How to Write Resume?: ಉದ್ಯೋಗ ದೊರಕಬೇಕೆ, ರೆಸ್ಯುಮೆಯಲ್ಲಿ ಕತೆ ಬರೆಯಿರಿ, ಉದ್ಯೋಗಾಕಾಂಕ್ಷಿಗಳಿಗೆ ಅಮೂಲ್ಯ ಸಲಹೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  How To Write Resume?: ಉದ್ಯೋಗ ದೊರಕಬೇಕೆ, ರೆಸ್ಯುಮೆಯಲ್ಲಿ ಕತೆ ಬರೆಯಿರಿ, ಉದ್ಯೋಗಾಕಾಂಕ್ಷಿಗಳಿಗೆ ಅಮೂಲ್ಯ ಸಲಹೆ

How to Write Resume?: ಉದ್ಯೋಗ ದೊರಕಬೇಕೆ, ರೆಸ್ಯುಮೆಯಲ್ಲಿ ಕತೆ ಬರೆಯಿರಿ, ಉದ್ಯೋಗಾಕಾಂಕ್ಷಿಗಳಿಗೆ ಅಮೂಲ್ಯ ಸಲಹೆ

Write story instead of resume ಎಂಬ ಸಲಹೆಯನ್ನು ಉದ್ಯೋಗಾಕಾಂಕ್ಷಿಗಳಿಗೆ ಬಹುತೇಕರು ನೀಡುತ್ತಿದ್ದಾರೆ. ನೀವೇ ನಿಮ್ಮ ಸ್ವಂತ ವಾಕ್ಯದಲ್ಲಿ ಕತೆ ಬರೆಯುವಂತೆ ರೆಸ್ಯುಮೆ ಬರೆದರೆ ಉದ್ಯೋಗ ದೊರಕುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.

How to Write Resume?: ಉದ್ಯೋಗ ದೊರಕಬೇಕೆ, ರೆಸ್ಯುಮೆಯಲ್ಲಿ ಕತೆ ಬರೆಯಿರಿ
How to Write Resume?: ಉದ್ಯೋಗ ದೊರಕಬೇಕೆ, ರೆಸ್ಯುಮೆಯಲ್ಲಿ ಕತೆ ಬರೆಯಿರಿ

ಈಗ ಒಂದು ಉದ್ಯೋಗಕ್ಕೆ ನೂರಾರು ಉದ್ಯೋಗಾಕಾಂಕ್ಷಿಗಳು ಅರ್ಜಿ (Job Application) ಸಲ್ಲಿಸುತ್ತಾರೆ. ಕಂಪನಿಯೊಂದು ನಿಮ್ಮನ್ನು ಉದ್ಯೋಗ ಸಂದರ್ಶನಕ್ಕೆ (Job Interview) ಆಹ್ವಾನಿಸಬೇಕಿದ್ದರೆ ಆ ನೂರು ರೆಸ್ಯುಮೆ ಅಥವಾ ಸಿವಿಗಳಲ್ಲಿ ನಿಮ್ಮ ಸಿವಿ/ರೆಸ್ಯುಮೆ ಭಿನ್ನವಾಗಿರಬೇಕು, ಉದ್ಯೋಗದಾತರ ಗಮನ ಸೆಳೆಯುವಂತೆ ಇರಬೇಕು. ಇದೇ ಕಾರಣಕ್ಕೆ ಸಾಂಪ್ರದಾಯಿಕ ರೆಸ್ಯುಮೆ/ಸಿವಿಗೆ ಬದಲಾಗಿ ಸಿವಿಯಲ್ಲಿ ಕತೆ ಬರೆಯಬೇಕು (Storytelling in Resume) ಎನ್ನುವುದು ಉದ್ಯೋಗ ತಜ್ಞರ ಅಭಿಪ್ರಾಯ.

ರೆಸ್ಯುಮೆ ಬದಲು ಕತೆ ಬರೆಯಿರಿ

Write story instead of resume ಎಂಬ ಸಲಹೆಯನ್ನು ಉದ್ಯೋಗಾಕಾಂಕ್ಷಿಗಳಿಗೆ ಬಹುತೇಕರು ನೀಡುತ್ತಿದ್ದಾರೆ. ನೀವೇ ನಿಮ್ಮ ಸ್ವಂತ ವಾಕ್ಯದಲ್ಲಿ ಕತೆ ಬರೆಯುವಂತೆ ರೆಸ್ಯುಮೆ ಬರೆದರೆ ಉದ್ಯೋಗ ದೊರಕುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.

ಹೆಚ್ಚಾಗಿ ನಿಮ್ಮ ರೆಸ್ಯುಮೆ ಮೇಲೆ ಉದ್ಯೋಗದಾತರು ಕಣ್ಣಾಡಿಸುತ್ತಾರೆ. ಎಲ್ಲಾದರೂ ನೀವು ಆಸಕ್ತಿದಾಯಕವಾಗಿ ಬರೆದಿದ್ದರೆ ಎಚ್‌ಆರ್‌ಗಳ ಗಮನ ಸೆಳೆಯುತ್ತದೆ. ಕಣ್ಣಾಡಿಸುವ ಬದಲು ಓದುವಂತೆ ಮಾಡುತ್ತದೆ.

ರೆಸ್ಯುಮೆಯಲ್ಲಿ ಕಥೆ ಬರೆಯುವುದೆಂದರೆ ಕಾಲ್ಪನಿಕವಾಗಿ ಬರೆಯುವುದಲ್ಲ. ಸುಳ್ಳು ಮಾಹಿತಿಗಳನ್ನು ಪೋಣಿಸುವುದಲ್ಲ. ಇರುವ ವಿಷಯವನ್ನು ನೇರವಾಗಿ ಮಂಡಿಸುವುದಾಗಿದೆ. ರೆಸ್ಯುಮೆ ಎಂದರೆ ಎಲ್ಲವೂ ಬುಲೆಟ್‌ ಪಾಯಿಂಟ್‌ನಲ್ಲಿ ಇರಬೇಕೆಂದಿಲ್ಲ. ಅವಶ್ಯಕತೆ ಇರುವಲ್ಲಿ ವಾಕ್ಯಗಳಲ್ಲಿ ಬರೆಯಿರಿ. ನಿಮ್ಮ ರೆಸ್ಯುಮೆ ಎಂಬ ಕಥೆಯಲ್ಲಿ ಉತ್ತಮ ಆರಂಭ, ಉತ್ತಮ ಸಾರಾಂಶ ಮತ್ತು ಉತ್ತಮ ಅಂತ್ಯ ಇರಲಿ.

ವಿಷಯ ಮಂಡನೆ ಕಡೆಗೆ ಗಮನವಿರಲಿ. ನಿಮ್ಮರೆಸ್ಯುಮೆಯನ್ನು ಎಚ್‌ಆರ್‌ಗಳು ಓದುವಾಗ ಅವರಿಗೆ ನೀವೇ ಮುಂದೆ ನಿಂತು ಆಸಕ್ತಿದಾಯಕವಾಗಿ ಕಥೆ ಹೇಳುವಂತೆ ಇರಲಿ. ಇದಕ್ಕಾಗಿ ನಿಮ್ಮ ರೆಸ್ಯುಮೆ ಅನ್ನು ಅತ್ಯುತ್ತಮವಾಗಿ ನರೇಟ್‌ ಮಾಡಿರಿ.

ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಿದ ಉದ್ದೇಶ ಸ್ಪಷ್ಟವಾಗಿ ಗೋಚರವಾಗುವಂತೆ ಇರಲಿ. ನೀವು ಯಾಕೆ ಈ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ನಿಮ್ಮ ಕನಸುಗಳೇನು ಇತ್ಯಾದಿಗಳನ್ನು ರೆಸ್ಯುಮೆ ಮೂಲಕ ಉದ್ಯೋಗದಾತರಿಗೆ ದಾಟಿಸಬಹುದು.

ನಿಮ್ಮ ರೆಸ್ಯುಮೆಯಲ್ಲಿ ಪಡೆದಿರುವ ಡಿಗ್ರಿಗಳ ರಾಶಿ ಮಾತ್ರ ಉದ್ಯೋಗದಾತರಿಗೆ ಇಂಟ್ರೆಸ್ಟಿಂಗ್‌ ಅಂತ ಅನಿಸದು. ಉದ್ಯೋಗಕ್ಕೆ ಪೂರಕವಾಗಿ ಪಡೆದಿರುವ ಕೌಶಲಗಳನ್ನು ಹೆಚ್ಚು ಬರೆಯಿರಿ.

ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಜಿ ಸಲ್ಲಿಸಿದ ಕಂಪನಿಯ ಕೆಲಸದ ಸಂಸ್ಕೃತಿಯನ್ನು ತಿಳಿದುಕೊಳ್ಳಿ. ಅದು, ಕ್ರಿಯೇಟಿವಿಟಿಗೆ ಆದ್ಯತೆ ನೀಡುವ ಕಂಪನಿಯಾದರೆ ನಿಮ್ಮ ಕ್ರಿಯೆಟಿವಿಟಿಗಳನ್ನೆಲ್ಲ ಧಾರೆಯೆರೆದು ರೆಸ್ಯುಮೆ ರಚಿಸಿ ಕಳುಹಿಸಿ. ತುಂಬಾ ಸಾಂಪ್ರದಾಯಿಕ ಕಂಪನಿಯಾಗಿದ್ದರೆ ಹಳೆಯ ಫಾರ್ಮೆಟ್‌ನಲ್ಲೇ ರೆಸ್ಯುಮೆ ಬರೆದು ಕಳುಹಿಸಿ. ಈಗ ಹೆಚ್ಚಿನ ಕಂಪನಿಗಳು ಫಸ್ಟ್‌ ರಾರ‍ಯಂಕ್‌ ಪಡೆದವರನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳುವುದಿಲ್ಲ. ಬದಲಾಗುವ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುವ ಕ್ರಿಯಾಶೀಲರಿಗೆ ಆದ್ಯತೆ ನೀಡುತ್ತಿವೆ.

ಕತೆ ಹೇಳುವುದು ಸುಲಭವಲ್ಲ

ಎಲ್ಲರಿಗೂ ಕಥೆ ಕೇಳುವುದೆಂದರೆ ಇಷ್ಟ. ಹಾಗಂತ, ನಿಮ್ಮ ರೆಸ್ಯುಮೆನಲ್ಲಿ ಕಥೆ ಹೇಳುತ್ತೀದ್ದೇನೆ ಎಂದು ಕೊರೆಯಲು ಆರಂಭಿಸಬೇಡಿ. ರೆಸ್ಯೂಂನಲ್ಲಿ ಕತೆ ಬರೆಯುವ ಮೊದಲು ರಿಲಾಕ್ಸ್‌ ಆಗಿ ಯೋಚಿಸಿ. ನಿಮ್ಮ ಹಿಂದಿನ ಕರಿಯರ್‌ಗಳ ಕುರಿತು ಆಲೋಚಿಸಿ. ಈ ಹಿಂದೆ ನೀವು ಉದ್ಯೋಗದಲ್ಲಿ ಯಾವ ಪ್ರಾಬ್ಲಂ ಅನ್ನು ಪರಿಹರಿಸಿದ್ದೀರಿ. ಯಾವ ರೀತಿ ಮಾರಾಟ ಹೆಚ್ಚಿಸಿದ್ದೀರಿ. ನಿಮ್ಮ ಐಡಿಯಾಗಳು ಹಿಂದಿನ ಕಂಪನಿಗಳಿಗೆ ಹೇಗೆ ಲಾಭವಾಗಿದೆ ಇತ್ಯಾದಿಗಳನ್ನು ಕತೆಯ ರೂಪದಲ್ಲಿ ತಿಳಿಸಿ.

ಉದಾಹರಣೆಗೆ ಹಿಂದಿನ ಕಂಪನಿಯಲ್ಲಿ ನಿಮ್ಮ ಸ್ವಂತ ಆಲೋಚನೆಯಿಂದ ಆ್ಯಪ್‌ ಒಂದನ್ನು ನೀವು ಅಭಿವೃದ್ಧಿಪಡಿಸಿರಬಹುದು. ಆ ಆ್ಯಪ್‌ ಮತ್ತು ಅದು ಈಗ ಪಡೆದಿರುವ ಜನಪ್ರಿಯತೆಯ ಬಗ್ಗೆ ತಿಳಿಸಿ. ಕಥೆಯಲ್ಲಿ ಭೂತಕಾಲವೂ ಇರಬೇಕು, ವರ್ತಮಾನವೂ ಇರಬೇಕು ಮತ್ತು ಭವಿಷ್ಯದ ಕುರಿತು ಅತ್ಯುತ್ತಮ ದೃಷ್ಟಿಕೋನವೂ ಇರಬೇಕು.

ಕಥೆ ಎಂದಾಕ್ಷಣ ಹತ್ತಿಪ್ಪತ್ತು ಪುಟಗಳ ರೆಸ್ಯುಮೆ ಬರೆದು ಕಳುಹಿಸಬೇಡಿ. ಕೆಲವೇ ಪುಟದಲ್ಲಿ ನೀವು ಹೇಳಬೇಕಾದ ವಿಷಯಗಳನ್ನು ಆತ್ಮೀಯವಾಗಿ ಬರೆದು ಕಳುಹಿಸಿ. ಏನು ಹೇಳಬೇಕೋ ಅದನ್ನು ನೇರವಾಗಿ ಬರೆಯಿರಿ. ಹೆಚ್ಚು ಕೊರೆಯಬೇಡಿ. ರೆಸ್ಯುಮೆ ಬರವಣಿಗೆ ನಿಮ್ಮದೇ ವಾಕ್ಯದಲ್ಲಿ ಇರಲಿ. ಈಗಾಗಲೇ ರೆಸ್ಯುಮೆ ಫಾರ್ಮೆಟ್‌ಗಳಲ್ಲಿ ಅಸ್ತಿತ್ವದಲ್ಲಿರುವ ವಾಕ್ಯಗಳನ್ನೇ ಮತ್ತೆ ಮತ್ತೆ ಬರೆಯದಿರಿ. ಉತ್ತಮ ಆರಂಭ, ಉತ್ತಮ ತಿರುಳು ಮತ್ತು ಉತ್ತಮ ಅಂತ್ಯ ಇರಲಿ.

ಕೊನೆಯದಾಗಿ, ನೀವು ಶಿಕ್ಷಣ ಪಡೆಯಲು, ಹೊಸ ಕೌಶಲ ಪಡೆಯಲು ಸಾಕಷ್ಟು ಶ್ರಮ ವಹಿಸಿದ್ದೀರಿ. ಆದರೆ, ರೆಸ್ಯುಮೆ ರಚನೆಯ ಕುರಿತು ಕಡೆಗಣಿಸಬೇಡಿ. ರೆಸ್ಯುಮೆ ಬರೆಯಲು ಸಾಕಷ್ಟು ಸಮಯ, ಬುದ್ಧಿ ಆಲೋಚಿಸಿ. ಯಾರದ್ದೋ ಹಳೆ ರೆಸ್ಯಮೆ ಅಪ್‌ಡೇಟ್‌ ಮಾಡಿ ಕಳುಹಿಸುವಂತಹ ಕೆಲಸ ಮಾಡಬೇಡಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.