Petrol Price in Bangalore: ಪೆಟ್ರೋಲ್, ಡೀಸೆಲ್ ಯತಾಸ್ಥಿತಿ; ಇಂದಿನ ದರಗಳು ಹೀಗಿವೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Petrol Price In Bangalore: ಪೆಟ್ರೋಲ್, ಡೀಸೆಲ್ ಯತಾಸ್ಥಿತಿ; ಇಂದಿನ ದರಗಳು ಹೀಗಿವೆ

Petrol Price in Bangalore: ಪೆಟ್ರೋಲ್, ಡೀಸೆಲ್ ಯತಾಸ್ಥಿತಿ; ಇಂದಿನ ದರಗಳು ಹೀಗಿವೆ

Petrol Price in Bangalore: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಆಗಿಲ್ಲ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿನ ತೈಲ ಬೆಲೆಯ ಮಾಹಿತಿ ಹೀಗಿದೆ.

<p>ಪೆಟ್ರೋಲ್‌, ಡೀಸೆಲ್‌ ದರ (ಸಾಂದರ್ಭಿಕ ಚಿತ್ರ)&nbsp;</p>
ಪೆಟ್ರೋಲ್‌, ಡೀಸೆಲ್‌ ದರ (ಸಾಂದರ್ಭಿಕ ಚಿತ್ರ)&nbsp; ( Waseem Andrabi/Hindustan Times)

ಬೆಂಗಳೂರು: ಇವತ್ತು ಪೆಟ್ರೋಲ್‌ ಬೆಲೆ ಏಷ್ಟು? - ಇದು ಬಹುತೇಕರು ಮನೆ ಬಿಟ್ಟ ಕೂಡಲೇ ಗಮನಿಸುವ ವಿಚಾರ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಾಲ್ತಿಯಲ್ಲಿರುವ ಬೆಲೆ ಮತ್ತು ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಆಧರಿಸಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿತ್ಯವೂ ಪರಿಷ್ಕರಿಸುತ್ತವೆ. ದೇಶದ ಹಲವೆಡೆ ಈ ಬೆಲೆಯಲ್ಲಿ ತೆರಿಗೆ, ಕಮಿಷನ್‌, ಸಾಗಣೆ ವೆಚ್ಚ ಆಧರಿಸಿ ಸ್ವಲ್ಪ ದರ ವ್ಯತ್ಯಾಸ ಕಂಡುಬರುತ್ತದೆ. ಆದಾಗ್ಯೂ ಈಗ ಸರಿಸುಮಾರು 72 ದಿನಗಳಿಂದ ದರದಲ್ಲಿ ವ್ಯತ್ಯಾಸವಾಗಿಲ್ಲ. ರಾಜ್ಯದಲ್ಲಿ ಬೆಂಗಳೂರು (Petrol Price in Bangalore) ಸೇರಿ ಇತರೆ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ಕೆಳಗಿನಂತಿವೆ.

ರಾಜ್ಯದಲ್ಲಿ ತೈಲ ದರ ಇಂತಿದೆ:

ನಗರ ಪೆಟ್ರೋಲ್ (ಲೀ. ದರ) ಡೀಸೆಲ್ (ಲೀ. ದರ)

ಬೆಂಗಳೂರು 101.94 ರೂ. 87.89

ಹುಬ್ಬಳ್ಳಿ 101.65 ರೂ. 87.65 ರೂ.

ದಾವಣಗೆರೆ 103.95 ರೂ. 89.38 ರೂ.

ಮೈಸೂರು 101.44 ರೂ. 87.43 ರೂ.

ಶಿವಮೊಗ್ಗ 103.66 ರೂ. 88.58 ರೂ.

ಮಂಗಳೂರು 101.85 ರೂ, 87.78 (ಪ್ರದೇಶಕ್ಕೆ ಅನುಗುಣವಾಗಿ ಕೆಲವೆಡೆ ಬೆಲೆಗಳಲ್ಲಿ ವ್ಯತ್ಯಾಸ ಇರುತ್ತದೆ)

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿದಂತೆ ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪ್ರತಿದಿನ ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ಜಾರಿಗೆ ತರಲಾಗುತ್ತದೆ. ವ್ಯಾಟ್ ಅಥವಾ ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳಿಂದಾಗಿ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಎಲ್ಲಾ ರಾಜ್ಯಗಳಲ್ಲೂ ಪೆಟ್ರೋಲ್​ ಬೆಲೆ ಶತಕದ ಗಡಿ ದಾಟಿದ್ದು, ಡೀಸೆಲ್​ ಬೆಲೆಯೂ ಎಂಬತ್ತು-ತೊಂಬತ್ತರ ಗಡಿ ತಲುಪಲಿದೆ.

ಮೆಟ್ರೋನಗರಗಳಲ್ಲಿ ಇಂಧನ ದರ ವಿವರ ಏನು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರೂಪಾಯಿ ಇದೆ. ಡೀಸೆಲ್ ಲೀಟರ್‌ಗೆ 89.62 ಆಗಿದೆ. ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ 106.31 ರೂಪಾಯಿ ಇದೆ. ಡೀಸೆಲ್ ಚಿಲ್ಲರೆ ಮಾರಾಟದಲ್ಲಿ ಡೀಸೆಲ್ 94.27 ರೂಪಾಯಿ ಇದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 102.63 ರೂ.ಗೆ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ಮೇ 21ರಂದು ಸುಂಕ ಇಳಿಸಿದ್ದ ಸರ್ಕಾರ

ದೇಶದಲ್ಲಿ ಮೇ 21 ರಿಂದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಹಾಗೂ ಡೀಸೆಲ್‌ಗೆ 6 ರೂಪಾಯಿ ಕಡಿತಗೊಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಆದಾದ ಬಳಿಕ ತೈಲ ಬೆಳೆಗಳು ಸ್ಥಿರವಾಗಿದೆ.

ಸದ್ಯ ದೇಶದಲ್ಲಿ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿರುವುದರಿಂದ ಅಗತ್ಯ ಬೆಲೆಗಳ ಏರಿಕೆಯಿಂ ಹೈರಾಣವಾಗಿರುವ ಸಾಮಾನ್ಯ ಜನರು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.