Yasin Bhatkal: ಯಾಸಿನ್‌ ಭಟ್ಕಳ ಮತ್ತು ಇತರೆ 10 ಜನರ ವಿರುದ್ಧ "ಭಾರತದ ವಿರುದ್ಧ ಯುದ್ಧ, ಕ್ರಿಮಿನಲ್‌ ಪಿತೂರಿ" ಆರೋಪ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Yasin Bhatkal: ಯಾಸಿನ್‌ ಭಟ್ಕಳ ಮತ್ತು ಇತರೆ 10 ಜನರ ವಿರುದ್ಧ "ಭಾರತದ ವಿರುದ್ಧ ಯುದ್ಧ, ಕ್ರಿಮಿನಲ್‌ ಪಿತೂರಿ" ಆರೋಪ

Yasin Bhatkal: ಯಾಸಿನ್‌ ಭಟ್ಕಳ ಮತ್ತು ಇತರೆ 10 ಜನರ ವಿರುದ್ಧ "ಭಾರತದ ವಿರುದ್ಧ ಯುದ್ಧ, ಕ್ರಿಮಿನಲ್‌ ಪಿತೂರಿ" ಆರೋಪ

ಯಾಸಿನ್ ಭಟ್ಕಳ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ದೊಡ್ಡ ಪಿತೂರಿಯಲ್ಲಿ ಭಾಗವಹಿಸಿರುವುದು ಮಾತ್ರವಲ್ಲದೆ ಐಇಡಿಗಳು ಮತ್ತು ಸ್ಫೋಟಕಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಕೋರ್ಟ್‌ ತಿಳಿಸಿದೆ.

The court ruled that the IM functionaries entered into criminal conspiracy for the commission of terrorist activities in various parts of India
The court ruled that the IM functionaries entered into criminal conspiracy for the commission of terrorist activities in various parts of India

ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಮತ್ತು ಇತರ 10 ಜನರ ವಿರುದ್ಧ “2012ರಲ್ಲಿ ಭಾರತದ ವಿರುದ್ಧ ಯುದ್ಧ ನಡೆಸಲು ಸಂಚು ರೂಪಿಸಿದ ಆರೋಪಗಳನ್ನು” ದೆಹಲಿಯ ನ್ಯಾಯಾಲಯವೊಂದು ನಿಗದಿಗೊಳಿಸಿದೆ. ಇಂಡಿಯನ್ ಮುಜಾಹಿದ್ದೀನ್ (ಐಎಂ) ನ ಈ ಆರೋಪಿಗಳು ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಕ್ರಿಮಿನಲ್‌ ಪಿತೂರಿ ನಡೆಸಿರುವುದನ್ನು ಗಮನಿಸಿರುವುದಾಗಿ ಮಾರ್ಚ್‌ 31ರಂದು ವಿಚಾರಣೆ ನಡೆಸಿದ ಕೋರ್ಟ್‌ ತಿಳಿಸಿದೆ.

"ವಿವಿಧ ಡಿಜಿಟಲ್‌ ಸಾಧನಗಳಿಂದ ಪಡೆಯಲಾದ ಡಿಜಿಟಲ್ ಡೇಟಾದ ಆಧಾರದಲ್ಲಿ ಹೇಳುವುದಾದರೆ ಯಾಸಿನ್ ಭಟ್ಕಳ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ದೊಡ್ಡ ಪಿತೂರಿಯಲ್ಲಿ ಭಾಗವಹಿಸಿರುವುದು ಮಾತ್ರವಲ್ಲದೆ ಐಇಡಿಗಳು ಮತ್ತು ಸ್ಫೋಟಕಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ಆರೋಪಿಗಳ ವಿರುದ್ಧ ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದರು. ಭಟ್ಕಳ್, ಅನ್ಸಾರಿ, ಮೊಹಮ್ಮದ್ ಅಫ್ತಾಬ್ ಆಲಂ, ಇಮ್ರಾನ್ ಖಾನ್, ಸೈಯದ್, ಒಬೈದ್ ಉರ್ ರೆಹಮಾನ್, ಅಸಾದುಲ್ಲಾ ಅಖ್ತರ್, ಉಜ್ಜೈರ್ ಅಹ್ಮದ್, ಮೊಹಮ್ಮದ್ ತೆಹ್ಸಿನ್ ಅಖ್ತರ್, ಹೈದರ್ ಅಲಿ ಮತ್ತು ಜಿಯಾ ಉರ್ ರೆಹಮಾನ್ ವಿರುದ್ಧ ನ್ಯಾಯಾಲಯ ಆರೋಪಗಳನ್ನು ಮಾಡಿದೆ.

ಮಂಜರ್ ಇಮಾಮ್, ಅರಿಜ್ ಖಾನ್ ಮತ್ತು ಅಬ್ದುಲ್ ವಾಹಿದ್ ಸಿದ್ದಿಬಪ್ಪ ವಿರುದ್ಧ ಪ್ರಾಸಿಕ್ಯೂಷನ್ ಯಾವುದೇ ಪ್ರಾಥಮಿಕ ಸಾಕ್ಷ್ಯವನ್ನು ಸಲ್ಲಿಸಲು ವಿಫಲರಾದ ಕಾರಣ ನ್ಯಾಯಾಧೀಶರು ಬಿಡುಗಡೆ ಮಾಡಿದರು. ಭಯೋತ್ಪಾದಕ ಚಟುವಟಿಕೆಗೆ ಹವಾಲಾ ಹಣ ವರ್ಗಾವಣೆ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ಪಾಕಿಸ್ತಾನ ಮೂಲದ ಸಹವರ್ತಿಗಳ ಸಕ್ರಿಯ ಬೆಂಬಲದೊಂದಿಗೆ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ದೊಡ್ಡಮಟ್ಟದಲ್ಲಿ ಹೊಸ ಸದಸ್ಯರನ್ನು ನೇಮಕಾತಿ ಮಾಡಿರುವುದನ್ನೂ ಮಾರ್ಚ್‌ 31ರ ತೀರ್ಪಿನಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ. ದೆಹಲಿ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಫೋಟದಂತಹ ಭಯೋತ್ಪಾದಕ ಕೃತ್ಯಗಳನ್ನು ಮಾಡಲು ಭಾರತದೊಳಗಿನ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿರುವ ಕುರಿತೂ ಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ವಿವಿಧ ಸೆಕ್ಷನ್‌ಗಳ ಅಡಿ ಕೊಲೆ, ಅಪರಾಧ ಸಂಚು ಸೇರಿದಂತೆ ಹಲವು ಪ್ರಕರಣಗಳ ಆರೋಪಗಳನ್ನು ಈ ಆರೋಪಿಗಳು ಎದುರಿಸುತ್ತಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.