Video: ಹ್ಯಾಂಡಲ್ ಮೇಲೆ ಕೈಯಿಲ್ಲ, ತಲೆ ಮೇಲೆ ಹೆಲ್ಮೆಟ್ ಇಲ್ಲ; ಬುಲೆಟ್ ಸವಾರಿ ಬಳಿಕ 'ಅಲ್ಲಿ ಯಾರೂ ಇರ್ಲಿಲ್ಲ' ಎಂದ ಕಾಂಗ್ರೆಸ್ ಸಂಸದ
Adhir Ranjan Chowdhury Bike Ride Video: ಪಾಸ್ ರಸ್ತೆಯ ಉದ್ಘಾಟನೆಗೆ ತೆರಳಿದ್ದ ಅಧೀರ್ ರಂಜನ್ ಚೌಧರಿ, ಅದೇ ರಸ್ತೆಯಲ್ಲಿ ರಾಯಲ್ ಎನ್‌ಫೀಲ್ಡ್ ಓಡಿಸಿದ್ದಾರೆ. ಆದರೆ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಅಧೀರ್ ರಂಜನ್ ಚೌಧರಿ ಅವರ ಬುಲೆಟ್ ಸವಾರಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಮ್ನೆ ಬೈಕ್ ರೈಡ್ ಮಾಡಿದ್ರೆ ವೈರಲ್ ಆಗುತ್ತಿರಲಿಲ್ಲವೇನೋ ಆದರೆ ಇವರು ತಲೆ ಮೇಲೆ ಹೆಲ್ಮೆಟ್ ಇಲ್ಲದೆ ಹ್ಯಾಂಡಲ್ನಿಂದ ಕೈ ಬಿಟ್ಟು ಬೈಕ್ ಓಡಿಸಿದ್ದಾರೆ.
ಪಶ್ಚಿಮ ಬಂಗಾಳದ ಬರ್ಹಾಂಪೋರ್‌ನಲ್ಲಿ ಬೈಪಾಸ್ ರಸ್ತೆಯ ಉದ್ಘಾಟನೆಗೆ ತೆರಳಿದ್ದ ಅಧೀರ್ ರಂಜನ್ ಚೌಧರಿ, ಅದೇ ರಸ್ತೆಯಲ್ಲಿ ರಾಯಲ್ ಎನ್‌ಫೀಲ್ಡ್ ಓಡಿಸಿದ್ದಾರೆ. ಅವರ ಹಿಂದೆ ಅವರ ಅನೇಕ ಅನುಯಾಯಿಗಳು ಕೂಡ ಬೈಕ್ ಸವಾರಿ ಮಾಡಿದ್ದಾರೆ. ತಲೆ ಮೇಲೆ ಕ್ಯಾಪ್ ಧರಿಸಿದ್ದ ಕಾಂಗ್ರೆಸ್ ನಾಯಕ ತಮ್ಮ ಬುಲೆಟ್ ಸವಾರಿಯನ್ನು ಎಂಜಾಯ್ ಮಾಡಿದ್ದಾರೆ.
ಆದರೆ ಅವರು ಸಂಚಾರ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಒಂದೆಡೆ ತಲೆ ಮೇಲೆ ಹೆಲ್ಮೆಟ್ ಧರಿಸಿಲ್ಲ. ಇನ್ನೊಂದೆಡೆ ಸವಾರಿಯ ಮಧ್ಯೆ ಮಧ್ಯೆ ಹ್ಯಾಂಡಲ್ ಬಿಟ್ಟು ಬೈಕ್ ಓಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಅಧೀರ್ ರಂಜನ್, "ಪೊಲೀಸರು ನನಗೆ ದಂಡ ವಿಧಿಸಿದರೂ ನೋ ಪ್ರಾಬ್ಲಮ್, ಆದರೆ ನಾನು ಬೈಕ್ ಚಲಾಯಿಸುತ್ತಿದ್ದ ಸ್ಥಳದಲ್ಲಿ ಯಾರೂ ಇರಲಿಲ್ಲ" ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ ಸುಮಾರು 11 ಕಿಲೋ ಮೀಟರ್ ದೂರ ಅಧೀರ್ ಬೈಕ್ ಓಡಿಸಿ ತಮ್ಮ ಸ್ಥಳವನ್ನು ತಲುಪಿದ್ದು, ರಸ್ತೆಯ ಸೈಡ್ನಲ್ಲಿ ಅವರನ್ನು ಸ್ವಾಗತಿಸಲು ಜನ ನಿಂತಿದ್ದರು ಎಂದು ಹೇಳಲಾಗಿದೆ.
ಅಧೀರ್ ರಂಜನ್ ಚೌಧರಿ ಯಾವಾಗಲೂ ವಿವಾದದ ಕೇಂದ್ರಬಿಂದುವಾಗಿರುತ್ತಾರೆ. ಕಳೆದ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ, ಅಧೀರ್ ಅವರು ಮಣಿಪುರ ವಿಷಯದ ಬಗ್ಗೆ ಪ್ರಧಾನಿ ಮೋದಿಯನ್ನು ಟೀಕಿಸಿ ದುರ್ನಡತೆಯ ಆರೋಪದ ಮೇಲೆ ಅಧಿವೇಶನದಿಂದ ಅಮಾನತುಗೊಂಡಿದ್ದರು.