Indian Railways: ಇನ್ಮುಂದೆ ಎಲ್ಲರಿಗೂ ಟ್ರೇನ್ ಟಿಕೆಟ್ ಸಿಗೋದು ಖಾತ್ರಿ, 10 ಸಾವಿರ ಹೊಸ ಬೋಗಿ ಅಳವಡಿಕೆಗೆ ಭಾರತೀಯ ರೈಲ್ವೆ ನಿರ್ಧಾರ
ಭಾರತೀಯ ರೈಲ್ವೆಯು ಮುಂದಿನ ಎರಡು ವರ್ಷಗಳಲ್ಲಿ 6 ಸಾವಿರ ಜನರಲ್ ಕ್ಲಾಸ್ ಬೋಗಿಗಳು ಸೇರಿದಂತೆ ಒಟ್ಟು 10 ಸಾವಿರ ಹೊಸ ನಾನ್-ಏಸಿ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. ಇದರಿಂದ ಹಲವು ಸಾವಿರ, ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಪ್ರಯಾಣಕ್ಕೆ ಸೀಟು ದೊರಕಲಿದೆ.
ಬೆಂಗಳೂರು: ಭಾರತೀಯ ರೈಲ್ವೆಯ ರೈಲುಗಳಲ್ಲಿ ಕೆಲವು ಕಡೆ ಪ್ರಯಾಣಿಸಲು ಹಲವು ತಿಂಗಳ ಹಿಂದೆಯೇ ಟಿಕೆಟ್ ಬುಕ್ಕಿಂಗ್ ಮಾಡಬೇಕು. ಇಲ್ಲವಾದರೆ ಟಿಕೆಟ್ ದೊರಕುವುದಿಲ್ಲ. ರೈಲ್ವೆಯಲ್ಲಿ ಈ ರೀತಿಯ ಸಮಸ್ಯೆ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸೂಚನೆಯಿದೆ. ಭಾರತೀಯ ರೈಲ್ವೆಯು ಮುಂದಿನ ಎರಡು ವರ್ಷಗಳಲ್ಲಿ 6 ಸಾವಿರ ಜನರಲ್ ಕ್ಲಾಸ್ ಬೋಗಿಗಳು ಸೇರಿದಂತೆ ಒಟ್ಟು 10 ಸಾವಿರ ಹೊಸ ನಾನ್-ಏಸಿ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. ಇದರಿಂದ ಹಲವು ಸಾವಿರ, ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಪ್ರಯಾಣಕ್ಕೆ ಸೀಟು ದೊರಕಲಿದೆ.
ವಿಶೇಷವಾಗಿ ಸಾಮಾನ್ಯ ದರ್ಜೆ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕವಾಗಿಸಲು ಭಾರತೀಯ ರೈಲ್ವೆ ಪ್ರಯತ್ನಿಸುತ್ತಿದೆ. ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದರಿಂದ ಈ ತಿಂಗಳ ಕೊನೆಗೆ ಸುಮಾರು 370 ಹೊಸ ರೆಗ್ಯುಲರ್ ಟ್ರೇನ್‌ಗಳನ್ನು ಹಳಿಗೆ ಬಿಡಲು ರೈಲ್ವೆ ನಿರ್ಧರಿಸಿದೆ. ಇದರಿಂದ ಒಂದು ಲಕ್ಷ ಪ್ರಯಾಣಿಕರು ಹೆಚ್ಚುವರಿಯಾಗಿ ರೈಲಿನಲ್ಲಿ ಪ್ರಯಾಣಿಸಬಹುದು. ಇದೇ ಸಮಯದಲ್ಲಿ ಈಶಾನ್ಯ ಗಡಿ ರೈಲ್ವೆಯಲ್ಲೂ ಹೊಸ ಟ್ರೆನ್‌ಗಳು, ಬೋಗಿಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಎನ್‌ಡಿಟಿವಿ ವರದಿಯೊಂದು ತಿಳಿಸಿದೆ.
ಮುಂದಿನ ಎರಡು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹೊಸ ನಾನ್ ಏಸಿ ಕೋಚ್‌ಗಳನ್ನು ಪರಿಚಯಿಸಲು ಯೋಜಿಸಲಾಗಿದೆ. ಇದರಲ್ಲಿ 6 ಸಾವಿರ ಜನರಲ್ ಕ್ಲಾಸ್ ಬೋಗಿಗಳಾಗಿರಲಿವೆ. ಹೆಚ್ಚುವರಿಯಾಗಿ ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿನಿತ್ಯ ಹೆಚ್ಚುವರಿಯಾಗಿ ಪ್ರಯಾಣಿಸಬಹುದು ಎಂದು ಸಿಪಿಆರ್‌ಒ ಕಪಿಲ್ ಕಿಶೋರ್ ಶರ್ಮಾ ಹೇಳಿದ್ದಾರೆ.
ಇದೇ ಸಮಯದಲ್ಲಿ ಈಶಾನ್ಯ ಗಡಿ ರೈಲ್ವೆಗೂ ಸಾಕಷ್ಟು ಹೆಚ್ಚುವರಿ ಕೋಚ್‌ಗಳು, ರೈಲುಗಳು ದೊರಕಲಿವೆ ಎಂದು ಅವರು ಹೇಳಿದ್ದಾರೆ. "ಈ ವರ್ಷ ಜುಲೈನಿಂದ ಅಕ್ಟೋಬರ್‌ವರಗೆ ಈಶಾನ್ಯ ಗಡಿ ರೈಲ್ವೆ ವಿಭಾಗಕ್ಕೆ 370ನ ಹೊಸ ರೈಲುಗಳು ಸೇರ್ಪಡೆಯಾಗಿವೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಪ್ರತಿದಿನ ಅಂದಾಜು ಎಷ್ಟು ರೈಲುಗಳು ಸಂಚರಿಸುತ್ತವೆ?
ಭಾರತೀಯ ರೈಲ್ವೆಯು ಪ್ರತಿದಿನ 13 ಸಾವಿರಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ನಡೆಸುತ್ತದೆ. ಇದೇ ಸಮಯದಲ್ಲಿ 8 ಸಾವಿರ ಸರಕು ಸಾಗಾಟ ರೈಲುಗಳು ಸಂಚರಿಸುತ್ತವೆ. ಜಗತ್ತಿನಲ್ಲಿ ಭಾರತೀಯ ರೈಲ್ವೆಯು ಅಗ್ರ ನಾಲ್ಕನೇ ರಾಷ್ಟ್ರೀಯ ರೈಲು ವ್ಯವಸ್ಥೆ ಹೊಂದಿದೆ. ಭಾರತದ ಒಟ್ಟಾರೆ ರೈಲು ಮಾರ್ಗದ ಉದ್ದ 42 ಸಾವಿರ ಮೈಲುಗಳಾಗಿವೆ.
ಚೀನಾದಲ್ಲಿ ಪ್ರತಿದಿನ ಎಷ್ಟು ರೈಲು ಸಂಚರಿಸುತ್ತವೆ?
ಜನಸಂಖ್ಯೆ ಆಧಾರದಲ್ಲಿ ಭಾರತಕ್ಕಿಂತ ಮುಂದಿರುವ ಚೀನಾದಲ್ಲಿಯೂ ರೈಲು ವ್ಯವಸ್ಥೆ ಉತ್ತಮವಾಗಿದೆ. ಅಲ್ಲಿ ಪ್ರತಿದಿನ 13 ಸಾವಿರಕ್ಕೂ ಹೆಚ್ಚು ರೈಲು ಸಂಚಾರ ಕೈಗೊಳ್ಳುತ್ತವೆ.
ಭಾರತೀಯ ರೈಲ್ವೆಯು ಪ್ರತಿದಿನ ಎಷ್ಟು ಆದಾಯ ಗಳಿಸುತ್ತದೆ?
ಭಾರತೀಯ ರೈಲ್ವೆಯ ವಾರ್ಷಿಕ ಆದಾಯ 2,25,000 ಕೋಟಿ ರೂಪಾಯಿ ಇದೆ. ಇದನ್ನು ಪ್ರತಿದಿನಕ್ಕೆ ವಿಭಾಗಿಸಿದರೆ ಪ್ರತಿದಿನ 616 ಕೋಟಿ ರೂಪಾಯಿ ಗಳಿಸಿದಂತೆ ಆಗುತ್ತದೆ.