parag agarwal get 42 million: ಎಲಾನ್ ಮಸ್ಕ್‌ರಿಂದ ಗೇಟ್‌ಪಾಸ್ ಪಡೆದ ಪರಾಗ್ ಅಗರ್‌ವಾಲ್‌ಗೆ ದೊರಕಲಿದೆಯಂತೆ 42 ಮಿಲಿಯನ್ ಡಾಲರ್
ಸ್ವಾಧೀನಪಡಿಸಿಕೊಂಡ ಒಂದೇ ದಿನದಲ್ಲಿ ಉನ್ನತ ಅಧಿಕಾರಿಗಳೆಲ್ಲವನ್ನೂ ಎಲಾನ್ ಮಸ್ಕ್ (Elon Musk) ಮನೆಗೆ ಕಳುಹಿಸಿದ್ದು, ಕಂಪನಿಯ ಉಳಿದ ಉದ್ಯೋಗಿಗಳಿಗೂ ನಡುಕ ಹುಟ್ಟಿಸಿದ್ದಾರೆ.
ಟ್ವಿಟ್ಟರ್ ಖರೀದಿಸುವ ಮೊದಲೇ ಟ್ವಿಟ್ಟರ್ ಉದ್ಯೋಗಿಗಳಲ್ಲಿ ಉದ್ಯೋಗ ಕಡಿತ ಭೀತಿ ಹುಟ್ಟಿಸಿದ್ದ ಬಿಲಿಯನೇರ್ ಎಲಾನ್ ಮಸ್ಕ್ ಅವರು ಉನ್ನತ ಹಂತದ ಉದ್ಯೋಗಿಗಳ ಉದ್ಯೋಗ ಕಡಿತ ಆರಂಭಿಸಿದ್ದಾರೆ. ಟ್ವಿಟ್ಟರ್‌ನ ಭಾರತೀಯ ಮೂಲದ ಸಿಇಒ ಪರಾಗ್ ಅಗರ್‌ವಾಲ್ ಅವರನ್ನು ಈಗಾಗಲೇ ವಜಾಗೊಳಿಸಿದ್ದಾರೆ. ಟ್ವಿಟ್ಟರ್‌ನಿಂದ ವಜಾಗೊಂಡ ಅಗರ್‌ವಾಲ್‌ಗೆ ಕಂಪನಿಯ ಕಡೆಯಿಂದ ಸುಮಾರು 42 ಮಿಲಿಯನ್ ಡಾಲರ್ ಹಣ ದೊರಕಲಿದೆಯಂತೆ.
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಪರಾಗ್ ಅಗರ್‌ವಾಲ್ ಅವರು ಟ್ವಿಟ್ಟರ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೂ ಮುನ್ನ ಜಾಕ್ ಡಾರ್ಸಿ ಅವರು ಸಿಇಒ ಆಗಿದ್ದರು. ಭಾರತೀಯ ಮೂಲದ ಪರಾಗ್ ಮಾತ್ರವಲ್ಲದೆ ಟ್ವಿಟರ್‌ನ ಕಾನೂನು, ನೀತಿ ಮತ್ತು ಟ್ರಸ್ಟ್‌ನ ಮುಖ್ಯಸ್ಥ ವಿಜಯ ಗದ್ದೆ ಅವರನ್ನೂ ಎಲಾನ್ ಮಸ್ಕ್ ವಜಾಗೊಳಿಸಿದ್ದಾರೆ. ಇನ್ನೂ ಇಬ್ಬರು ಉನ್ನತ ಅಧಿಕಾರಿಗಳಿಗೆ ಎಲಾನ್ ಮಸ್ಕ್ ಅವರು ಗೇಟ್ ಪಾಸ್ ನೀಡಿದ್ದಾರೆ.
ನಿನ್ನೆಯೇ ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಯ 44 ಬಿಲಿಯನ್ ಡಾಲರ್ ಒಪ್ಪಂದವನ್ನು ಪೂರ್ಣಗೊಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಪರಾಗ್ ಅಗರ್‌ವಾಲ್, ಟ್ವಿಟ್ಟರ್, ಎಲಾನ್ ಮಸ್ಕ್,
ಸಾಮಾಜಿಕ ಮಾಧ್ಯಮ ಕಂಪನಿಯ ಮಾಲಿಕತ್ವ ಬದಲಾವಣೆ ಆಗಿ 12 ತಿಂಗಳೊಳಗೆ ಪರಾಗ್ ಅಗರ್‌ವಾಲ್ ವಜಾಗೊಂಡಲ್ಲಿ ಅಂದಾಜು 42 ಮಿಲಿಯನ್ ಡಾಲರ್ (ಸುಮಾರು 345 ಕೋಟಿ ರೂ.) ಪಡೆಯಲಿದ್ದಾರೆ ಎಂದು ಸಂಶೋಧನಾ ಸಂಸ್ಥೆ ಈಕ್ವಿಲಾರ್ ಈ ಹಿಂದೆಯೇ ಲೆಕ್ಕಹಾಕಿದೆ.
ಒಂದು ವರ್ಷದ ಅಗರವಾಲ್‌ರ ಮೂಲ ವೇತನ ಮತ್ತು ಎಲ್ಲಾ ಷೇರುಗಳ ಹಸ್ತಾಂತರದ ಹಣಗಳು ಸೇರಿದಂತೆ ಒಟ್ಟು ಇಷ್ಟು ಮೊತ್ತವನ್ನು ಅಗರ್‌ವಾಲ್ ಪಡೆಯಲಿದ್ದಾರೆ. ಎಲಾನ್ ಮಸ್ಕ್ ಘೋಷಿಸಿರುವ ಪ್ರತಿ ಷೇರು ದರಗಳ ಅಂದಾಜನ್ನು ಇದು ಆಧರಿಸಿದೆ. 2021ರಲ್ಲಿ ಅಗರ್‌ವಾಲ್ ಅವರು ಒಟ್ಟು 30.4 ಮಿಲಿಯನ್ ಡಾಲರ್ (250 ಕೋಟಿ ರೂ.) ವೇತನ ಪಡೆದುಕೊಂಡಿದ್ದರು.
ಎಲಾನ್ ಮಸ್ಕ್ ಅವರು ಸ್ವಾಧೀನಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಕಂಪನಿಗೆ ಸಿಇಒ ಆಗಿದ್ದ ಭಾರತ ಮೂಲದ ಪರಾಗ್ ಅಗರವಾಲ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನು ಕಂಪನಿಯಿಂದ ವಜಾಗೊಳಿಸಿದ್ದಾರೆ.
ಟ್ವಿಟರ್ ಸಹಸಂಸ್ಥಾಪಕ ಜಾಕ್ ಡೋರ್ಸೆ ಅವರ ರಾಜೀನಾಮೆಯ ಬಳಿಕ ಭಾರತ ಮೂಲದ ಪರಾಗ್ ಅಗರವಾಲ್ ನವೆಂಬರ್‌ನಲ್ಲಿ ಟ್ವಿಟರ್‌ನ ಸಿಇಒ ಆಗಿ ನೇಮಕಗೊಂಡರು. ಅಗರವಾಲ್ ಸುಮಾರು ಒಂದು ದಶಕದಿಂದ ಟ್ವಿಟರ್‌ನಲ್ಲಿ ಕೆಲದ ಕೆಲಸ ಮಾಡುತ್ತಿದ್ದಾರೆ. ಸಿಇಒ ಆಗಿ ನೇಮಕವಾಗುವ ಮುನ್ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದರು.
ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮತ್ತು ಟ್ವಿಟರ್‌ನ ಈ ಹಿಂದಿನ ಮಾಲೀಕರ ನಡುವೆ ಸುದೀರ್ಘ ಕಾನೂನು ಹೋರಾಟ ನಡೆಯುತ್ತಿತ್ತು. ಇದರಲ್ಲಿ ವ್ಯವಹಾರಕ್ಕಿಂತ ಹೆಚ್ಚು ತಿಂಗಳುಗಳ ಕಾಲ ಅಹಂ ಮತ್ತು ದ್ವೇಷದ ವ್ಯವಹಾರವೇ ಕಾಣಿಸಿದೆ. ಕೊನೆಗೂ ಮುಕ್ತಾಯಗೊಳಿಸುತ್ತದೆ. ಎಲೋನ್ ಮಸ್ಕ್ ಮತ್ತು ಪರಾಗ್ ಅಗರವಾಲ್ ನಡುವೆ ಗುದ್ದಾಟಗಳು ನಡೆಯುತ್ತಿತ್ತು. ಈ ಬಗ್ಗೆ ಇಬ್ಬರು ಕೂಡಾ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.