UBI Bank: ಯೂನಿಯನ್ ಬ್ಯಾಂಕ್‌ನಲ್ಲಿ 500 ಅಪ್ರೆಂಟಿಸ್ ಹುದ್ದೆ ಖಾಲಿ; ಅರ್ಜಿ ಸಲ್ಲಿಕೆ ಆರಂಭ, ಕರ್ನಾಟಕದಲ್ಲಿ ಎಷ್ಟು ಪೋಸ್ಟ್?
Union Bank of India: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ 500 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಸೆಪ್ಟೆಂಬರ್ 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
Union Bank Apprentice: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ತನ್ನ ಹಲವು ಶಾಖೆಗಳಲ್ಲಿ 500 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅದರಂತೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಗಸ್ಟ್ 28 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 17ರೊಳಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ 40 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ ಎಂದು ಯುಬಿಐನಲ್ಲಿ ಅಧಿಸೂಚನೆಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ತಮ್ಮ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಅರ್ಹತಾ ಮಾನದಂಡಗಳನ್ನು ಸಂಪೂರ್ಣ ಪರಿಶೀಲಿಸಲು ಯುಬಿಐ ಬ್ಯಾಂಕ್ ಅಭ್ಯರ್ಥಿಗಳಿಗೆ ಸಲಹೆ ನೀಡಿದೆ. ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಲ್ಲಿ https://www.apprenticeshipindia.gov.in ಮತ್ತು https://nats.education.gov.in ಮಾತ್ರ ನೋಂದಾಯಿಸಿಕೊಳ್ಳಬೇಕು.
ಅರ್ಜಿಯ ಹಾರ್ಡ್ ಕಾಪಿ ಮತ್ತು ಇತರ ದಾಖಲೆಗಳನ್ನು ಯುಬಿಐ ಕಚೇರಿಗೆ ಕಳುಹಿಸಬೇಕಾಗಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಪ್ರಕಾರ ಆಯಾ ರಾಜ್ಯಗಳಲ್ಲಿ SC/ST/OBC/PWD ಇತ್ಯಾದಿ ಅಪ್ರೆಂಟಿಸ್ ಆಯ್ಕೆಗಳಲ್ಲಿ ಮೀಸಲಾತಿ ಜಾರಿಗೊಳಿಸಲಾಗುವುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 800 ರೂಪಾಯಿ, ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳು 600 ರೂಪಾಯಿ ಮತ್ತು ಅಂಗವಿಕಲ ಅಭ್ಯರ್ಥಿಗಳು 400 ರೂಪಾಯಿ ಪಾವತಿಸಬೇಕು.
ಅರ್ಹತೆ ಏನಿರಬೇಕು?
2024ರ ಆಗಸ್ಟ್ 1ಕ್ಕೆ ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ ತುಂಬಿರಬೇಕು. ಅಂದರೆ 1996ರ ಆಗಸ್ಟ್ 2 ಮತ್ತು 2004ರ ಆಗಸ್ಟ್ 1ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರು. ಆದರೆ, ಕೇಂದ್ರ ಸರ್ಕಾರದ ಪ್ರಕಾರ SC/ST/OBC/PWD ಇತ್ಯಾದಿ ವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. 2024ರ ಸೆಪ್ಟೆಂಬರ್ 17ರೊಳಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.
ತಿಂಗಳಿಗೆ 15 ಸಾವಿರ ಸ್ಟೈಫಂಡ್
ಅಪ್ರೆಂಟಿಸ್‌ಶಿಪ್ ಬ್ಯಾಂಕ್ನ ಉದ್ಯೋಗವಲ್ಲ, ಜೊತೆಗೆ ಗುತ್ತಿಗೆಯೂ ಅಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಅಪ್ರೆಂಟಿಸ್‌ಗಳನ್ನು ಯುಬಿಐ ಉದ್ಯೋಗಿಗಳೆಂದು ಪರಿಗಣಿಸುವುದಿಲ್ಲ. ಒಂದು ವರ್ಷದವರೆಗೆ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲಾಗುತ್ತದೆ. ಅಪ್ರೆಂಟಿಸ್‌ಗಳಿಗೆ ಬ್ಯಾಂಕಿಂಗ್ ಅಭ್ಯಾಸಗಳು ಮತ್ತು ವಿವಿಧ ವಿಷಯಗಳ ಕುರಿತು ಕೆಲಸದ ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಅಪ್ರೆಂಟಿಸ್‌ಗಳಿಗೆ ಮಾಸಿಕ 15 ಸಾವಿರ ರೂಪಾಯಿ ಸ್ಟೈಫಂಡ್ ನೀಡಲಾಗುತ್ತದೆ. ಅಪ್ರೆಂಟಿಸ್‌ಗಳು ಇತರ ಭತ್ಯೆಗಳು ಮತ್ತು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.
ಖಾಲಿ ಇರುವ ಹುದ್ದೆಗಳು
ದೇಶಾದ್ಯಂತ ಒಟ್ಟು ಅಪ್ರೆಂಟಿಸ್‌ಗಳು - 500 (ಕರ್ನಾಟಕದಲ್ಲಿ 50 ಖಾಲಿ ಹುದ್ದೆ)
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
ಆನ್‌ಲೈನ್ ಪರೀಕ್ಷೆ (ಆಬ್ಜೆಕ್ಟಿವ್ ಟೈಪ್), ಸ್ಥಳೀಯ ಭಾಷಾ ಜ್ಞಾನ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಪ್ರಮಾಣಪತ್ರ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು ಸಾಮಾನ್ಯ/ಹಣಕಾಸು ಅರಿವು, ಸಾಮಾನ್ಯ ಇಂಗ್ಲಿಷ್, ಕ್ವಾಂಟಿಟೇಟಿವ್ ಮತ್ತು ರೀಸನಿಂಗ್ ಆಪ್ಟಿಟ್ಯೂಡ್ ಕಂಪ್ಯೂಟರ್ ಜ್ಞಾನ ಎಂಬ 4 ವಿಭಾಗಗಳನ್ನು ಒಳಗೊಂಡಿದೆ. ಪ್ರತಿ ವಿಭಾಗವು 25 ಅಂಕಗಳ 25 ಪ್ರಶ್ನೆಗಳನ್ನು ಹೊಂದಿದ್ದು, 100 ಪ್ರಶ್ನೆಗಳಿಗೆ 100 ಅಂಕ ಇರಲಿದೆ. ಸಮಯ 60 ನಿಮಿಷಗಳು.
ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸುವ ವಿಧಾನ
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಯುಬಿಐ ಇ-ಮೇಲ್ ಮತ್ತು ಎಸ್‌ಎಂಎಸ್ ಮೂಲಕ ಪರೀಕ್ಷೆಗಳು, ಆಯ್ಕೆ ಮತ್ತು ಇತರ ವಿವರಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
- ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಾದ NAPS, NATS ( https://www.apprenticeshipindia.gov.in (ಎಲ್ಲಾ ಅಭ್ಯರ್ಥಿಗಳಿಗೆ) ಹಾಗೂ https://nats.education.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು (2020ರ ಏಪ್ರಿಲ್ 1ರ ನಂತರ ತಮ್ಮ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮಾತ್ರ)
- ಅಭ್ಯರ್ಥಿಗಳು ಅಪ್ರೆಂಟಿಸ್ ಪೋರ್ಟಲ್ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
- NAPS, NATS ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಬೇಕು.
- NAPS, NATS ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಬಹುದು. NAPS ಪೋರ್ಟಲ್ - https://www.apprenticeshipindia.gov.in/apprenticeship/opportunity ಮತ್ತು NATS ಪೋರ್ಟಲ್ https://nats.education.gov.in/student_type.php ನಲ್ಲಿ ಲಾಗಿನ್ ಆದ ನಂತರ ಅಭ್ಯರ್ಥಿಗಳು ಯುಬಿಐ ಅಪ್ರೆಂಟಿಸ್‌ಶಿಪ್ ಜಾಹೀರಾತಿನ ಮೇಲೆ ಕ್ಲಿಕ್ ಮಾಡಬೇಕು.
- ಎಲ್ಲಾ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಭವಿಷ್ಯದ ಉಲ್ಲೇಖಕ್ಕಾಗಿ ತಮ್ಮ ಅಪ್ರೆಂಟಿಸ್ ನೋಂದಣಿ ಕೋಡ್ ಅನ್ನು ಉಳಿಸಿಕೊಳ್ಳಬೇಕು.
- NAPS, NATSನಲ್ಲಿ ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು BFSI SSC (naik.ashwini@bfsissc.com) ನಿಂದ ಇಮೇಲ್ ಮೂಲಕ ಜಿಲ್ಲೆಯ ಆಯ್ಕೆ ಮತ್ತು ಇತರ ವಿವರಗಳನ್ನು ಪಡೆಯುತ್ತಾರೆ. ತರಬೇತಿಗೆ, ಆನ್‌ಲೈನ್ ಪರೀಕ್ಷೆಗೆ ಪಾವತಿ ಪೂರ್ಣಗೊಳಿಸಬೇಕು.
- ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್/ಯುಪಿಐ ಬಳಸಿ ಪಾವತಿಸಬಹುದು.
- ುಲ್ಕವನ್ನು ಪಾವತಿಸಿದ ನಂತರ, ನೋಂದಾಯಿತ ಇ-ಮೇಲ್ ಐಡಿಗೆ ಇ-ರಶೀದಿಯನ್ನು ಕಳುಹಿಸಲಾಗುತ್ತದೆ.