ಬೆಳ್ಳಿಗೂ ಬಂತಾ ಬಂಗಾರದ ಹೊಳಪು, ಇನ್ನೇನು 1 ಲಕ್ಷ ರೂ ದಾಟಲಿದೆ ಬೆಳ್ಳಿ ಬೆಲೆ, ಪರಿಣತರು ಕೊಡುವ 5 ಕಾರಣಗಳಿವು-business news silver prices on the rise may soon exceed rs 1 lakh per kg in india 5 reasons bullion market uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಳ್ಳಿಗೂ ಬಂತಾ ಬಂಗಾರದ ಹೊಳಪು, ಇನ್ನೇನು 1 ಲಕ್ಷ ರೂ ದಾಟಲಿದೆ ಬೆಳ್ಳಿ ಬೆಲೆ, ಪರಿಣತರು ಕೊಡುವ 5 ಕಾರಣಗಳಿವು

ಬೆಳ್ಳಿಗೂ ಬಂತಾ ಬಂಗಾರದ ಹೊಳಪು, ಇನ್ನೇನು 1 ಲಕ್ಷ ರೂ ದಾಟಲಿದೆ ಬೆಳ್ಳಿ ಬೆಲೆ, ಪರಿಣತರು ಕೊಡುವ 5 ಕಾರಣಗಳಿವು

ಬಂಗಾರದ ಬೆಲೆಯಂತೆಯೇ ಬೆಳ್ಳಿ ಬೆಲೆಯೂ ಏರತೊಡಗಿದೆ. ಇನ್ನೆನು 1 ಲಕ್ಷ ರೂಪಾಯಿ ದಾಟಲಿದೆ ಬೆಳ್ಳಿ ಬೆಲೆ. ಬೆಳ್ಳಿಗೂ ಬಂತಾ ಬಂಗಾರದ ಹೊಳಪು ಎಂದು ಗಮನಿಸಿದರೆ ಪರಿಣತರು ಕೊಡುವ 5 ಕಾರಣಗಳಿವು.

ವಾರಾಂತ್ಯ ಭಾನುವಾರ ಬೇರೆ, ಚಿನ್ನಾಭರಣ ಖರೀದಿ ಆಲೋಚನೆ ಇದೆಯಾ, ಚಿನ್ನ ಬೆಳ್ಳಿ ರೇಟ್ ಡೌನ್ ಆಗಿದೆ ನೋಡಿ
ವಾರಾಂತ್ಯ ಭಾನುವಾರ ಬೇರೆ, ಚಿನ್ನಾಭರಣ ಖರೀದಿ ಆಲೋಚನೆ ಇದೆಯಾ, ಚಿನ್ನ ಬೆಳ್ಳಿ ರೇಟ್ ಡೌನ್ ಆಗಿದೆ ನೋಡಿ

ನವದೆಹಲಿ: ಚಿನ್ನದ ಮೇಲೆ ಹೂಡಿಕೆ ಮಾಡುವವರು, ಚಿನ್ನಾಭರಣ ಖರೀದಿ ಮಾಡುವವರ ಸೆಕೆಂಡ್ ಚಾಯ್ಸ್ ಬೆಳ್ಳಿ. ಚಿನ್ನ ದುಬಾರಿಯಾಗುತ್ತಿರುವಂತೆಯೇ ಜನ ಬೆಳ್ಳಿಯನ್ನೂ ಆಪದ್ಧನವಾಗಿ ಕಾಣತೊಡಗಿದ್ದಾರೆ. ಹೀಗಾಗಿ ಅದರ ಮೇಲೆ ಹೂಡಿಕೆ ಮಾಡುವುದು, ಅದನ್ನು ಸಂಗ್ರಹಿಸಿಡುವುದು ಮುಂದುವರಿಸಿದ್ದಾರೆ. ಬೇಡಿಕೆ ಹೆಚ್ಚಾದಂತೆ ಬೆಳ್ಳಿ ದರವೂ ಏರತೊಡಗಿದೆ. ಭಾರತದಲ್ಲಿ ಬೆಳ್ಳಿಯ ದರ ಒಂದು ಕಿಲೋಗೆ 90,000 ರೂಪಾಯಿ ಗಡಿ ದಾಟಿದೆ.

ಭಾರತದ ಮಾರುಕಟ್ಟೆಯಲ್ಲಿ ಶುಕ್ರವಾರ (ಸೆ.20) ಬೆಳ್ಳಿ ದರ ಒಂದು ಕಿಲೋಗೆ 90,000 ರೂಪಾಯಿ ಗಡಿ ದಾಟಿದೆ. ಇದು ಶೀಘ್ರವೇ ಅಂದರೆ ಬಹುಶಃ ಈ ವಾರವೇ 1 ಲಕ್ಷ ರೂಪಾಯಿ ದಾಟುವ ನಿರೀಕ್ಷೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಔನ್ಸ್‌ಗೆ 31 ಡಾಲರ್ ಆಗಿದೆ. ಅಮೆರಿಕನ್ ಡಾಲರ್ ದುರ್ಬಲವಾಗಿರುವುದು, ಚಿನ್ನದ ಬೆಲೆ ಏರಿಕೆಯಾಗಿರುವುದು ಬೆಳ್ಳಿ ದರ ಏರಿಕೆಗೆ ಬೆಂಬಲ ನೀಡಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾಗಿ ಸಿಎನ್‌ಬಿಸಿ 18 ವರದಿ ಮಾಡಿದೆ.

ಭಾರತದಲ್ಲಿ ಬೆಳ್ಳಿ ದರ ಏರಿಕೆಗೆ 5 ಕಾರಣಗಳು

ಭಾರತೀಯ ಚಿನಿವಾರ ಪೇಟೆಯಲ್ಲಿ ಪ್ರತಿ ಕಿಲೋ ಬೆಳ್ಳಿ ದರ 90,000 ರೂಪಾಯಿ ಗಡಿ ದಾಟಿದೆ. ಬೆಳ್ಳಿಯ ಬೆಲೆ ಶೀಘ್ರವೇ 1 ಲಕ್ಷ ರೂಪಾಯಿ ದಾಟಬಹುದು ಎಂಬುದಕ್ಕೆ ವಿಶ್ಲೇಷಕರು ನಂಬಿರುವ 5 ಮುಖ್ಯ ಕಾರಣಗಳಿವು.

1) ಜಾಗತಿಕವಾಗಿ ಬೆಲೆ ಹೆಚ್ಚಳ - ಸೆಪ್ಟೆಂಬರ್ 20 ರಂದು, ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬೆಳ್ಳಿ ಬೆಲೆ 31 ಅಮೆರಿಕನ್ ಡಾಲರ್‌ ತಲುಪಿತು. ಈ ಹೆಚ್ಚಳವು ದುರ್ಬಲಗೊಳ್ಳುತ್ತಿರುವ ಯುಎಸ್‌ ಡಾಲರ್ ಮತ್ತು ದಾಖಲೆಯ ಚಿನ್ನದ ಬೆಲೆ ಕಾರಣಕ್ಕೆ ಆಗಿರುವಂಥದ್ದು. ಇವೆರಡೂ ಬೆಳ್ಳಿ ದರವನ್ನು ಇನ್ನಷ್ಟು ಹೆಚ್ಚಿಸಲಿದೆ.

2) ಪ್ರಾದೇಶಿಕ ಬೇಡಿಕೆಯಲ್ಲೂ ಏರಿಕೆ - ಭಾರತಕ್ಕೆ ಸಂಬಂಧಿಸಿ 2024 ರ ಆಗಸ್ಟ್‌ ತಿಂಗಳ ಬೆಳ್ಳಿಯ ಆಮದು ದತ್ತಾಂಶ ಪ್ರಕಾರ, ಭಾರತದಲ್ಲಿ ಬೆಳ್ಳಿಯ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದೆ. ಆಮದು ಮೌಲ್ಯವು 11,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ ಕೇವಲ 1,300 ಕೋಟಿ ರೂಪಾಯಿ ಇತ್ತು. ಗ್ರಾಹಕರು ಮತ್ತು ಹೂಡಿಕೆದಾರರು ಹಣದುಬ್ಬರ ಮತ್ತು ಕರೆನ್ಸಿ ಏರಿಳಿತಗಳ ವಿರುದ್ಧ ರಕ್ಷಣೆ ಪಡೆಯಲು ಪ್ರಯತ್ನಿಸುವುದರಿಂದ ಈ ಏರಿಕೆಯ ಹಿಂದೆ ಬಲವಾದ ಪ್ರಾದೇಶಿಕ ಆಸಕ್ತಿಯೂ ಇದೆ ಎಂಬುದು ತಜ್ಞರ ಪ್ರತಿಪಾದನೆ.

3) ನಿರಂತರ ಪೂರೈಕೆ ಕೊರತೆ - ಸತತ ನಾಲ್ಕನೇ ವರ್ಷವೂ ಚಿನಿವಾರ ಪೇಟೆಯಲ್ಲಿ ಬೆಳ್ಳಿ ಪೂರೈಕೆಯ ಕೊರತೆ ಮುಂದುವರಿದಿದೆ. ಜಾಗತಿಕ ಬೇಡಿಕೆಯು 2024 ರಲ್ಲಿ ಸಾರ್ವಕಾಲಿಕ ಗರಿಷ್ಠ 1.21 ಶತಕೋಟಿ ಔನ್ಸ್‌ಗಳನ್ನು ಮುಟ್ಟುವ ನಿರೀಕ್ಷೆಯಿದೆ. ಪೂರೈಕೆ ಮತ್ತು ಬೇಡಿಕೆಯ ನಡುವಿನ ಈ ನಡೆಯುತ್ತಿರುವ ಅಸಮತೋಲನವು ಬೆಳ್ಳಿ ಬೆಲೆ ಏರಿಕೆಗೆ ಒತ್ತು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

4) ಏರಿಕೆಯ ಹಣಕಾಸು ಮುನ್ಸೂಚನೆ - ಪ್ರಮುಖ ಹಣಕಾಸು ಸಂಸ್ಥೆಗಳು ಬೆಳ್ಳಿಯ ಭವಿಷ್ಯದ ಬಗ್ಗೆ ಆಶಾವಾದಿಯಾಗಿವೆ. ಯುಬಿಎಸ್‌ ಪ್ರಾಜೆಕ್ಟ್‌ಗಳ ಬೆಲೆಗಳು 2024 ರ ಅಂತ್ಯದ ವೇಳೆಗೆ ಪ್ರತಿ ಔನ್ಸ್‌ಗೆ $34 ರಿಂದ $36 ರಷ್ಟಿರಬಹುದು. ಸಿಟಿ ಮುನ್ಸೂಚನೆ ಪ್ರಕಾರ, ಬೆಳ್ಳಿಯ ದರ ಮುಂದಿನ 12 ತಿಂಗಳಲ್ಲಿ ಪ್ರತಿ ಔನ್ಸ್‌ಗೆ $35 ರಿಂದ $38 ಕ್ಕೆ ಏರಿಕೆಯಾಗಬಹುದು. ಆದರೆ ಜೆಪಿ ಮೋರ್ಗಾನ್ 2025 ರಲ್ಲಿ ಔನ್ಸ್‌ಗೆ ಸುಮಾರು $36 ಸರಾಸರಿ ಬೆಲೆಯನ್ನು ನಿರೀಕ್ಷಿಸುತ್ತದೆ.

5) ದೀರ್ಘಾವಧಿಯ ಬೆಲೆ ಮುನ್ಸೂಚನೆ - ಮೋತಿಲಾಲ್ ಓಸ್ವಾಲ್ ಮುನ್ಸೂಚನೆ ಪ್ರಕಾರ, ಮಧ್ಯಮದಿಂದ ದೀರ್ಘಾವಧಿಯಲ್ಲಿ ಬೆಳ್ಳಿಯ ಬೆಲೆ 1 ಲಕ್ಷ ರೂಪಾಯಿ ಮತ್ತು ಪ್ರಾಯಶಃ ಪ್ರತಿ ಕೆಜಿಗೆ 1.2 ಲಕ್ಷ ರೂಪಾಯಿ ತಲುಪಬಹುದು. ಈ ಏರಿಕೆಯ ಭಾವನೆಯು ವಿಶ್ವಾಸಾರ್ಹ ಹೂಡಿಕೆಯಾಗಿ ಬೆಳ್ಳಿಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅದು ವಿವರಿಸಿದೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.