Waaree Energy IPO GMP: ವಾರೀ ಎನರ್ಜಿ ಜಿಎಂಪಿ ಇಷ್ಟೊಂದ? ಬೃಹತ್ ಸೋಲಾರ್ ಪ್ಯಾನೆಲ್ ಕಂಪನಿಯ ಐಪಿಒ ಟ್ರೆಂಡಿಂಗ್
Waaree Energy IPO GMP: ವಾರೀ ಎನರ್ಜೀಸ್ ಐಪಿಒಗೆ ಬಿಡ್ ಮಾಡಿರುವವರು ಈಗ ಇದರ ಜಿಎಂಪಿ ನೋಡಿ ಖುಷಿಯಲ್ಲಿದ್ದಾರೆ. ಶೇಕಡ 90ರಷ್ಟು ಲಾಭ ಪಡೆಯುವ ಸೂಚನೆ ದೊರಕಿರುವುದರಿಂದ ಅಲೋಟ್‌ಮೆಂಟ್ ಆಗಲಿ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ.
Waaree Energy IPO GMP: ವಾರೀ ಎನರ್ಜೀಸ್ ಐಪಿಒಗೆ ಬಿಡ್ ಮಾಡಿರುವವರು ಈಗ ಇದರ ಜಿಎಂಪಿ ನೋಡಿ ಖುಷಿಯಲ್ಲಿದ್ದಾರೆ. ಶೇಕಡ 90ರಷ್ಟು ಲಾಭ ಪಡೆಯುವ ಸೂಚನೆ ದೊರಕಿರುವುದರಿಂದ ಅಲೋಟ್‌ಮೆಂಟ್ ಆಗಲಿ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ವಾರೀ ಎನರ್ಜಿಸ್ 4,321.44 ಕೋಟಿ ರೂ.ಗಳ ಮೇನ್‌ಲೈನ್ ಐಪಿಒ. ವಾರೀ ಎನರ್ಜಿಸ್ ಐಪಿಒ ಬಿಡ್ಡಿಂಗ್ ಅನ್ನು ಅಕ್ಟೋಬರ್ 21, 2024 ರಂದು ಚಂದಾದಾರಿಕೆಗಾಗಿ ತೆರೆಯಲಾಗಿದೆ. ಅಕ್ಟೋಬರ್ 23, 2024 ರ ತನಕ ಐಪಿಒ ಬಿಡ್‌ಗೆ ತೆರೆದಿರುತ್ತದೆ. ವಾರೀ ಎನರ್ಜಿಸ್ ಐಪಿಒಗಾಗಿ ಹಂಚಿಕೆ ಅಕ್ಟೋಬರ್ 24, 2024ರಂದು ಅಂತಿಮಗೊಳಿಸುವ ನಿರೀಕ್ಷೆಯಿದೆ. ವಾರೀ ಎನರ್ಜಿಸ್ ಐಪಿಒ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಲಿಸ್ಟ್ ಮಾಡಲಾಗುತ್ತದೆ. ಅಕ್ಟೋಬರ್ 28ರ ಸೋಮವಾರ ಷೇರುಪೇಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ.
ವಾರೀ ಎನರ್ಜಿಸ್ ಐಪಿಒದಲ್ಲಿ ಪ್ರತಿ ಷೇರಿಗೆ 1427 ರೂನಿಂದ 1503 ರೂವರೆಗೆ ನಿಗದಿಪಡಿಸಲಾಗಿದೆ. ಅಪ್ಲಿಕೇಶನ್‌ಗೆ ಕನಿಷ್ಠ ಲಾಟ್ ಗಾತ್ರವು 9 ಷೇರುಗಳು. ಅಂದರೆ, ಚಿಲ್ಲರೆ ಹೂಡಿಕೆದಾರರು ಒಂದು ಲಾಟ್‌ಗೆ ಅಗತ್ಯವಿರುವ ಕನಿಷ್ಠ ಹೂಡಿಕೆ ಮೊತ್ತ 13,527 ರೂಪಾಯಿ ಆಗಿದೆ. ಎಸ್‌ಎನ್‌ಐಐಐ ಕನಿಷ್ಠ ಲಾಟ್ ಗಾತ್ರದ ಹೂಡಿಕೆಯು 15 ಲಾಟ್‌ಗಳು (135 ಷೇರುಗಳು). ಇದಕ್ಕೆ 202,905 ರೂ ಬೇಕು. bNII 74 ಲಾಟ್‌ಗಳು (666 ಷೇರುಗಳು). ಇದರ ದರ 1,000,998 ರೂಪಾಯಿ.
ಫಂಡ್ ಮ್ಯಾನೇಜ್ ಯಾರು?: ಆಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್, ಐಐಎಫ್ಎಲ್ ಸೆಕ್ಯುರಿಟೀಸ್ ಲಿಮಿಟೆಡ್, ಜೆಫರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನೋಮುರಾ ಫೈನಾನ್ಶಿಯಲ್ ಅಡ್ವೈಸರಿ ಮತ್ತು ಸೆಕ್ಯುರಿಟೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್, ಇಂಟೆನ್ಸಿವ್ ಫಿಸ್ಕಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಐಟಿಐ ಕ್ಯಾಪಿಟಲ್ ಲಿಮಿಟೆಡ್ ಈ ಐಪಿಒನ ಲೀಡ್ ಮ್ಯಾನೇಜರ್‌ಗಳು. ಈ ಐಪಿಒದ ರಿಜಿಸ್ಟಾರ್ ಲಿಂಕ್ ಇನ್‌ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್.
ಪ್ರಮುಖ ದಿನಾಂಕಗಳು
ಐಪಿಒ ಆರಂಭವಾದ ದಿನಾಂಕ: ಸೋಮವಾರ, ಅಕ್ಟೋಬರ್ 21, 2024
ಐಪಿಒ ಬಿಡ್ ಮುಕ್ತಾಯ ದಿನಾಂಕ: ಬುಧವಾರ, ಅಕ್ಟೋಬರ್ 23, 2024
ಹಂಚಿಕೆ: ಅಕ್ಟೋಬರ್ 24, 2024
ರಿಫಂಡ್ ಆರಂಭ: ಶುಕ್ರವಾರ, ಅಕ್ಟೋಬರ್ 25
ಡಿಮ್ಯಾಟ್‌ಗೆ ಷೇರುಗಳ ಕ್ರೆಡಿಟ್: ಶುಕ್ರವಾರ, ಅಕ್ಟೋಬರ್ 25, 2024
ಷೇರುಪೇಟೆಯಲ್ಲಿ ಲಿಸ್ಟ್ ಆಗುವ ದಿನಾಂಕ: ಸೋಮವಾರ, ಅಕ್ಟೋಬರ್ 28, 2024
ವಾರೀ ಎನರ್ಜೀಸ್ ಐಪಿಒ ಜಿಎಂಪಿ ಎಷ್ಟಿದೆ?
ಜಿಎಂಪಿ ದಿನಾಂಕ | ಐಪಿಒ ದರ | ಜಿಎಂಪಿ ಎಷ್ಟಿದೆ? | ಎಷ್ಟು ಏರಿಕೆ ಕಾಣಬಹುದು? |
22-10-2024 | 1503 | ₹1375 | ₹2878 (91.48%) |
21-10-2024 (ಐಪಿಒ ಆರಂಭ) | 1503 | ₹1500 | ₹3003 (99.8%) |
20-10-2024 | 1503 | ₹1510 | ₹3013 (100.47%) |
19-10-2024 | 1503 | ₹1470 | ₹2973 (97.8%) |
18-10-2024 | 1503 | ₹1425 | ₹2928 (94.81%) |
17-10-2024 | 1503 | ₹1330 | ₹2833 (88.49%) |
16-10-2024 | 1503 | ₹1545 | ₹3048 (102.79%) |
15-10-2024 | ಲಭ್ಯವಿಲ್ಲ | ₹1280 | ₹1280 (%) |
14-10-2024 | ₹0 | ₹ (0%) |
ಗಮನಿಸಿ: ಜಿಎಂಪಿ ಎನ್ನುವುದು ಐಪಿಒ ಎಷ್ಟು ದರಕ್ಕೆ ಲಿಸ್ಟ್ ಆಗಬಹುದು ಎಂದು ತಿಳಿಯಲು ಬಹುತೇಕರು ಅಂದಾಜಿಸುವ ವಿಧಾನ. ಆದರೆ, ಇದು ಅಧಿಕೃತ ವಿಧಾನವಲ್ಲ. ಆದರೆ, ಸಾಕಷ್ಟು ಐಪಿಒಗಳು ಜಿಎಂಪಿಗೆ ತಕ್ಕಂತೆ ವರ್ತಿಸಿವೆ.
ಡಿಸ್ಕೈಮರ್: ಇದು ಷೇರುಪೇಟೆ, ಐಪಿಒ ಮಾಹಿತಿಗಾಗಿ ನೀಡಲಾದ ಬರಹ. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಯಾವುದೇ ಷೇರನ್ನು ಖರೀದಿಸುವಂತೆ ಓದುಗರನ್ನು ಪ್ರೇರೇಪಿಸುತ್ತಿಲ್ಲ. ಷೇರುಮಾರುಕಟ್ಟೆ ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆದಾರರು ಸ್ವಯಂ ವಿವೇಚನೆಯಿಂದ ಸಾಕಷ್ಟು ರಿಸರ್ಚ್ ಮಾಡಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು.