎಫ್‌ಒನ ಹೊಸ ನಿಯಮ ಹೇಗೆ ಕೆಲಸಮಾಡುತ್ತದೆ? ಯಾವುದೇ ರೀತಿಯ ಗೊಂದಲಗಳಿಲ್ಲದೇ ಪಿಎಫ್‌ ಹಣ ಹೇಗೆ ವರ್ಗಾವಣೆಯಾಗುತ್ತದೆ? ಅದು ಹೇಗೆ ಅನ್ನೋದರ ವಿವರ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಸ್ವಯಂಚಾಲಿತ ವರ್ಗಾವಣೆ ವ್ಯವಸ್ಥೆ

ಹೊಸ ವ್ಯವಸ್ಥೆಯ ಅಡಿಯಲ್ಲಿ ಕೆವೈಸಿ ಮಾಡಿದ ಯುನಿವರ್ಸಲ್‌ ಅಕೌಂಟ್‌ ನಂಬರ್‌ನಿಂದ ಉದ್ಯೋಗಿಗಳು ತಮ್ಮ ಹೊಸ ನೌಕರಿಯ ಪಿಎಫ್‌ ಖಾತೆಗೆ ತಮ್ಮ ಬ್ಯಾಲೆನ್ಸ್‌ ಅನ್ನು ಸ್ವಯಂಚಾಲಿತವಾಗಿ ವರ್ಗಾಯಿಸಬಹುದಾಗಿದೆ. ಹೊಸ ಉದ್ಯೋಗದಾತರು ನೀಡುವ ಮೊದಲ ಸಂಬಳದಿಂದ ಈ ವ್ಯವಸ್ಥೆ ಪ್ರಾರಂಭವಾಗುತ್ತದೆ.

ಯುನಿವರ್ಸಲ್‌ ಅಕೌಂಟ್‌ ನಂಬರ್‌ (UAN) ಎಂದರೇನು?

ಯುಎಎನ್‌ ಅಥವಾ ಯುನಿವರ್ಸಲ್‌ ಅಕೌಂಟ್‌ ನಂಬರ್‌ (UAN) ಎನ್ನುವುದು ಉದ್ಯೋಗಿಯ ಇಪಿಎಫ್‌ ಅಕೌಂಟ್‌ ತೆರೆದಾಗ ಅವನಿಗೆ ನೀಡುವ 12 ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದೆ. ಇಪಿಎಫ್‌ಒ ನಿಂದ ರಚಿಸಲ್ಪಟ್ಟ ಮತ್ತು ಉದ್ಯೋಗಿಗೆ ನೀಡಿದ ಈ ಸಂಖ್ಯೆಯು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ದೃಢೀಕರಿಸಲ್ಪಟ್ಟಿರುತ್ತದೆ. ಈ ಸಂಖ್ಯೆಯು ಪ್ರತಿ ಉದ್ಯೋಗಿಯು ನಿವೃತ್ತಿ ಹೊಂದುವವರೆಗೂ ಒಂದೇ ಆಗಿರುತ್ತದೆ. ಉದ್ಯೋಗಿಯು ಎಷ್ಟು ಬಾರಿ ಬೇಕಾದರೂ ಹೊಸ ಸಂಸ್ಥೆಗಳಿಗೆ ಸೇರಿದ್ದರೂ ಅದು ಬದಲಾವಣೆಯಾಗದೆ ಹಾಗೆಯೇ ಇರುತ್ತದೆ.

ಯುಎಎನ್ ಅನ್ನು ಪರಿಶೀಲಿಸುವುದು ಹೇಗೆ?

ಯುಎಎನ್‌ ಅನ್ನು ಎರಡು ರೀತಿಯಲ್ಲಿ ಪರಿಶೀಲನೆ ಮಾಡಬಹುದು.

1) ಪೋರ್ಟಲ್‌ ಸಹಾಯದಿಂದ

  • ಇಪಿಎಫ್‌ಒನ ಯನಿಫೈಡ್‌ ಮೆಂಬರ್‌ ಪೋರ್ಟಲ್‌ epfindia.gov.in ಭೇಟಿ ನೀಡಿ. ಅಲ್ಲಿ ನೋ ಯುವರ್‌ ಯುಎಎನ್‌ ಸ್ಟೇಟಸ್‌ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ವಿವಿರಗಳನ್ನು ಸಲ್ಲಿಸಿ. ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಅಧಿಕೃತ ಪಿನ್‌ ಅನ್ನು ಕಳುಹಿಸಿಕೊಡಲಾಗುತ್ತದೆ.
  • ಪಿನ್‌ ಅನ್ನು ನಮೂದಿಸಿ.
  • ನಿಮ್ಮ ನೋಂದಾಯಿತ ಮೊಬೈಲ್‌ ಮತ್ತು ಇಮೇಲ್‌ ಖಾತೆಗೆ ಯುಎಎನ್‌ ಸಂಖ್ಯೆಯನ್ನುಕಳುಹಿಸಲಾಗುತ್ತದೆ.

ಇದನ್ನೂ ಓದಿ: ಪಿಎಫ್ ಖಾತೆಯ ಬಡ್ಡಿ ಲೆಕ್ಕ ಹೇಗೆ? ಲೆಕ್ಕಾಚಾರದ ಮಾಹಿತಿ ಇಲ್ಲಿದೆ

2) ಮೊಬೈಲ್‌ ಫೋನ್‌ ಮೂಲಕ

ಯುಎಎನ್‌ ಪೋರ್ಟಲ್‌ನಲ್ಲಿ ತಮ್ಮ ವಿವಿರಗಳನ್ನು ನೀಡಿ ನೋಂದಾಯಿಸಿಕೊಂಡ ಸದಸ್ಯರು ಮಿಸ್ಡ್‌ ಕಾಲ್‌ ನೀಡುವುದರ ಮೂಲಕವೂ ಪಿಎಫ್‌ ಖಾತೆಯ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದು. ಆ ಪ್ರಕ್ರಿಯೆ ಬಹಳ ಸರಳವಾಗಿದೆ. ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ 9966044425ಗೆ ಮಿಸ್ಡ್‌ಕಾಲ್‌ ಮಾಡಿ. ಅದು ನಿಮ್ಮ ಮೊಬೈಲ್‌ಗೆ ಪಿಎಫ್‌ನ ವಿವರಗಳನ್ನು ಕಳುಹಿಸುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.