ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕಾಂಗ್ರೆಸ್ ಕಣ್ಮಣಿ ರಾಹುಲ್‌ ಗಾಂಧಿ ಬ್ರ್ಯಾಂಡ್ ಪುನರುಜ್ಜೀವನದ ಸಂಕೇತ ಅಲ್ಲ ಈ ಲೋಕಸಭಾ ಫಲಿತಾಂಶ, ಪ್ರಶಾಂತ್ ಕಿಶೋರ್ ಪ್ರತಿಪಾದನೆ

ಕಾಂಗ್ರೆಸ್ ಕಣ್ಮಣಿ ರಾಹುಲ್‌ ಗಾಂಧಿ ಬ್ರ್ಯಾಂಡ್ ಪುನರುಜ್ಜೀವನದ ಸಂಕೇತ ಅಲ್ಲ ಈ ಲೋಕಸಭಾ ಫಲಿತಾಂಶ, ಪ್ರಶಾಂತ್ ಕಿಶೋರ್ ಪ್ರತಿಪಾದನೆ

ಲೋಕಸಭಾ ಚುನಾವಣೆಯ ಮುನ್ನಂದಾಜು ತಪ್ಪಾದ ಬಳಿಕ ಇದೇ ಮೊದಲ ಬಾರಿ ಪ್ರಶಾಂತ್ ಕಿಶೋರ್ ಮಾಧ್ಯಮ ಸಂವಾದ ನಡೆಸಿದ್ದು, ಕಾಂಗ್ರೆಸ್ ಕಣ್ಮಣಿ ರಾಹುಲ್‌ ಗಾಂಧಿ ಬ್ರ್ಯಾಂಡ್ ಪುನರುಜ್ಜೀವನದ ಸಂಕೇತ ಅಲ್ಲ ಈ ಲೋಕಸಭಾ ಫಲಿತಾಂಶ ಎಂದು ಪ್ರತಿಪಾದನೆ ಮಾಡಿದ್ದಾರೆ.

ಕಾಂಗ್ರೆಸ್ ಕಣ್ಮಣಿ ರಾಹುಲ್‌ ಗಾಂಧಿ ಬ್ರ್ಯಾಂಡ್ ಪುನರುಜ್ಜೀವನದ ಸಂಕೇತ ಅಲ್ಲ ಈ ಲೋಕಸಭಾ ಫಲಿತಾಂಶ, ಪ್ರಶಾಂತ್ ಕಿಶೋರ್ ಪ್ರತಿಪಾದನೆ (ಕಡತ ಚಿತ್ರಗಳು)
ಕಾಂಗ್ರೆಸ್ ಕಣ್ಮಣಿ ರಾಹುಲ್‌ ಗಾಂಧಿ ಬ್ರ್ಯಾಂಡ್ ಪುನರುಜ್ಜೀವನದ ಸಂಕೇತ ಅಲ್ಲ ಈ ಲೋಕಸಭಾ ಫಲಿತಾಂಶ, ಪ್ರಶಾಂತ್ ಕಿಶೋರ್ ಪ್ರತಿಪಾದನೆ (ಕಡತ ಚಿತ್ರಗಳು)

ನವದೆಹಲಿ: ಇತ್ತೀಚೆಗೆ ಕೊನೆಗೊಂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸುಧಾರಿತ ಪ್ರದರ್ಶನವು “ಬ್ರ್ಯಾಂಡ್” ರಾಹುಲ್ ಗಾಂಧಿಯ ಪುನರುಜ್ಜೀವನದ ಸಂಕೇತ ಅಲ್ಲ. ನರೇಂದ್ರ ಮೋದಿ ಅವರ ಬಗ್ಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿಲ್ಲ ಎಂದು ಜನ್ ಸುರಾಜ್ ಪಕ್ಷದ ಮುಖ್ಯಸ್ಥ, ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್‌ ವಿಶ್ಲೇಷಣೆ ಮಾಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಅವರ ಫಲಿತಾಂಶ ಮುನ್ನಂದಾಜು ಲೆಕ್ಕದಲ್ಲಿ ವ್ಯತ್ಯಾಸವಾಗಿರುವುದನ್ನು ಒಪ್ಪಿಕೊಂಡು ಮಾತನಾಡಿದ ಪ್ರಶಾಂತ್ ಕಿಶೋರ್, ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿಯ ಇಮೇಜ್ ವೃದ್ಧಿಯಾಗಿರುವುದು ಪಕ್ಷದ ವಲಯದಲ್ಲಿ, ಬೆಂಬಲಿಗರ ನಡುವೆ ಮತ್ತು ಕಾಂಗ್ರೆಸ್ ಪಕ್ಷದ ಮತದಾರರ ನಡುವೆ ಮಾತ್ರ. ಜನಸಾಮಾನ್ಯರ ನಡುವೆ ಅವರ ಇಮೇಜ್ ವೃದ್ಧಿಯಾಗಿರುವಂತೆ ಕಂಡುಬರುತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಎನ್‌ಡಿಎ ನಾಯಕ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಭಾರತದಲ್ಲಿ ಜನರ ನಡುವೆ ಮೋದಿ ವಿರುದ್ಧ ಅಸಮಾಧಾನ, ಕೋಪ ವ್ಯಾಪಕವಾಗಿ ಇಲ್ಲ, ಬಿಜೆಪಿಯ ಮತ ಹಂಚಿಕೆಯಲ್ಲೂ ಹೆಚ್ಚು ಬದಲಾವಣೆ ಆಗಿಲ್ಲ ಎಂಬುದರ ಕಡೆಗೆ ಪ್ರಶಾಂತ್ ಕಿಶೋರ್ ಗಮನಸೆಳೆದಿದ್ದಾರೆ.

ಮೋದಿ ಅವರ ವಿರುದ್ಧ ಸ್ವಲ್ಪ ಅತೃಪ್ತಿ, ಸ್ವಲ್ಪ ಕೋಪ ಇದ್ದಿರಬಹುದು. ಆದರೆ ಅದು ವ್ಯಾಪಕವಾದ ವಿರೋಧವಲ್ಲ. ಪ್ರತಿಪಕ್ಷಗಳಿಂದಲೂ ಈ ವಿಚಾರದಲ್ಲಿ ವ್ಯಾಪಕವಾದ ಸಕಾರಾತ್ಮಕ ಧ್ವನಿ ಇರಲಿಲ್ಲ. ಒಟ್ಟಾರೆ ಯಥಾ ಸ್ಥಿತಿ ಮುಂದುವರಿದಿದೆ ಎಂದು ಪ್ರಶಾಂತ್ ಕಿಶೋರ್ ವಿವರಿಸಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ; ಬ್ರ್ಯಾಂಡ್ ರಾಹುಲ್ ಪುನರುಜ್ಜೀವನದ ಸಂಕೇತವಲ್ಲ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 99 ಸ್ಥಾನ ಸಿಕ್ಕಿದೆ. ಈ ಗೆಲುವು ಬ್ರ್ಯಾಂಡ್ ರಾಹುಲ್ ಗಾಂಧಿ ಪುನರುಜ್ಜೀವನದ ಸಂಕೇತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, ನಿಜವಾಗಿಯೂ ಅಲ್ಲ. ಇದು ರಾಹುಲ್ ಗಾಂಧಿ ಅವರ ವರ್ಚಸ್ಸನ್ನು ಅವರ ಬೆಂಬಲಿಗರು, ಮತದಾರರು ಮತ್ತು ಕಾರ್ಯಕರ್ತರ ಮುಂದೆ ಮಾತ್ರ ಪುನರುಜ್ಜೀವನಗೊಳಿಸಿದೆ. ಆ ವಲಯದಲ್ಲಿ, ಅವರು ಪಕ್ಷವನ್ನು, ಅವರನ್ನು ಗೆಲುವಿನತ್ತ ಮುನ್ನಡೆಸಬಲ್ಲ ವ್ಯಕ್ತಿ ಎಂಬ ಹೆಚ್ಚಿನ ವಿಶ್ವಾಸ ಮೂಡುವಂತೆ ಮಾಡಿದೆ" ಎಂದು ಅವರು ವಿವರಿಸಿದರು.

ಈ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಈ ಉದಾಹರಣೆಯನ್ನು ಗಮನಿಸೋಣ ಎಂದ ಪ್ರಶಾಂತ್ ಕಿಶೋರ್, “ನಿಮ್ಮ ಮಗ ಸದಾ ಅನುತ್ತೀರ್ಣನಾಗುತ್ತಿದ್ದವನು, ಶೇಕಡ 60 ಅಂಕ ಪಡೆದರೆ ಆಗ ನೀವು ಸಂತೋಷಪಡುತ್ತೀರಿ. ನಿಮ್ಮ ಇನ್ನೊಬ್ಬ ಮಗ ಸಾಮಾನ್ಯವಾಗಿ ಶೇಕಡ 90 ಅಂಕ ಪಡೆಯುತ್ತಿದ್ದವನು ಶೇಕಡ 70 ಅಂಕ ಗಳಿಸಿದರೆ ಆಗ ನೀವು ನಿರಾಶೆಗೊಳ್ಳುತ್ತೀರಿ. ಈ ಫಲಿತಾಂಶವೂ ಅಷ್ಟೇ”ಎಂದು ಹೇಳಿದರು.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಮಾತನಾಡಿದ ಕಿಶೋರ್, ಈ ಚುನಾವಣೆ ಪಕ್ಷದ ಇತಿಹಾಸದಲ್ಲಿ ಮೂರನೇ ಕೆಟ್ಟ ಚುನಾವಣಾ ಫಲಿತಾಂಶಗಳನ್ನು ಕಂಡಿದೆ ಎಂದು ಹೇಳಿದರು.

1977ರಲ್ಲಿ ಇಂದಿರಾ ಗಾಂಧಿ ಅಧಿಕಾರ ಕಳೆದುಕೊಂಡಾಗ ಕಾಂಗ್ರೆಸ್ 154 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 99 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್‌ ಪಕ್ಷದ ಪುನರುಜ್ಜೀವನವನ್ನು ಸೂಚಿಸುವ ವಿಷಯವಲ್ಲ. ಆದಾಗ್ಯೂ ಅವರಿಗೆ ಅವಕಾಶವಿದೆ ಎಂಬುದನ್ನು ಈ ಫಲಿತಾಂಶ ತೋರಿಸುತ್ತದೆ" ಎಂದು ಕಿಶೋರ್ ವಿವರಿಸಿದರು.

2024 ರ ಲೋಕಸಭಾ ಫಲಿತಾಂಶಗಳು ಪ್ರಕಟವಾದ ನಂತರ ಪ್ರಶಾಂತ್‌ ಕಿಶೋರ್ ಅವರ ಮೊದಲ ಮಾಧ್ಯಮ ಸಂವಾದ ಇದಾಗಿತ್ತು. ಪತ್ರಕರ್ತ ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ ಮುನ್ನಂದಾಜು ಕುರಿತು ಮಾತನಾಡುತ್ತ ಕೋಪಗೊಂಡಿದ್ದ ಪ್ರಶಾಂತ್ ಕಿಶೋರ್‌, ತನ್ನ ಅಂದಾಜು ಸರಿ ಇದೆ ಎಂದೇ ಪ್ರತಿಪಾದಿಸಿದ್ದರು. ಬಿಜೆಪಿಯೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೇ ಎಂದೇ ವಾದಿಸಿದ್ದರು. ಆದರೆ ಫಲಿತಾಂಶ ಭಿನ್ನವಾಗಿ ಬಂದಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024