Satta Bazaar Predictions: ರಾಜಸ್ಥಾನ ಬಿಜೆಪಿ, ಮಧ್ಯಪ್ರದೇಶ ಕಾಂಗ್ರೆಸ್‌, ತೆಲಂಗಾಣದಲ್ಲಿ ಯಾರು; ಉದ್ಯಮಿ ಹರ್ಷ ಗೋಯೆಂಕಾ ಟ್ವೀಟ್ ವೈರಲ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Satta Bazaar Predictions: ರಾಜಸ್ಥಾನ ಬಿಜೆಪಿ, ಮಧ್ಯಪ್ರದೇಶ ಕಾಂಗ್ರೆಸ್‌, ತೆಲಂಗಾಣದಲ್ಲಿ ಯಾರು; ಉದ್ಯಮಿ ಹರ್ಷ ಗೋಯೆಂಕಾ ಟ್ವೀಟ್ ವೈರಲ್

Satta Bazaar Predictions: ರಾಜಸ್ಥಾನ ಬಿಜೆಪಿ, ಮಧ್ಯಪ್ರದೇಶ ಕಾಂಗ್ರೆಸ್‌, ತೆಲಂಗಾಣದಲ್ಲಿ ಯಾರು; ಉದ್ಯಮಿ ಹರ್ಷ ಗೋಯೆಂಕಾ ಟ್ವೀಟ್ ವೈರಲ್

ಕ್ರಿಕೆಟ್ ಇರಬಹುದು, ಚುನಾವಣೆ ಇರಬಹುದು ಬೆಟ್ಟಿಂಗ್ ನಡೆಯೋದು ಸಾಮಾನ್ಯ. ಬೆಟ್ಟಿಂಗ್ ವಹಿವಾಟನ್ನು ಜೂಜು ಎಂದು ಪರಿಗಣಿಸಲಾಗುತ್ತದೆ. ಆದರೂ, ಇದು ಅನೌಪಚಾರಿಕವಾಗಿ ನಡೆಯುವ ವಹಿವಾಟಾಗಿದ್ದು, ಈಗ ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. ಇದರ ವಿವರ ಬಹಿರಂಗವಾಗಿದ್ದು, ಉದ್ಯಮಿ ಹರ್ಷ ಗೋಯೆಂಕಾ ಅವರ ಟ್ವೀಟ್ ವೈರಲ್ ಆಗಿದೆ.

ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಮಿಜೋರಾಂ ರಾಜ್ಯಗಳ ವಿಧಾನ ಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಡಿಸೆಂಬರ್ 3ಕ್ಕೆ ಫಲಿತಾಂಶಕ್ಕಾಗಿ ಜನ ಎದುರುನೋಡುತ್ತಿದ್ದಾರೆ. ಈ ನಡುವೆ, ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ಜೋರಾಗಿದ್ದು, ಯಾವ ರಾಜ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಜೋರಾಗಿ ನಡೆದಿದೆ.
ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಮಿಜೋರಾಂ ರಾಜ್ಯಗಳ ವಿಧಾನ ಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಡಿಸೆಂಬರ್ 3ಕ್ಕೆ ಫಲಿತಾಂಶಕ್ಕಾಗಿ ಜನ ಎದುರುನೋಡುತ್ತಿದ್ದಾರೆ. ಈ ನಡುವೆ, ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ಜೋರಾಗಿದ್ದು, ಯಾವ ರಾಜ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಜೋರಾಗಿ ನಡೆದಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ (Lok Sabha Election 2024) ಗೆ ಮುಂಚಿತವಾಗಿ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆ ಕೊನೆಯ ಹಂತಕ್ಕೆ ಬಂದಿದೆ. ಇಂದು ಕೊನೆಯದಾಗಿ ತೆಲಂಗಾಣ ಚುನಾವಣೆ (Telangana Election) ನಡೆಯುತ್ತಿದ್ದು, 119 ಕ್ಷೇತ್ರಗಳಲ್ಲಿ ಮತದಾನ ಪ್ರಗತಿಯಲ್ಲಿದೆ. ನವೆಂಬರ್ 7 ಮತ್ತು 25ರ ನಡುವೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಮಿಜೋರಾಂ ವಿಧಾನ ಸಭೆ ಚುನಾವಣೆಯ ಮತದಾನ ಪೂರ್ಣವಾಗಿದೆ. ಡಿಸೆಂಬರ್ 3ಕ್ಕೆ ಐದೂ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

ಈ ನಡುವೆ, ಸಟ್ಟಾ ಬಜಾರ್ ಅಥವಾ ಬೆಟ್ಟಿಂಗ್ ಮಾರುಕಟ್ಟೆಯ ವಹಿವಾಟು ವಿವರ ಗಮನಸೆಳೆದಿದೆ. ಕ್ರಿಕೆಟ್ ಸೇರಿ ಪ್ರಮುಖ ವಿದ್ಯಮಾನಗಳು ನಡೆದಾಗ ಸಟ್ಟಾ ಬಜಾರ್ ಅಥವಾ ಬೆಟ್ಟಿಂಗ್ ಮಾರುಕಟ್ಟೆ ಹೆಚ್ಚು ಸಕ್ರಿಯವಾಗಿರುತ್ತದೆ. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎಂಬುದರ ಕುರಿತು ಬೆಟ್ಟಿಂಗ್ ನಡೆಯುತ್ತಿದೆ.

ಖ್ಯಾತಿ ಉದ್ಯಮಿ ಆರ್‌ಪಿಜಿ ಗ್ರೂಪ್‌ನ ಮುಖ್ಯಸ್ಥ ಹರ್ಷ ಗೋಯೆಂಕಾ ಅವರು ಸಟ್ಟಾ ಬಜಾರ್ ಊಹೆಯ ಫಲಿತಾಂಶವನ್ನು ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ.

ಉದ್ಯಮಿ ಹರ್ಷ ಗೋಯೆಂಕಾ ಟ್ವೀಟ್‌ನಲ್ಲಿ ಏನಿದೆ..

ಡಿಸೆಂಬರ್ 3 ರಂದು ಪ್ರಕಟವಾಗುವ ವಿಧಾನಸಭಾ ಚುನಾವಣಾ ಫಲಿತಾಂಶಕ್ಕಾಗಿ ಎಲ್ಲರೂ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಕುತೂಹಲ ತಣಿಸುವುದಕ್ಕೆ ಉತ್ತಮ ಆಯ್ಕೆ ಬೆಟ್ಟಿಂಗ್ ಮಾರ್ಕೆಟ್ ಅಥವಾ ಸಟ್ಟಾ ಬಜಾರ್ ಮತ್ತು ಅವು ನುಡಿಯುವ ಭವಿಷ್ಯ ಎಂದು ಹರ್ಷ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

ಅವರ ಟ್ವೀಟ್‌ನಲ್ಲಿರುವ ಮಾಹಿತಿ ಪ್ರಕಾರ ಬೆಟ್ಟಿಂಗ್ ನಡೆಯುತ್ತಿರುವುದು ಹೀಗಿದೆ..

ಛತ್ತೀಸ್‌ಗಡದಲ್ಲಿ ಬಿಜೆಪಿ 37, ಕಾಂಗ್ರೆಸ್ 50, ತೆಲಂಗಾಣ ಬಿಜೆಪಿ 4, ಕಾಂಗ್ರೆಸ್ 53, ಬಿಆರ್‌ಎಸ್ 53, ಮಧ್ಯ ಪ್ರದೇಶ ಬಿಜೆಪಿ 106, ಕಾಂಗ್ರೆಸ್ 117, ರಾಜಸ್ಥಾನ ಬಿಜೆಪಿ 115 ಮತ್ತು ಕಾಂಗ್ರೆಸ್ 68 ಎಂದು ಬೆಟ್ಟಿಂಗ್ ನಡೆಯುತ್ತಿದೆ.

ತೆಲಂಗಾಣ ಚುನಾವಣೆ - ಸಟ್ಟಾ ಬಜಾರ್‌ ಬೆಟ್ಟಿಂಗ್‌ ಹೀಗಿದೆ..

ತೆಲಂಗಾಣದಲ್ಲಿ ಮಂಗಳವಾರ ಪ್ರಚಾರ ಅಭಿಯಾನ ಕೊನೆಯಾಗುತ್ತಿದ್ದಂತೆ ಸಟ್ಟಾ ಬಜಾರ್ ವಹಿವಾಟು ಬಹಳ ಚುರುಕಾಗಿದೆ. ಕಾಂಗ್ರೆಸ್‌, ಬಿಆರ್‌ಎಸ್, ಬಿಜೆಪಿ, ಎಂಐಎಂ ಎಷ್ಟು ಸ್ಥಾನಗಳಲ್ಲಿ ವಿಜಯಿ ಆಗಲಿದೆ ಎಂಬುದರ ಮೇಲೆ ಬೆಟ್ಟಿಂಗ್ ನಡೆದಿದೆ.

ಸತತ ಎರಡು ಅವಧಿಗೆ ಕೆಸಿಆರ್‌ ಆಳ್ವಿಕೆ ನೋಡಿದ ಜನರಲ್ಲಿ ಆಡಳಿತ ವಿರೋಧಿ ಭಾವನೆ ಸೃಷ್ಟಿಯಾಗತೊಡಗಿದ್ದು, ಪರ್ಯಾಯವಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡುತ್ತಾರಾ ಅಥವಾ ಬಿಜೆಪಿಯನ್ನು ಆಯ್ಕೆ ಮಾಡುತ್ತಾರಾ ಎಂಬುದು ಪ್ರಶ್ನೆ.

ಈ ಸನ್ನಿವೇಶದಲ್ಲಿ ತೆಲಂಗಾಣದ ಸಟ್ಟಾ ಬಜಾರ್ (ಬೆಟ್ಟಿಂಗ್ ಮಾರ್ಕೆಟ್)ನಲ್ಲಿ ಪ್ರಮುಖವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರುವ ಅಂಶವನ್ನು ಪರಿಗಣಿಸಿದ್ದಾರೆ. ಹೀಗಾಗಿ, ತೆಲಂಗಾಣದ ಪಂಟರ್‌ಗಳು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಆಂಧ್ರ ಪ್ರದೇಶದ ಪಂಟರ್‌ಗಳು ಬಿಆರ್‌ಎಸ್ ಮೇಲೆ 1ಕ್ಕೆ 3 ಮತ್ತು ಕಾಂಗ್ರೆಸ್‌ ಮೇಲೆ 1ಕ್ಕೆ 5ರಂತೆ ಬೆಟ್ಟಿಂಗ್ ನಡೆಸಿದ್ದಾರೆ.

ತೆಲಂಗಾಣ ಚುನಾವಣೆ ಸಂಬಂಧಿಸಿದ ಬೆಟ್ಟಿಂಗ್ ಮಾಹಿತಿ ಪ್ರಕಾರ, ಪಂಟರ್‌ಗಳು 100 ಸ್ಥಾನಗಳ ಪೈಕಿ ಆಡಳಿತಾರೂಢ ಬಿಆರ್‌ಎಸ್ 52, ಕಾಂಗ್ರೆಸ್‌ 59, ಬಿಜೆಪಿ 5, ಎಐಎಂಐಎಂ 6 ಸ್ಥಾನಗಳ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎನ್ನಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.