UPI Transactions; ಯುಪಿಐ ಪಾವತಿಗೆ ಇನ್ನು ಟೈಪ್ ಮಾಡಬೇಕಿಲ್ಲ, ಮಾತನಾಡಿದರೆ ಸಾಕು; ಟಾಕ್ ಟು ಪೇ ಹೊಸ ಫೀಚರ್ ಚಾಲ್ತಿಗೆ-business news talk to pay new voice feature for upi transactions allows payments via voice commands uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upi Transactions; ಯುಪಿಐ ಪಾವತಿಗೆ ಇನ್ನು ಟೈಪ್ ಮಾಡಬೇಕಿಲ್ಲ, ಮಾತನಾಡಿದರೆ ಸಾಕು; ಟಾಕ್ ಟು ಪೇ ಹೊಸ ಫೀಚರ್ ಚಾಲ್ತಿಗೆ

UPI Transactions; ಯುಪಿಐ ಪಾವತಿಗೆ ಇನ್ನು ಟೈಪ್ ಮಾಡಬೇಕಿಲ್ಲ, ಮಾತನಾಡಿದರೆ ಸಾಕು; ಟಾಕ್ ಟು ಪೇ ಹೊಸ ಫೀಚರ್ ಚಾಲ್ತಿಗೆ

Talk to Pay; ಗ್ಲೋಬಲ್‌ ಫಿನ್‌ಟೆಕ್‌ ಫೆಸ್ಟ್ 2024 (Global Fintech Fest 2024) ಕಾರ್ಯಕ್ರಮದಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಅನಾವರಣವಾಗಿದೆ. ಇದರಲ್ಲಿ ಯುಪಿಐನ ಹೊಸ ಫೀಚರ್ ಕೂಡ ಸೇರಿದೆ. ಯುಪಿಐ ಪಾವತಿಗೆ ಇನ್ನು ಟೈಪ್ ಮಾಡಬೇಕಿಲ್ಲ, ಮಾತನಾಡಿದರೆ ಸಾಕು. ಟಾಕ್ ಟು ಪೇ ಹೊಸ ಫೀಚರ್ ಈಗ ಗಮನಸೆಳೆದಿದೆ.

ಯುಪಿಐ ಪಾವತಿಗೆ ಇನ್ನು ಟೈಪ್ ಮಾಡಬೇಕಿಲ್ಲ, ಮಾತನಾಡಿದರೆ ಸಾಕು
ಯುಪಿಐ ಪಾವತಿಗೆ ಇನ್ನು ಟೈಪ್ ಮಾಡಬೇಕಿಲ್ಲ, ಮಾತನಾಡಿದರೆ ಸಾಕು

ನವದೆಹಲಿ/ಬೆಂಗಳೂರು: ಯುಪಿಐ ಪಾವತಿಗೆ ಇನ್ಮೇಲೆ ಐಡಿ ಟೈಪ್ ಮಾಡಬೇಕು ಅಂತ ಇಲ್ಲ. ಸ್ಮಾರ್ಟ್‌ ಫೋನ್ ಬಾಯಿ ಹತ್ತಿರ ಹಿಡಿದು ಐಡಿ ಹೇಳಿದ್ರೆ ಸಾಕು! ಹೌದು, ಯುಪಿಐ ಪಾವತಿಗೂ ಹೊಸ ಮಾತುಕತೆ ಪಾವತಿ ಫೀಚರ್ (Conversational Voice Payment for UPI) ಬಂದಿದೆ. ಇತ್ತೀಚಿಗೆ ಅಂದರೆ ಶುಕ್ರವಾರ ಗ್ಲೋಬಲ್‌ ಫಿನ್‌ಟೆಕ್‌ ಫೆಸ್ಟ್ 2024 (Global Fintech Fest 2024) ಕಾರ್ಯಕ್ರಮದಲ್ಲಿ ಇದು ಅನಾವರಣಗೊಂಡಿದೆ.

ಎನ್‌ಪಿಸಿಐ, ಐಆರ್‌ಸಿಟಿಸಿ ಮತ್ತು ಕೋರೋವರ್‌ ಜೊತೆಯಾಗಿ ಈ ಫೀಚರ್ ಅನ್ನು ಅನಾವರಣಗೊಳಿಸಿವೆ. ಈ ಫೀಚರ್‌ ನಿಮ್ಮ ಸಂಪೂರ್ಣ ಯುಪಿಐ ವಹಿವಾಟನ್ನು ನೀವು ನಿಮ್ಮ ಮಾತಿನ ಮೂಲಕ ಅಥವಾ ಟೈಪ್‌ ಮಾಡಿ ಪೂರ್ಣಗೊಳಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್‌ ವರದಿ ಮಾಡಿದೆ.

ಯುಪಿಐ ಹೊಸ ಫೀಚರ್‌ನಿಂದ ಬಳಕೆದಾರರಿಗೆ ಏನುಪಯೋಗ

1) ಟೈಪ್ ಮಾಡುವ ಬದಲು ಸ್ಮಾರ್ಟ್‌ ಫೋನ್‌ ಬಾಯಿ ಹತ್ತಿರ ಹಿಡಿದು ಮಾತನಾಡಿದರೆ ಸಾಕು, ಅಂದರೆ ಏನು ಟೈಪ್ ಮಾಡಬೇಕಿತ್ತೋ ಅದನ್ನು ಹೇಳಿದರೆ ಸಾಕು. ಪಾವತಿಯನ್ನು ಖಚಿತಗೊಳಿಸಿದರೆ ಆಯಿತು.

2) ಟೈಪ್ ಮಾಡುವ ಸಮಯ ಉಳಿತಾಯವಾಗಲಿದೆ. ಸಂಕೀರ್ಣ ಯುಪಿಐ ಐಡಿಗಳನ್ನು ನೆನಪಿಸಿಕೊಂಡು ಟೈಪ್‌ ಮಾಡುವುದಕ್ಕೆ ತಗಲುವ ಸಮಯ ಕಡಿಮೆಯಾಗಲಿದೆ.

3) ನಿಮ್ಮ ಮೊಬೈಲ್ ನಂಬರ್ ಅಥವಾ ಯುಪಿಐ ಐಡಿಯನ್ನು ವಹಿವಾಟಿನ ವೇಳೆ ಅಪ್ಡೇಟ್ ಮಾಡಿದರೆ ಸಾಕು. ಈ ವ್ಯವಸ್ಥೆಯು ಪ್ರಾದೇಶಿಕ ಭಾಷೆಗಳಲ್ಲಿ ನೀಡುವ ಆದೇಶವನ್ನೂ ಪಾಲಿಸುತ್ತವೆ.

4) ಪಾವತಿ ಗೇಟ್‌ವೇ ಎಪಿಐಗಳು ಇದರಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಅನುಭವವನ್ನು ಗ್ರಾಹಕರಿಗೆ ನೀಡಲಿದೆ.

5) ಐಆರ್‌ಸಿಟಿಸಿಯ ಎಐ ಅಸಿಸ್ಟಂಟ್‌ ಆಸ್ಕ್‌ ದಿಶಾದಲ್ಲಿ ಈ ಫೀಚರ್ ಅಳವಡಿಸಲಾಗಿದ್ದು, ಇದು ಬಳಕೆದಾರರಿಗೆ ಟ್ರೇನ್ ಟಿಕೆಟ್‌ ಬುಕ್ ಮಾಡಲು ಮತ್ತು ಪಾವತಿಸುವುದಕ್ಕೆ ಮಾತಿನಲ್ಲಿ ಆದೇಶ ನೀಡಲು ಅನುಮತಿಸುತ್ತದೆ.

ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಇದು ದೊಡ್ಡದೊಂದು ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಭಾಷಾ ಸಮಸ್ಯೆ ಹೋಗಲಾಡಿಸಿ, ವಹಿವಾಟನ್ನು ಸರಳಗೊಳಿಸುವಲ್ಲಿ ಪ್ರಮುಖಪಾತ್ರವಹಿಸಲಿದೆ. ಪೇಮೆಂಟ್‌ ಗೇಟ್‌ವೇಗಳ ಎಪಿಐಗಳು ಇದನ್ನು ಸುಗಮಗೊಳಿಸಲಿವೆ. ಕೋರೋವರ್‌ನ ವಾಯ್ಸ್‌ ಎನೇಬಲ್ ಮಾಡಿದ ಭಾರತ್‌ಜಿಪಿಟಿ ಕೂಡ ಪಾವತಿ ಪ್ರಕ್ರಿಯೆಯನ್ನು ಉನ್ನತೀಕರಿಸಲಿದೆ ಎಂದು ವರದಿ ವಿವರಿಸಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ

ಹೊಸ ಸಂವಾದಾತ್ಮಕ ಪಾವತಿ ಫೀಚರ್‌ನೊಂದಿಗೆ ಗ್ರಾಹಕರು ತಮ್ಮ ಧ್ವನಿಯನ್ನು ಬಳಸುವ ಮೂಲಕ ಅಂದರೆ ಮಾತಿನ ಮೂಲಕ ಅಥವಾ ಅವರ ಯುಪಿಐ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡುವ ಮೂಲಕ ವಹಿವಾಟುಗಳನ್ನು ಪೂರ್ಣಗೊಳಿಸಬಹುದು.

ಸಿಸ್ಟಮ್ ಸ್ವಯಂಚಾಲಿತವಾಗಿ ಆದೇಶಕ್ಕೆ ಅನುಗುಣವಾದ ಯುಪಿಐ ಐಡಿಯನ್ನು ಹಿಂಪಡೆಯುತ್ತದೆ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಿದಾಗ ಬಳಕೆದಾರರ ಡೀಫಾಲ್ಟ್ ಯುಪಿಐ ಅಪ್ಲಿಕೇಶನ್ ಮೂಲಕ ಪಾವತಿ ವಿನಂತಿಯನ್ನು ಮುಂದಿಡುತ್ತದೆ.

ಈ ಹೊಸ ಫೀಚರ್‌ ಬಳಕೆದಾರರಿಗೆ, ತಡೆರಹಿತ ಮತ್ತು ಹೊಂದಿಕೊಳ್ಳುವ ಪಾವತಿ ಅನುಭವವನ್ನು ಖಚಿತಪಡಿಸಿಕೊಳ್ಳಲು, ಈ ವೈಶಿಷ್ಟ್ಯವು ಗ್ರಾಹಕರಿಗೆ ತಮ್ಮ ಮೊಬೈಲ್ ಸಂಖ್ಯೆ ಅಥವಾ ಯುಪಿಐ ಐಡಿಯನ್ನು ವಹಿವಾಟಿನ ಸಮಯದ ಮಿತಿಯೊಳಗೆ ಅಪ್ಡೇಟ್ ಮಾಡುವ ಆಯ್ಕೆಯನ್ನು ನೀಡುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.