Universal enterprise ID: ಸಣ್ಣ ಉದ್ಯಮಗಳಿಗೂ ಯುನಿವರ್ಸಲ್‌ ಎಂಟರ್‌ಪ್ರೈಸ್‌ ಐಡಿ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Universal Enterprise Id: ಸಣ್ಣ ಉದ್ಯಮಗಳಿಗೂ ಯುನಿವರ್ಸಲ್‌ ಎಂಟರ್‌ಪ್ರೈಸ್‌ ಐಡಿ!

Universal enterprise ID: ಸಣ್ಣ ಉದ್ಯಮಗಳಿಗೂ ಯುನಿವರ್ಸಲ್‌ ಎಂಟರ್‌ಪ್ರೈಸ್‌ ಐಡಿ!

Universal enterprise ID: ಸರ್ಕಾರಿ ದಾಖಲೆ ಪ್ರಕಾರ, ಈ ಪ್ರಸ್ತಾವನೆಯನ್ನು ಈ ಸಲ ಕೇಂದ್ರ ಬಜೆಟ್‌ನಲ್ಲಿ ಘೋಷಿಸುವ ಸಾ‍ಧ್ಯತೆ ಇದೆ. ಎಂಎಸ್‌ಎಂಇಗಳ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ ಮೂಲಕ ಬ್ಯಾಂಕ್‌ನಿಂದ ಸಿಂಗಲ್‌ ಟ್ರಾನ್ಸಾಕ್ಷನ್‌ ಮೂಲಕ ಸಾಲ ಪಡೆಯಲು ಅನುಕೂಲ ಮಾಡಿಕೊಡುವ ಪ್ರಸ್ತಾವನೆ ಇದರಲ್ಲಿದೆ. ಈ ರೀತಿ ಪಡೆದ ಸಾಲವನ್ನು ಅದು ಗುಂಪಿನ ಸದಸ್ಯರಿಗೆ ಹಂಚಲಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (livemint)

ಭಾರತದ ಅರ್ಥವ್ಯವಸ್ಥೆಯ ಎಂಜಿನ್‌ಗಳಾಗಿ ಕಾರ್ಯನಿರ್ವಹಿಸುವ ಸಣ್ಣ ಉದ್ಯಮಗಳ ಕ್ರೆಡಿಟ್‌ ರೇಟಿಂಗ್‌ ಬಲಪಡಿಸಲು ನೆರವಾಗುವ ನಿಟ್ಟಿನಲ್ಲಿ ಯುನಿವರ್ಸಲ್‌ ಎಂಟರ್‌ಪ್ರೈಸ್‌ ಐಡಿ ಸಿಸ್ಟಮ್‌ ರೂಪಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಅದೇ ರೀತಿ, ಎಂಎಸ್‌ಎಂಇಗಳ ಕ್ರೆಡಿಟ್‌ ಅರ್ಹತೆಯನ್ನು ನಿರ್ಣಯಿಸುವುದಕ್ಕೆ ಹೊಸ ಮಾದರಿಯನ್ನು ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಗಳು ರೂಪಿಸುವುದೆಂಬ ನಿರೀಕ್ಷೆ ಇದೆ.

ಸರ್ಕಾರದ ಆಂತರಿಕ ದಾಖಲೆಯ ಪ್ರಕಾರ, ಈ ಪ್ರಸ್ತಾವನೆಯನ್ನು ಈ ಸಲದ ಕೇಂದ್ರ ಮುಂಗಡಪತ್ರದಲ್ಲಿ ಸರ್ಕಾರ ಘೋಷಿಸುವ ಸಾ‍ಧ್ಯತೆ ಇದೆ. ಎಂಎಸ್‌ಎಂಇಗಳ ಒಂದು ಗುಂಪನ್ನು ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ ಎಂಬ ಮಾದರಿಯಲ್ಲಿ ರೂಪಿಸಿ, ಬ್ಯಾಂಕ್‌ನಿಂದ ಸಿಂಗಲ್‌ ಟ್ರಾನ್ಸಾಕ್ಷನ್‌ ಮೂಲಕ ಸಾಲ ಪಡೆಯಲು ಅನುಕೂಲ ಮಾಡಿಕೊಡುವ ಪ್ರಸ್ತಾವನೆ ಇದರಲ್ಲಿದೆ. ಈ ರೀತಿ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ ಪಡೆದ ಸಾಲವನ್ನು ಅದು ಗುಂಪಿನ ಸದಸ್ಯರಿಗೆ ಹಂಚಲಿದೆ.

ಎಂಎಸ್‌ಎಂಇಯ ಪರಿಣತರ ಸಮಿತಿಯೊಂದು 2019ರಲ್ಲಿ ಈ ಎಂಟರ್‌ಪ್ರೈಸ್‌ ಐಡಿಯ ವಿಚಾರವನ್ನು ಮೊದಲು ಬಾರಿ ಪ್ರಸ್ತಾಪಿಸಿತ್ತು. ಮಾಜಿ ಸೆಬಿ ಅಧ್ಯಕ್ಷ ಯು.ಕೆ. ಸಿನ್ಹಾ ನೇತೃತ್ವದ ಸಮಿತಿ ಈ ಶಿಫಾರಸು ಮಾಡಿತ್ತು. ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSS) 73ನೇ ಸುತ್ತಿನ ದಾಖಲೆ ಪ್ರಕಾರ ಭಾರತದಲ್ಲಿ ಸುಮಾರು 63.39 ಮಿಲಿಯನ್ ಎಂಎಸ್‌ಎಂಇಗಳಿವೆ ಎಂದು ದಾಖಲೆ ಉಲ್ಲೇಖಿಸಿ HT ಕನ್ನಡದ ಸೋದರ ತಾಣ ಮಿಂಟ್‌ ವರದಿ ಮಾಡಿದೆ.

ಯು.ಕೆ. ಸಿನ್ಹಾ ನೇತೃತ್ವದ ಸಮಿತಿ ವರದಿಯಲ್ಲೇನಿದೆ?

ಯು.ಕೆ. ಸಿನ್ಹಾ ಸಮಿತಿಯು ಎಂಎಸ್‌ಎಂಇ ರೇಟಿಂಗ್ ಉತ್ಪನ್ನಗಳನ್ನು ಹೆಚ್ಚು ಪ್ರಸ್ತುತವಾಗುವಂತೆ ಮತ್ತು ಕ್ರೆಡಿಟ್ ಕಾರ್ಯಕ್ಷಮತೆಯನ್ನು ಮುನ್ಸೂಚಿಸುವಂತೆ ಶಿಫಾರಸು ಮಾಡಿದೆ. ಯುಟಿಲಿಟಿ ಬಿಲ್‌ಗಳು ಮತ್ತು ತೆರಿಗೆ ಪಾವತಿಗಳು ಸೇರಿ ಹೊಸ ಡೇಟಾ ಮೂಲಗಳನ್ನು ಗಣನೆಗೆ ತೆಗೆದುಕೊಂಡು ಹೆಚ್ಚಿನ 360-ಡಿಗ್ರಿ ಸ್ಕೋರಿಂಗ್ ಮಾಡೆಲ್‌ಗಳನ್ನು ನಿರ್ಮಿಸಲು ರೇಟಿಂಗ್ ಏಜೆನ್ಸಿಗಳನ್ನು ಉತ್ತೇಜಿಸಬಹುದು ಎಂದು ಹೇಳಿದೆ.

“ಯುನಿವರ್ಸಲ್ ಎಂಟರ್‌ಪ್ರೈಸ್ ಐಡಿಯ ಅನುಷ್ಠಾನವು ಈ ಮಾರುಕಟ್ಟೆಯನ್ನು ಸುಗಮಗೊಳಿಸುತ್ತದೆ. ನಗದು ಹರಿವು ಆಧಾರಿತ ಸಾಲದ ಬೆಳವಣಿಗೆಯನ್ನು ಉತ್ತೇಜಿಸಲು, ರೇಟಿಂಗ್ ಏಜೆನ್ಸಿಗಳು ಹೊಸ ಕೊಡುಗೆಗಳನ್ನು ಅಭಿವೃದ್ಧಿಪಡಿಸಬೇಕಾಗಬಹುದು. ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಅಪ್ರೈಸಲ್ ಪ್ರಕ್ರಿಯೆಯಲ್ಲಿ ಎಂಎಸ್‌ಎಂಇಗೆ ಕ್ರೆಡಿಟ್ ರೇಟಿಂಗ್ ಲಭ್ಯವಿದ್ದಲ್ಲಿ ಕೆಲಸದ ಹರಿವನ್ನು ನಿರ್ದಿಷ್ಟಪಡಿಸಬೇಕು, ”ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.

ಒಂದು ಘಟಕ ಅಥವಾ ಉದ್ಯಮವನ್ನು ಗುರುತಿಸಲು, ಉಲ್ಲೇಖಿಸಲು ಮತ್ತು ವಿದ್ಯುನ್ಮಾನವಾಗಿ ಪರಿಶೀಲಿಸಲು ಯಾವುದೇ ಸಾಮಾನ್ಯ ಗುರುತಿಸುವಿಕೆ ಇಲ್ಲ ಮತ್ತು ಉದ್ಯಮಗಳು "ಯಾವುದೇ ಅನುಮತಿಗಳಿಗಾಗಿ ಇತರ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ" ಎಂದು ಸಿನ್ಹಾ ಸಮಿತಿಯ ವರದಿಯು ವಿವರಿಸಿದೆ.

ಎಂಎಸ್‌ಎಂಇಗಳಿಗೆ ಕ್ರೆಡಿಟ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ಷಿಪ್ರವಾಗಿ ಆಧಾರ್‌‌ ಮೇಲೆ ಪ್ಯಾನ್ ಅನ್ನು ಬಳಸಿಕೊಂಡು ಎಂಟರ್‌ಪ್ರೈಸ್ ಐಡಿಯನ್ನು ಪರಿಚಯಿಸಲು ಸಮಿತಿಯು ಸಲಹೆ ನೀಡಿದೆ.

ಎಲ್ಲದಕ್ಕೂ ಒಂದೇ ಮಾನದಂಡ ಸರಿಯಲ್ಲ

ಕಾನ್ಫಡರೇಶನ್‌ ಆಫ್‌ ಆಲ್‌ ಇಂಡಿಯಾ ಟ್ರೇಡರ್ಸ್‌ನ ಸೆಕ್ರೆಟರಿ ಜನರಲ್‌ ಪ್ರವೀಣ್‌ ಖಂಡೇಲ್‌ವಾಲ್‌ ಈ ವಿದ್ಯಮಾನದ ಕುರಿತು ಹೇಳಿರುವುದು ಇಷ್ಟು - ಕಾರ್ಪೊರೇಟ್ ವಲಯ ಮತ್ತು ಕಾರ್ಪೊರೇಟ್ ಅಲ್ಲದ ವಲಯಕ್ಕೆ ಒಂದೇ ರೀತಿಯ ಕ್ರೆಡಿಟ್ ಮಾನದಂಡಗಳನ್ನು ಹೊಂದಲು ಸಾಧ್ಯವಿಲ್ಲ. ಕಾರ್ಪೊರೇಟ್ ಅಲ್ಲದ ವಲಯದ ಭಾಗವಾಗಿರುವ ಸಣ್ಣ ವ್ಯವಹಾರಗಳು ಕಾರ್ಪೊರೇಟ್ ಅಲ್ಲದ ವಲಯದ ವ್ಯಾಪಾರ ಮಾದರಿಯ ಮೂಲಭೂತ ಅಂಶಗಳನ್ನು ಆಧರಿಸಿ ವಿಭಿನ್ನ ಕ್ರೆಡಿಟ್ ರೇಟಿಂಗ್‌ಗೆ ಅರ್ಹವಾಗಿದೆ.

ಡಿಜಿಟಲ್ ಬಿಸಿನೆಸ್ ಮ್ಯಾಚ್ ಮೇಕಿಂಗ್ ಪ್ಲಾಟ್‌ಫಾರ್ಮ್ ಸಣ್ಣ ವ್ಯವಹಾರಗಳ ಉಗಮವನ್ನು ಸಹ ಖಚಿತಪಡಿಸುತ್ತದೆ, ಆದರೆ ಅದರ ಹೆಚ್ಚಿನ ನುಗ್ಗುವಿಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ಸಣ್ಣ ವ್ಯವಹಾರಗಳಲ್ಲಿ ಜಾಗೃತಿ, ಅನ್ವಯಿಸುವಿಕೆ ಮತ್ತು ಸ್ವೀಕಾರ ಅಭಿಯಾನವನ್ನು ಪ್ರಾರಂಭಿಸುವ ಕೆಲಸದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಬೇಕು ಎಂದು ಖಂಡೇಲ್‌ವಾಲ್‌ ವಿವರಿಸಿದರು.

ಈ ಕುರಿತಾದ ಮಾಹಿತಿ ಕೋರಿ ಎಂಎಸ್‌ಎಂಇ ಸಚಿವಾಲಯಕ್ಕೆ ಕಳುಹಿಡಿದ ಇಮೇಲ್‌ಗೆ ಉತ್ತರ ಸಿಕ್ಕಿಲ್ಲ ಎಂದು ವರದಿ ಹೇಳಿದೆ. ಪೂರ್ಣ ವರದಿಗೆ ದ ಮಿಂಟ್‌ ವರದಿ ಗಮನಿಸಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.