Viral News: ಸ್ಮಾರ್ಟ್‌ಫೋನ್ ಖರೀದಿಸಿದರೆ ಟೊಮೆಟೊ ಫ್ರೀ; ಶಾಪ್ ಮಾಲೀಕನ ಭರ್ಜರಿ ಆಫರ್‌ಗೆ ಜನ ಫುಲ್ ಫಿದಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News: ಸ್ಮಾರ್ಟ್‌ಫೋನ್ ಖರೀದಿಸಿದರೆ ಟೊಮೆಟೊ ಫ್ರೀ; ಶಾಪ್ ಮಾಲೀಕನ ಭರ್ಜರಿ ಆಫರ್‌ಗೆ ಜನ ಫುಲ್ ಫಿದಾ

Viral News: ಸ್ಮಾರ್ಟ್‌ಫೋನ್ ಖರೀದಿಸಿದರೆ ಟೊಮೆಟೊ ಫ್ರೀ; ಶಾಪ್ ಮಾಲೀಕನ ಭರ್ಜರಿ ಆಫರ್‌ಗೆ ಜನ ಫುಲ್ ಫಿದಾ

ಟೊಮೆಟೊ ಬೆಲೆ ಏರಿಕೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಇದರಿಂದ ಮೊಬೈಲ್ ಶೋರೂಂ ಮಾಲೀಕರಿಗೆ ಒಳ್ಳೆ ಬ್ಯುಸಿನೆಸ್ ಆಗುತ್ತಿದೆಯಂತೆ. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.

ಸ್ಮಾರ್ಟ್‌ಫೋನ್ ಖರೀದಿಸಿದರೆ ಟೊಮೆಟೊ ಉಚಿತವಾಗಿ ನೀಡುತ್ತಿರುವ ಶಾಪ್ ಮಾಲೀಕ
ಸ್ಮಾರ್ಟ್‌ಫೋನ್ ಖರೀದಿಸಿದರೆ ಟೊಮೆಟೊ ಉಚಿತವಾಗಿ ನೀಡುತ್ತಿರುವ ಶಾಪ್ ಮಾಲೀಕ

ಬೆಂಗಳೂರು: ಎಲ್ಲಿ ನೋಡಿದರೂ ಟೊಮೆಟೊ ಬೆಲೆ ಏರಿಕೆಯದ್ದೇ (Tomato Price) ಚರ್ಚೆ. ಹಲವು ಕಾರಣಗಳಿಂದ ಟೊಮೆಟೊ ಬೆಲೆ 150 ರೂಪಾಯಿಯ ಗಡಿ ದಾಟಿದೆ. ಕೆಲವೆಡೆ 200 ರೂಪಾಯಿಯ ಸಮೀಪಕ್ಕೆ ತಲುಪುವ ಮೂಲಕ ದಾಖಲೆ ಬರೆಯುತ್ತಿದೆ.

ಟೊಮೆಟೊ ಬೆಳೆದಿರುವ ರೈತರಿಗೆ ಒಳ್ಳೆಯ ಲಾಭವಾಗಿದ್ದರೆ, ಗ್ರಾಹಕರು ಹೇಗಪ್ಪಾ ಟೊಮೆಟೊ ಖರೀದಿ ಮಾಡೋದು ಎಂಬ ಚಿಂತೆಯಲ್ಲಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರು ಅಡುಗೆಯಲ್ಲಿ ಟೊಮೆಟೊವನ್ನು ಕಡಿಮೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಡೆ ಟೊಮೆಟೊಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ.

ಇನ್ನ ಯಾವುದೇ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡಿದರೆ ಅದು ಟ್ರೆಂಡಿಂಗ್ ಆಗೋದು ತುಂಬಾ ಕಾಮನ್. ಅದೇ ರೀತಿ ಟೊಮೆಟೊ ಬೆಲೆ ಏರಿಕೆಯಿಂದಾಗಿ ಇದಕ್ಕೆ ಸಂಬಂಧಿಸಿದ ಮೀಮ್ಸ್‌ಗಳು ಸಾಮಾಜಿಕ ತಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವು ಬಗೆಯ ಮೀಮ್ಸ್‌ಗಳು ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಿವೆ.

ಟೊಮೊಟೊ ಬಗ್ಗೆ ಸಾಕಷ್ಟು ಹಾಸ್ಯಗಳ ಫೋಟೋಗಳು ಹರಿದಾಡುತ್ತಿದ್ದು, ಚಿನ್ನ, ವಜ್ರಕ್ಕೆ ಹೋಲಿಸಲಾಗುತ್ತಿದೆ. ಅಷ್ಟರ ಮಟ್ಟಿಗೆ ಮೀಮ್ಸ್‌ಗಳು ಸಖತ್ ವೈರಲ್ ಆಗುತ್ತಿವೆ. ಇದರ ನಡುವೆ ಕೆಲ ಅಂಗಡಿ ಮಾಲೀಕರು ಟೂಮೆಟೊ ಬೆಲೆಯನ್ನೇ ತಮ್ಮ ಮಾರುಕಟ್ಟೆ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್ (Smartphone) ಖರೀದಿಸಿದರೆ 1 ಕೆಜಿ ಟೊಮೆಟೊ ಫ್ರೀ (Tomato Free), ಸ್ಮಾರ್ಟ್‌ಫೋನ್ ಖರೀದಿಸಿದರೆ 2 ಕೆಜಿ ಟೊಮೆಟೊ ಉಚಿತ ಎಂಬ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿವೆ.

ಅಂಗಡಿಯ ಪ್ರಚಾರಕ್ಕಾಗಿ ಟ್ರೆಂಡಿಂಗ್‌ನಲ್ಲಿರುವ ಟೊಮೆಟೊವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದು, ಮಧ್ಯಪ್ರದೇಶದ ಅಶೋಕ್ ನಗರದಲ್ಲಿ ಅಶೋಕ್ ಅಗರ್ವಾಲ್ ಎಂಬ ಯುವಕ ತನ್ನ ಮೊಬೈಲ್ ಶೋರೂಂನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿದರೆ ಎರಡು ಕೆಜಿ ಟೊಮೆಟೊ ಫ್ರೀ ಎಂಬ ಫ್ಲೆಕ್ಸ್‌ ಹಾಕಿದ್ದಾನೆ. ಇದನ್ನ ಗಮನಿಸಿದ ಮೊಬೈಲ್ ಪ್ರಿಯರು ಅವರ ಶೋರೂಂ ಮುಂದೆ ಕ್ಯೂ ನಿಂತಿದ್ದಾರೆ. ಫೋನ್ ಜೊತೆಗೆ 2 ಕೆಜಿ ಟೊಮೆಟೊವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಈ ಆಫರ್ ಘೋಷಣೆ ಮಾಡಿದ ಬಳಿಕ ಒಳ್ಳೆ ಬ್ಯುಸಿನೆಸ್ ಆಗುತ್ತಿದೆ ಎಂದು ಮೊಬೈಲ್ ಅಂಗಡಿ ಮಾಲೀಕ ಅಶೋಕ್ ಹೇಳಿದ್ದಾನೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.