ಮದುವೆ ಮನೆಯಲ್ಲಿ ಬಾಡೂಟಕ್ಕೆ ಜಗಳ, ಕೈಕೈ ಮಿಲಾಯಿಸಿ ಒಟ್ಟು 8 ಮಂದಿ ಆಸ್ಪತ್ರೆಗೆ ದಾಖಲು-total of 8 people were admitted to the hospital due to a fight in the wedding house incident in nizamabad smk ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮದುವೆ ಮನೆಯಲ್ಲಿ ಬಾಡೂಟಕ್ಕೆ ಜಗಳ, ಕೈಕೈ ಮಿಲಾಯಿಸಿ ಒಟ್ಟು 8 ಮಂದಿ ಆಸ್ಪತ್ರೆಗೆ ದಾಖಲು

ಮದುವೆ ಮನೆಯಲ್ಲಿ ಬಾಡೂಟಕ್ಕೆ ಜಗಳ, ಕೈಕೈ ಮಿಲಾಯಿಸಿ ಒಟ್ಟು 8 ಮಂದಿ ಆಸ್ಪತ್ರೆಗೆ ದಾಖಲು

ಮದುವೆಯ ಸಂದರ್ಭದಲ್ಲಿ ಹೆಚ್ಚಾಗಿ ಸಂತೋಷ ತುಂಬಿದ್ದರೆ ತೆಲಂಗಾಣದ ಈ ಮದುವೆಯಲ್ಲಿ ಮಾರಾ ಮಾರಿಯಾಗಿದೆ. ಇದಕ್ಕೆ ಕಾರಣ ಬಾಡೂಟ ಬಡಿಸುವಲ್ಲಿ ಹೆಚ್ಚು ಕಡಿಮೆ ಆಗಿದ್ದು. ಎಷ್ಟರ ಮಟ್ಟಿಗೆ ಹೊಡೆದುಕೊಂಡಿದ್ದಾರೆ ಎಂದರೆ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವಿವರಕ್ಕಾಗಿ ಸಂಪೂರ್ಣ ಓದಿ.

ಬಾಡೂಟ
ಬಾಡೂಟ

ತೆಲಂಗಾಣ: ಮದುವೆಯ ಸಂದರ್ಭದಲ್ಲಿ ಹೆಚ್ಚಾಗಿ ಸಂತೋಷ ತುಂಬಿದ್ದರೆ ತೆಲಂಗಾಣದ ಈ ಮದುವೆಯಲ್ಲಿ ಮಾರಾ ಮಾರಿಯಾಗಿದೆ. ಅದು ಕೂಡ ಬಾಡೂಟದ ವಿಷಯವಾಗಿದೆ. ವಧುವಿನ ಸಂಬಂಧಿಕರು ಕುರಿ ಮಾಂಸದ ತುಂಡುಗಳಿಗಾಗಿ ಜಗಳವಾಡಿದ್ದಾರೆ. ರಾತ್ರಿಯ ಊಟದಲ್ಲಿ ಮಟನ್ ಪೀಸ್ ಇಲ್ಲದಿರುವುದರಿಂದ ಆರಂಭವಾದ ಜಗಳ ಕೊನೆ ಕೊನೆಗೆ ಆಸ್ಪತ್ರೆಗೆ ಸೇರುವ ಮಟ್ಟಕ್ಕೆ ತಲುಪಿ ನಂತರ ಸ್ಥಳಕ್ಕೆ ಪೊಲೀಸರು ಬಂದು ಜಗಳ ನಿಲ್ಲಿಸಿದ್ದಾರೆ. ಘರ್ಷಣೆ ತುಸು ಹೆಚ್ಚಾಗೇ ಆಗಿರುವುದರಿಂದ ಪೊಲೀಸರು ಸ್ಥಳಕ್ಕೆ ಬರಬೇಕಾಗಿ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಬಾಡೂಟಕ್ಕೆ ಜಗಳ

ಪರಸ್ಪರ ದಾಳಿಯಿಂದ ವರ ಮತ್ತು ವಧುವಿನ ಸಂಬಂಧಿಕರು ಹಲ್ಲೆ ನಡೆಸಿ ಹಲವರು ಗಾಯಗೊಂಡಿರುವ ಘಟನೆ ಬುಧವಾರ ನಿಜಾಮಾಬಾದ್ ಜಿಲ್ಲೆಯ ನವಿಪೇಟ್‌ನಲ್ಲಿ ನಡೆದಿದೆ. ನಿಜಾಮಾಬಾದ್ ನವಿಪೇಟ್ ಎಸ್.ಎಸ್.ವಿನಯ್ ಅವರು ನೀಡಿದ ವಿವರಗಳ ಪ್ರಕಾರ, ನಂದಿಪೇಟ್ ಮಂಡಲದ ಯುವಕ ಮತ್ತು ನವಿಪೇಟೆಯ ಯುವತಿ ಬುಧವಾರ ನವಿಪೇಟೆಯ ಫಂಕ್ಷನ್ ಹಾಲ್‌ನಲ್ಲಿ ವಿವಾಹವಾದರು. ಮದುವೆಯ ನಂತರದ ಔತಣಕೂಟದಲ್ಲಿ ವರನ ಪರವಾಗಿ ಮದುವೆಗೆ ಬಂದಿದ್ದ ಕೆಲ ಯುವಕರಿಗೆ ಬಾಡೂಟ ಬಡಿಸಲಾಯಿತು.

ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದಾಟ

ಮಟನ್‌ ಪೀಸ್‌ ಕಡಿಮೆ ನೀಡಿದ್ದರಿಂದ ಬಡಿಸಿದ ಜನರೊಂದಿಗೆ ವಾಗ್ವಾದ ನಡೆಸಿದರು. ನಂತರ ಬಡಿಸುತ್ತಿದ್ದವರೂ ಸಹ ಮಾತಿಗಿಳಿದರು. ಆದರೆ ಗಂಡಿನ ಕಡೆಯವರು ಅಡುಗೆಯವರನ್ನು ತುಂಬಾ ನಿಂದಿಸಿದಾಗ ಅದು ಅವರನ್ನು ಕೆಣಕಿದಂತಾಗಿ ಜಗಳ ಆರಂಭವಾಯ್ತು. ವಧುವಿನ ಸಂಬಂಧಿಕರು ಸರಿಯಾಗಿ ವ್ಯವಸ್ಥೆ ಮಾಡಿಲ್ಲ ಎಂಬ ಮಾತುಗಳು ಆರಂಭವಾಯ್ತು, ಆಕ್ರೋಶದಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದುಕೊಂಡಿದ್ದಾರೆ. ಈ ಘಟನೆಯಿಂದ ಮದುವೆ ಔತಣದಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ವರನ ಪರವಾಗಿ ಒಂದು ಗುಂಪು ಹಲ್ಲೆ ನಡೆಸಿದೆ ಇನ್ನೊಂದು ವಧುವಿನ ಸಂಬಂಧಿಕರು ಅಡುಗೆ ವ್ಯವಸ್ಥೆ ಬಗ್ಗೆ ಮಾತನಾಡಿದ್ದಕ್ಕೆ ರೊಚ್ಚಿ ಗೆದ್ದಿದ್ದಾರೆ. ಈ ರೀತಿಯಲ್ಲಿ ಈ ಜಗಳ ತಾರಕಕ್ಕೇರಿ ಕಲ್ಲುಗಳು ಮತ್ತು ಕೋಲುಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ದಾಖಲು

ಇದರಿಂದ ಫಂಕ್ಷನ್ ಹಾಲ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮದುವೆ ಸಮಾರಂಭದಲ್ಲಿ ಮಾರಾಮಾರಿ ನಡೆದಿದೆ ಎಂಬ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. ಘರ್ಷಣೆಗೆ ಕಾರಣರಾದ ಎರಡು ಗುಂಪುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡೂ ಗುಂಪಿನವರು ಪರಸ್ಪರ ದೂರು ನೀಡಿದ್ದರಿಂದ ಈರ್ನಾಳ ಸತ್ಯನಾರಾಯಣ ಹಾಗೂ ಒಂದು ಗುಂಪಿನ ಇತರ 11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ಪತ್ರಿ ಸಾಯಿಬಾಬಾ ಹಾಗೂ ಇತರೆ ಸಮುದಾಯಕ್ಕೆ ಸೇರಿದ ಆರು ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹೊಡೆದಾಟದಲ್ಲಿ ಗಾಯಗೊಂಡಿದ್ದ ಸತ್ಯನಾರಾಯಣ, ಸಾಯಿಬಾಬಾ ಸೇರಿದಂತೆ ಎಂಟು ಮಂದಿಯನ್ನು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆಯ ದಿನ ವಧು-ವರರ ಸಂಬಂಧಿಕರು ಜಗಳವಾಡಿ ಪ್ರಕರಣಗಳಲ್ಲಿ ಕೆಲ ಜನರು ಕುಡಿದು ಗಲಾಟೆ ಮಾಡಿದ್ದಾರೆ ಎಂದೂ ಸಹ ವರದಿಯಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.