Video: ಭಾರತೀಯ ವಾದ್ಯ ಸಿತಾರ್ ನುಡಿಸಿದ ಸಿಂಗಾಪುರ ಡೆಪ್ಯುಟಿ ಪಿಎಂ: ಫಿದಾ ಆದ್ರು ನರೇಂದ್ರ ಮೋದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Video: ಭಾರತೀಯ ವಾದ್ಯ ಸಿತಾರ್ ನುಡಿಸಿದ ಸಿಂಗಾಪುರ ಡೆಪ್ಯುಟಿ ಪಿಎಂ: ಫಿದಾ ಆದ್ರು ನರೇಂದ್ರ ಮೋದಿ

Video: ಭಾರತೀಯ ವಾದ್ಯ ಸಿತಾರ್ ನುಡಿಸಿದ ಸಿಂಗಾಪುರ ಡೆಪ್ಯುಟಿ ಪಿಎಂ: ಫಿದಾ ಆದ್ರು ನರೇಂದ್ರ ಮೋದಿ

ಸಿತಾರ್​ ಕಲಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದ ಸಿಂಗಾಪುರ ಡೆಪ್ಯುಟಿ ಪಿಎಂ ಲಾರೆನ್ಸ್ ವಾಂಗ್ ಅವರು, "ಈ ಅನುಭವವನ್ನು ಆನಂದಿಸಿದೆ ಮತ್ತು ಶ್ರೀಮಂತ ಶಾಸ್ತ್ರೀಯ ಭಾರತೀಯ ಸಂಗೀತ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಇದಾಗಿದೆ" ಎಂದು ಬರೆದುಕೊಂಡಿದ್ದಾರೆ.

ಲಾರೆನ್ಸ್ ವಾಂಗ್ - ನರೇಂದ್ರ ಮೋದಿ
ಲಾರೆನ್ಸ್ ವಾಂಗ್ - ನರೇಂದ್ರ ಮೋದಿ

ಸಿಂಗಾಪುರದ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಭಾರತೀಯ ಸಂಗೀತ ವಾದ್ಯಗಳಲ್ಲಿ ಒಂದಾದ ಸಿತಾರ್ ಕಲಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಫಿದಾ ಆಗಿದ್ದಾರೆ.

ಕಾರ್ತಿಗಯನ್ ಎಂಬವರ ಬಳಿ ಸಿತಾರ್​ ಕಲಿಯುತ್ತಿರುವ ವಿಡಿಯೋವನ್ನು ಎಕ್ಸ್​ (ಟ್ವಿಟರ್​)ನಲ್ಲಿ ಹಂಚಿಕೊಂಡಿದ್ದ ಸಿಂಗಾಪುರ ಡೆಪ್ಯುಟಿ ಪಿಎಂ ಲಾರೆನ್ಸ್ ವಾಂಗ್ ಅವರು, "ಸಿತಾರ್‌ನ ಸುಂದರವಾದ ಟ್ಯೂನ್‌ಗಳ ಪರಿಚಯವನ್ನು ಪಡೆಯುತ್ತಿದ್ದೇನೆ. ಸ್ವಲ್ಪ ಸಮಯದಿಂದ ಇಲ್ಲಿ ಕಾರ್ತಿಗಯನ್ ಅವರು ಕಲಿಯುತ್ತಿದ್ದಾರೆ. ಸಿತಾರ್​​ನ ಮೂಲ ತಂತ್ರಗಳ ಬಗ್ಗೆ ತುಂಬಾ ತಾಳ್ಮೆಯಿಂದ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಅನುಭವವನ್ನು ಆನಂದಿಸಿದೆ ಮತ್ತು ಶ್ರೀಮಂತ ಶಾಸ್ತ್ರೀಯ ಭಾರತೀಯ ಸಂಗೀತ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಇದಾಗಿದೆ" ಎಂದು ಬರೆದುಕೊಂಡಿದ್ದಾರೆ.

ಲಾರೆನ್ಸ್ ವಾಂಗ್ ಅವರ ಪೋಸ್ಟ್​ ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, "ಸಿತಾರ್‌ ಬಗೆಗೆ ನಿಮ್ಮ ಉತ್ಸಾಹವು ಇನ್ನೂ ಬೆಳೆಯಲಿ ಮತ್ತು ಇತರರಿಗೆ ಸ್ಫೂರ್ತಿಯಾಗಲಿ. ಈ ಮಧುರ ಪ್ರಯತ್ನಕ್ಕೆ ಅಭಿನಂದನೆಗಳು. ಭಾರತದ ಸಂಗೀತ ಇತಿಹಾಸವು ವೈವಿಧ್ಯತೆಯ ಸ್ವರಮೇಳವಾಗಿದೆ, ಇದು ಸಹಸ್ರಾರು ವರ್ಷಗಳಿಂದ ವಿಕಸನಗೊಂಡ ಲಯಗಳ ಮೂಲಕ ಪ್ರತಿಧ್ವನಿಸುತ್ತದೆ" ಎಂದು ಟ್ವೀಟ್​ ಮಾಡಿದ್ದಾರೆ.

ನವೆಂಬರ್ 14 ರಂದು ಪಿಎಂ ಮೋದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದು, ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಿತಾರ್ ಕಲಿಯುವ ವಾಂಗ್ ಅವರ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. "ನಮ್ಮ ಕಿವಿಗಳಿಗೆ ಒಳ್ಳೆಯ ಟ್ರೀಟ್​" ಎಂದು ಒಬ್ಬರೆ ಹೇಳಿದರೆ, "ನೀವು ಚೆನ್ನಾಗಿ ಸಿತಾರ್​ ನುಡಿಸುತ್ತಿದ್ದೀರಿ, ಇಷ್ಟವಾಯಿತು" ಎಂದು ಮತ್ತೊಬ್ಬರು, "ಈ ಸಂಗೀತವು ತುಂಬಾ ಅದ್ಭುತವಾಗಿದೆ" ಎಂದು ಮಗದೊಬ್ಬರು ಕಾಮೆಂಟ್​ ಮಾಡಿದ್ದಾರೆ.

"ಸಿತಾರ್​, ಇದೊಂದು ಉತ್ತಮವಾದ ವಾದ್ಯ ಆದರೆ ಸ್ಪಷ್ಟ, ಸಂಕೀರ್ಣ ತಂತ್ರ, ತಂತಿಗಳು ಇತ್ಯಾದಿಗಳಿಂದ ಚೆನ್ನಾಗಿ ನುಡಿಸಲು ಸವಾಲಿನ ವಾದ್ಯ" ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.